ಫೋನಿನಲ್ಲಿ ಆಕಸ್ಮಿಕವಾಗಿ ಡಿಲೀಟ್ ಆದ ಫೋಟೊ ಮರಳಿ ಪಡೆಯುವುದು ಹೇಗೆ ಗೊತ್ತಾ?

|

ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಂಡ ಅಥವಾ ಫೋನಿನಲ್ಲಿ ಸೆರೆಹಿಡಿದ ಫೋಟೊ ಮತ್ತು ವಿಡಿಯೊಗಳು ಅಚಾನಕ್ ಆಗಿ ಡಿಲೀಟ್ ಆದರೇ ಅದೆಷ್ಟು ಬೇಸರ ಅಲ್ಲವೇ. ಆದರೆ ಹೀಗೆ ಆಕಸ್ಮಿಕವಾಗಿ ಸ್ಮಾರ್ಟ್‌ಫೋನಿನಲ್ಲಿನ ಫೋಟೊ ಮತ್ತು ವಿಡಿಯೊ ಡಿಲೀಟ್ ಆದರೇ, ಆ ಫೈಲ್‌ಗಳನ್ನು ಮರಳಿ ಪಡೆಯಲು ಸಾಧ್ಯ ಎನ್ನುವದು ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಿಳಿಯದ ಸಂಗತಿ ಆಗಿದೆ.

ಡಿಲೀಟ್ ಆದ ಫೈಲ್‌

ಹೌದು, ಡಿಲೀಟ್ ಆದ ಫೈಲ್‌ಗಳನ್ನು ಮರಳಿ ಫೋನ್‌ ಗ್ಯಾಲರಿಗೆ ರಿಸ್ಟೋರ್ ಮಾಡಿಕೊಳ್ಳಲು ಪ್ರಸ್ತುತ ಸಾಕಷ್ಟು ಅಪ್ಲಿಕೇಶನ್‌ಗಳು ಲಭ್ಯವಿವೆ. ಈ ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಡಿಲೀಟ್ ಆದ ಫೈಲ್‌ಗಳನ್ನು ಸುಲಭವಾಗಿ ಹಂತಗಳಲ್ಲಿ ರೀಸ್ಟೋರ್ ಮಾಡಿಕೊಳ್ಳಲು ಸಾಧ್ಯವಿದೆ. ಆಂಡ್ರಾಯ್ಡ್‌ ಫೋನುಗಳಲ್ಲಿ ಡಿಲೀಟ್ ಆದ ಫೋಟೊ ಮತ್ತು ವಿಡಿಯೊಗಳನ್ನು ರೀಸ್ಟೋರ್ ಮಾಡಿಕೊಳ್ಳಲು ಲಭ್ಯ ಇರುವ 5 ಬೆಸ್ಟ್‌ ಅಪ್ಲಿಕೇಶನ್‌ಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಡಿಸ್ಕ್‌ ಡಿಗ್ಗರ್-(DiskDigger photo recovery)

ಡಿಸ್ಕ್‌ ಡಿಗ್ಗರ್-(DiskDigger photo recovery)

ಡಿಸ್ಕ್‌ ಡಿಗ್ಗರ್ ಫೋಟೊ ರಿಕವರಿ ಆಪ್‌ ಅನ್ನು Defiant Technologies ಅಭಿವೃದ್ಧಿಪಡಿಸಿದ್ದು, ಅತ್ಯುತ್ತಮ ರಿಸ್ಟೋರ್ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ ಬಳಕೆದಾರರು ಅನ್‌ಡಿಲೀಟ್ ಮತ್ತು ಡಿಲೀಟ್ ಆದ ಫೈಲ್‌ಗಳನ್ನು ರಿಕವರಿ ಮಾಡಿಕೊಳ್ಳಬಹುದಾಗಿದೆ. ಮೆಮೊರಿ ಕಾರ್ಡ್‌ ಮತ್ತು ಫೋನ್ ಮೆಮೊರಿ ಎರಡು ಸ್ಟೋರೇಜ್‌ಗಳ ಫೈಲ್‌ಗಳನ್ನು ರಿಕವರಿ ಮಾಡುತ್ತದೆ. ರಿಕವರಿ ಮಾಡಲಾದ ಫೈಲ್‌ಗಳನ್ನು ನೇರವಾಗಿ ಗೂಗಲ್‌ ಡ್ರೈವ್, ಡ್ರಾಪ್‌ಬಾಕ್ಸ್‌ ಹಾಗೂ ಇ-ಮೇಲ್‌ ಮೂಲಕ ಸೆಂಡ್ ಸಹ ಮಾಡಬಹುದಾಗಿದೆ.

