ಫೋನ್ ಬಿಸಿಯಾಗುತ್ತಿದೆಯೇ ಈ ಹಂತಗಳನ್ನು ಅನುಸರಿಸಿ

Written By:

ನಿಮ್ಮ ಅತ್ಯಾಧುನಿಕ ಜೀವನ ಪದ್ಧತಿಯನ್ನು ಅನುಸರಿಸಿ ಇಂದು ಸ್ಮಾರ್ಟ್‌ಫೋನ್‌ಗಳು ನಿತ್ಯದ ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ನೀವು ಎಷ್ಟೇ ದುಬಾರಿ ಫೋನ್ ಅನ್ನು ಕೊಂಡರೂ ಬಿಸಿಯಾಗುವ ಸಮಸ್ಯೆಯನ್ನು ಅದು ಹೊಂದಿದೆ ಎಂದಾದಲ್ಲಿ ಫೋನ್‌ ಅನ್ನು ನೀವು ನಿರ್ವಹಿಸುತ್ತಿರುವ ರೀತಿಯಲ್ಲಿ ಏನಾದರೂ ದೋಷವಿದೆ ಎಂಬುದು ಖಚಿತ.

ಓದಿರಿ: ಫೋನ್‌ನಲ್ಲಿ ಇಂಟರ್ನೆಟ್ ವೇಗ ದ್ವಿಗುಣಗೊಳಿಸುವ ಸಲಹೆಗಳು

ಫೋನ್ ತುಂಬಾ ಬಿಸಿಯಾಗುತ್ತಿದೆ ಎಂದಾದಲ್ಲಿ ಅದು ಕೆಲವೊಂದು ಸಮಸ್ಯೆಗಳಾದ ಫೋನ್ ಬ್ಯಾಟರಿ ಡ್ರೈನಿಂಗ್, ಬ್ಯಾಟರಿ ಅಥವಾ ಸಿಪಿಯು ಮೆಲ್ಟ್ ಆಗುವುದು, ಫೋನ್‌ನ ಫೋರ್ಸ್ ಶಟ್ ಡೌನ್ ಮೊದಲಾದ ಸಮಸ್ಯೆಗಳನ್ನು ಡಿವೈಸ್ ಎದುರಿಸಬಹುದು. ಅದಕ್ಕೆಂದೇ ಇಂದಿನ ಲೇಖನದಲ್ಲಿ ಫೋನ್ ಯಾವ ಕಾರಣಕ್ಕಾಗಿ ಬಿಸಿಯಾಗುತ್ತಿದೆ ಎಂಬುದನ್ನು ಕುರಿತು ನಾವು ಮಾಹಿತಿಯನ್ನು ನೀಡುತ್ತಿದ್ದು ಅದೇನು ಎಂಬುದನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಬಿಸಿ

ಫೋನ್ ಬಿಸಿ

ಸೂರ್ಯನ ಬೆಳಕಿಗೆ ಒಡ್ಡುವುದು

ನಿಮ್ಮ ಫೋನ್ ಅನ್ನು ಆದಷ್ಟು ಸೂರ್ಯನ ಬೆಳಕಿಗೆ ಒಡ್ಡುವುದನ್ನು ಕಡಿಮೆ ಮಾಡಿ. ಆದಷ್ಟು ನೇರವಾಗಿ ಸೂರ್ಯನ ಬೆಳಕಿಗೆ ಫೋನ್ ಅನ್ನು ಇರಿಸಬೇಡಿ ನಿಮ್ಮ ಫೋನ್ ಅನ್ನು ಬಿಸಿಯಾಗಿಸುವುದರಿಂದ ರಕ್ಷಿಸುವ ವಿಧಾನ ಇದಾಗಿದೆ.

ಬೇಡದ ಅಪ್ಲಿಕೇಶನ್‌

ಬೇಡದ ಅಪ್ಲಿಕೇಶನ್‌

ಬೇಡದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ

ನಿಮ್ಮ ಫೋನ್‌ನಲ್ಲಿರುವ ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಣೆ ಮಾಡಿಕೊಳ್ಳಿ. ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ಚಾಲನೆಗೊಳ್ಳತ್ತವೆ ಮತ್ತು ನಿಮ್ಮ ಫೋನ್ ಅನ್ನು ಬಿಸಿಯಾಗಿಸುತ್ತವೆ.

ಪರದೆಯ ಬ್ರೈಟ್‌ನೆಸ್ ಅಧಿಕ

ಪರದೆಯ ಬ್ರೈಟ್‌ನೆಸ್ ಅಧಿಕ

ಹೆಚ್ಚು ಬ್ರೈಟ್‌ನೆಸ್ ಬೇಡ

ಹಿನ್ನಲೆಯಲ್ಲಿ ಚಾಲನೆಯಾಗುವ ಅಪ್ಲಿಕೇಶನ್‌ಗಳಂತೆಯೇ ಪರದೆಯ ಬ್ರೈಟ್‌ನೆಸ್ ಅನ್ನು ಅಧಿಕವಾಗಿರಿಸುವುದೂ ಕೂಡ ಬ್ಯಾಟರಿಯನ್ನು ಬಿಸಿಯಾಗಿಸಿ ಫೋನ್ ಬಿಸಿಯಾಗುವಂತೆ ಮಾಡುತ್ತದೆ.

ಬ್ಯಾಟರಿ ಉಳಿಸುವುದು

ಬ್ಯಾಟರಿ ಉಳಿಸುವುದು

ಏರ್‌ಪ್ಲೇನ್ ಮೋಡ್ ಬಳಸಿ

ನಿಮ್ಮ ಫೋನ್ ಅನ್ನು ನೀವು ಬಳಸುತ್ತಿಲ್ಲ ಎಂದಾದಲ್ಲಿ ಅದನ್ನು ಏರ್‌ಪ್ಲೇನ್ ಮೋಡ್‌ನಲ್ಲಿರಿಸಿ ಅಥವಾ ಅದನ್ನು ಆಫ್ ಮಾಡಿ. ಈ ಎರಡೂ ಸಲಹೆಗಳು ಫೋನ್ ಬ್ಯಾಟರಿಯನ್ನು ಉಳಿಸುವುದು ಮಾತ್ರವಲ್ಲದೆ ಫೋನ್ ಬಿಸಿಯಾಗುವುದರಿಂದ ತಡೆಯುತ್ತದೆ.

ಫೋನ್ ಕೇಸ್ ತೆಗೆದಿರಿಸಿ

ಫೋನ್ ಕೇಸ್ ತೆಗೆದಿರಿಸಿ

ಫೋನ್ ಹೆಚ್ಚು ಬಿಸಿಯಾದಲ್ಲಿ

ನಿಮ್ಮ ಫೋನ್ ಈಗಾಗಲೇ ಹೆಚ್ಚು ಬಿಸಿಯಾಗುತ್ತಿದೆ ಎಂದಾದಲ್ಲಿ, ಫೋನ್ ಕೇಸ್ ಅನ್ನು ತೆಗೆದಿರಿಸಿ. ಫೋನ್ ಕೇಸ್ ಅನ್ನು ತೆಗೆದಿರಿಸುವುದರಿಂದ ಫೋನ್ ಬಿಸಿಯಾಗುವುದು ತಪ್ಪುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting