Subscribe to Gizbot

ಒದ್ದೆ ಫೋನ್‌ಗೆ ಈ ಮದ್ದುಗಳೇ ಪರಿಹಾರ!!!

Written By:

ನಿಮ್ಮ ಫೋನ್ ಅಕಸ್ಮಾತ್ ಆಗಿ ನೀರಿಗೆ ಬಿದ್ದಿದೆಯೇ? ಅಥವಾ ತಿಳಿಯದೆಯೇ ಟಾಯ್ಲೆಟ್‌ಗೆ ಬಿತ್ತೇ? ಬರಿಯ ಮಳೆಗೆ ಮಾತ್ರವೇ ನಿಮ್ಮ ಫೋನ್ ಒದ್ದೆಯಾಗದೇ ಕೆಲವೊಂದು ಕಾರಣಗಳಿಗೂ ಫೋನ್ ಒದ್ದೆಯಾಗುವ ಸಾಧ್ಯತೆ ಇರುತ್ತದೆ. ಅಕಸ್ಮಾತ್ ಆಗಿ ಸಂಭವಿಸುವ ಈ ಅವಘಡಗಳಿಗೆ ನಿಮ್ಮನ್ನು ನೀವು ದೂಷಿಸದೇ ಕೆಲವೊಂದು ಪರಿಹಾರ ವಿಧಾನಗಳನ್ನು ಕಂಡುಕೊಂಡು ಇದರಿಂದ ತಪ್ಪಿಸಿಕೊಳ್ಳಬಹುದು.

ಹೌದು ಫೋನ್ ಒದ್ದೆಯಾಯಿತು ಇಲ್ಲವೇ ಹಾಳಾಯಿತು ಎಂಬುದಾಗಿ ಚಿಂತಿಸದೇ ಕೂರದೇ ಕೆಲವೊಂದು ವಿಧಾನಗಳನ್ನು ಅನುಸರಿಸಿ ನಿಮ್ಮ ಚಿಂತೆಯನ್ನು ದೂರಮಾಡಿಕೊಳ್ಳಿ. ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ಬನ್ನಿ ಆ ಸರಳ ವಿಧಾನಗಳನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀರಿನಿಂದ ಹೊರತೆಗೆಯಿರಿ

ಸಾಧ್ಯವಾದಷ್ಟು ಬೇಗನೇ ಫೋನ್ ನೀರಿನಿಂದ ಹೊರತೆಗೆಯಿರಿ

ಮೈಕ್ರೋಫೋನ್‌ನ ಸಣ್ಣ ತೂತು, ಚಾರ್ಜಿಂಗ್, ಯುಎಸ್‌ಬಿ ಕೇಬಲ್ ಕನೆಕ್ಟಿವಿಟಿ ಮತ್ತು ಸೆಲ್ ಫೋನ್‌ಗಳಲ್ಲಿರುವ ಪ್ಲಾಸ್ಟಿಕ್ ಕವರ್ ನೀರನ್ನು ಫೋನ್‌ನ ಒಳಕ್ಕೆ ಬಿಡಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆದಷ್ಟು ಬೇಗ ನೀರಿನಿಂದ ಹೊರತೆಗೆಯಿರಿ

ಬೇಗ ತೆಗೆದಷ್ಟೂ ನಿಮಗೆ ಉತ್ತಮ

ನೀರಿನಿಂದ ಬೇಗ ತೆಗೆದಷ್ಟೂ ನಿಮಗೆ ಉತ್ತಮ

ನಿಮ್ಮ ಫೋನ್ ವಾಲ್ ಚಾರ್ಜರ್‌ಗೆ ಸಂಪರ್ಕವನ್ನು ಹೊಂದಿದ್ದಲ್ಲಿ ನೀರಿನಿಂದ ಹೊರತೆಗೆಯಲು ಪ್ರಯತ್ನಿಸಬೇಡಿ. ಇದಕ್ಕೆ ಬೇಕಾದ ಮಾರ್ಗದರ್ಶನಗಳನ್ನು ಬಳಸಿ ನಂತರವೇ ಫೋನ್ ಅನ್ನು ನೀರಿನಿಂದ ಹೊರಕ್ಕೆ ತೆಗೆಯಿರಿ.

ಏನು ಮಾಡಬೇಕು?

ನೀರಿನಿಂದ ಹೊರಕ್ಕೆ ತೆಗೆದ ನಂತರ ಏನು ಮಾಡಬೇಕು?

ನೀರಿನಿಂದ ಫೋನ್ ಅನ್ನು ಹೊರಕ್ಕೆ ತೆಗೆದ ನಂತರ ಅದನ್ನು ಪೇಪರ್ ಟವಲ್ಸ್ ಅಥವಾ ಮೃದುವಾದ ಬಟ್ಟೆಯನ್ನು ಬಳಸಿ ನೀರನ್ನು ಹೊರತೆಗೆಯಿರಿ. ಬ್ಯಾಟರಿಯನ್ನು ಹೊರಕ್ಕೆ ತೆಗೆಯಿರಿ.

