ಆನ್‌ಲೈನ್‌ ಪಾವತಿ ಮಾಡುವಾಗ ವಂಚನೆ ತಪ್ಪಿಸಲು ಈ ನಿಯಮಗಳನ್ನು ಅನುಸರಿಸಿ!

|

ಪ್ರಸ್ತುತ ದಿನಗಳಲ್ಲಿ ಯುಪಿಐ ಆಧಾರಿತ ಆನ್‌ಲೈನ್‌ ನಗದು ಪಾವತಿ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಡಿಜಿಟಲ್‌ ಮನಿ ಟ್ರಾನ್ಸಫರ್‌ ವ್ಯವಸ್ಥೆ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ವಹಿವಾಟು ಮಾಡುವುದಕ್ಕೆ ಸುಲಭ ಅವಕಾಶ ನೀಡಲಿದೆ. ಇದೇ ಕಾರಣಕ್ಕೆ ಯುಪಿಐ ಆಧಾರಿತ ಪಾವತಿ ಮಾಡುವುದಕ್ಕೆ ಅವಕಾಶ ನೀಡುವ ಅನೇಕ ಅಪ್ಲಿಕೇಶನ್‌ಗಳು ಲಭ್ಯವಿದೆ. ಆದರೆ ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸುವಾಗಲೂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಯುಪಿಐ

ಹೌದು, ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸುವಾಗಲೂ ವಂಚನೆ ಮತ್ತು ಫ್ರಾಡ್‌ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಕೆಲವು ವರ್ಷಗಳಲ್ಲಿ UPI ಬಳಕೆದಾರರಿಗೆ ಸಂಬಂಧಿಸಿದ ಹಲವಾರು ವಂಚನೆಗಳು ದಾಖಲಾಗಿವೆ. ಆದ್ದರಿಂದ, ನೀವು ಆನ್‌ಲೈನ್ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಳಸುವಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಿದೆ. ಅಲ್ಲದೆ ಡಿಜಿಟಲ್‌ ವಹಿವಾಟು ಮಾಡುವಾಗ ನೀವು ಯುಪಿಐ ಪಿನ್‌ ಹಾಗೂ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಹಾಗಾದ್ರೆ ಆನ್‌ಲೈನ್‌ ಪಾವತಿ ಮಾಡುವಾಗ ವಂಚನೆಯನ್ನು ತಪ್ಪಿಸಲು ನೀವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ UPI ಮತ್ತು PIN ಅನ್ನು ಯಾರೊಂದಿಗೂ ಶೇರ್‌ ಮಾಡಬೇಡಿ

ನಿಮ್ಮ UPI ಮತ್ತು PIN ಅನ್ನು ಯಾರೊಂದಿಗೂ ಶೇರ್‌ ಮಾಡಬೇಡಿ

ನೀವು ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸುವಾಗ ವಂಚನೆಗಳನ್ನು ತಪ್ಪಿಸಬೇಕಾದರೆ ಮೊದಲು ಮಾಡಬೇಕಾದ ಕೆಲಸು ನಿಮ್ಮ UPI ಮತ್ತು PIN ಅನ್ನು ಯಾರಿಗೂ ಶೇರ್‌ ಮಾಡಬಾರದು. ನಿಮ್ಮ ಯುಪಿಐ ಪಿನ್‌ ಅನ್ನು ಯಾವುದೇ ಬ್ಯಾಂಕ್‌ ಅಥವಾ ಯಾವುದೇ ಸರ್ಕಾರಿ ಸಂಸ್ಥೆ ಕೇಳುವುದಿಲ್ಲ. ಬ್ಯಾಂಕ್‌ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡುವ ವಂಚಕರೂ ನಿಮ್ಮ ಯುಪಿಐ ಪಿನ್‌ ಪಡೆದುಕೊಂಡು ವಂಚಿಸುತ್ತಾರೆ. ಆದರಿಂದ ನೀವು ಯಾವುದೇ ಕಾರಣಕ್ಕೂ ನಿಮ್ಮ ಯುಪಿಐ ಪಿನ್‌ ಅನ್ನು ಶೇರ್‌ ಮಾಡಬಾರದು.

ಪೇಮೆಂಟ್‌ ರಿಕ್ವೆಸ್ಟ್‌ ತಪ್ಪಿಸಿ

ಪೇಮೆಂಟ್‌ ರಿಕ್ವೆಸ್ಟ್‌ ತಪ್ಪಿಸಿ

ಹೆಚ್ಚಿನ UPI ಅಪ್ಲಿಕೇಶನ್‌ಗಳು ಕೆಲವು UPI ID ಗಳಿಂದ ಪೇಮೆಂಟ್‌ ರಿಕ್ವೆಸ್ಟ್‌ ಗಳನ್ನು ಟ್ರ್ಯಾಕ್ ಮಾಡುವಾಗ SPAM ಫಿಲ್ಟರ್ ಅನ್ನು ಹೊಂದಿವೆ. ಇಂತಹ ಸ್ಪ್ಯಾಮ್‌ ಐಡಿಗಳಿಂದ ನೀವು ಮನಿ ರಿಕ್ವೆಸ್ಟ್‌ ಸ್ವಿಕರಿಸಿದ್ದರೆ ಅದನ್ನು ಕೂಡಲೇ ಡಿಕ್ಲೈನ್‌ ಆಯ್ಕೆ ಮಾಡಿ. ಯಾವುದೇ ಸಂದರ್ಭದಲ್ಲೂ ನೀವು ‘ಪೇ' ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಪರಿಶೀಲಿಸಿದ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ

