ಡಿಲೀಟ್ ಆದ ಕಾಂಟ್ಯಾಕ್ಟ್‌ ನಂಬರ್ ಮತ್ತೆ ಪಡೆಯಲು ಹೀಗೆ ಮಾಡಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಅಗತ್ಯ ಮತ್ತಯ ಅವಶ್ಯ ಸಾಧನ ಆಗಿದೆ. ಬಳಕೆದಾರರು ಫೋನಿನಲ್ಲಿ ಪ್ರಮುಖ ದಾಖಲೆಗಳನ್ನು, ಫೋಟೊ, ವಿಡಿಯೋ ಸೇರಿದಂತೆ ಕಾಂಟ್ಯಾಕ್ಟ್‌ / ನಂಬರ್‌ ಸೇವ್ ಮಾಡಿರುತ್ತಾರೆ. ಆದರೆ ಕೆಲವೊಮ್ಮ ಆಕಸ್ಮಿಕವಾಗಿ ಕಾಂಟ್ಯಾಕ್ ನಂಬರ್‌ಗಳು ಡಿಲೀಟ್ ಆಗಿರುತ್ತವೆ. ಅಂತಹ ಸಂದರ್ಭದಲ್ಲಿ ಬಳಕೆದಾರರು ನಿರಾಶಾದಾಯಕ ಆಗುತ್ತಾರೆ. ಆದರೆ ಡಿಲೀಟ್ ಮಾಡ ಕಾಂಟ್ಯಾಕ್ಟ್‌ ನಂಬರ್ ಮರಳಿ ಪಡೆಯಲು ಅವಕಾಶ ಇದೆ.

ಡಿಲೀಟ್ ಆದ ಕಾಂಟ್ಯಾಕ್ಟ್‌ ನಂಬರ್ ಮತ್ತೆ ಪಡೆಯಲು ಹೀಗೆ ಮಾಡಿ!

ಹೌದು, ಬಳಕೆದಾರರು ಡಿಲೀಟ್ ಆದ ಕಾಂಟ್ಯಾಕ್ಟ್‌ಗಳನ್ನು ಮತ್ತೆ ಪಡೆಯಲು ದಾರಿ ಇದೆ. ಅದಕ್ಕಾಗಿ ಗೂಗಲ್‌ ಕಾಂಟ್ಯಾಕ್ಟ್ಸ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಅನ್ನು ಬಳಸಿಕೊಂಡು ಆಂಡ್ರಾಯ್ಡ್‌ ನಲ್ಲಿ ಕಾಂಟ್ಯಾಕ್ಟ್‌ಗಳನ್ನು ಮರಳಿ ಪಡೆಯಬಹುದಾಗಿದೆ. ಹಾಗೆಯೇ ಐಫೋನ್‌ ನಲ್ಲಿ, ಐಟ್ಯೂನ್‌ ಅಪ್ಲಿಕೇಶನ್ ಮತ್ತು ಐ ಕ್ಲೌಡ್‌ ಆಪ್‌ ವೆಬ್‌ಸೈಟ್ ಬಳಸಿ ಕಾಂಟ್ಯಾಕ್ಟ್‌ಗಳನ್ನು ಮರುಪಡೆಯಬಹುದು. ಹಾಗಾದರೇ ಡಿಲೀಟ್ ಆದ ಕಾಂಟ್ಯಾಕ್ಟ್‌ಗಳನ್ನು ಮತ್ತೆ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಲೀಟ್ ಆದ ಕಾಂಟ್ಯಾಕ್ಟ್‌ ನಂಬರ್ ಮತ್ತೆ ಪಡೆಯಲು ಹೀಗೆ ಮಾಡಿ!

ಗೂಗಲ್‌ ಕಾಂಟ್ಯಾಕ್ಟ್ಸ್ ಆಪ್‌ ಬಳಸಿ ಡಿಲೀಟ್ ಆದ ನಂಬರ್ ಮರಳಿ ಪಡೆಯಲು ಹೀಗೆ ಮಾಡಿ:
* ಗೂಗಲ್‌ ಕಾಂಟ್ಯಾಕ್ಟ್ಸ್ (Google Contacts) ಅಪ್ಲಿಕೇಶನ್ ತೆರೆಯಿರಿ
* ನಂಬರ್ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ (ಮೇಲಿನ ಎಡಭಾಗದಲ್ಲಿ ಮೂರು ಸಾಲುಗಳು)
* Trash- ಅನುಪಯುಕ್ತವನ್ನು ಆಯ್ಕೆಮಾಡಿ
* ಕಳೆದ 30 ದಿನಗಳಲ್ಲಿ ನಿಮ್ಮ ಗೂಗಲ್ ಖಾತೆಯಿಂದ ನೀವು ಡಿಲೀಟ್ ಮಾಡಲಾದ ಕಾಂಟ್ಯಾಕ್ಟ್‌ ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ
* ನಿಮ್ಮ ಫೋನ್‌ನಲ್ಲಿ ನೀವು ಮರುಸ್ಥಾಪಿಸಲು ಬಯಸುವ ಕಾಂಟ್ಯಾಕ್ಟ್‌/ಕಾಂಟ್ಯಾಕ್ಟ್ಸ್ ಮೇಲೆ ದೀರ್ಘವಾಗಿ ಒತ್ತಿರಿ
* ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
* ರೀಕವರ್ ಆಯ್ಕೆಮಾಡಿ

ವೆಬ್‌ಸೈಟ್ ಮೂಲಕ ಡಿಲೀಟ್ ಮಾಡಲಾದ ಕಾಂಟ್ಯಾಕ್ಟ್‌ಗಳನ್ನು ಮರಳಿಪಡೆಯಲು ಹೀಗೆ ಮಾಡಿ
* ಗೂಗಲ್ ಕಾಂಟ್ಯಾಕ್ಟ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ
* ಎಡ ಮೆನುವಿನಲ್ಲಿ, 'ಅನುಪಯುಕ್ತ - Trash ಕ್ಲಿಕ್ ಮಾಡಿ
* ನಿಮ್ಮ ಫೋನ್‌ನಲ್ಲಿ ನೀವು ಮರಳಿ ಪಡೆಯಲು ಬಯಸುವ ಸಂಪರ್ಕ/ಸಂಪರ್ಕಗಳನ್ನು ಆಯ್ಕೆಮಾಡಿ (ಲೋಗೋ ಅಥವಾ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ)
* ರೀಕವರ್ ಕ್ಲಿಕ್ ಮಾಡಿ.

ಡಿಲೀಟ್ ಆದ ಕಾಂಟ್ಯಾಕ್ಟ್‌ ನಂಬರ್ ಮತ್ತೆ ಪಡೆಯಲು ಹೀಗೆ ಮಾಡಿ!

ಐಟ್ಯೂನ್ಸ್ ಮೂಲಕ ಡಿಲೀಟ್ ಮಾಡಲಾದ ಕಾಂಟ್ಯಾಕ್ಟ್‌ಗಳನ್ನು ಮರಳಿಪಡೆಯಲು ಹೀಗೆ ಮಾಡಿ
* USB ಕೇಬಲ್ ಮೂಲಕ ನಿಮ್ಮ ಫೋನ್ ಅನ್ನು ನಿಮ್ಮ ಕಂಪ್ಯೂಟರ್/ಲ್ಯಾಪ್‌ಟಾಪ್‌ಗೆ ಸಂಪರ್ಕಿಸಿ
* ನಿಮ್ಮ ಫೋನ್‌ನಲ್ಲಿ 'ಫೈಂಡ್‌ ಮೈ ಐಫೋನ್‌' ಅನ್ನು ಆಫ್ ಮಾಡಿ
* ನಿಮ್ಮ ಪಿಸಿಯಲ್ಲಿ ಐಟ್ಯೂನ್ ಅಪ್ಲಿಕೇಶನ್ ತೆರೆಯಿರಿ
* ನೀವು ಫೋನ್ ಅನ್ನು ಸಂಪರ್ಕಿಸಿದ ನಂತರ ಐಟ್ಯೂನ್ ಅಪ್ಲಿಕೇಶನ್‌ನಲ್ಲಿ ಐಫೋನ್‌ ಐಕಾನ್ ಮೇಲೆ ಕ್ಲಿಕ್ ಮಾಡಿ
* ನೀವು ಇತ್ತೀಚೆಗೆ ಡಿಲೀಟ್ ಮಾಡಲಾದ ಕಾಂಟ್ಯಾಕ್ಟ್‌ ಹೊಂದಿರುವ ಬ್ಯಾಕ್‌ಅಪ್ ಅನ್ನು ಆಯ್ಕೆಮಾಡಿ
* ರೀಸ್ಟೋರ್ ಕ್ಲಿಕ್ ಮಾಡಿ
* ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ರೀಸ್ಟೋರ್ ಮಾಡಲು, ಫೋನ್ ರೀಬೂಟ್ ಆಗುತ್ತದೆ

ಐಕ್ಲೌಡ್ ಮೂಲಕ ಡಿಲೀಟ್ ಮಾಡಲಾದ ಕಾಂಟ್ಯಾಕ್ಟ್‌ಗಳನ್ನು ಮರಳಿಪಡೆಯಲು ಹೀಗೆ ಮಾಡಿ
* ನಿಮ್ಮ ಆಪಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ iCloud.com ಗೆ ಸೈನ್ ಇನ್ ಮಾಡಿ
* iCloud.com ವಿಂಡೋದ ಮೇಲ್ಭಾಗದಲ್ಲಿ ನಿಮ್ಮ ಹೆಸರನ್ನು ಕ್ಲಿಕ್ ಮಾಡಿ
* ಖಾತೆ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಿ.
* ಪುಟದ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ
* ಸುಧಾರಿತ ಅಡಿಯಲ್ಲಿ, 'ಕಾಂಟ್ಯಾಕ್ಸ್ಟ್‌ ರೀಸ್ಟೋರ್' ಕ್ಲಿಕ್ ಮಾಡಿ
* ನೀವು ವಿಷಯವನ್ನು ಅಳಿಸುವ ಮೊದಲು ದಿನಾಂಕದ ಮುಂದೆ ರೀಸ್ಟೋರ್ ಕ್ಲಿಕ್ ಮಾಡಿ.
* ಖಚಿತಪಡಿಸಲು ಪುನಃಸ್ಥಾಪನೆ ಕ್ಲಿಕ್ ಮಾಡಿ

Best Mobiles in India

English summary
How to Recover Deleted Contact Numbers on Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X