ಅತ್ಯಮೂಲ್ಯ ಸಂಪರ್ಕ

ಸಿಮ್ ಕಾರ್ಡ್ ಹೊರತೆಗೆಯಿರಿ

ಅತ್ಯಮೂಲ್ಯ ಸಂಪರ್ಕಗಳನ್ನು ಸಿಮ್‌ನಲ್ಲಿ ನೀವು ಸಂಗ್ರಹಿಸಿಟ್ಟಿರುತ್ತೀರಿ. ಸಿಮ್ ಕಾರ್ಡ್ ಕೂಡ ನೀರಿನಿಂದ ಹಾನಿಗೆ ಒಳಗಾಗುವ ಸಾಧ್ಯತೆ ಇದ್ದು ಇದನ್ನು ಆದಷ್ಟು ಬೇಗ ಹೊರಕ್ಕೆ ತೆಗೆಯಿರಿ. ಒಣಗಿಸಿ ಮತ್ತು ಸೆಲ್ ನೆಟ್‌ವರ್ಕ್‌ಗೆ ಪುನಃ ಸಂಪರ್ಕವನ್ನು ಪಡೆದುಕೊಳ್ಳುವವರೆಗೆ ಅದನ್ನು ಒಣಗಿಸಿ.

ಇತರ ಸಾಮಾಗ್ರಿ

ಇತರ ಸಾಮಾಗ್ರಿಗಳನ್ನು ಫೋನ್‌ನಿಂದ ಹೊರತೆಗೆಯಿರಿ

ಮೆಮೊರಿ ಕಾರ್ಡ್ಸ್, ಮುಂತಾದ ಫೋನ್ ಸಾಮಾಗ್ರಿಗಳನ್ನು ಹೊರಕ್ಕೆ ತೆಗೆಯಿರಿ. ಇದು ಚೆನ್ನಾಗಿ ಒಣಗಲಿ. ಫೋನ್ ಅನ್ನು ಕೆಳಕ್ಕೆ ಬೀಳಿಸದೇ ನೀರನ್ನು ಒರೆಸಿ ತೆಗೆಯಿರಿ.

ವಾಕ್ಯೂಮ್ ಕ್ಲೀನರ್

ವಾಕ್ಯೂಮ್ ಕ್ಲೀನರ್ ಬಳಸಿ

ಫೋನ್‌ನ ಒಳಭಾಗದಲ್ಲಿರುವ ನೀರನ್ನು ತೆಗೆಯಬೇಕು ಎಂದಾದಲ್ಲಿ ವಾಕ್ಯೂಮ್ ಕ್ಲೀನರ್ ಅನ್ನು ಬಳಸಬಹುದಾಗಿದೆ. ವಾಕ್ಯೂಮ್ ಕ್ಲೀನರ್ ಬಳಸಿ ನೀರನ್ನು ಹೊರತೆಗೆಯಿರಿ 20 ನಿಮಿಷಗಳ ಕಾಲ ವಾಕ್ಯೂಮ್ ಕ್ಲೀನರ್ ಬಳಸಿ. ಆದಷ್ಟು ಫೋನ್‌ನ ಸಮೀಪಕ್ಕೆ ಇದನ್ನು ಬಳಸಬೇಡಿ

ಹೇರ್ ಡ್ರೈಯರ್

ಹೇರ್ ಡ್ರೈಯರ್ ಬಳಕೆ ಬೇಡ

ಹೇರ್ ಡ್ರೈಯರ್ ಅನ್ನು ಬಳಸುವುದರಿಂದ ಅಧಿಕ ಮಾಯಿಸ್ಚರೈಸರ್ ಅನ್ನು ಫೋನ್ ಒಳಕ್ಕೆ ಹೋಗುವಂತೆ ಮಾಡಬಹುದು. ಫೋನ್‌ನ ಒಳಕ್ಕೆ ಗಾಳಿಯಾಡಿಸುವುದು, ಹೀಟರ್ ಬಳಸುವುದು ಮೊದಲಾದ ಕೆಲಸಗಳನ್ನು ಮಾಡದಿರಿ.

ಬೇಯಿಸದೇ ಇರುವ ಅಕ್ಕಿ

ಅಕ್ಕಿಯ ಬಳಕೆ

ಬೇಯಿಸದೇ ಇರುವ ಅಕ್ಕಿಯಲ್ಲಿ ಸ್ಪಲ್ಪ ಸಮಯ ಫೋನ್ ಅನ್ನು ಇರಿಸಿ. ಹೆಚ್ಚುವರಿ ತೇವಾಂಶವನ್ನು ಅಕ್ಕಿ ಹೀರಿಕೊಳ್ಳಬಹುದು.

ನೀರು ಆರಿಹೋಗಬಹುದು

ಬಿಸಿಲಿನಲ್ಲಿ ಇರಿಸುವುದು

ಬಿಸಿಲಿನಲ್ಲಿ ಸ್ವಲ್ಪ ಕಾಲ ಫೋನ್ ಅನ್ನು ಇರಿಸಿ ಇದರಿಂದ ಕೂಡ ನೀರು ಆರಿಹೋಗಬಹುದು.

ನೀರು ಹೀರಿಕೊಳ್ಳುವ ಸಾಮಾಗ್ರಿ

ನ್ಯಾಪ್‌ಕಿನ್, ಟವೆಲ್ ಬಳಸಿ

ಅಕ್ಕಿಯಿಂದ ಫೋನ್ ಅನ್ನು ತೆಗೆದ ನಂತರ ನೀರು ಹೀರಿಕೊಳ್ಳುವ ಸಾಮಾಗ್ರಿಗಳ ಮೇಲೆ ಡಿವೈಸ್ ಅನ್ನು ಇರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Have you ever accidentally dropped your cell phone in the sink, or even worse - the toilet? Did you leave it in your pocket and run it through the washing machine and at times it's possible that your friends dunked you in a swimming pool just for the fun of it?
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot