ಆಪ್ಟಿಕಲ್‌ ಮೌಸ್‌ನ ಕ್ಲಿಕ್‌ ಬಟನ್‌ ಸರಿಪಡಿಸುವುದು ಹೇಗೆ?

Posted By: Staff
ಆಪ್ಟಿಕಲ್‌ ಮೌಸ್‌ನ ಕ್ಲಿಕ್‌ ಬಟನ್‌ ಸರಿಪಡಿಸುವುದು ಹೇಗೆ?

ಮೌಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಬೇಕೆಂದರೆ ತುಂಬಾ ಕಷ್ಟವಾಗುತ್ತದೆ ಅಲ್ಲವೆ? ಅಂದಹಾಗೆ ಲ್ಯಾಪ್‌ಟಾಪ್‌ನಲ್ಲಿ ಟಚ್‌ಪ್ಯಾಡ್‌ ನೀಡಿರುವುದರಿಂದ ಮೌಸ್‌ ಇಲ್ಲದೇ ಕೂಡಾ ಕಾರ್ಯನಿವಹಿಸ ಬಹುದಾಗಿದೆ ಆದರೆ ಡೆಸ್ಕ್‌ಟಾಪ್‌ನಲ್ಲಿ ಈ ರೀತಿ ಮಾಡಲು ಸಾಧ್ಯವಾಗುವುದಿಲ್ಲ. ಮೊದಲೆಲ್ಲಾ ಮೌಸ್‌ಗಳಲ್ಲಿ ಟ್ರಾಕ್‌ ಬಾಲ್‌ ಬರುತ್ತಿತ್ತು ಆದರೆ ಇಂದು ಮಾರುಕಟ್ಟೆಯಲ್ಲಿ ಆಪ್ಟಿಕಲ್‌ ಮೌಸ್‌ಗಳು ಕಾಲಿರಿಸಿದ್ದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ.

ಅಕಸ್ಮಾತ್‌ ಆಪ್ಟಿಕಲ್‌ ಮೌಸ್‌ ಕೆಟ್ಟುಹೋದಲ್ಲಿ ಬಹುತೇಕ ಮಂದಿ ಅದನ್ನು ಬಿಸಾಡಿ ಹೊಸ ಮೌಸ್‌ ಕೊಂಡಿಕೊಳ್ಳುತ್ತಾರೆ ಆದರೆ ಕೆಟ್ಟುಹೋದ ಮೌಸನ್ನು ಸುಲಭವಾಗಿ ಸರಿಪಡಿಸ ಬಹುದೆಂಬುದು ಯಾರಿಗೂ ಅಷ್ಟಾಗಿ ತಿಳಿದಿಲ್ಲ.

ಅಂದಹಾಗೆ ಕೆಟ್ಟುಹೋದ ಆಪ್ಟಿಕಲ್‌ ಮೌಸ್‌ ಸರಿಪಡಿಸಲು ಈ ರೀತಿ ಮಾಡಿ.

ಸ್ಟೆಪ್‌- 1 ಮೌಸ್‌ನ ಹಿಂಬದಿಯಲ್ಲಿರುವ ಎಲ್ಲಾ ಸ್ಕ್ರೂಗಳನ್ನು ಸ್ಕ್ರೂ ಡ್ರೈವರ್‌ ಬಳಸಿ ತೆಗೆಯಿರಿ.

ಸ್ಟೆಪ್‌- 2 ನಂತರ ಮೌಸ್‌ನ ಮೇಲ್ಬಾಗದಲ್ಲಿ ನೀಡಲಾಗಿರುವ ಪ್ಯಾನಲ್‌ ಅನ್ನು ಸ್ವಲ್ಪ ಬಲವಾಗಿ ಎಚ್ಚರ ವಹಿಸಿ ತೆಗೆಯಿರಿ.

ಸ್ಟೆಪ್‌-3 ಈಗ ಎಚ್ಚರದಿಂದ ಮೌಸ್‌ನ ಮೇಲ್ಬಾಗದಲ್ಲಿರುವ ಬಟನ್‌ ಬೆಚ್ಚಿಕೊಳ್ಳಿ.

ಸ್ಟೆಪ್‌-4 ಬಟನ್‌ ತೆಗೆದ ಮೇಲೆ ಅದರಲ್ಲಿರು ಸ್ಪ್ರಿಂಗ್‌ ಹಾಗೂ ಸ್ಪ್ರಿಂಗ್ ಬಾರ್ಬ್‌ ಅನ್ನು ನಿಧಾನವಾಗಿ ಬಿಚ್ಚಿಕೊಳ್ಳಿ.

ಸ್ಟೆಪ್‌-5 ನಂತರ ಮೌಸ್‌ನಲ್ಲಿ ನೀಡಾಲಾಗಿರುವ ಪ್ಯನಲ್‌ನಲ್ಲಿರುವ ಗಾಜಿನಲ್ಲಿ ಏನಾದರೂ ತೊಂದರೆ ಇದೆಯೆ ಎಂದು ಸೂಕ್ಷ್ಮವಾಗಿ ಪರೀಕ್ಷಿಸಿ.

ಸ್ಟೆಪ್‌-6 ಒಂದು ವೇಳೆ ಗಾಜಿಲ್ಲಿ ಏನಾದರು ಸಮಸ್ಯೆ ಇದ್ದಲ್ಲಿ ಅದನ್ನು ಪಿನ್‌ ಮೂಲಕ ಅಡ್ಜಸ್ಟ್‌ ಮಾಡಿ.

ಸ್ಟೆಪ್‌-7 ಮೌಸ್‌ನ ಕೆಳಗೆ ನೀಡಲಾಗಿರುವ ಸೆನ್ಸರ್‌ ಅನ್ನು ಬ್ರಷ್‌ ಮೂಲಕ ಸ್ವಚ್ಚಗೊಳಿಸಿ.

ಸ್ಟೆಪ್‌-8 ಈಗ ನಿಮ್ಮ ಮೌಸ್‌ನ ಮೇಲ್ಭಾಗದಲ್ಲಿನ ಗಾಜನ್ನು ಎಚ್ಚರದಿಂದ ಮತ್ತೆ ಮರುಹೊಂದಿಸಿ ಸ್ಕ್ರೂ ಡ್ರೈವರ್‌ ಮೂಲಕ ಬಿಗಿ ಗೊಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot