ನಿಮ್ಮ ಫೋನಿನಲ್ಲಿ ಸ್ಕ್ರೀನ್‌ ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?

|

ಸದ್ಯ ಸ್ಮಾರ್ಟ್‌ಫೋನ್‌ಗಳು ಅತೀ ಅವಶ್ಯ ಡಿವೈಸ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ನೂತನ ಫೀಚರ್ಸ್‌ಗಳೊಂದಿಗೆ ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಸ್ಮಾರ್ಟ್‌ಫೋನ್‌ಗಳು ಹಲವು ಸ್ಮಾರ್ಟ್ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಆ ಪೈಕಿ ಸ್ಕ್ರೀನ್‌ಶಾಟ್‌ ಸಹ ಒಂದಾಗಿದೆ. ಸ್ಕ್ರೀನ್‌ಶಾಟ್‌ನಂತೆ ಇನ್ನೊಂದು ಕೂತುಹಲಕಾರಿ ಫೀಚರ್ ಎಂದರೇ ಅದುವೇ ಸ್ಕ್ರೀನ್‌ ರೆಕಾರ್ಡಿಂಗ್ ಆಗಿದೆ. ಬಳಕೆದಾರರು ಫೋನಿನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಸಹ ಮಾಡಬಹುದಾಗಿದೆ.

ಆಪರೇಟಿಂಗ್

ಹೌದು, ಸ್ಮಾರ್ಟ್‌ಫೋನ್‌ ಬಳಕೆದಾರರು ಅವರ ಸ್ಕ್ರೀನ್‌ ಅನ್ನು ರೆಕಾರ್ಡಿಂಗ್ ಮಾಡಬಹುದಾಗಿದೆ. ಅಂದರೇ ಸ್ಕ್ರೀನ್ ರೆಕಾರ್ಡಿಂಗ್ ಆಯ್ಕೆ ಆನ್ ಮಾಡಿದರೇ, ಬಳಕೆದಾರರು ಫೋನ್ ಆಪರೇಟಿಂಗ್ ಮಾಡುವುದನ್ನು ಅದು ರೇಕಾರ್ಡ್ ಮಾಡಿಕೊಳ್ಳುತ್ತದೆ. ಅಗತ್ಯ ಸಂದರ್ಭಗಳಲ್ಲಿ ಸ್ಕ್ರೀನ್‌ ರೇಕಾರ್ಡಿಂಗ್ ವಿಡಿಯೋಗಳು ಉಪಯುಕ್ತ ಎನಿಸಲಿವೆ. ಫೋನ್‌ಗಳು ಸ್ಕ್ರೀನ್‌ ರೆಕಾರ್ಡಿಂಗ್ ಗಾಗಿ ಆಯ್ಕೆಗಳನ್ನು ಒಳಗೊಂಡಿವೆ. ಹಾಗೆಯೇ ಥರ್ಡ್‌ ಪಾರ್ಟಿ ಆಪ್‌ಗಳು ಇವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸ್ಕ್ರೀನ್ ರೆಕಾರ್ಡಿಂಗ್

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸ್ಕ್ರೀನ್ ರೆಕಾರ್ಡಿಂಗ್

ಟೆಕ್ ದೈತ್ಯ ಗೂಗಲ್ ಸಂಸ್ಥೆಯು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ ಓಎಸ್‌ನೊಂದಿಗೆ ಸ್ಕ್ರೀನ್ ರೆಕಾರ್ಡಿಂಗ್ ಫೀಚರ್ಸ್‌ ಅನ್ನು ಪರಿಚಯಿಸಿತು. ಇದು ಥರ್ಡ್‌ ಪಾರ್ಟಿ ಆಪ್‌ಗಳ ಮೂಲಕ ಸಾಧ್ಯವಿತ್ತು. ಬಳಿಕ 2014 ರಲ್ಲಿ ಆಂಡ್ರಾಯ್ಡ್ 5.0 ಲಾಲಿಪಾಪ್‌ನೊಂದಿಗೆ ಅಪ್‌ಡೇಟ್ ಮಾಡಲಾದ API ಮೂಲಕ ಗೂಗಲ್ ಇನ್ನಷ್ಟು ಸುಲಭವಾಗಿ ಮಾಡಿತು. ಅಂದಹಾಗೇ ಈ ಲಾಲಿಪಾಪ್ ಮತ್ತು ಕಿಟ್‌ಕ್ಯಾಟ್‌ ಓಎಸ್‌ಗೆ ಮುಂಚಿತವಾಗಿ ಸ್ಕ್ರೀನ್ ರೆಕಾರ್ಡಿಂಗ್ ಆಪ್ಸ್‌ಗಳು ಆಂಡ್ರಾಯ್ಡ್‌ನಲ್ಲಿ ಲಭ್ಯವಿದ್ದರೂ, ಅವು ರೂಟ್ ಮಾಡಿದ ಫೋನ್‌ಗಳಲ್ಲಿ ಮಾತ್ರ ಕೆಲಸ ಮಾಡಬಲ್ಲವಾಗಿದ್ದವು.

