ಪೇಟಿಎಮ್‌ ಆಪ್‌ ಮೂಲಕ ಮೊಬೈಲ್‌ ರೀಚಾರ್ಜ್ ಮಾಡುವುದು ಹೇಗೆ!

|

ಪ್ರಸ್ತುತ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಹೆಚ್ಚು ಬಳಕೆಯಲ್ಲಿದ್ದು, ಅನೇಕ ಬಳಕೆದಾರರು ತಮ್ಮ ಪ್ರತಿ ವ್ಯವಹಾರವನ್ನು ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಮಾಡಲು ಬಯಸುತ್ತಾರೆ. ಬಳಕೆದಾರರು ಮೊಬೈಲ್‌ ರೀಚಾರ್ಜ್‌, ವಾಟರ್‌ ಬಿಲ್, ವಿದ್ಯುತ್ ಬಿಲ್, ಇನ್ಶುರೆನ್ಸ ಪ್ರೀಮಿಯಂ, ಡಿಟಿಎಚ್‌ ರೀಚಾರ್ಜ್‌ ಸೇರಿದಂತೆ ಹಲವು ಪಾವತಿಗಳನ್ನು ಸಹ ಡಿಜಿಟಲ್ ಪೇಮೆಂಟ್‌ ಆಪ್‌ಗಳ ಮೂಲಕ ಪಾವತಿಸುತ್ತಾರೆ. ಆ ಪೈಕಿ ಪೇಟಿಎಮ್‌ ಆಪ್‌ ಸಹ ಒಂದಾಗಿದೆ.

ರೀಚಾರ್ಜ್

ಆನ್‌ಲೈನ್‌ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಗೂಗಲ್ ಪೇ ಮತ್ತು ಫೋನ್‌ಪೇ ಒಳಗೊಂಡಂತೆ ಹಲವು ಆಪ್‌ಗಳು ಇವೆ. ಅವುಗಳಲ್ಲಿ ಪೇಟಿಎಮ್‌ ಸಹ ಲೀಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಆಪ್‌ನಲ್ಲಿ ಪಾವತಿ ವಿಧಾನಗಳು ಬಹಳ ಸುಲಭವಾಗಿವೆ. ಸಿಮ್ ಪೋಸ್ಟ್‌ಪೇಯ್ಡ್‌ ಆಗಿರಲಿ ಅಥವಾ ಪ್ರೀಪೇಯ್ಡ್‌ ಆಗಿರಲಿ ತ್ವರಿತವಾಗಿ ರೀಚಾರ್ಜ್ ಮಾಡಿಕೊಳ್ಳಬಹುದಾದ ಆಯ್ಕೆಗಳನ್ನು ಹೊಂದಿವೆ. ಹಾಗೆಯೇ ರೀಚಾರ್ಜ್ ಮಾಡುವಾಗ ಪ್ಲ್ಯಾನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಹ ಲಭ್ಯವಾಗಿಸುತ್ತವೆ. ಹಾಗಾದರೇ ಪೇಟಿಎಮ್‌ ಮೂಲಕ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪೇಟಿಎಮ್ ಆಪ್

ಪೇಟಿಎಮ್ ಆಪ್

ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಯಾವಾಗ ಬೇಕಾದರೂ ಮತ್ತು ಎಲ್ಲಿಂದಲಾದರೂ ರೀಚಾರ್ಜ್ ಮಾಡಲು ಪೇಟಿಎಮ್‌ ನಿಮಗೆ ಅವಕಾಶವನ್ನು ನೀಡುತ್ತದೆ. ಮನೆ, ಕಚೇರಿ, ರೆಸ್ಟೋರೆಂಟ್ ಅಥವಾ ಇನ್ನಾವುದೇ ಸ್ಥಳದಿಂದ ಇರಲಿ. ಆದರೆ ನಿಮಗೆ ಬೇಕಾಗಿರುವುದು ಇಂಟರ್ನೆಟ್ ಸೌಲಭ್ಯ ಮಾತ್ರ. ಪೇಟಿಎಮ್‌ ಮೂಲಕ ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಲು ನೀವು ಅನುಸರಿಸಬೇಕಾದ ಕೆಲವು ಸರಳ ಹಂತಗಳು ಇಲ್ಲಿವೆ.

ಪೇಟಿಎಮ್‌ ಮೂಲಕ ಮೊಬೈಲ್ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಪೇಟಿಎಮ್‌ ಮೂಲಕ ಮೊಬೈಲ್ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಪೇಟಿಎಮ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ, 'ಮೊಬೈಲ್ ಪ್ರಿಪೇಯ್ಡ್' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಹೊಸ ಪುಟ ಕಾಣಿಸುತ್ತದೆ, ಇಲ್ಲಿ ನಿಮಗೆ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಎಂಬ ಎರಡು ಆಯ್ಕೆಗಳಿವೆ

ಹಂತ 4: "ಪ್ರಿಪೇಯ್ಡ್ 'ಆಯ್ಕೆಯನ್ನು ಆರಿಸಿ.

ಹಂತ 5: ಅದರ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. (ಅದರ ಪಕ್ಕದಲ್ಲಿರುವ ವಿಳಾಸ ಪುಸ್ತಕ ಐಕಾನ್ ಕ್ಲಿಕ್ ಮಾಡುವ ಮೂಲಕ ನೀವು ಸಂಪರ್ಕ ಪಟ್ಟಿಯಿಂದ ಸಂಖ್ಯೆಯನ್ನು ಆಯ್ಕೆ ಮಾಡಬಹುದು)

ಹಂತ 6: ನೀವು ರೀಚಾರ್ಜ್ ಮಾಡಲು ಬಯಸುವ ಮೊತ್ತವನ್ನು ನೀವು ನೇರವಾಗಿ ನಮೂದಿಸಿ (ನಿಮ್ಮ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಲು ನೀವು 'ಬ್ರೌಸ್ ಪ್ಲ್ಯಾನ್‌ಗಳು' ಕ್ಲಿಕ್ ಮಾಡಬಹುದು)

ಹಂತ 7: ನಂತರ ರೀಚಾರ್ಜ್ ಮಾಡಲು 'Proceed' ಕ್ಲಿಕ್ ಮಾಡಿ.

ಪೋಸ್ಟ್ ಪೇಯ್ಡ್ ಸಿಮ್ ರೀಚಾರ್ಜ್ ಮಾಡಲು ಹೀಗೆ ಮಾಡಿ:

ಪೋಸ್ಟ್ ಪೇಯ್ಡ್ ಸಿಮ್ ರೀಚಾರ್ಜ್ ಮಾಡಲು ಹೀಗೆ ಮಾಡಿ:

ಹಂತ 1: ಪೇಟಿಎಮ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ, 'ಮೊಬೈಲ್ ಪ್ರಿಪೇಯ್ಡ್' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಹೊಸ ಪುಟ ಕಾಣಿಸುತ್ತದೆ, ಇಲ್ಲಿ ನಿಮಗೆ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಎಂಬ ಎರಡು ಆಯ್ಕೆಗಳಿವೆ

ಹಂತ 4: "ಪೋಸ್ಟ್‌ಪೇಯ್ಡ್" ಆಯ್ಕೆಯನ್ನು ಆರಿಸಿ.

ಹಂತ 5: ನಿಮ್ಮ 'ಪೋಸ್ಟ್‌ಪೇಯ್ಡ್ ಮೊಬೈಲ್ ಸಂಖ್ಯೆ' ಅನ್ನು ನಮೂದಿಸಿ.

ಹಂತ 6: ಬಾಕಿ ಇರುವ ಬಿಲ್ ಮೊತ್ತವನ್ನು ನಮೂದಿಸಿ (ನಿಮ್ಮ ಪಾವತಿಸಬೇಕಾದ ಮೊತ್ತವನ್ನು ಪಡೆಯಲು ಬಿಲ್ ಮೊತ್ತವನ್ನು ಪಡೆದುಕೊಳ್ಳಲು ಸಹ ನೀವು ಕ್ಲಿಕ್ ಮಾಡಬಹುದು)

ಹಂತ 7: ನಂತರ ರೀಚಾರ್ಜ್ ಮಾಡಲು 'Proceed' ಕ್ಲಿಕ್ ಮಾಡಿ.

Best Mobiles in India

English summary
Here is how you can recharge your phone via Paytm in 7 simple steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X