ಗೂಗಲ್‌ ಕ್ರೋಮ್‌ ನಲ್ಲಿ QR ಕೋಡ್ ಮೂಲಕ URL ಅನ್ನು ಶೇರ್‌ ಮಾಡುವುದು ಹೇಗೆ?

|

ಗೂಗಲ್‌ ಕ್ರೋಮ್ ಪ್ರಪಂಚದಲ್ಲಿ ವ್ಯಾಪಕವಾಗಿ ಬಳಸಲಾಗುವ ಬ್ರೌಸರ್‌ಗಳಲ್ಲಿ ಒಂದಾಗಿದೆ. ಗೂಗಲ್‌ ಕ್ರೋಮ್‌ ಮೂಲಕ ಬ್ರೌಸಿಂಗ್‌ ಮಾಡುವುದು ಸಾಕಷ್ಟು ಸುಲಭವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಗೂಗಲ್‌ ಕ್ರೋಮ್‌ ಅನ್ನು ಬಳಸುತ್ತಾರೆ. ಇನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರೋಮ್ ಬಳಸಿ ಲಿಂಕ್ ಅನ್ನು ಶೇರ್‌ ಮಾಡಬಹುದಾಗಿದ್ದು, ಇದಕ್ಕೆ ಹಲವಾರು ಮಾರ್ಗಗಳಿವೆ. ಅದರಲ್ಲೂ URL ಅನ್ನು ನೇರವಾಗಿ ನಕಲಿಸುವ ಮೂಲಕ ಶೇರ್‌ ಮಾಡುವುದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ.

ಗೂಗಲ್‌ ಕ್ರೋಮ್‌

ಹೌದು, ಗೂಗಲ್‌ ಕ್ರೋಮ್‌ ಬಳಸಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಂಕ್‌ ಅನ್ನು ಶೇರ್‌ ಮಾಡಬಹುದಾಗಿದೆ. ಇದಕ್ಕಾಗಿ ಗೂಗಲ್‌ ಕ್ರೋಮ್‌ನಲ್ಲಿ ಹಲವಾರು ಆಯ್ಕೆಗಳಿವೆ. ಅವುಗಳಲ್ಲಿ ಕ್ಯೂಆರ್ ಕೋಡ್ ಒಂದಾಗಿದೆ. ಹಾಗಾದ್ರೆ ಆಟೋಮ್ಯಾಟಿಕ್‌ ಕ್ರಿಯೆಟ್‌ ಮಾಡಲಾದ QR ಕೋಡ್ ಬಳಸಿ ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿನ Chrome ಬ್ರೌಸರ್‌ನಿಂದ ವೆಬ್‌ಪುಟವನ್ನು ನೀವು ಹೇಗೆ ಶೇರ್‌ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌

ಗೂಗಲ್‌ ಕ್ರೋಮ್‌ನಲ್ಲಿ ಲಿಂಕ್‌ ಅನ್ನು ಶೇರ್‌ ಮಾಡುವುದು ಸುಲಭ ಮಾರ್ಗವಾಗಿದೆ. ಸಾಮಾನ್ಯವಾಗಿ ಯಾವುದೇ ವೆಬ್‌ ಲಿಂಕ್‌ ಅನ್ನು ನೀವು ಕಾಪಿ ಮಾಡಿ ಶೇರ್‌ ಮಾಡಿಕೊಳ್ಳಬೇಕಾದರೆ ಥರ್ಡ್‌ ಪಾರ್ಟಿ ಆಪ್‌ಗಳನ್ನ ಬಳಸುತ್ತಾರೆ. ಆದರೆ ಗೂಗಲ್‌ ಕ್ರೋಮ್‌ ಮೂಲಕ ಸಹ ವೆಬ್‌ ಲಿಂಕ್‌ ಅನ್ನು ಕಾಪಿ ಮಾಡಿ ಶೇರ್‌ ಮಾಡಿಕೊಳ್ಳುವುದರಿಂದ ಎಲ್ಲವೂ ಸುಲಭವಾಗಲಿದೆ. ಅಷ್ಟಕ್ಕೂ ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಕ್ರೋಮ್‌ನಲ್ಲಿ URL QR ಕೋಡ್‌ ಅನ್ನು ಶೇರ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

Android ನಲ್ಲಿ ಗೂಗಲ್‌ Chrome ನಲ್ಲಿ URL QR ಕೋಡ್ ಶೇರ್‌ ಮಾಡುವುದು ಹೇಗೆ?

