ನಿಮ್ಮ ಕಂಪ್ಯೂಟರ್ ಅನ್ನು ಆಟೋ ಆಫ್-ಆನ್ ಮಾಡುವುದು ಹೇಗೆ.?

ನೀವು ನಿರ್ಧರಿಸಿದ ಸಮಯದಲ್ಲಿ ಕಂಪ್ಯೂಟರ್ ಆಫ್ ಆಗುವುದು ಆನ್ ಆಗುವುದನ್ನು ಮಾಡುವ ಆಯ್ಕೆಯೂ ವಿಂಡೋಸ್, ಮ್ಯಾಕ್, ಲಿನೆಕ್ಸ್ ನಲ್ಲಿ ಯೂ ಲಭ್ಯವಿದೆ ಎನ್ನಲಾಗಿದೆ.

By Lekhaka
|

ಹಲವು ಮಂದಿ ತಮ್ಮ ಕಂಪ್ಯೂಟರ್ ಗಳನ್ನು ಮ್ಯಾನುಯಲ್ ಆಗಿಯೆ ಸ್ವಿಚ್ ಆಫ್ (ಶಟ್ ಡೌನ್) ಮಾಡುತ್ತಾರೆ. ಆದರೆ ಕಂಪ್ಯೂಟರ್ ನಿರ್ಧಿಷ್ಟ ಸಮಯದಲ್ಲಿ ಶಟ್ ಡೌನ್ ಮಾಡಲು ಇಲ್ಲವೇ ರಿಸ್ಟಾರ್ಟ್ ಮಾಡಲು ಟಾಸ್ಕ್ ಶೆಡ್ಯೂಲರ್ ನಲ್ಲಿ ಅವಕಾವೂ ಒಂದು ಇದೇ ಎಂಬುದು ಹಲವರಿಗೆ ತಿಳಿದಿಲ್ಲ.

ನಿಮ್ಮ ಕಂಪ್ಯೂಟರ್ ಅನ್ನು ಆಟೋ ಆಫ್-ಆನ್ ಮಾಡುವುದು ಹೇಗೆ.?

ನೀವು ನಿರ್ಧರಿಸಿದ ಸಮಯದಲ್ಲಿ ಕಂಪ್ಯೂಟರ್ ಆಫ್ ಆಗುವುದು ಆನ್ ಆಗುವುದನ್ನು ಮಾಡುವ ಆಯ್ಕೆಯೂ ವಿಂಡೋಸ್, ಮ್ಯಾಕ್, ಲಿನೆಕ್ಸ್ ನಲ್ಲಿ ಯೂ ಲಭ್ಯವಿದೆ ಎನ್ನಲಾಗಿದೆ. ಇವುಗಳನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ,

ವಿಂಡೋಸ್:

ವಿಂಡೋಸ್:

ಟಾಸ್ಕ್ ಶೆಡ್ಯೂಲರ್ ನಲ್ಲಿ ಕಂಪ್ಯೂಟರ್ ತಾನಾಗಿಯೇ ಆಫ್ ಆಗುವ ಮತ್ತು ಆನ್ ಆಗುವಂತೆ ಮಾಡುವ ಅವಕಾಶವನ್ನು ನೀಡಲಾಗಿದ್ದು, ಕೆಳಗಿನ ಕಮ್ಯಾಂಡ್ ಗಳನ್ನು ಬಳಸಿಕೊಂಡು ನೀವು ಅವುಗಳನ್ನು ಮಾಡಬಹುದಾಗಿದೆ.

ಶಟ್ ಡೌನ್: Shudown.exe -s-t

ಹೈಬರ್ ನೆಟ್: rundll32.exe powrprof.dll,SetSuspendState

ಸ್ಲಿಪ್: rundll32.exe powrprof.dll,SetSuspendState 0,1,0

ಇದನ್ನೇ ಟಾಸ್ಕ್ ಶಡ್ಯೂಲರ್ ನಲ್ಲಿ ಮಾಡಿದರೆ:

ಇದನ್ನೇ ಟಾಸ್ಕ್ ಶಡ್ಯೂಲರ್ ನಲ್ಲಿ ಮಾಡಿದರೆ:

ಹಂತ 01: ಸ್ಟಾರ್ಟ್ ಮೆನುವಿನಲ್ಲಿ Task scheduler ಅನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 02: ಬಲ ಭಾಗದಲ್ಲಿ ಕ್ರಿಯೆಟ್ ಟಾಸ್ಕ್ ಎನ್ನುವ ಆಯ್ಕೆಯನ್ನು ಕಾಣಬಹುದಾಗಿದ್ದು, ಅಲ್ಲಿ ಹೆಸರನ್ನು ಆಯ್ಕೆ ಮಾಡಿಕೊಂಡು "Run with highest privileges" ಸೆಲೆಕ್ಟ್ ಮಾಡಿಕೊಳ್ಳಿ ಮತ್ತು 'Run whether user is logged on or not' ಆಯ್ಕೆ ಮೇಲೆಯೂ ಕ್ಲಿಕ್ ಮಾಡಿ.

