ನಿಮ್ಮ ವಾಟ್ಸಾಪ್‌ ಸ್ಟೇಟಸ್‌ ಅನ್ನು ಫೇಸ್‌ಬುಕ್‌ಗೆ ಶೇರ್‌ ಮಾಡುವುದು ಹೇಗೆ?

|

ಮೆಟಾ ಒಡೆತನದ ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಫ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್‌ಗಳನ್ನು ನೀಡುತ್ತಲೇ ಬಂದಿದೆ. ಇನ್ನು ಶಾರ್ಟ್‌ ವೀಡಿಯೋ, ಫೋಟೋಗಳು, ಶುಭಾಶಯಗಳನ್ನು ಅಪ್ಡೇಟ್‌ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಇನ್ನು ನೀವು ವಾಟ್ಸಾಪ್‌ನಲ್ಲಿ ಅಪ್ಡೇಟ್‌ ಮಾಡಿದ ಸ್ಟೇಟಸ್‌ ಅನ್ನು ಬೇರೆ ಅಪ್ಲಿಕೇಶನ್‌ಗಳಿಗೂ ಕೂಡ ಶೇರ್‌ ಮಾಡಬಹುದಾಗಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಸ್ಟೇಟಸ್‌ ಅನ್ನು ನೀವು ಬೇರೆ ಚಾಟ್‌ಗಳಿಗೆ ಮಾತ್ರವಲ್ಲ ಬೇರೆ ಅಪ್ಲಿಕೇಶನ್‌ಗಳಿಗೂ ಕೂಡ ಶೇರ್‌ ಮಾಡಬಹುದು. ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಬ್ಬರೂ ಕೂಡ ವಾಟ್ಸಾಪ್‌ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಸ್ಟೋರೀಸ್‌ ಮತ್ತು ಇತರೆ ಅಪ್ಲಿಕೇಶನ್‌ಗಳಿಗೆ ಶೇರ್‌ ಮಾಡುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ವಾಟ್ಸಾಪ್‌ ಸ್ಟೇಟಸ್‌ ಅನ್ನು ಬೇರೆ ಅಪ್ಲಿಕೇಶನ್‌ಗಳಿಗೆ ಶೇರ್‌ ಮಾಡುವುದು ಹೇಗೆ ಅನ್ನೊದ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಸ್ಟೋರಿಸ್‌ಗೆ ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಸ್ಟೋರಿಸ್‌ಗೆ ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ವಾಟ್ಸಾಪ್‌ ಸ್ಟೇಟಸ್‌ ಅನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ನಿಮ್ಮ ಸ್ಟೇಟಸ್‌ ಅಪ್ಡೇಟ್‌ ಮಾಡಿ
ಹಂತ:4 ಹೊಸ ಸ್ಟೇಟಸ್‌ ಇಲ್ಲವೇ ಹಳೆಯ ಸ್ಟೇಟಸ್‌ ಅಪ್ಡೇಟ್‌ ಅನ್ನು ಆಯ್ಕೆ ಮಾಡಬಹುದು.
ಹಂತ:5 ಮೈ ಸ್ಟೇಟಸ್‌ ಅಪ್ಡೇಟ್‌ನಲ್ಲಿ ಫೇಸ್‌ಬುಕ್‌ ಸ್ಟೋರಿಗೆ ಶೇರ್‌ಮಾಡಿ ಎನ್ನುವ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಪ್ರಾಂಪ್ಟ್ ಮಾಡಿದರೆ, ಫೇಸ್‌ಬುಕ್‌ ಅಪ್ಲಿಕೇಶನ್‌ ತೆರೆಯಿರಿ ಟ್ಯಾಪ್ ಮಾಡಿ.
ಹಂತ:7 ನಂತರ ಫೇಸ್‌ಬುಕ್‌ ಅಪ್ಲಿಕೇಶನ್‌ನಲ್ಲಿ, ನೀವು ಹಂಚಿಕೊಳ್ಳಲು ಬಯಸುವ ಪ್ರೇಕ್ಷಕರನ್ನು ಆಯ್ಕೆಮಾಡಿ, ನಂತರ ಈಗ ಶೇರ್‌ ಟ್ಯಾಪ್ ಮಾಡಿ. ನೀವು ಇನ್ನೊಂದು ಟ್ಯಾಬ್‌ಗೆ ಹೋದ ನಂತರ ಶೇರ್ ಟು ಫೇಸ್‌ಬುಕ್ ಸ್ಟೋರಿ ಆಯ್ಕೆಯು ಕಣ್ಮರೆಯಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಬೇಕಾಗುತ್ತದೆ.

ಹಳೆಯ ಸ್ಟೇಟಸ್‌ ಅಪ್ಡೇಟ್‌ ಶೇರ್‌ ಮಾಡುವುದು ಹೇಗೆ?

ಹಳೆಯ ಸ್ಟೇಟಸ್‌ ಅಪ್ಡೇಟ್‌ ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ಹಂಚಿಕೊಳ್ಳಲು ಬಯಸುವ ಸ್ಟೇಟಸ್‌ ಅಪ್ಡೇಟ್‌ ಮುಂದೆ ಮೋರ್‌ ಟ್ಯಾಪ್ ಮಾಡಿ.
ಹಂತ:2 ನಂತರ ಫೇಸ್‌ಬುಕ್‌ ಶೇರ್‌ ಟ್ಯಾಪ್ ಮಾಡಿ.
ಹಂತ:3 ಫೇಸ್‌ಬುಕ್‌ ಅಪ್ಲಿಕೇಶನ್‌ನಲ್ಲಿ, ನೀವು ಶೇರ್‌ ಮಾಡಲು ಬಯಸುವ ಪ್ರೇಕ್ಷಕರನ್ನು ಆಯ್ಕೆಮಾಡಿ.
ಹಂತ:4 ನಂತರ ಶೇರ್‌ ನೌ ಟ್ಯಾಪ್ ಮಾಡಿ.
ಒಮ್ಮೆ ನೀವು ನಿಮ್ಮ ಸ್ಟೇಟಸ್ ಅಪ್‌ಡೇಟ್ ಅನ್ನು ಹಂಚಿಕೊಂಡ ನಂತರ, ವಾಟ್ಸಾಪ್‌ ಮತ್ತೆ ತೆರೆಯುತ್ತದೆ.

ವಾಟ್ಸಾಪ್‌

ಇದಲ್ಲದೆ, ವಾಟ್ಸಾಪ್‌ ನಲ್ಲಿ ನೀವು ಹಲವು ಭಾಷೆಗಳನ್ನು ಆಯ್ಕೆಗಳನ್ನು ಕಾಣಬಹುದಾಗಿದೆ. ಸದ್ಯ ವಾಟ್ಸಾಪ್‌ ಭಾರತದಲ್ಲಿ ಏಳು ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ಮಾಡುವ ಆಯ್ಕೆಯನ್ನು ನೀಡುತ್ತದೆ. ಇದರಲ್ಲಿ ಹಿಂದಿ, ತಮಿಳು, ಗುಜರಾತಿ, ಕನ್ನಡ, ಬೆಂಗಾಲಿ, ಭಾಷೆ ಸೇರಿದಂತೆ ಇತ್ಯಾದಿ ಭಾಷೆಗಳನ್ನು ಬೆಂಬಲಿಸಲಿದೆ. ಇದರಿಂದ ನಿಮ್ಮ ಆಯ್ಕೆಯ ಭಾಷೆಯ ಮೂಲಕ ವಾಟ್ಸಾಪ್‌ ಅನ್ನು ಬಳಸಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ನಿಮ್ಮ ಆಯ್ಕೆಯ ಭಾಷೆಯನ್ನು ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮ ಆಯ್ಕೆಯ ಭಾಷೆಯನ್ನು ಬಳಸುವುದು ಹೇಗೆ?

ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಭಾಷೆಯನ್ನು ಬದಲಾಯಿಸುವ ಆಯ್ಕೆಯ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿಯೇ ಲಭ್ಯವಿದೆ. ಆದರೆ ಇದು ನಿಮ್ಮ ದೇಶದಲ್ಲಿ ಬೆಂಬಲಿತವಾಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವಾಟ್ಸಾಪ್‌ನಲ್ಲಿ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲು, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಮೂರು ಚುಕ್ಕೆಗಳ ಮೇಲೆ ಮೋರ್‌ ಆಯ್ಕೆಗಳನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್ ಮಾಡಿ ಮತ್ತು ಚಾಟ್‌ಗಳನ್ನು ಆಯ್ಕೆಮಾಡಿ.
ಹಂತ:4 ನಂತರ ಅಪ್ಲಿಕೇಶನ್ ಭಾಷೆಯನ್ನು ಆಯ್ಕೆಮಾಡಿ ಮತ್ತು ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ. ಪ್ರಸ್ತುತ ವಾಟ್ಸಾಪ್‌ ಅಪ್ಲಿಕೇಶನ್ ಭಾರತ ದೇಶದ ಹತ್ತು ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮ್ಮ ಭಾಷೆಯ ಆಯ್ಕೆಯು ಇದೆಯಾ ಇಲ್ಲವೇ ಅನ್ನೊದು ಮುಖ್ಯವಾಗುತ್ತದೆ.

Best Mobiles in India

English summary
There’s also a way to share the same WhatsApp Status Update on other popular applications in a few simple steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X