ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

By Suneel
|

ಸ್ಮಾರ್ಟ್‌ಫೋನ್‌ಗಳನ್ನು ಹಲವರು ಪ್ರತಿವರ್ಷಕ್ಕೂ ಸಹ ಬದಲಿಸುತ್ತಾರೆ. ಅಥವಾ ಇತರರಿಗೆ ಮಾರಾಟಮಾಡುತ್ತಾರೆ. 1 ವರ್ಷ ಬಳಸಿದ ಸ್ಮಾರ್ಟ್‌ಫೋನ್‌ ನಿರೀಕ್ಷಿತ ಬೆಲೆಗೆ ಮಾರಾಟವಾಗಲಿಲ್ಲ ಅಂದ್ರೆ ಸುಮ್ನೆ ಹಾಗೆ ಮನೆಯಲ್ಲಿ ಬಿಸಾಕುವುದು ಉಂಟು.

ಕೆಲವರಿಗೆ ತಾವು ಬಳಸಿದ ಸ್ಮಾರ್ಟ್‌ಫೋನ್‌ಗಳ ಮೇಲೆ ತುಂಬಾ ಪ್ರೀತಿ. ಇತರರಿಗೆ ಮಾರಾಟ ಮಾಡಲು ಇಷ್ಟ ಇರುವುದಿಲ್ಲ. ಆದ್ರೆ ಹೊಸ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಮಾಡಲೇಬೇಕು ಎಂದುಕೊಂಡಿರುತ್ತಾರೆ. ಹಾಗಾದ್ರೆ ಹಳೆ ಸ್ಮಾರ್ಟ್‌ಫೋನ್‌ ಅನ್ನು ಸುಮ್ನೆ ಹಾಗೆ ಮನೆಯಲ್ಲೇ ಇಡುವುದರ ಬದಲು ಉತ್ತಮ ಕೆಲಸಕ್ಕಾಗಿ ಬಳಸುವುದು ಹೇಗೆ? ಎಂಬುದನ್ನ ಗಿಜ್‌ ಬಾಟ್‌ನಲ್ಲಿ ನಾವು ತಿಳಿಸುತ್ತೇವೆ.

ಮನೆ, ಆಫೀಸ್‌ಗಳಿಗೆ ಹೊಸ ಸಿಸಿಟಿವಿ ಕ್ಯಾಮೆರಾ(CCTV Camera) ಅಳವಡಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಅದರ ಬದಲು ಹಳೆ ಸ್ಮಾರ್ಟ್‌ಫೋನ್‌ ಅನ್ನೇ ಸಿಸಿಟಿವಿ ಕ್ಯಾಮೆರಾ ಆಗಿ ಬಳಸಬಹುದು. ಕೇವಲ ಒಂದು ಒಳ್ಳೆ ಸಾಫ್ಟ್‌ವೇರ್‌ ಮತ್ತು ಹಳೆಯ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಇದ್ರೆ ಸಾಕು. ಮನೆಯ ಅಥವಾ ಆಫೀಸ್‌ನ ನಿರ್ದಿಷ್ಟ ಪ್ರದೇಶದಲ್ಲಿ ಹಳೆಯ ಸ್ಮಾರ್ಟ್‌ಫೋನ್‌/ ಟ್ಯಾಬ್ಲೆಟ್‌ ಅನ್ನು ಸೆಕ್ಯೂರಿಟಿ ಸಿಸಿಟಿವಿ ಕ್ಯಾಮೆರಾ ಆಗಿ ಇಡಬೇಕು ಮತ್ತು ಅದಕ್ಕೆ ಚಾರ್ಜರ್ ಯಾವಾಗಲು ಕನೆಕ್ಟ್‌ ಆಗಿಯೇ ಇರಬೇಕು. ಇದರಲ್ಲಿ ರೆಕಾರ್ಡ್‌ ಆಗುವ ವೀಡಿಯೊ ಕ್ಲಿಪ್‌ಗಳನ್ನು ನೋಡಲು ನೀವು ಬಳಸುವ ಫೋನ್‌ ಅನ್ನು ಬಳಕೆ ಮಾಡಿಕೊಳ್ಳಬಹುದು ಅಥವಾ ವಿಂಡೋಸ್‌ ಪಿಸಿಯನ್ನು ಉಪಯೋಗಿಸಬಹುದು.

ಹಳೆ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಲೈಫ್‌ ಕೊಡಿ. ನಿಮ್ಮತ್ರ ಹಳೆ ಸ್ಮಾರ್ಟ್‌ಫೋನ್‌ ಏನಾದ್ರು ಇದ್ರೆ ಅದನ್ನ ಮನೆಯ ಸಿಸಿಟಿವಿ ಕ್ಯಾಮೆರಾ ಆಗಿ ಬಳಸಬಹುದಾಗಿದೆ. ಕೇವಲ 5 ನಿಮಿಷಗಳಲ್ಲಿ ಯಾವುದೇ ಖರ್ಚಿಲ್ಲದೇ ಹಳೆ ಸ್ಮಾರ್ಟ್‌ಫೋನ್‌ ಅನ್ನು ಮನೆಯ ಸೆಕ್ಯುರಿಟಿ ಸಿಸಿಟಿವಿ ಕ್ಯಾಮರಾ ಆಗಿ ಬಳಸಿ. ಅದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ನೋಡಿ.

ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?

1

1

ಮನೆ, ಆಫೀಸ್‌ಗಳಲ್ಲಿ ಹಳೆಯ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಅನ್ನು ಸೆಕ್ಯೂರಿಟಿ ಸಿಸಿಟಿವಿ ಕ್ಯಾಮೆರಾ ಆಗಿ ಬಳಸಲು ಇವುಗಳ ಜೊತೆಗೆ ಹಳೆ ಸ್ಮಾರ್ಟ್‌ಫೋನ್‌ಗೆ ಚಾರ್ಜರ್ ಮತ್ತು ಅದರಲ್ಲಿ ವೈಫೈ ಸಂಪರ್ಕ ಬೇಕು. ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವ ಫೋನ್‌ಗೆ ಚಾರ್ಜರ್‌ ಯಾವಾಗಲು ಕನೆಕ್ಟ್‌ ಆಗಿರಲಿ.

2

2

ಸಿಸಿಟಿವಿ ಆಗಿ ಬಳಸುವ ಹಳೆಯ ಸ್ಮಾರ್ಟ್‌ಫೋನ್‌ಗೆ "AtHome Video Streamer -Monitor" ಅಪ್ಲಿಕೇಶನ್‌ ಅನ್ನು ಇನ್‌ಸ್ಟಾಲ್‌ ಮಾಡಿ. ಈ ಸ್ಮಾರ್ಟ್‌ಫೋನ್‌ ಸೆಕ್ಯೂರಿಟಿ ಸಿಸಿಟಿವಿ ಕ್ಯಾಮೆರಾ ಆಗಿ ವೀಡಿಯೊ ರೆಕಾರ್ಡ್‌ ಮಾಡುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

3

3

ಸಿಸಿಟಿವಿ ಕ್ಯಾಮೆರಾ ಫೋನ್‌ ರೆಕಾರ್ಡ್‌ ಮಾಡುವ ವೀಡಿಯೊ ನೋಡಲು ಅಥವಾ ರಿಸೀವ್‌ ಮಾಡಲು ಬಳಸುವ ಸ್ಮಾರ್ಟ್‌ಫೋನ್‌ಗೂ ಸಹ "AtHome Video Streamer -Monitor" ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಕೊಳ್ಳಿ. ಅಂದಹಾಗೆ ಈ ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಿಗೆ ಎರಡಕ್ಕೂ ಬಳಸಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

