ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

Written By:

ನಿಮಗೆ ಗೊತ್ತಿಲ್ಲದೆಯೇ ಪಠ್ಯ ಸಂದೇಶಗಳನ್ನು ನಿಮ್ಮ ಫೋನ್‌ನಲ್ಲಿ ನೀವು ಅಳಿಸಿದ್ದೀರಿ ಎಂದಾದಲ್ಲಿ, ಇದೇ ಸಂದೇಶಗಳನ್ನು ನಿಮಗೆ ಮರುಪಡೆಯಬಹುದಾಗಿದೆ. ನಿಮ್ಮ ಸಂದೇಶಗಳನ್ನು ಮರುಪಡೆದುಕೊಳ್ಳಲು ನೀವು ಯಾವಾಗಲೂ ಕ್ಷಿಪ್ರರಾಗಿರಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ಮೊದಲಿಗೆ ನೀವು ಆಂಡ್ರಾಯ್ಡ್ ಡೇಟಾ ರಿಕವರಿ ಎಂಬ ಪ್ರೊಗ್ರಾಮ್ ಅನ್ನು ಡೌನ್‌ಲೋಡ್ ಮಾಡಬೇಕು. ನಿಮ್ಮ ಕಂಪ್ಯೂಟರ್‌ನಲ್ಲಿ ಈ ಪ್ರೊಗ್ರಾಮ್ ಅನ್ನು ಲಾಂಚ್ ಮಾಡಿಕೊಳ್ಳಿ.

ಹಂತ: 2

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ನಲ್ಲಿ ಯುಎಸ್‌ಬಿ ಡೀಬಗ್ಗಿಂಗ್ ಸಕ್ರಿಯಗೊಳಿಸಿ. ಇದನ್ನು ಮಾಡಲು, ನಿಮ್ಮ ಮುಖ್ಯ ಸೆಟ್ಟಿಂಗ್ಸ್ ಮೆನುವಿನಲ್ಲಿ ಡೆವಲಪರ್ ಆಯ್ಕೆಗಳನ್ನು ನೀವು ಪ್ರವೇಶಿಸಬೇಕು. ಹೀಗೆ ಮಾಡದೇ ಇದ್ದಲ್ಲಿ, ಅಬೌಟ್ ಫೋನ್‌ಗೆ ಹೋಗಿ, ಬಿಲ್ಡ್ ನಂಬರ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಟ್ಯಾಪ್ ಮಾಡಲು ಆರಂಭಿಸಿ.

ಹಂತ: 3

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ಯುಎಸ್‌ಬಿ ಕೇಬಲ್ ಬಳಸಿ ನಿಮ್ಮ ಕಂಪ್ಯೂಟರ್‌ಗೆ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಸಂಪರ್ಕಪಡಿಸಿ.

ಹಂತ: 4

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ನ ಮೆಮೊರಿಯನ್ನು ಸ್ಕ್ಯಾನ್ ಅಥವಾ ವಿಶ್ಲೇಷಿಸಲು ರಿಕವರಿ ಪ್ರೊಗ್ರಮ್‌ನಲ್ಲಿರುವ ಹಂತಗಳನ್ನು ಅನುಸರಿಸಿ

ಹಂತ: 5

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಬ್ರೌಸ್ ಮಾಡಲು ನಿಮಗೆ ಅನುಮತಿ ದೊರಕುತ್ತದೆ ಮತ್ತು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸಂಗ್ರಹವಾಗಿರುವ ಡೇಟಾ ಪೂರ್ವವೀಕ್ಷಿಸಿ

ಹಂತ: 6

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ನಿಮ್ಮ ಪಠ್ಯ ಸಂದೇಶ ಫೋಲ್ಡರ್ ಲೊಕೇಟ್ ಮಾಡಿ. ನೀವು ಇಷ್ಟಪಡುವ ಸಂದೇಶಗಳನ್ನು ಆಯ್ಕೆಮಾಡಿ ಮತ್ತು ನಿಮ್ಮ ಡಿವೈಸ್‌ನಲ್ಲಿ ಪ್ರೊಗ್ರಾಮ್‌ನಲ್ಲಿರುವ ರಿಕವರಿ ಆಕ್ಷನ್ ಬಳಸಿ ನಂತರ ಕಂಪ್ಯೂಟರ್‌ನಲ್ಲಿ ಉಳಿಸಿ.

ಹಂತ: 7

ಆಂಡ್ರಾಯ್ಡ್‌ನಲ್ಲಿ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

ಇನ್ನು ಸಂದೇಶಗಳು ಕಳೆದು ಹೋಗದಂತೆ ಫೋನ್‌ನಲ್ಲಿ ಉಳಿಯಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಎಸ್‌ಎಮ್‌ಎಸ್ ಬ್ಯಾಕಪ್ ಏಂಡ್ ರೀಸ್ಟೋರ್ ಅಪ್ಲಿಕೇಶನ್ ಬಳಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to recover deleted text messages from an Android smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot