ನಿಮ್ಮ ಗೂಗಲ್‌ ಸರ್ಚ್ ಹಿಸ್ಟರಿ ಯಾರಿಗೂ ಕಾಣಿಸಬಾರದೇ?..ಹಾಗಿದ್ರೇ ಈ ಕೆಲಸ ಮಾಡಿ!

|

ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಬಳಸುವ ಲೊಕೇಶನ್ ಹಾಗೂ ವೆಬ್‌ ಸರ್ಚ್ ಮಾಹಿತಿಗಳು ಹಿಸ್ಟರಿಯಲ್ಲಿ ದಾಖಲಾಗಿ ಉಳಿದಿರುತ್ತವೆ. ಕೆಲವರು ಮೇಲಿಂದ ಮೇಲೆ ಹಿಸ್ಟರಿ ಕ್ಲಿಯರ್ ಮಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರು ಹಿಸ್ಟರಿ ಕ್ಲಿಯರ್ ಮಾಡುವ ಗೋಜಿಗೆ ಹೋಗುವುದಿಲ್ಲ. ಬಳಕೆದಾರರ ಪ್ರೈವಸಿ ಕಾಪಾಡಲು ಗೂಗಲ್‌ನಲ್ಲಿ ಹಿಸ್ಟರಿ ಹಾಗೂ ಸೂಕ್ಷ್ಮ ಮಾಹಿತಿಗಳಿಗೆ ಪಾಸ್‌ವರ್ಡ್‌ ಸೆಟ್‌ ಮಾಡುವ ಅವಕಾಶ ನೀಡಿದೆ. ಹೀಗಾಗಿ ಸರ್ಚ್‌ ಹಿಸ್ಟರಿಗೂ ಪಾಸ್‌ವರ್ಡ್‌ ಸೆಟ್‌ ಮಾಡಬಹುದಾಗಿದೆ.

ಬಳಕೆದಾರರು

ಹೌದು, ಬಳಕೆದಾರರು ಗೂಗಲ್ ವೆಬ್‌ ಸರ್ಚ್‌ನಲ್ಲಿ ಜಾಲಾಡಿರುವ ಮಾಹಿತಿ ಹಿಸ್ಟರಿಯಲ್ಲಿ ಸ್ಟೋರ್ ಆಗಿರುತ್ತದೆ. ಅದೇ ರೀತಿ ಭೇಟಿ ನೀಡಿದ ಸ್ಥಳದ ಲೊಕೇಶನ್ ಹಾಗೂ ಲೊಕೇಶನ್ ಸರ್ಚ್ ಮಾಹಿತಿಯು ಸಹ ಹಿಸ್ಟರಿಯಲ್ಲಿ ದಾಖಲಾಗಿರುತ್ತವೆ. ಫೋನ್‌ ಅನ್ನು ಇತರರು ಬಳಸುವಾಗ ಹಿಸ್ಟರಿ ಅಥವಾ ಕೆಲವು ಸೂಕ್ಷ್ಮ ಮಾಹಿತಿಗಳನ್ನು ವೀಕ್ಷಿಸುವ ಸಾಧ್ಯತೆಗಳಿರುತ್ತವೆ. ಆದರೆ ಪಾಸ್‌ವರ್ಡ್‌ ಸೆಟ್‌ ಮಾಡಿದರೇ, ಮೂರನೇಯವರು ಸರ್ಚ್ ಹಿಸ್ಟರಿ ಸೇರಿದಂತೆ ಸೂಕ್ಷ್ಮ ಮಾಹಿತಿ ನೊಡಲು ಆಗುವುದಿಲ್ಲ. ಹಾಗಾದರೇ ಗೂಗಲ್‌ ಸರ್ಚ್‌ ಹಿಸ್ಟರಿಗೆ ಪಾಸ್‌ವರ್ಡ್‌ ಸೆಟ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಸರ್ಚ್‌ ಹಿಸ್ಟರಿಗೆ ಪಾಸ್‌ವರ್ಡ್‌ ಸೆಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ಗೂಗಲ್‌ ಸರ್ಚ್‌ ಹಿಸ್ಟರಿಗೆ ಪಾಸ್‌ವರ್ಡ್‌ ಸೆಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ:

