ಫೋನ್‌ಪೇ ಮೂಲಕ ಕೆಲವೇ ಸೆಕೆಂಡ್‌ಗಳಲ್ಲಿ ಮೊಬೈಲ್‌ ರೀಚಾರ್ಜ್ ಮಾಡಲು ಹೀಗೆ ಮಾಡಿ!

|

ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಮೊಬೈಲ್‌ ರೀಚಾರ್ಜ್‌ ಶಾಪ್‌ಗಳಲ್ಲಿ ರೀಚಾರ್ಜ್ ಮಾಡಿಕೊಳ್ಳುವುದು ವಿರಳ. ಯುಪಿಐ ಆಪ್‌ಗಳು ಬಹುತೇಕ ಪಾವತಿ ಸೇವೆಗಳನ್ನು ಜಸ್ಟ್‌ ಒನ್‌ ಕ್ಲಿಕ್‌ನಲ್ಲಿ ಮಾಡಿ ಮುಗಿಸಬಹುದಾದ ಸೌಲಭ್ಯ ನೀಡಿದ್ದು, ಅವುಗಳಲ್ಲಿ ಮೊಬೈಲ್‌ ರೀಚಾರ್ಜ್‌ ಸಹ ಸೇರಿದೆ. ಇನ್ನು ಯುಪಿಐ ಅಪ್ಲಿಕೇಶನ್‌ಗಳ ಪೈಕಿ ಫೋನ್‌ಪೇ ಹೆಚ್ಚು ಬಳಕೆಯಲ್ಲಿ ಕಂಡುಬಂದಿದ್ದು, ಮೊಬೈಲ್‌ ಬಿಲ್ ಪಾವತಿ ಹಾಗೂ ಪ್ರೀಪೇಯ್ಡ್ ರೀಚಾರ್ಜ್‌ ಬಲು ಸುಲಭ ಆಗಿದೆ.

ಬಳಕೆದಾರರ

ಫೋನ್‌ಪೇ ಆಪ್‌ನಲ್ಲಿ ಬಳಕೆದಾರರ ಅಗತ್ಯ ಸೇವೆಗಳ ಪಾವತಿ ವಿಧಾನಗಳು ಬಹಳ ಸುಲಭವಾಗಿವೆ. ಸಿಮ್ ಪೋಸ್ಟ್‌ಪೇಯ್ಡ್‌ ಆಗಿರಲಿ ಅಥವಾ ಪ್ರೀಪೇಯ್ಡ್‌ ಆಗಿರಲಿ ತ್ವರಿತವಾಗಿ ರೀಚಾರ್ಜ್ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ಈ ಅಪ್ಲಿಕೇಶನ್ ಹೊಂದಿದೆ. ಹಾಗೆಯೇ ರೀಚಾರ್ಜ್ ಮಾಡುವಾಗ ನಮೂದಿಸಿದ ನಂಬರ್‌ಗೆ ಲಭ್ಯವಿರುವ ಪ್ಲ್ಯಾನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಹ ಕಾಣಿಸಿಕೊಳ್ಳುತ್ತದೆ. ಹಾಗಾದರೇ ಫೋನ್‌ಪೇ ಮೂಲಕ ತ್ವರಿತವಾಗಿ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಫೋನ್‌ಪೇ ಸೇವೆಗಳು

ಫೋನ್‌ಪೇ ಸೇವೆಗಳು

ಫೋನ್‌ಪೇ ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿದೆ. ಫೋನ್‌ಪೀ ಬಳಸಿ, ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ಮೊಬೈಲ್, ಡಿಟಿಎಚ್, ಡೇಟಾ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು, ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದು. ಮೊಬೈಲ್ ರೀಚಾರ್ಜ್ ಮಾಡಲು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಕೆಲವೇ ಸೆಕೆಂಡುಗಳು ಸಾಕು.

ಫೋನ್‌ಪೇ ಅಪ್ಲಿಕೇಶನ್

ಫೋನ್‌ಪೇ ಅಪ್ಲಿಕೇಶನ್

ಗೂಗಲ್ ಸ್ಟೋರ್‌ನಿಂದ ಫೋನ್ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು. ನಂತರ ಸುಲಭ ಹಂತಗಳ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸುವುದು. ನೋಂದಾಯಿಸುವಾಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಟಿಪಿ ಮೂಲಕ ಪರಿಶೀಲಿಸುತ್ತದೆ. ಆ ನಂತರ ಮೊಬೈಲ್ ರೀಚಾರ್ಜ್ ಮಾಡುವ ಮುಂದಿನ ಹಂತಗಳನ್ನು ಅನುಸರಿಸಿ.

ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಫೋನಿನಲ್ಲಿ ಫೋನ್‌ಪೇ ಆಪ್ ತೆರೆಯಿರಿ. ರೀಚಾರ್ಜ್ ಆಯ್ಕೆಯಲ್ಲಿ ರೀಚಾರ್ಜ್ ಕ್ಲಿಕ್ ಮಾಡಿ ಮತ್ತು ಬಿಲ್ ಪಾವತಿಸಿ.
ಹಂತ 2: ನೀವು ರೀಚಾರ್ಜ್ ಮಾಡಲು ಬಯಸುವ ಸಂಖ್ಯೆಯನ್ನು ಆಯ್ಕೆ ಮಾಡಿ ಅಥವಾ ನಮೂದಿಸಿ.

ರೀಚಾರ್ಜ್

ಹಂತ 3: ನಿಮ್ಮ ಫೋನ್ ಸಂಖ್ಯೆ, ವಲಯ ಮತ್ತು ಟೆಲಿಕಾಂ ಆಪರೇಟರ್ ವಿವರಗಳನ್ನು ಪರಿಶೀಲಿಸಿ.
ಹಂತ 4: ರೀಚಾರ್ಜ್ ಮೊತ್ತವನ್ನು ನಮೂದಿಸಿ ಅಥವಾ ವೀಕ್ಷಣೆ ಯೋಜನೆಗಳ ವಿಭಾಗದ ಅಡಿಯಲ್ಲಿ ಯೋಜನೆಗಳ ಪಟ್ಟಿಯಿಂದ ಆಯ್ಕೆಮಾಡಿ.

ರೀಚಾರ್ಜ್

ಹಂತ 5: ಇದಕ್ಕಾಗಿ ಪಾವತಿ ಆಯ್ಕೆಯನ್ನು ಆರಿಸಿ.
ಹಂತ 6: ವಹಿವಾಟು ಪೂರ್ಣಗೊಳಿಸಲು ರೀಚಾರ್ಜ್ ಕ್ಲಿಕ್ ಮಾಡಿ.

Best Mobiles in India

English summary
How to Quick Recharge Your Mobile Through PhonePe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X