ಅನಗತ್ಯವಾಗಿ ಬರುವ ಸ್ಪ್ಯಾಮ್‌ ಕರೆಗಳನ್ನು ಒಂದೇ ಬಾರಿಗೆ ಬ್ಲಾಕ್‌ ಮಾಡುವುದು ಹೇಗೆ?

|

ಸ್ಮಾರ್ಟ್‌ಫೋನ್‌ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಇಂದು ಎಲ್ಲರ ಕೈನಲ್ಲೂ ರಾರಾಜಿಸುತ್ತಿವೆ. ಸ್ಮಾರ್ಟ್‌ಫೋನ್‌ಗಳ ಮೂಲಕ ತಮ್ಮವರನ್ನು ಸಂಪರ್ಕ ಸಾಧಿಸುವುದು ಸುಲಭವಾಗಿದೆ. ಅದೇ ರೀತಿ ಅನಗತ್ಯ ಕರೆಗಳಿಂದ ಕೆಲವೊಮ್ಮೆ ಕಿರಿಕಿರಿ ಎನಿಸುವುದು ಕೂಡ ಉಂಟೂ. ಅದರಲ್ಲೂ ಸ್ಪ್ಯಾಮ್‌ ಕರೆಗಳು ಉಂಟು ಮಾಡುವ ಕಿರಿಕಿರಿ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಬಳಕೆದಾರರು ಅನಗತ್ಯ ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಿಬಿಡುತ್ತಾರೆ.

ಆಂಡ್ರಾಯ್ಡ್

ಹೌದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಅನಗತ್ಯ ಕರೆಗಳನ್ನು ಬ್ಲಾಕ್‌ ಮಾಡುವ ಫೀಚರ್ಸ್‌ ನೀಡಲಾಗಿದೆ. ಇದು ಬಳಕೆದಾರರಿಗೆ ತೊಂದರೆಯಾಗುವ ಅನಗತ್ಯ ಸ್ಪ್ಯಾಮ್ ಕರೆಗಳನ್ನು ಬ್ಲಾಕ್‌ ಮಾಡುವುದಕ್ಕೆ ಆಯ್ಕೆಯನ್ನು ನೀಡುತ್ತದೆ. ಜೊತೆಗೆ ಅನಗತ್ಯ ಜನರಿಂದ ರೋಬೋಕಾಲ್‌ಗಳು ಅಥವಾ ಕಿರಿಕಿರಿ ಮಾಡುವ ಕರೆಗಳನ್ನು ನಿರ್ಬಂಧಿಸಬಹುದು. ಇಂತಹ ಕರೆಗಳನ್ನು ನಿರ್ಲಕ್ಷಿಸಲು ಅನೇಕ ಜನರು ಬಳಸುವ ಅನುಕೂಲಕರ ವಿಧಾನವೆಂದರೆ ಕರೆಗಳನ್ನು ನಿರ್ಬಂಧಿಸುವುದು. ಹಾಗಾದ್ರೆ ನಿಮ್ಮ ಫೋನ್‌ನಲ್ಲಿ ಎಲ್ಲಾ ಒಳಬರುವ ಕರೆಗಳನ್ನು ಬ್ಲಾಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡೋಂಟ್ ಡಿಸ್ಟರ್ಬ್ ಮೋಡ್

ಡೋಂಟ್ ಡಿಸ್ಟರ್ಬ್ ಮೋಡ್

ಡೋಂಟ್ ಡಿಸ್ಟರ್ಬ್ ಮೋಡ್, ಡಿಎನ್‌ಡಿ ಕರೆಯಲ್ಪಡುವ ಈ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ಈ ಮೋಡ್‌ ಅನ್ನು ಬಳಸುವ ಮೂಲಕ ಒಬ್ಬರು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನೋಟಿಫಿಕೇಶನ್‌ಗಳನ್ನು ಸ್ಟಾಪ್‌ ಮಾಡಬಹುದು. ಇದಲ್ಲದೆ ಡಿಎನ್‌ಡಿ ಮೋಡ್ ಬಳಸುವ ಮೂಲಕ ಒಬ್ಬ ವ್ಯಕ್ತಿಯು ವಿವಿಧ ವೇಳಾಪಟ್ಟಿಗಳು ಮತ್ತು ನಿಯಮಗಳನ್ನು ಸೆಟ್‌ ಮಾಡಬಹುದು. ಇದರ ಮೂಲಕ ಕೆಲವು ಸಂಪರ್ಕಗಳಿಗೆ ಒಂದು ಕಾಲಮಿತಿಯೊಳಗೆ ಅಧಿಸೂಚನೆಗಳನ್ನು ಮ್ಯೂಟ್ ಮಾಡಬಹುದಾಗಿದೆ.

ಡೋಂಟ್ ಡಿಸ್ಟರ್ಬ್ ಮೋಡ್ ಬಳಸಿ ಇನ್‌ಕಮಿಂಗ್‌ ಕಾಲ್‌ ಬ್ಲಾಕ್‌ ಮಾಡುವುದು ಹೇಗೆ?

ಡೋಂಟ್ ಡಿಸ್ಟರ್ಬ್ ಮೋಡ್ ಬಳಸಿ ಇನ್‌ಕಮಿಂಗ್‌ ಕಾಲ್‌ ಬ್ಲಾಕ್‌ ಮಾಡುವುದು ಹೇಗೆ?

ಇನ್‌ಕಮಿಂಗ್‌ ಕಾಲ್‌ಗಳನ್ನು ಬ್ಲಾಕ್‌ ಮಾಡುವುದು ತುಂಬಾ ಸುಲಬವಾಗಿದೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬೇಕಾದ ಅಗತ್ಯವಿಲ್ಲ. ಇದಕ್ಕಾಗಿ ನೀವು ಕೆಳ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಅದು ಇಲ್ಲಿದೆ.
ಹಂತ 1: ಫೋನ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್‌ ಹೋಗಿ
ಹಂತ 2: ಸೌಂಡ್ ಅನ್ನು ಹುಡುಕಿ ಮತ್ತು ಡೋಂಟ್ ಡಿಸ್ಟರ್ಬ್ ಮೋಡ್ ಆಯ್ಕೆಮಾಡಿ
ಹಂತ 3: ನಂತರ ಕರೆಗಳನ್ನು ಟ್ಯಾಪ್ ಮಾಡಿ ಹಾಗೂ ಕರೆಗಳನ್ನು ಅನುಮತಿಸಿ
ಹಂತ 4: ಪಾಪ್-ಅಪ್ ಮೆನುವಿನಲ್ಲಿ ಯಾವುದೇ ಕರೆಗಳನ್ನು ಅನುಮತಿಸಬೇಡಿ
ಹಂತ 5: ಈಗ ರಿಪೀಟ್ ಕಾಲರ್ ಟಾಗಲ್ ಅನುಮತಿಸಿ
ಈ ಮೂಲಕ ನಿಮ್ಮ ನಂಬರ್‌ಗೆ ಒಳಬರುವ ಕರೆಗಳನ್ನು ಬ್ಲಾಕ್‌ ಮಾಡಬಹುದು.

"ಕಾಲ್ ಬ್ಯಾರಿಂಗ್" ವಿಧಾನವನ್ನು ಬಳಸುವುದು ಹೇಗೆ?

