ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್‌ ಮಾಡಿದ ಪೋಸ್ಟ್‌ ಮರಳಿ ಪಡೆಯುವುದು ಹೇಗೆ?

|

ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಸೋಶೀಯಲ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾಗಿದೆ. ಟಿಕ್‌ಟಾಕ್‌ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಂನ ಕಿರು ವಿಡಿಯೊಗಳ ರೀಲ್ ಆಯ್ಕೆಯು ಹೆಚ್ಚು ಬಳಕೆಯಲ್ಲಿ ಕಾಣಿಸಿಕೊಂಡಿದೆ. ಫೇಸ್‌ಬುಕ್‌ನಂತೆ ಇನ್‌ಸ್ಟಾಗ್ರಾಂನಲ್ಲಿಯೂ ಫೋಟೊ, ವಿಡಿಯೊ ಪೋಸ್ಟ್ ಮಾಡಲು ಅವಕಾಶ ಇದೆ. ಹಾಗೆಯೇ ಡಿಲೀಟ್‌ ಮಾಡಿದ ಪೋಸ್ಟ್‌ಗಳನ್ನು ಮರಳಿ ಪಡೆಯಲು ಸಾಧ್ಯವಿದೆ.

ಇನ್‌ಸ್ಟಾಗ್ರಾಂನಲ್ಲಿ

ಹೌದು, ಜನಪ್ರಿಯ ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರು ಫೋಟೊ ಪೋಸ್ಟ್‌ ಮಾಡಬಹುದಾಗಿದ್ದು, ಅವುಗಳನ್ನು ಶೇರ್‌ ಸಹ ಮಾಡಬಹುದಾಗಿದೆ. ಇದರೊಂದಿಗೆ ಆಸಕ್ತಿದಾಯಕ ಸಂಗತಿಯೆಂದರೇ ಬಳಕೆದಾರರು ಇನ್‌ಸ್ಟಾಗ್ರಾಂನಲ್ಲಿ ಇತ್ತೀಚಿಗೆ ಡಿಲೀಟ್‌ ಮಾಡಿರುವ ಫೋಸ್ಟ್‌ಗಳನ್ನು ಮತ್ತೆ ಪಡೆಯುವ ಅವಕಾಶ ಸಹ ನೀಡಿದೆ. ಈ ಆಯ್ಕೆಯು ಬಹಳ ಉಪಯುಕ್ತ ಅನಿಸಿದೆ. ಹಾಗಾದರೇ ಇನ್‌ಸ್ಟಾಗ್ರಾಂನಲ್ಲಿ ಇತ್ತೀಚಿಗೆ ಡಿಲೀಟ್ ಮಾಡಿರುವ ಫೋಸ್ಟ್‌ಗಳನ್ನು ಮರಳಿ ಪಡೆಯುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇನ್‌ಸ್ಟಾಗ್ರಾಂನಲ್ಲಿ ಡಿಲೀಟ್ ಮಾಡಿದ ಪೋಸ್ಟ್‌ಗಳನ್ನು ಮರಳಿ ಪಡೆಯಲು ಈ ಕ್ರಮ ಅನುಸರಿಸಿ:

ಇನ್‌ಸ್ಟಾಗ್ರಾಂನಲ್ಲಿ ಡಿಲೀಟ್ ಮಾಡಿದ ಪೋಸ್ಟ್‌ಗಳನ್ನು ಮರಳಿ ಪಡೆಯಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಕೆಳಗಿನ-ಬಲ ಭಾಗದಲ್ಲಿನ "ಪ್ರೊಫೈಲ್" ಐಕಾನ್ ಮೇಲೆ ಟ್ಯಾಪ್ ಮಾಡಿ.

ವೀಡಿಯೊ

ಹಂತ 3: ನಂತರ, ಮೇಲಿನ-ಭಾಗದಲ್ಲಿನ ಮೂರು-ಸಾಲಿನ ಐಕಾನ್ ಅನ್ನು ಟ್ಯಾಪ್ ಮಾಡಿ, ಮತ್ತು ಲಭ್ಯವಿರುವ ಆಯ್ಕೆಗಳಿಂದ, ಸೆಟ್ಟಿಂಗ್‌ಗಳನ್ನು ಆರಿಸಿ.

ಹಂತ 4: ಅಲ್ಲಿ, "Recently Deleted" ಎಂಬ ಆಯ್ಕೆಯನ್ನು ನೀವು ಕಾಣಬಹುದು. ಅದರ ಮೇಲೆ ಟ್ಯಾಪ್ ಮಾಡಿ.

ಸ್ಟೋರಿಗಳನ್ನು

ಹಂತ 5: ಆ ನಂತರ, ಪೋಸ್ಟ್, ವೀಡಿಯೊ ಅಥವಾ ಸ್ಟೋರಿಗಳನ್ನು ಆರಿಸಿ, ತದನಂತರ ರೀಸ್ಟೋರ್‌ ಆಯ್ಕೆ ಕ್ಲಿಕ್ ಮಾಡಿ.

ತಾತ್ಕಾಲಿಕವಾಗಿ ಡಿಲೀಟ್ ಮಾಡುವುದು ಹೇಗೆ

ತಾತ್ಕಾಲಿಕವಾಗಿ ಡಿಲೀಟ್ ಮಾಡುವುದು ಹೇಗೆ

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಎಡಿಟ್ ಪ್ರೊಫೈಲ್ ಆಯ್ಕೆ ಒತ್ತಿರಿ.
* ತಾತ್ಕಾಲಿಕವಾಗಿ ಅಕೌಂಟ್ ಮುಚ್ಚಿರಿ ಆಯ್ಕೆ ಸೆಲೆಕ್ಟ್ ಮಾಡಿ. (Temporarily disable my account)
* ಅಕೌಂಟ್ ಮುಚ್ಚವ ಕಾರಣ ತಿಳಿಸಬೇಕು.
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ

ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಅಕೌಂಟ್ ತೆಗೆದುಹಾಕುವ ಸೂಕ್ತ ಕಾರಣ ತಿಳಿಸಬೇಕು.
* ನಂತರ ಶಾಶ್ವತವಾಗಿ ತೆಗೆದುಹಾಕುವ ಆಯ್ಕೆ ಕಾಣಿಸುತ್ತದೆ- rid of it forever
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ

Best Mobiles in India

English summary
How to restore recently deleted Instagram post.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X