ಇನ್‌ಸ್ಟಾಗ್ರಾಮ್‌ ಖಾತೆಯನ್ನು ಸುಲಭವಾಗಿ 'Reactivate' ಮಾಡಲು ಹೀಗೆ ಮಾಡಿರಿ!

|

ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ (Instagram) ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಯುವಸಮೂಹವನ್ನು ಹೆಚ್ಚಾಗಿ ಸೆಳೆದಿದ್ದು, ಇದರಲ್ಲಿ ಫೋಟೊ, ವಿಡಿಯೋ ಶೇರ್ ಮಾಡಬಹುದಾಗಿದೆ. ಹಾಗೆಯೇ ಇನ್‌ಸ್ಟಾಗ್ರಾಮ್‌ನ ರೀಲ್ಸ್‌ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಅನೇಕ ಬಳಕೆದಾರರಿಗೆ ಮೋಡಿ ಮಾಡಿದೆ. ಅದಾಗ್ಯೂ, ಬಳಕೆದಾರರು ಕೆಲವೊಮ್ಮೆ ಇನ್‌ಸ್ಟಾಗ್ರಾಮ್‌ಗೆ ಅಲ್ಪವಿರಾಮ ನೀಡಲು ಮುಂದಾಗುತ್ತಾರೆ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಬಳಕೆಯಿಂದ ದೂರ ಇರುವ ನಿಟ್ಟಿನಲ್ಲಿ ನೀವೇನಾದರೂ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಬಳಕೆಯನ್ನು ನಿಲ್ಲಿಸಿದ್ದರೆ ಅಥವಾ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದರೇ, ಖಾತೆಯನ್ನು ಮತ್ತೆ ರೀಆಕ್ಟಿವ್‌ ಮಾಡಬಹುದು. ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಸುಲಭವಾಗಿ ಮರುಸಕ್ರಿಯಗೊಳಿಸಬಹುದು. ಅದಕ್ಕೆ ಕೆಲವು ಸರಳ ಹಂತಗಳಿವೆ. ಹಾಗಾದರೇ ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಮರು ಸಕ್ರಿಯಮಗೊಳಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಖಾತೆಯನ್ನು ಮರುಸಕ್ರಿಯ ಮಾಡಬಹುದು

ಖಾತೆಯನ್ನು ಮರುಸಕ್ರಿಯ ಮಾಡಬಹುದು

ಇತ್ತೀಚೆಗೆ ಕೆಲವು ಕಾರಣಗಳಿಗಾಗಿ ನೀವೇನಾದರೂ ಇನ್‌ಸ್ಟಾಗ್ರಾಮ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಮತ್ತು ಅದನ್ನು ಮತ್ತೆ ಸಕ್ರಿಯಗೊಳಿಸಲು ಬಯಸಿದರೆ, ಅದಕ್ಕೆ ಅವಕಾಶ ಇದೆ. ಆದಾಗ್ಯೂ, ನಿಮ್ಮ ಖಾತೆಯನ್ನು ಮತ್ತೊಮ್ಮೆ ಮರುಸಕ್ರಿಯಗೊಳಿಸಲು ಇನ್‌ಸ್ಟಾಗ್ರಾಮ್ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ ಕನಿಷ್ಠ 24 ಗಂಟೆಗಳ ಕಾಲ ಕಾಯುವಂತೆ ಸೂಚಿಸುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.

ಈ ಕ್ರಮ ಅನುಸರಿಸಿ:

ಈ ಕ್ರಮ ಅನುಸರಿಸಿ:

* ನಿಮ್ಮ ಆಂಡ್ರಾಯ್ಡ್‌ ಅಥವಾ ಐಓಎಸ್‌ ಸಾಧನದಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ.
* ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಸ್ಕ್ರೀನ್‌ಗೆ ಹೋಗಿ.
* ಅಲ್ಲಿ ನೀವು ನಿಷ್ಕ್ರಿಯಗೊಳಿಸಿದ ಖಾತೆಯ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು.
* ಈಗ, ಲಾಗಿನ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಖಾತೆಯನ್ನು ಸಾಮಾನ್ಯ ಸ್ಥಿತಿಗೆ ಮರುಸ್ಥಾಪಿಸಲಾಗುತ್ತದೆ.

