ಮೊಬೈಲ್ ಫೋನ್‌ ಕಳುವಾಗದಂತೆ ಕಾಪಾಡುವುದು ಹೇಗೆ?

By Super
|

ಮೊಬೈಲ್ ಫೋನ್‌ ಕಳುವಾಗದಂತೆ ಕಾಪಾಡುವುದು ಹೇಗೆ?
ಮೊಬೈಲ್‌ ಫೋನ್‌ಗಳು ಇಂದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದೂ ಯಾವ ಪ್ರಮಾಣದಲ್ಲಿ ಎಂದರೆ ಮೊಬೈಲ್‌ ಫೋನ್‌ ಇಲ್ಲದೇ ಇದ್ದಲ್ಲಿ ಮನಸಿಗೆ ನೆಮ್ಮದಿ ಇಲ್ಲವೇನೋ ಎಂಬಂತೆ ಭಾಸವಾಗುತ್ತಿರುತ್ತದೆ. ಇದೀಗ ಸ್ಮಾರ್ಟ್‌ಪೋನ್‌ಗಳು ಬಂದಮೇಲಂತೂ ಮೊಬೈಲ್‌ ಮೂಲಕವೇ ಅಂತರ್ಜಾಲದ ಬಳಕೆ ಸರಾಗವಾಗಿ ಮಾಡಬಹುದಾದ್ದರಿಂದ್ದ ದಿನನಿನ್ಯದ ಅದೆಷ್ಟೋ ಕೆಲಸ ಕಾರ್ಯಗಳನ್ನು ಮೊಬೈಲ್‌ ಫೋನ್‌ ಮೂಲಕವೇ ನಿರ್ವಹಿಸ ಬಹುದಾಗಿದೆ.

ಆದ್ದರಿಂದಲೇ ಇಂದು ಬಹುತೇಕ ಮಂದಿ ಸಾವಿರಾರು ರೂಪಾಯಿ ನೀಡಿ ಸ್ಮಾರ್ಟ್‌ಫೋನ್‌ಗಳನ್ನು ಕೊಂಡುಕೊಳ್ಳುತಿದ್ದಾರೆ. ಹೀಗೆ ಸಾವಿರಾರು ರೂಪಾಯಿ ಬೆಲೆ ಕೊಟ್ಟು ತಂದಂತಹ ಮೊಬೈಲ್‌ ಪೋನ್ ಇದ್ದಕ್ಕಿದಂತೆಯೇ ಕಳುವಾಗಿ ಬಿಟ್ಟರೆ ಮಾಡುವುದಾದರೂ ಏನು? ಕೆಲವರಿಗಂತೂ ಮೊಬೈಲ್‌ ಫೋನ್‌ ಕಳದು ಹೋದಲ್ಲಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿಬಿಡುತ್ತದೆ, ಮತ್ತೂ ಕೆಲವರು ಮೊಬೈಲ್‌ ಖರೀದಿಗೆಂದೇ ಸ್ವಲ್ಪ ಸ್ವಲ್ಪವೇ ಹಣ ಉಳಿಸಿ ಕೊಂಡುಕೊಂಡಿರುತ್ತಾರೆ. ಹೀಗಿದ್ದ ಸಂದರ್ಭದಲ್ಲಿ ಮೊಬೈಲ್ ಕಳೆದು ಹೋದರೆ ಆಗುವ ಸಂಕಟ ಅಂತಿಂತದ್ದಲ್ಲ, ಆದ್ದರಿಂದಲೇ ಇಂದು ಗಿಜ್ಬಾಟ್‌ ಮೊಬೈಲ್‌ ಕಳುವಾಗದಂತೆ ಅಥವಾ ಕಳುವಾದಲ್ಲಿ ಏನೆಲ್ಲಾ ಎಚ್ಚರಿಕೆ ವಹಿಸ ಬೇಕೆಂಬ ಕೆಲ ಸರಳ ಸಲಹೆಗಳನ್ನು ತಂದಿದೆ ಒಮ್ಮೆ ಓದಿ ನೋಡಿ.