ನೋಟಿಫಿಕೇಶನ್

ಇನ್ನು ಬಹುತೇಕ ಎಲ್ಲ ಫೋನ್‌ಗಳಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ ರೆಕಾರ್ಡಿಂಗ್ ಇರುವ ಬಗ್ಗೆ ತಿಳಿಯಬಹುದು. ಅದಕ್ಕಾಗಿ ನೋಟಿಫಿಕೇಶನ್ ಲಿಸ್ಟ್‌ ಕೆಳಗೆ ಎಳೆದು. ಸರ್ಚ್‌ ನಲ್ಲಿ ಸ್ಕ್ರೀನ್ ರೆಕಾರ್ಡರ್ ಐಕಾನ್ ಅನ್ನು ಟ್ಯಾಪ್ ಮಾಡಿಬಹುದು.

ಈ ಹಂತಗಳನ್ನು ಅನುಸರಿಸಿ:

ಈ ಹಂತಗಳನ್ನು ಅನುಸರಿಸಿ:

* ನಿಮ್ಮ ಪರದೆಯ ಮೇಲಿನಿಂದ ಎರಡು ಬಾರಿ ಕೆಳಗೆ ಸ್ವೈಪ್ ಮಾಡಿ.
* ಸ್ಕ್ರೀನ್ ರೆಕಾರ್ಡ್ ಆಯ್ಕೆಯನ್ನು ಟ್ಯಾಪ್ ಮಾಡಿ
* ಅದನ್ನು ಹುಡುಕಲು ಬಲಕ್ಕೆ ಸ್ವೈಪ್ ಮಾಡಿ.
* ಅದು ಇಲ್ಲದಿದ್ದರೆ, ಎಡಿಟ್ ಟ್ಯಾಪ್ ಮಾಡಿ ಮತ್ತು ಸ್ಕ್ರೀನ್ ರೆಕಾರ್ಡ್ ಅನ್ನು ನಿಮ್ಮ ಕ್ವಿಕ್ ಸೆಟ್ಟಿಂಗ್‌ ಆಯ್ಕೆ ಎಳೆಯಿರಿ.
* ನೀವು ಏನನ್ನು ರೆಕಾರ್ಡ್ ಮಾಡಬೇಕೆಂಬುದನ್ನು ಆರಿಸಿ. ನಂತರ ಪ್ರಾರಂಭವನ್ನು ಟ್ಯಾಪ್ ಮಾಡಿ. ಕ್ಷಣಗಣನೆಯ ನಂತರ ರೆಕಾರ್ಡಿಂಗ್ ಆರಂಭವಾಗುತ್ತದೆ.

ರೆಕಾರ್ಡಿಂಗ್‌ಗಳನ್ನು

* ರೆಕಾರ್ಡಿಂಗ್ ಸ್ಟಾಪ್ ಮಾಡಲು, ಸ್ಕ್ರೀನ್‌ ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ
* ಸ್ಕ್ರೀನ್ ರೆಕಾರ್ಡರ್ ನೋಟಿಫಿಕೇಶನ್ ಟ್ಯಾಪ್ ಮಾಡಿ
* ಸ್ಕ್ರೀನ್ ರೆಕಾರ್ಡಿಂಗ್‌ಗಳನ್ನು ಸರ್ಚ್ ಮಾಡಿ
* ನಿಮ್ಮ ಫೋನ್‌ನ ಫೋಟೋಗಳ ಅಪ್ಲಿಕೇಶನ್ ತೆರೆಯಿರಿ
* ಲೈಬ್ರರಿಯನ್ನು ಟ್ಯಾಪ್ ಮಾಡಿ
* ಸ್ಕ್ರೀನ್ ರೆಕಾರ್ಡಿಂಗ್ ವಿಡಿಯೋ ವೀಕ್ಷಿಸಲು ಮ್ಯೂವಿಸ್‌ಗೆ ಹೋಗಿ

ಥರ್ಡ್‌ ಪಾರ್ಟಿ ಆಪ್ಸ್

ಥರ್ಡ್‌ ಪಾರ್ಟಿ ಆಪ್ಸ್

ಸ್ಕ್ರೀನ್ ರೆಕಾರ್ಡ್ ಮಾಡಲು ನಿಮ್ಮ ಫೋನ್ ಇನ್‌ಬಿಲ್ಟ್‌ ಸಪೋರ್ಟ್‌ ಪಡೆಯದಿದ್ದರೇ, ಥರ್ಡ್‌ ಪಾರ್ಟಿ ಆಪ್‌ಗಳ ಮೂಲಕ ಸ್ಕ್ರೀನ್ ರೆಕಾರ್ಡ್ ಮಾಡಬಹುದಾಗಿದೆ. ಅದಕ್ಕಾಗಿ ಹಲವಾರು ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆ.

ಕೆಲವು ಬೆಸ್ಟ್‌ ಸ್ಕ್ರೀನ್ ರೆಕಾರ್ಡಿಂಗ್ ಆಪ್‌:

ಕೆಲವು ಬೆಸ್ಟ್‌ ಸ್ಕ್ರೀನ್ ರೆಕಾರ್ಡಿಂಗ್ ಆಪ್‌:

* ಸ್ಕ್ರೀನ್ ರೆಕಾರ್ಡರ್ (Screen Recorder)
* AZ ಸ್ಕ್ರೀನ್ ರೆಕಾರ್ಡರ್ (AZ Screen Recorder.)
* ಸೂಪರ್ ಸ್ಕ್ರೀನ್ ರೆಕಾರ್ಡರ್ (Super Screen Recorder.)
* ಮೊಬಿಜೆನ್ ಸ್ಕ್ರೀನ್ ರೆಕಾರ್ಡರ್ (Mobizen Screen Recorder.)
* ADV ಸ್ಕ್ರೀನ್ ರೆಕಾರ್ಡರ್ (ADV Screen Recorder)

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದು ಹೇಗೆ?

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದು ಹೇಗೆ?

ಹಂತ:1 ನೀವು ಜಿಯೋಫೋನ್ ಅನ್ನು ಅನ್ಲಾಕ್ ಮಾಡಬೇಕಾಗುತ್ತದೆ ಮತ್ತು ನಂತರ ನೀವು ಸೆರೆಹಿಡಿಯಲು ಬಯಸುವ ಸ್ಕ್ರೀನ್‌ ಅನ್ನು ಸರ್ಚ್‌ ಮಾಡಿ.

ಹಂತ:2 ನಂತರ, ನೀವು ರೈಟ್‌ ಬಟನ್‌ ಅನ್ನು ಒತ್ತುವ ಅಗತ್ಯವಿದೆ. ನಂತರ ಸೇವೆಗಳನ್ನು ಸಕ್ರಿಯಗೊಳಿಸಲು ನೀವು ಸರಿ ಗೂಗಲ್ ಎಂದು ಗೂಗಲ್‌ ಅಸಿಸ್ಟೆಂಟ್‌ಗೆ ಹೇಳಬೇಕು.

ಹಂತ:3 ಅದರ ನಂತರ, ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಲು ಗೂಗಲ್ ಅಸಿಸ್ಟೆಂಟ್ ನಿಮಗೆ ಅನುಮತಿಸುತ್ತದೆ.

ಹಂತ:4 ಇದು ಮುಗಿದ ನಂತರ, ನೀವು 'ಸ್ಕ್ರೀನ್‌ಶಾಟ್ ಸೇವ್ ಟು' ಎಂಬ ನೋಟಿಫೀಕೇಷನ್‌ ಬರಲಿದೆ. ನಂತರ ನೀವು ರೈಟ್‌ ಬಟನ್‌ ಅನ್ನು ಒತ್ತಿ.

Best Mobiles in India

English summary
How To Record Screen On Your Android Smartphone: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X