ಪರಿಶೀಲಿಸಿದ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ

ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ವೆರಿಫೈ ಮಾಡಿದ ಅಪ್ಲಿಕೇಶನ್‌ಗಳನ್ನು ಬಳಸುವುದು ಸೂಕ್ತ. ಏಕೆಂದರೆ ಪರಿಶೀಲನೆ ಮಾಡದ ಆನ್‌ಲೈನ್‌ ಶಾಪಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿದರೆ ನಿಮ್ಮ ಡೇಟಾ ಹಾಗೂ ಹಣವನ್ನು ಕದಿಯುವ ಸಾಧ್ಯತೆಯಿದೆ. ಶಾಪಿಂಗ್‌ ಅಪ್ಲಿಕೇಶನ್‌ಗಳು ಮಾತ್ರವಲ್ಲ ಯಾವುದೇ ಅಪ್ಲಿಕೇಶನ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌, ವಿಂಡೋಸ್‌ ಆಪ್‌ ಸ್ಟೋರ್‌ ಅಥವಾ ಆಪ್‌ಲ್‌ ಆಪ್‌ ಸ್ಟೋರ್‌ ನಂತಹ ಅಧಿಕೃತ ಪ್ಲೇ ಸ್ಟೋರ್‌ಗಳಿಂದ ಮಾತ್ರ ಡೌನ್‌ಲೋಡ್ ಮಾಡಿ.

ನಿಮ್ಮ UPI ಪಿನ್ ಅನ್ನು ಆಗಾಗ ಬದಲಾಯಿಸುತ್ತಿರಿ

ನಿಮ್ಮ UPI ಪಿನ್ ಅನ್ನು ಆಗಾಗ ಬದಲಾಯಿಸುತ್ತಿರಿ

ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವಾಗ ನಿಮ್ಮ UPI ಪಿನ್ ಅನ್ನು ಆಗಾಗ ಬದಲಾಯಿಸುವುದು ಅತ್ಯಗತ್ಯವಾಗಿದೆ. ಅದರಲ್ಲೂ ಪ್ರತಿ ತಿಂಗಳು ನಿಮ್ಮ ಯುಪಿಐ ಪಿನ್‌ ಅನ್ನು ಬದಲಾಯಿಸುವುದು ಮುಖ್ಯವಾಗಿದೆ. ಅಲ್ಲದೆ ನಿಮ್ಮ ಯುಪಿಐ ಪಿನ್‌ ನಿಮಗೆ ಮಾತ್ರ ತಿಳಿದಿರುವಂತೆ ನೋಡಿಕೊಳ್ಳುವುದು ಮುಖ್ಯ.

ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ

ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ

ನಕಲಿ ಇಮೇಲ್‌ಗಳು ಮತ್ತು ಎಸ್‌ಎಂಎಸ್‌ಗಳಿಂದ ಬರುವ ಲಿಂಕ್‌ಗಳನ್ನು ನೀವು ಎಂದಿಗೂ ಕ್ಲಿಕ್‌ ಮಾಡಬೇಡಿ. ಈ ರೀತಿಯ ಲಿಂಕ್‌ಗಳು ನಿಮಗೆ ಉಡುಗೊರೆ ನೀಡುವ ರೀತಿಯಲ್ಲಿರುತ್ತವೆ. ಉಡುಗೊರೆಯ ಆಸೆಗಾಗಿ ಲಿಂಕ್‌ ಕ್ಲಿಕ್‌ ಮಾಡಿದರೆ ನೀವು ವಂಚನೆ ಹೋಗುವುದು ಕನ್ಫರ್ಮ್‌. ಆದರಿಂದ ಅಂತಹ ಯಾವುದೇ ಲಿಂಕ್‌ಗಳನ್ನು ಅನುಸರಿಸಬೇಡಿ, ಇವುಗಳನ್ನು ನಿಮ್ಮನ್ನು ಫಿಶಿಂಗ್ ಸೈಟ್‌ಗೆ ಕರೆದೊಯ್ಯಬಹುದು ಮತ್ತು ನಿಮ್ಮ ಮೊಬೈಲ್‌ನ ಸೆಕ್ಯುರಿಟಿ ಫೀಚರ್ಸ್‌ಗೆ ಡ್ಯಾಮೇಜ್‌ ಮಾಡುವ ಸಾಧ್ಯತೆಯಿದೆ.

Best Mobiles in India

English summary
Fraudsters using UPI to cheat people often try to create a sense of urgency while promising to send money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X