ಹಂತ 03: ನಂತರ ಸೆಟಿಂಗ್ಸ್ ಗೆ ಹೋಗಿ ಅಲ್ಲಿ ಸ್ಟಾಪ್ ಲಾಂಗರ್ ದಾನ್ ಎನ್ನುವ ಆಯ್ಕೆಯಲ್ಲಿ ಒಂದು ಗಂಟೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಇದನ್ನು ಮಾಡುವ ಮೂಲಕ ನಿಮ್ಮ ಕಂಪ್ಯೂಟರ್ ಕಾರ್ಯಚಟುವಟಿಕೆಯನ್ನು ನಿಲ್ಲಿಸಬಹುದು.

ಹಂತ 04: ನಂತರ ಆಕ್ಷನ್ ಟ್ಯಾಬ್ ಗೆ ಹೋಗಿ ಸ್ಟಾರ್ಟ್ ಪ್ರೋಗ್ರಾಮ್ ನಲ್ಲಿ ನಿಮ್ಮ ಆಕ್ಷನ್ ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 05: ನಂತರದ ಅಲ್ಲಿ ಟ್ರಿಗರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಶೆಡ್ಯೂಲ್ಡ್ ಟೈನ್ ಅನ್ನು ಬದಲಾಯಿಸಿಕೊಳ್ಳಿ.

ಬೆಂಗಳೂರಿಗೆ ಮೊದಲ 5G ಸೇವೆ: ಒಂದು ಸಿನಿಮಾ ಡೌನ್‌ಲೋಡ್‌ಗೆ ಕ್ಷಣ ಸಾಕು.!ಬೆಂಗಳೂರಿಗೆ ಮೊದಲ 5G ಸೇವೆ: ಒಂದು ಸಿನಿಮಾ ಡೌನ್‌ಲೋಡ್‌ಗೆ ಕ್ಷಣ ಸಾಕು.!

ಮ್ಯಾಕ್ ಓಸ್ X:

ಮ್ಯಾಕ್ ಓಸ್ X:

ನೀವು ಮ್ಯಾಕ್ ಓಎಸ್ ನಲ್ಲಿ ಸಿಸ್ಟಮ್ ಫಾರ್ಪರ್ಮೆನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಶೆಡ್ಯೂಲ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಮ್ಯಾಕ್ಸ್ ಅನ್ನು ಆನ್ ಮಾಡುವ ಮತ್ತು ಆಫ್ ಮಾಡುವ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ನೀವು ಆಫ್ ಮಾಡುವುದು ಮರೆತರೂ ಅದು ತಾನಾಗಿಯೇ ಆಫ್ ಅಂಡ್ ಆನ್ ಆಗಲಿದೆ.

ಲಿನೆಕ್ಸ್:

ಲಿನೆಕ್ಸ್:

ಲಿನೆಕ್ಸ್ ನಲ್ಲಿ ಆರ್ ಟಿಸಿ ವೇಕ್ ಕಮ್ಯಾಂಡ್ ನಿಮಗೆ ಕಂಪ್ಯೂಟರ್ ಅನ್ನು ಆನ್ ಮಾಡುವುದು ಮತ್ತು ಆಫ್ ಮಾಡುವದನ್ನು ಮಾಡಲು ಸಹಾಯ ಮಾಡಲಿದೆ. ನೀವು ನಿರ್ಧಿಸಿದ ಸಮಯಕ್ಕೆ ಕಂಪ್ಯೂಟರ್ ಆನ್ ಮತ್ತು ಆಫ್ ಆಗಲಿದೆ. ಇದರಿಂದ ವಿದ್ಯುತ್ ಉಳಿತಾಯವು ಆಗಲಿದೆ.

Best Mobiles in India

Read more about:
English summary
While most of us shut down our computer manually, there is an option you can use called the Task Scheduler to shut down, restart or perform any action at a specific time as you wish. Check out for more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X