ಕಾಲ್ ಬ್ಯಾರಿಂಗ್ ವೀದಾನ ಬಹಳ ಹಳೆಯ ವಿಧಾನವಾಗಿದೆ. ಈ ಮಾದರಿಯ ವಿಧಾನವನ್ನು ಕೆಲವೇ ಕೆಲವು ಸ್ಮಾರ್ಟ್‌ಫೋನ್‌ಗಳು ಇಂದಿಗೂ ಬೆಂಬಲಿಸಬಹುದು. ಈ ವಿಧಾನ ಸಿಮ್ ಟೂಲ್ಸ್ ಆಪ್‌ಗೆ ಸಂಬಂಧಿಸಿದೆ, ಇದು ಬಹುತೇಕ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಈ ವಿಧಾನವನ್ನು ಬಳಸಲು ಈ ಕೆಳಗಿನ ಹಂತಗಳನ್ನು ಪರಿಶೀಲಿಸಿ
ಹಂತ 1: ಫೋನ್ ಸೆಟ್ಟಿಂಗ್ಸ್‌ ತೆರೆಯಿರಿ ಮತ್ತು ಕರೆಗಳ ಮೇಲೆ ಟ್ಯಾಪ್ ಮಾಡಿ
ಹಂತ 2: ಕಾಲ್‌ ಸೆಟ್ಟಿಂಗ್‌ಗಳಲ್ಲಿ, ಕಾಲ್ ಬ್ಯಾರಿಂಗ್ ಅನ್ನು ಟ್ಯಾಪ್ ಮಾಡಿ
ಹಂತ 3: ಈಗ ಎಲ್ಲಾ ಇನ್‌ಕಮಿಂಗ್‌ ಅನ್ನು ಟ್ಯಾಪ್ ಮಾಡಿ
ಹಂತ 4: ಇದು ಹೆಚ್ಚಿನ ಸಂದರ್ಭಗಳಲ್ಲಿ 1234 ಅಥವಾ 0000 ಆಗಿರಬಹುದಾದ ಪಾಸ್‌ವರ್ಡ್ ಅನ್ನು ಕೇಳುತ್ತದೆ.
ಹಂತ 5: ಈಗ, ಆನ್ ಟರ್ನ್ ಆನ್ ಮೇಲೆ ಟ್ಯಾಪ್ ಮಾಡಿದರೆ ಸಾಕು ನಿಮಗೆ ಕಿರಿಕಿರಿ ಎನಿಸುವ ಕರೆಗಳು ಬ್ಲಾಕ್‌ ಆಗಲಿವೆ.

ಅಪ್ಲಿಕೇಶನ್‌ಗಳ ಮೂಲಕ ಕಾಲ್‌ ಬ್ಲಾಕ್‌ ಮಾಡಿರಿ!

ಅಪ್ಲಿಕೇಶನ್‌ಗಳ ಮೂಲಕ ಕಾಲ್‌ ಬ್ಲಾಕ್‌ ಮಾಡಿರಿ!

ಆಂಡ್ರಾಯ್ಡ್ ಫೋನ್‌ಗಳಲ್ಲಿನ ಪ್ಲೇ ಸ್ಟೋರ್ ಬಹಳಷ್ಟು ಥರ್ಡ್ ಪಾರ್ಟಿ ಆಪ್‌ಗಳನ್ನು ಹೊಂದಿದೆ. ಇದರಲ್ಲಿ ಕೆಲವು ಅಪ್ಲಿಕೇಶನ್‌ ಗಳುನಿಮಗೆ ಕಾಲ್ ಬ್ಲಾಕಿಂಗ್‌ಗೆ ಸಹಾಯ ಮಾಡುತ್ತವೆ. ಈ ರೀತಿಯ ಅಪ್ಲಿಕೇಶನ್‌ಗಳಲ್ಲಿ ಕಾಲ್ ಬ್ಲಾಕರ್, ಕಾಲರ್ ಐಡಿ, ಟ್ರೂ ಕಾಲರ್‌ ನಂತಹ ಅಪ್ಲಿಕೇಶನ್‌ಗಳು ಸೇರಿವೆ. ಆದರೆ ಈ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಅಪ್ಲಿಕೇಶನ್‌ ವಿಶ್ವಾಸಾರ್ಹತೆ ಬಗ್ಗೆ ತಿಳಿಯುವುದು ಅತ್ಯಗತ್ಯವಾಗಿದೆ.

Best Mobiles in India

Read more about:
English summary
While Android has in-built features that help you block unwanted calls.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X