4

4

ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವ ಫೋನ್‌, ವೀಡಿಯೋ ನೋಡಲು ಬಳಸುವ 2 ಸ್ಮಾರ್ಟ್‌ಫೋನ್‌ಗಳಲ್ಲಿ "AtHome Video Streamer -Monitor" ಅಪ್ಲಿಕೇಶನ್‌ ಲಾಂಚ್‌ ಮಾಡಿ. 2 ಫೋನ್‌ಗಳು ವೈಫೈ ಕನೆಕ್ಷನ್‌ನಿಂದ ಆನ್‌ಲೈನ್‌ನಲ್ಲಿರಬೇಕು. AtHome Video Streamer ಆಪ್‌ Username ಮತ್ತು password ನೊಂದಿಗೆ ಕನೆಕ್ಷನ್‌ ಐಡಿ (ಸಿಐಡಿ) ಜೆನೆರೇಟ್‌ ಮಾಡಿಕೊಡುತ್ತದೆ. ಈ ಐಡಿಯನ್ನು ನೀವು ಸಿಸಿಟಿವಿ ಕ್ಯಾಮೆರಾಗಿ ಬಳಸುವ ಫೋನ್‌ನಲ್ಲಿ ನೀಡಿ.

5

5

ಅಥವಾ QR ಕೋಡ್‌ ಸ್ಕ್ಯಾನ್‌ ಮಾಡಿದ ನಂತರ ಸಂಪೂರ್ಣ ಮಾಹಿತಿಯನ್ನು ಖಾತೆಯಲ್ಲಿ ನೀಡಬಹುದು. ವೀಡಿಯೋ ರೆಕಾರ್ಡ್‌ ಮಾಡುವ ಸ್ಮಾರ್ಟ್‌ಫೋನ್‌ನಲ್ಲಿ, ವೀಡಿಯೊ ರಿಸೀವ್‌ ಮಾಡುವ ಸ್ಮಾರ್ಟ್‌ಫೋನ್‌ ಅನ್ನು QR ಕೋಡ್‌ ಸ್ಕ್ಯಾನ್‌ ಮಾಡಿದರೆ ಅಂದಿನಿಂದ ನೀವು ಸಿಸಿಟಿವಿ ಕ್ಯಾಮೆರಾ ಬಳಕೆ ಪ್ರಾರಂಭ ಮಾಡಿ ವೀಡಿಯೊ ಕ್ಲಿಪ್‌ಗಳನ್ನು ಸಹ ನೋಡಬಹುದು. 9 ನೇ ಸ್ಲೈಡರ್‌ನಲ್ಲಿನ ವೀಡಿಯೋ ನೋಡಿ

6

6

ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವ ಸ್ಮಾರ್ಟ್‌ಫೋನ್‌ ರೆಕಾರ್ಡ್‌ ಮಾಡುವ ವೀಡಿಯೊಗಳನ್ನು ಕಂಪ್ಯೂಟರ್‌ನಲ್ಲಿ ನೋಡಲು "AtHome Camera desktop client" ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಬೇಕು. ನಿಮ್ಮ ಡೆಸ್‌ಟಾಪ್‌ ಕಂಪ್ಯೂಟರ್‌ ವೆಬ್‌ಕ್ಯಾಮ್ ಹೊಂದಿದ್ದರೆ ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದಂತೆ QR ಕೋಡ್‌ ಸ್ಕ್ಯಾನ್‌ ಮಾಡಬಹುದು. ಇಲ್ಲವಾದಲ್ಲಿ Username ಕ್ರಿಯೇಟ್‌ ಮಾಡಿ ನಂತರ ಲಾಗಿನ್‌ ಆಗಬೇಕಾಗುತ್ತದೆ. 10ನೇ ಸ್ಲೈಡರ್‌ನಲ್ಲಿ ವೀಡಿಯೋ ನೋಡಿ.

7

7

ಡೆಸ್‌ಟಾಪ್‌ ಕ್ಲೈಂಟ್‌ನಲ್ಲಿ 4 ಸಿಸಿಟಿವಿ ಕ್ಯಾಮೆರಾ ಆಗಿ ಅಳವಡಿಸಿರುವ ಫೋನ್‌ ರೆಕಾರ್ಡ್‌ ಮಾಡುವ ವೀಡಿಯೊಗಳನ್ನು ನೋಡುವಂತೆ ಆಡ್‌ ಮಾಡಬಹುದು.

