ವಾಯ್ಸ್‌ ಕಾಲ್‌ನಂತೆ ವಿಡಿಯೋ ಕಾಲ್‌ ಕೂಡ ರೆಕಾರ್ಡ್ ಮಾಡಿ..!

By Gizbot Bureau
|

ಫೇಸ್‌ಬುಕ್‌, ವಾಟ್ಸ್‌ಆಪ್‌ನ ಬೃಹತ್‌ ಬಳಕೆಯೊಂದಿಗೆ ವಿಡಿಯೋ ಕಾಲಿಂಗ್‌ ಕೂಡ ಬೆಳವಣಿಗೆ ಕಂಡಿದೆ, ವಾಯ್ಸ್ ಕಾಲಿಂಗ್‌ನಲ್ಲಿ ಮಾತನಾಡಲು ಯೋಚಿಸುತ್ತಿದ್ದ ಜನ, ಈಗ ವಿಡಿಯೋ ಕಾಲಿಂಗ್‌ಗೆ ಮುಗಿಬಿದ್ದಿದ್ದಾರೆ. ಮುಖ ನೋಡುತ್ತಾ ನೈಜವಾಗಿ ಮಾತನಾಡುವುದನ್ನು ಸಾಕಾರಗೊಳಿಸಿರುವ ವಿಡಿಯೋ ಕಾಲಿಂಗ್‌ನಲ್ಲಿ ಗ್ರೂಪ್‌ ಕಾಲಿಂಗ್‌ ಕೂಡ ಸೇರಿ, ಬಳಕೆದಾರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ವಾಯ್ಸ್‌ ಕಾಲ್‌ನಂತೆ ವಿಡಿಯೋ ಕಾಲ್‌ ಕೂಡ ರೆಕಾರ್ಡ್ ಮಾಡಿ..!

ಇನ್ನು, ಒಂದಿಷ್ಟು ಕಾರಣಗಳಿಗೆ, ಯಾವುದಾದರೂ ವಿಶೇಷ ಘಟನೆಯನ್ನು ನೆನಪಿಟ್ಟುಕೊಳ್ಳಲು ವಿಡಿಯೋ ಕಾಲಿಂಗ್‌ನ್ನು ರೆಕಾರ್ಡ್‌ ಮಾಡಬಹುದಾ ಎಂದು ಕೇಳಿದರೆ, ನಮ್ಮ ಕಡೆಯಿಂದ ಯೆಸ್‌ ಎಂಬ ಉತ್ತರ ಸಿಗುತ್ತದೆ. ರೆಕಾರ್ಡ್‌ ಮಾಡಲು ಥರ್ಡ್‌ ಪಾರ್ಟಿ ಸ್ಕ್ರೀನ್‌ ರೆಕಾರ್ಡರ್ ಆಪ್‌ಗಳನ್ನು ಬಳಸಬೇಕಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಪ್ರಮುಖ ಮತ್ತು ಸುಲಭವಾದ ಸ್ಕ್ರೀನ್‌ ರೆಕಾರ್ಡ್‌ ಆಪ್‌ಗಳನ್ನು ನಿಮಗೆ ನೀಡಲಾಗಿದೆ.

DU Recorder

DU Recorder

ಡಿಯು ರೆಕಾರ್ಡರ್‌ ಆಪ್‌ ಸುಲಭವಾದ ಮತ್ತು ಉತ್ತಮ ಸ್ಕ್ರೀನ್‌ ರೆಕಾರ್ಡರ್ ಆಪ್‌ ಆಗಿದೆ. ಈ ಆಪ್‌ ಹೆಚ್ಚು ಬಳಕೆದಾರ ಸ್ನೇಹಿಯಾಗಿದ್ದು, ಸ್ಕ್ರೀನ್‌ ಮೇಲಿನ ಪ್ಲೋಟಿಂಗ್‌ ಐಕಾನ್‌ ಮೂಲಕ ಸ್ಕ್ರೀನ್‌ ರೆಕಾರ್ಡ್ ಮಾಡಬಹುದಾಗಿದೆ. ಪ್ಲೋಟಿಂಗ್‌ ಐಕಾನ್‌ ನಿಮಗೆ ವಿವಿಧ ಆಯ್ಕೆಗಳನ್ನು ನೀಡುತ್ತದೆ. ನೀವು ಸ್ಕ್ರೀನ್‌ ರೆಕಾರ್ಡ್‌ನ್ನು ಇಲ್ಲಿ ಪ್ರಾರಂಭಿಸಬಹುದು ಅಥವಾ ನಿಲ್ಲಿಸಬಹುದಾಗಿದೆ. ಅದಲ್ಲದೇ ವಿಡಿಯೋದಲ್ಲಿ ಶಬ್ಧವಿದ್ದರೆ ಅದನ್ನು ಕೂಡ ಡಿಯು ರೆಕಾರ್ಡರ್ ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಆಪ್‌ ಮೂಲಕ ವಿಡಿಯೋ ಕಾಲಿಂಗ್‌ ರೆಕಾರ್ಡ್‌ ಮಾಡುವುದು ಉತ್ತಮ.