Android ನಲ್ಲಿ ಗೂಗಲ್‌ Chrome ನಲ್ಲಿ URL QR ಕೋಡ್ ಶೇರ್‌ ಮಾಡುವುದು ಹೇಗೆ?

ಹಂತ 1: ಮೊದಲನೆಯದಾಗಿ, ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ Chrome ಬ್ರೌಸರ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಈಗ, ಆಡ್ರೆಸ್‌ ಬಾರ್‌ನಲ್ಲಿ, chrome: // flags ಎಂದು ಟೈಪ್ ಮಾಡಿ ಮತ್ತು ಎಂಟರ್ ಕೀಲಿಯನ್ನು ಒತ್ತಿರಿ.

ಹಂತ 3: ಸರ್ಚ್‌ ಬಾರ್‌ನಲ್ಲಿರುವ "Chrome flags" ಪುಟದಲ್ಲಿ, "ಶೇರ್‌ ಹಬ್" ಗಾಗಿ ನೋಡಿ.

ಹಂತ 4: ಶೇರ್‌ ಹಬ್ ಆಯ್ಕೆಯನ್ನು ನೀವು ಕಂಡುಕೊಂಡ ನಂತರ, ಫೀಚರ್ಸ್‌ ಬಳಸಲು ಪ್ರಾರಂಭಿಸಲು ಅದರ ಸ್ಥಿತಿಯನ್ನು "ಡೀಫಾಲ್ಟ್" ನಿಂದ "ಸಕ್ರಿಯಗೊಳಿಸಲಾಗಿದೆ" ಎಂದು ಬದಲಾಯಿಸಿ.

ಹಂತ 5: ಈಗ, Chrome ಫ್ಲ್ಯಾಗ್‌ಗಳ ಪುಟದಲ್ಲಿ "QR ಕೋಡ್" ಗಾಗಿ ಹುಡುಕಿ ಮತ್ತು "Chrome Share QRCodes" ಎಂದು ಹೇಳುವ ಆಯ್ಕೆಯನ್ನು ಸಕ್ರಿಯಗೊಳಿಸಿ.

ಹಂತ 6: Chrome ಅಪ್ಲಿಕೇಶನ್ ಅನ್ನು ಮರುಪ್ರಾರಂಭಿಸಲು "re launch" ಬಟನ್ ಮತ್ತು ಎಫೆಕ್ಸ್‌ ಬದಲಾವಣೆಗಳನ್ನು ಕ್ಲಿಕ್ ಮಾಡಿ.

Chrome

ಈಗ, ನೀವು Chrome ಅಪ್ಲಿಕೇಶನ್‌ನಲ್ಲಿ ವೆಬ್‌ಪುಟವನ್ನು ತೆರೆದಾಗ ಮತ್ತು ಯಾವುದೇ ವೆಬ್‌ಪುಟವನ್ನು ತೆರೆಯುವಾಗ. ಆ ವೆಬ್‌ಪುಟವನ್ನು ಹಂಚಿಕೊಳ್ಳಲು, ವಿಳಾಸ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಶೇರ್‌ ಐಕಾನ್ ಅನ್ನು ತೋರಿಸುತ್ತದೆ ಮತ್ತು QR ಕೋಡ್ ಬಳಸಿ URL ಅನ್ನು ಹಂಚಿಕೊಳ್ಳಲು ಒಂದು ಆಯ್ಕೆ ಇರುತ್ತದೆ.

Best Mobiles in India

English summary
Google Chrome is one of the widely used browsers in the world. There are several ways that the company offers to share the link using Chrome on Android smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X