8

8

ಸಿಸಿಟಿವಿ ಕ್ಯಾಮೆರಾ ವೀಡಿಯೊ ಫೀಡ್‌ಗಾಗಿ ಬಳಸುವ ಅಪ್ಲಿಕೇಶನ್‌ ಕೆಳಗಿನ ಫೀಚರ್‌ಗಳನ್ನು ಹೊಂದಿದೆ.
* ರೆಕಾರ್ಡ್‌ ಸೆಡ್ಯೂಲ್‌ ಮಾಡಬಹುದು
* ಎರಡು ಕಡೆಯಿಂದ ಮಾತಾಡಬಹುದು
* LED ಫ್ಲ್ಯಾಶ್‌ ಅನ್ನು ರಿಮೋಟ್ಲಿ ಎನೇಬಲ್ ಮಾಡಬಹುದು
* ಸ್ನಾಪ್‌ಚಾಟ್‌ ತೆಗೆಯಬಹುದು
* ರೆಕಾರ್ಡಿಂಗ್‌ SD ಕಾರ್ಡ್‌ನಲ್ಲಿ mp4 ಫಾರ್ಮ್ಯಾಟ್‌ನಲ್ಲಿ ಸೇವ್‌ ಆಗುತ್ತದೆ.
* 1 ನಿಮಿಷದ ರೆಕಾರ್ಡಿಂಗ್ 3MB, 1 ದಿನದ ರೆಕಾರ್ಡಿಂಗ್‌ ಕೇವಲ 4.5GB ಸ್ಟೋರೇಜ್‌ ಆಗುತ್ತದೆ.
* ರಿಮೋಟ್ಲಿ ಫ್ರಂಟ್‌ ಕ್ಯಾಮೆರಾ ಮತ್ತು ಹಿಂಭಾಗ ಕ್ಯಾಮೆರಾ ಆನ್‌ ಮಾಡಬಹುದು.

rn

9

ಅಪ್ಲಿಕೇಶನ್‌ 10 ನಿಮಿಷಕ್ಕೆ ಕೇವಲ 64MB ಡೇಟಾ ಬಳಸುತ್ತದೆ. ಆದರೆ ಈ ಆಫ್‌ ವೈಫೈ ಸಂಪರ್ಕದ ಡೇಟಾವನ್ನೇ ಬಳಸಬೇಕು. ಆಪ್‌ ಯಾವಾಗಲು ಅಪ್‌ಗ್ರೇಡ್‌ ಆಗದೆ ವರ್ಕ್‌ ಮಾಡುತ್ತದೆ.
ವೀಡಿಯೋ ಕೃಪೆ: JRESHOW

rn

10

ವೀಡಿಯೋ ಸ್ಟ್ರೀಮ್‌ ಬ್ಯಾಕಪ್‌ ಬೇಕಾದಲ್ಲಿ ಕಂಪನಿ ಸರ್ವರ್‌ನಿಂದ ತೆಗೆದುಕೊಳ್ಳುವ ಆಯ್ಕೆ ಇರುತ್ತದೆ. ಪಡೆಯಲು ಹಣ ಕಟ್ಟಬೇಕಾಗುತ್ತದೆ. ಅಪ್ಲಿಕೇಶನ್‌ ಉಚಿತವಾಗಿದೆ.
ವೀಡಿಯೋ ಕೃಪೆ: GEGEDUBLEWPEE

ಗಿಜ್‌ಬಾಟ್‌

ಗಿಜ್‌ಬಾಟ್‌

ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?

<strong></strong>ಕಳೆದುಕೊಂಡ ಮೊಬೈಲ್‌ ಪತ್ತೆಗಾಗಿ ‘I lost my phone' ಗೂಗಲ್‌ ಟೂಲ್ ಕಳೆದುಕೊಂಡ ಮೊಬೈಲ್‌ ಪತ್ತೆಗಾಗಿ ‘I lost my phone' ಗೂಗಲ್‌ ಟೂಲ್

Best Mobiles in India

English summary
How to Turn Your Old Smartphone Into a CCTV Camera. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X