ಡಂಪಸ್ಟರ್-(Dumpster)

ಡಂಪಸ್ಟರ್-(Dumpster)

ಡಂಪಸ್ಟರ್‌ ರಿಕವರಿ ಆಪ್‌ ಮೂಲಕ ಸರಳವಾಗಿ ಡಿಲೀಟ್ ಆದ ಫೋಟೊಗಳನ್ನು, ವಿಡಿಯೊಗಳನ್ನು ರಿಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಈ ಆಪ್‌ ಅನ್ನು ಸುಮಾರು 20 ಮಿಲಿಯನ್ ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆಕಸ್ಮಿಕವಾಗಿ ಡಿಲೀಟ್ ಆದ ಫೈಲ್‌ಗಳನ್ನು ಬೇಗನೆ ರಿಸ್ಟೋರ್ ಮಾಡಬಹುದಾಗ ಆಯ್ಕೆಗಳಿವೆ. ಇನ್ನು ಈ ಆಪ್ ಕ್ಲೌಡ್‌ ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ.

ಡಿಲೀಟೆಡ್ ಫೋಟೊ ರಿಕವರಿ

ಡಿಲೀಟೆಡ್ ಫೋಟೊ ರಿಕವರಿ

ಈ ಆಪ್‌ ಸಹ ಆಂಡ್ರಾಯ್ಡ್‌ ಫೋನ್‌ಗಳಿಗೆ ಉತ್ತಮ ಫೈಲ್‌ ರಿಕವರಿ ಅಪ್ಲಿಕೇಶನ್ ಆಗಿದೆ. ಫೋನ್ ಬಾಹ್ಯ ಮೆಮೊರಿಯಿಂದ ಅಚಾನಕ್ ಆಗಿ ಡಿಲೀಟ್ ಆದ ಫೈಲ್‌ಗಳನ್ನು ಮರಳಿ ಫೋನ್ ಗ್ಯಾಲರಿಗೆ ಸಂಗ್ರಹ ಮಾಡಿಕೊಳ್ಳಬಹುದಾಗಿದೆ. ಫೋಟೊ ಮತ್ತು ವಿಡಿಯೊ ಎರಡು ಫೈಲ್‌ಗಳಿಗೂ ಬೆಂಬಲ ನೀಡುತ್ತದೆ.

ಡಿಲೀಟೆಡ್ ವಿಡಿಯೊ ರಿಕವರಿ

ಡಿಲೀಟೆಡ್ ವಿಡಿಯೊ ರಿಕವರಿ

ಡಿಲೀಟೆಡ್ ವಿಡಿಯೊ ರಿಕವರಿ ಅತ್ಯುತ್ತಮ ವಿಡಿಯೊ ರಿಕವರಿ ಅಪ್ಲಿಕೇಶನ್ ಆಗಿದೆ. ಜಸ್ಟ್ ಎರಡೇ ಹಂತಗಳಲ್ಲಿ ಡಿಲೀಟ್ ಮಾಡಿದ ಸಿನಿಮಾ/ವಿಡಿಯೊ ರಿಕವರಿ ಮಾಡಿಕೊಳ್ಳಬಹುದಾಗಿದೆ. ಬಾಹ್ಯ ಮೆಮೊರಿ ಮತ್ತು ಫೋನ್ ಆಂತರಿಕ ಮೆಮೊರಿ ಎರಡೂ ಸ್ಟೋರೇಜ್‌ಗಳಲ್ಲಿ ಡಿಲೀಟ್ ಆದ ಫೈಲ್‌ಗಳ ರಿಕವರಿ ಒದಗಿಸುತ್ತದೆ.

ರಿಕವರಿ ಡಿಲೀಟೆಡ್ ಆಲ್ ಫೋಟೊಸ್, ಫೈಲ್ಸ್‌ ಮತ್ತು ಕಾಂಟ್ಯಾಕ್ಸ್ಟ್

ರಿಕವರಿ ಡಿಲೀಟೆಡ್ ಆಲ್ ಫೋಟೊಸ್, ಫೈಲ್ಸ್‌ ಮತ್ತು ಕಾಂಟ್ಯಾಕ್ಸ್ಟ್

ಇದೊಂದು ಮಲ್ಟಿ ರಿಕವರಿ ಆಪ್ ಆಗಿದ್ದು, ಆಕಸ್ಮಿಕವಾಗಿ ಡಿಲೀಟ್ ಆದ ಫೋಟೊ, ವಿಡಿಯೊ ಮತ್ತು ಕಾಂಟ್ಯಾಕ್ಸ್ಟ್ಗಳನ್ನು ಮರಳಿ ಫೋನ್‌ಗೆ ಸೇರಿಸುತ್ತದೆ. ಇವಷ್ಟೆ ಅಲ್ಲದೇ ಇತರೆ ಮಾದರಿಯ ಫೈಲ್‌ಗಳನ್ನು ಸಹ ರಿಕವರಿ ಮಾಡಿಕೊಳ್ಳಲು ಸಫೋರ್ಟ್ ಮಾಡುವ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
These app help you to restore your to undelete or recover accidentally deleted media file, apps and many other files in few seconds. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X