ಇನ್‌ಸ್ಟಾಗ್ರಾಮ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಿದ್ದರೆ, ಅದನ್ನು ಮತ್ತೆ ರೀಆಕ್ಟಿವ್ ಮಾಡಬಹುದೇ?

ಇನ್‌ಸ್ಟಾಗ್ರಾಮ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಿದ್ದರೆ, ಅದನ್ನು ಮತ್ತೆ ರೀಆಕ್ಟಿವ್ ಮಾಡಬಹುದೇ?

ಇನ್‌ಸ್ಟಾಗ್ರಾಮ್‌ ಖಾತೆಯನ್ನು ನೀವು ಶಾಶ್ವತವಾಗಿ ಡಿಲೀಟ್ ಮಾಡಿದ್ದರೆ, ನಂತರ ನೀವು ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ನಿಮ್ಮ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ನೀವು ಅರ್ಜಿ ಸಲ್ಲಿಸಿದಾಗ, ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು 90 ದಿನಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಕಂಪನಿಯು ಗಮನಿಸುತ್ತದೆ. ಆದಾಗ್ಯೂ, ವಿನಂತಿಯ 30 ದಿನಗಳಲ್ಲಿ ನೀವು ಇನ್ನೂ ನಿಮ್ಮ ಖಾತೆಯನ್ನು ಹಿಂಪಡೆಯಬಹುದು.

ಶಾಶ್ವತವಾಗಿ

ಇದರರ್ಥ, ನಿಮ್ಮ ಖಾತೆಯನ್ನು ನೀವು ಶಾಶ್ವತವಾಗಿ ಡಿಲೀಟ್ ಮಾಡಿದ್ದು, ಅದು 30 ದಿನಗಳಿಗಿಂತ ಕಡಿಮೆಯಿದ್ದರೆ, ನೀವು ಅದನ್ನು ಪುನಃ ಸಕ್ರಿಯಗೊಳಿಸಬಹುದು. ಆದಾಗ್ಯೂ, ನೀವು ಅದೇ ಇ-ಮೇಲ್ ವಿಳಾಸದಿಂದ ಹೊಸ ಖಾತೆಗಾಗಿ ಇನ್ನೂ ಅರ್ಜಿ ಸಲ್ಲಿಸಬಹುದು. ಆದರೆ ನೀವು ಮೊದಲಿನಿಂದ ಪ್ರಾರಂಭಿಸಬೇಕಾಗುತ್ತದೆ ಮತ್ತು ನಿಮ್ಮ ಹಿಂದಿನ ಖಾತೆಯ ಅದೇ ಬಳಕೆದಾರ ಹೆಸರನ್ನು ಪಡೆಯಲು ನಿಮಗೆ ಸಾಧ್ಯವಾಗದಿರಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡುವ ಆಯ್ಕೆ ಇದೆ

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡುವ ಆಯ್ಕೆ ಇದೆ

ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ತೆಗೆದು ಹಾಕುವ ಆಯ್ಕೆ ಇದ್ದು, ಅದು ಎರಡು ಮಾದರಿಯಲ್ಲಿ ಸಾಧ್ಯವಿದೆ. ಒಂದು ತಾತ್ಕಾಲಿಕವಾಗಿ ತೆಗೆದು ಹಾಕುವುದು ಮತ್ತು ಶಾಶ್ವತವಾಗಿ ಅಕೌಂಟ್ ತೆಗೆದುಹಾಕುವುದು. ತಾತ್ಕಾಲಿಕವಾಗಿ ತೆಗೆದರೇ ಮತ್ತೆ ಮರಳಿ ಸಕ್ರಿಯ ಮಾಡುವ ಆಯ್ಕೆ ಲಭ್ಯವಿರುತ್ತದೆ. ಆದರೆ ಶಾಶ್ವತವಾಗಿ ಡಿಲೀಟ್ ಮಾಡಿದರೇ ಮತ್ತೆ ಅಕೌಂಟ್ ಸಕ್ರಿಯ ಮಾಡಿಕೊಳ್ಳಲಾಗದು.

ವೆಬ್‌ ವರ್ಷನ್‌ನಲ್ಲಿ ಸಾಧ್ಯ

ವೆಬ್‌ ವರ್ಷನ್‌ನಲ್ಲಿ ಸಾಧ್ಯ

ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಡಿಲೀಟ್ ಆಯ್ಕೆಯು ಸ್ಮಾರ್ಟ್‌ಫೋನ್ ಅಥವಾ ಐಫೋನ್‌ಗಳ ಆಪ್‌ನಲ್ಲಿ ದೊರೆಯುವುದಿಲ್ಲ. ಹೀಗಾಗಿ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌ಗಳು ಮೂಲಕ ಇನ್‌ಸ್ಟಾಗ್ರಾಂ ವೆಬ್‌ ವರ್ಷನ್‌ ತೆರೆಯಬೇಕು. ಆ ಮೂಲ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಬಹುದಾಗಿದೆ.

ತಾತ್ಕಾಲಿಕವಾಗಿ ಡಿಲೀಟ್ ಮಾಡುವುದು ಹೇಗೆ

ತಾತ್ಕಾಲಿಕವಾಗಿ ಡಿಲೀಟ್ ಮಾಡುವುದು ಹೇಗೆ

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಎಡಿಟ್ ಪ್ರೊಫೈಲ್ ಆಯ್ಕೆ ಒತ್ತಿರಿ.
* ತಾತ್ಕಾಲಿಕವಾಗಿ ಅಕೌಂಟ್ ಮುಚ್ಚಿರಿ ಆಯ್ಕೆ ಸೆಲೆಕ್ಟ್ ಮಾಡಿ. (Temporarily disable my account)
* ಅಕೌಂಟ್ ಮುಚ್ಚವ ಕಾರಣ ತಿಳಿಸಬೇಕು.
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ

ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಅಕೌಂಟ್ ತೆಗೆದುಹಾಕುವ ಸೂಕ್ತ ಕಾರಣ ತಿಳಿಸಬೇಕು.
* ನಂತರ ಶಾಶ್ವತವಾಗಿ ತೆಗೆದುಹಾಕುವ ಆಯ್ಕೆ ಕಾಣಿಸುತ್ತದೆ- rid of it forever
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ.

ಫೇಸ್‌ಬುಕ್ ಶಾಶ್ವತವಾಗಿ ಡಿಲೀಟ್ ಮಾಡಲು ಹೀಗೆ ಮಾಡಿ:

ಫೇಸ್‌ಬುಕ್ ಶಾಶ್ವತವಾಗಿ ಡಿಲೀಟ್ ಮಾಡಲು ಹೀಗೆ ಮಾಡಿ:

ಹಂತ 1: ಸೆಟ್ಟಿಂಗ್‌ಗಳಿಗೆ ಹೋಗಿ ನಂತರ '' ನಿಮ್ಮ ಮಾಹಿತಿಯನ್ನು ಡೌನ್‌ಲೋಡ್ ಮಾಡಿ '' ಕ್ಲಿಕ್ ಮಾಡಿ.
ಹಂತ 2: ಒಮ್ಮೆ ನೀವು ನಿಮ್ಮ ಎಲ್ಲಾ ಡೇಟಾವನ್ನು ಡೌನ್‌ಲೋಡ್ ಮಾಡಿದ ನಂತರ '' Account ownership and control option'' ಕ್ಲಿಕ್ ಮಾಡಿ.
ಹಂತ 3: ನಂತರ ನೀವು ''Deactivation and deletion option '' ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Delete account ಆಯ್ಕೆಯನ್ನು ಆರಿಸಿ.
ಹಂತ 4: ಅದರ ನಂತರ, ಫೇಸ್‌ಬುಕ್ ಗುರುತಿಗಾಗಿ ಪಾಸ್‌ವರ್ಡ್ ಕೇಳುತ್ತದೆ ಎಂಟರ್ ಮಾಡಿ ನಂತರ ಮತ್ತೆ Delete account ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಇದೀಗ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಆಗಲಿದೆ. ಆದರೂ ನೀವು ಮುಂದಿನ 30 ದಿನಗಳ ಒಳಗೆ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು ಎಂದು ಹೇಳುವ ಟಿಪ್ಪಣಿಯನ್ನು ಕಾಣಬಹುದಾಗಿದೆ. ಇಲ್ಲಿ ನೀವು 30 ದಿನಗಳಲ್ಲಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ಗೆ ಲಾಗ್ ಇನ್ ಆಗದಿದ್ದರೆ, ನಿಮ್ಮ ಖಾತೆಯನ್ನು ಶಾಶ್ವತವಾಗಿ ಅಳಿಸಲಾಗುತ್ತದೆ.

Best Mobiles in India

English summary
How to Reactivate Instagram Account If It is Deactivated? Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X