ಅಂದಹಾಗೆ ಫೋನ್‌ ಕಳುವಾಗಲಿ ಬಿಡಲಿ ಅದರಲ್ಲಿನ ಕೆಲ ಅವಶ್ಯಕ ಅಂಶಗಳನ್ನು ಒಂದು ಡಯರಿಯಲ್ಲಿ ಬರೆದಿಡುವುದು ಸೂಕ್ತ. ಇದರಿಂದಾಗಿ ಒಂದು ವೇಳೆ ನಿಮ್ಮ ಮೊಬೈಲ್‌ ಫೋನ್‌ ಕಳೆದುಓದಲ್ಲಿ ಹೊಸ ಫೋನ್‌ ಕೊಂಡಾಗ ನಿಮಗೆ ಬೇಕಾದ ಹಾಗೂ ಅಗತ್ಯದ ಸಂಪರ್ಕಗಳನ್ನು ಮಾಹಿತಿಗಳನ್ನು ಡೈರಿ ಮೂಲಕ ಮರುಪಡೆಯ ಬಹುದಾಗಿದೆ. ಅದಕ್ಕಾಗಿಯೇ ಮೊಬೈಲ್‌ ಫೋನ್‌ನಲ್ಲಿನ ಕಾಂಟಾಕ್ಟ್‌ ನಂಬರ್‌ಗಳು, ಫೋನ್‌ನ ಮಾಡಲ್‌ ನಂಬರ್‌, ಫೋನ್‌ನಲ್ಲಿ ಸೇವ್‌ ಮಾಡಲಾಗಿರುವ ಪಿನ್‌ ಹಾಗೂ ಕೋಡ್‌ ನಂಬರ್‌ಗಳು ಸೇರಿದಂತೆ ಐಎಂಇಐ(IMEI) ಸಂಖ್ಯೆಯನ್ನು ಒಂದು ಡೈರಿಯಲ್ಲಿ ಬರೆದಿಡುವುದು ಸೂಕ್ತ.

ನಿಮ್ಮ ಫೋನ್‌ನಲ್ಲಿ ಯಾವುದಾದರು ಒಂದು ಸೆಕ್ಯೂರಿಟಿ ಮಾರ್ಕ್‌ ಮಾಡಿ ಇಡಿ ಅಕಸ್ಮಾತ್‌ ನೀವು ಎಲ್ಲಿಯಾದರೂ ಮೋಬೈಲ್‌ ಕಳೆದುಕೊಂಡಿದ್ದಲ್ಲಿ ಮತ್ತೋರ್ವರಿಗೆ ದೊರೆತಿದ್ದಲ್ಲಿ ಅವರು ನಿಮಗೆ ಹಿಂದಿರುಗಿಸಲು ನೆರವಾಗುವಂತಹ ಯಾವುದಾದರು ಒಂದು ಮಾರ್ಕ್‌ ಮಾಡಿರಿ.

ನಿಮ್ಮ ಫೋನ್‌ನಲ್ಲಿನ ಪಿನ್‌ ಕೋಡ್‌ ಅಥವಾ ಲಾಕ್‌ ಕೋಡ್‌ ಯಾವಾಗಲೂ ಆಕ್ಟಿವೇಟ್‌ ಮೋಡ್‌ನಲ್ಲಿಯೇ ಇಡಿ. ಇದರಿಂದ ನಿಮ್ಮ ಫೋನ್‌ ಬೇರೆಯವರಿಗೆ ದೊರೆತಲ್ಲಿ ಅದರಲ್ಲಿನ ನಿಮ್ಮ ವೈಯುಕ್ತಿಕ ಧಾಕಲೆಗಳು ಅವರ ಕೈ ತಲುಪದಂತೆ ತಡೆಯ ಬಹುದಾಗಿದೆ. ಹಾಗೂ ನಿಮ್ಮ ಫೋನ್‌ ಮೂಲಕ ಯಾವುದೇ ತಪ್ಪು ಕೆಲಸ ಮಾಡುವುದನ್ನು ತಡೆಯ ಬಹುದಾಗಿದೆ.

ಅಂದಹಾಗೆ ನೀವು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಲ್ಲಿ ನಿಮ್ಮ ಫೋನ್‌ನಲ್ಲಿ ಆನ್ಟಿ ತೆಫ್ಟ್‌ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಿ ಇದರಿಂದಾಗಿ ನಿಮ್ಮ ಸ್ಮಾರ್ಟ್‌ ಫೋನ್‌ನಲಲಿ ಬೇರೆಯಾವುದೇ ಸಿಮ್‌ ಹಾಕಿ ಪ್ರಯೋಗಿಸಿದಲ್ಲಿ ಅದರ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗಿಬಿಡುತ್ತದೆ. ಇಂತಹ ಆನ್ಟಿ ತೆಫ್ಟ್‌ ಸಾಫ್ಟ್‌ವೇರ್‌ಗಳನ್ನು ಅಂತರ್ಜಾಲದ ಮೂಲಕ ಉಚಿತವಾಗಿ ಡೌನ್ಲೋಡ್‌ ಮಾಡಿಕೊಳ್ಳ ಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X