* activity.google.com ಅಡಿಯಲ್ಲಿ ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆ ಟ್ಯಾಬ್‌ಗೆ ಹೋಗಿ.
* Manage My Activity verification ಬಟನ್ ಟ್ಯಾಪ್ ಮಾಡಿ.
* require extra verification ಆಯ್ಕೆಮಾಡಿ ಮತ್ತು ನಿಮ್ಮ ಖಾತೆಯ ಹಿಸ್ಟರಿ ಮೂಲಕ ಬ್ರೌಸ್ ಮಾಡಲು ಅನುಮತಿಸುವ ಮೊದಲು ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಮರು ನಮೂದಿಸಲು ಗೂಗಲ್‌ ನಿಮ್ಮನ್ನು ಕೇಳುತ್ತದೆ.
* ನಿಮ್ಮ ಗೂಗಲ್ ಸರ್ಚ್ ಹಿಸ್ಟರಿ ಲೀಕ್ ಆಗುವ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರೆ, ನಿಮ್ಮ ಚಟುವಟಿಕೆಯ ಹಿಸ್ಟರಿಯನ್ನು ಹಸ್ತಚಾಲಿತವಾಗಿ ಅಳಿಸುವುದನ್ನು ಪರಿಗಣಿಸಲು ನೀವು ಬಯಸಬಹುದು, ಅಥವಾ ನಿಮಗಾಗಿ ನಿಮ್ಮ ಡಿಜಿಟಲ್ ಹೆಜ್ಜೆಗುರುತನ್ನು ಸ್ವಯಂಚಾಲಿತವಾಗಿ ಅಳಿಸಲು ಪೂರ್ವ ನಿಗದಿತ ಅಳಿಸುವಿಕೆಗಳನ್ನು ಹೊಂದಿಸಬಹುದು.

ಗೂಗಲ್ ಸರ್ಚ್ ಹಿಸ್ಟರಿ ಆಟೋ ಡಿಲೀಟ್ ಮಾಡಲು ಹೀಗೆ ಮಾಡಿ:

ಗೂಗಲ್ ಸರ್ಚ್ ಹಿಸ್ಟರಿ ಆಟೋ ಡಿಲೀಟ್ ಮಾಡಲು ಹೀಗೆ ಮಾಡಿ:

ಹಂತ 1- ನಿಮ್ಮ Google ಖಾತೆಗೆ ಲಾಗ್ ಇನ್ ಮಾಡಿ ಮತ್ತು 'Data & Personalization' ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
ಹಂತ 2- ಆ ನಂತರ ಕೆಳಗೆ ಸ್ಕ್ರಾಲ್ ಮಾಡಿ Activity Controls ವಿಭಾಗವನ್ನು ಕಾಣುತ್ತಿರಿ. ಇದು ಮೆನುವು ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ, ಲೊಕೇಶನ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿ ಎಂಬ ಮೂರು ವಿಭಾಗಗಳನ್ನು ಹೊಂದಿದೆ.
ಹಂತ 3- ತದ ನಂತರ ಅಲ್ಲಿ ಕಾಣುವ ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

ಆಕ್ಟಿವೀಟಿ

ಹಂತ 4: ನಂತರ 'ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ' ವಿಭಾಗದ ಮೇಲೆ ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು Auto-Delete ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಆಗ ನಿಮಗೆ ಡೇಟಾವನ್ನು ಯಾವಾಗ ಸ್ವಯಂ ಡಿಲೀಟ್ ಮಾಡಬೇಕು ಎಂಬು ಆಯ್ಕೆ ಪಟ್ಟಿ ಕಾಣಿಸುತ್ತದೆ. 3 ತಿಂಗಳ ಅಥವಾ 18 ತಿಂಗಳ ಆಯ್ಕೆ ಕಾಣಿಸುತ್ತವೆ. ನಿಮಗೆ ಬೇಕಾದ ಒಂದು ಆಯ್ಕೆ ಸೆಲೆಕ್ಟ್ ಮಾಡಿ Next ಬಟನ್ ಒತ್ತಿರಿ.
ಹಂತ 6: ನಂತರ ಇದೇ ರೀತಿ ನೀವು ಲೊಕೇಶನ್ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿಗಳನ್ನು ಆಟೋ ಡಿಲೀಟ್ ಮಾಡಲು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
How To Set Password To Google Search History: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X