AZ Screen Recorder

AZ Screen Recorder

ಇದು ಕೂಡ ಉತ್ತಮ ಸ್ಕ್ರೀನ್‌ ರೆಕಾರ್ಡರ್ ಆಪ್‌ ಆಗಿದ್ದು, ಈ ಆಪ್‌ ಬಳಸಲು ಯಾವುದೇ ರೂಟ್‌ ಅಕ್ಸೆಸ್‌ ಬೇಕಾಗಿಲ್ಲ. ಬಳಕೆದಾರರು ತುಂಬಾ ಸುಲಭವಾಗಿ ನೊಟಿಫಿಕೇಷನ್‌ ಬಾರ್‌ನಲ್ಲಿರುವ ಸ್ಕ್ರೀನ್‌ ರೆಕಾರ್ಡರ್‌ ನಿಯಂತ್ರಕಗಳಿಂದ ರೆಕಾರ್ಡ್‌ನ್ನು ಪ್ರಾರಂಭಿಸಬಹುದು ಅಥವಾ ನಿಲ್ಲಿಸಬಹುದಾಗಿದೆ. ಇದು ಕೂಡ ಶಬ್ಧವನ್ನು ಸ್ಪಷ್ಟವಾಗಿ ಫ್ರೇಮ್‌ ಟು ಫ್ರೇಮ್ ರೆಕಾರ್ಡ್‌ ಮಾಡುವುದರಿಂದ ಶಬ್ಧಕ್ಕಾಗಿ ಬೇರೆ ಆಪ್‌ನ ಅವಶ್ಯಕತೆ ಇರಲ್ಲ.

Mobizen Screen Recorder

Mobizen Screen Recorder

ಮತ್ತೊಂದು ಉತ್ತಮ ಸ್ಕ್ರೀನ್‌ ರೆಕಾರ್ಡರ್ ಆಪ್‌ ಇದಾಗಿದ್ದು, ಸ್ಕ್ರೀನ್‌ ರೆಕಾರ್ಡ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದು ನಿಮ್ಮ ಸ್ಕ್ರೀನ್‌ ಮೇಲಿನ ಎಲ್ಲಾ ಅಂಶಗಳನ್ನು ರೆಕಾರ್ಡ್‌ ಮಾಡುತ್ತದೆ. ಕೇವಲ ವಾಟ್ಸ್‌ಆಪ್‌, ಫೇಸ್‌ಬುಕ್‌ ಅಷ್ಟೇ ಅಲ್ಲದೇ ಯಾವುದೇ ಆಪ್‌ ರೆಕಾರ್ಡ್‌ ಮಾಡಲು ಈ ಸ್ಕ್ರೀನ್‌ ರೆಕಾರ್ಡರ್ ಬಳಸಬಹುದು.

XRecorder

XRecorder

ಇನ್‌ಶಾಟ್‌ನ XRecorder ಆಪ್‌ ಅಗ್ರ ಶ್ರೇಯಾಂಕಿತ ಸ್ಕ್ರೀನ್‌ ರೆಕಾರ್ಡಿಂಗ್‌ ಆಪ್‌ಗಳಲ್ಲಿ ಪ್ರಮುಖವಾಗಿದೆ. ಈ ಆಪ್‌ನ ಪ್ರಮುಖ ವಿಶೇಷವೆಂದರೆ ಯಾವುದೇ ವಾಟರ್‌ ಮಾರ್ಕ್‌ನ್ನು ವಿಡಿಯೋದ ಮೇಲೆ ನೀಡುವುದಿಲ್ಲ. ಬಿಗೋ ಲೈವ್‌, ಪೆರಿಸ್ಕೋಪ್‌ನಂತಹ ಜನಪ್ರಿಯ ಆಪ್‌ಗಳ ಲೈವ್‌ ಶೋಗಳನ್ನು ಕೂಡ ಈ ಆಪ್‌fನಲ್ಲಿ ರೆಕಾರ್ಡ್‌ ಮಾಡಬಹುದಾಗಿದ್ದು, ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ ವಿಡಿಯೋ ಕಾಲಿಂಗ್‌ ರೆಕಾರ್ಡ್ ಮಾಡಲು ಹೇಳಿ ಮಾಡಿಸಿದೆ.

ADV Screen Recorder

ADV Screen Recorder

ವಾಟ್ಸ್‌ಆಪ್‌, ಫೇಸ್‌ಬುಕ್‌ ವಿಡಿಯೋ ಕಾಲ್‌ಗಳನ್ನು ಇನ್ನು ಸುಲಭವಾಗಿ ರೆಕಾರ್ಡ್‌ ಮಾಡಬೇಕು ಅಂದುಕೊಂಡಿದ್ದೀರಾ..? ಆಗಿದ್ರೆ ADV Screen Recorder ಆಪ್‌ನ್ನು ಒಂದ್ಸಲ ಟ್ರೈ ಮಾಡಬಹುದು. ಈ ಆಪ್‌ ಯಾವುದೇ ಅಡಚಣೆಗಳಿಲ್ಲದೇ ಡಿಸ್‌ಪ್ಲೇ ಆದ ಎಲ್ಲಾ ಅಂಶಗಳನ್ನು ಸೆರೆಹಿಡಿಯುತ್ತದೆ. ಮತ್ತೊಂದು ಕುತೂಹಲಕರ ಅಂಶ ಏನೆಂದರೆ ಸ್ಕ್ರೀನ್‌ ರೆಕಾರ್ಡ್‌ ಮಾಡುವಾಗ ಸೆಲ್ಫೀ ಕ್ಯಾಮೆರಾ ಅಥವಾ ಬ್ಯಾಕ್‌ ಕ್ಯಾಮೆರಾ ಬಳಸುವ ಅವಕಾಶವನ್ನು ಈ ಆಪ್‌ ನೀಡಿದೆ.

Best Mobiles in India

English summary
How to record WhatsApp video calls?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X