ಯೂಟ್ಯೂಬ್‌ ಚಾನಲ್‌ ರಚಿಸಿ, ಹಣ ಗಳಿಸಿ..!

By Gizbot Bureau
|

ವಿಶ್ವದಾದ್ಯಂತ 1.9 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್, ಜಗತ್ತಿನಲ್ಲಿಯೇ ಅತಿ ಹೆಚ್ಚು ಭೇಟಿ ನೀಡಿದ ಎರಡನೇ ವೆಬ್‌ಸೈಟ್ ಆಗಿದೆ. ದಿನಕ್ಕೆ 1 ಬಿಲಿಯನ್ ಗಂಟೆಗಳ ವಿಡಿಯೋ ಸ್ಟ್ರೀಮಿಂಗ್‌ನ್ನು ಯೂಟ್ಯೂಬ್‌ ದಾಖಲಿಸುತ್ತಿದ್ದು, ನಿಸ್ಸಂದೇಹವಾಗಿ ಈ ದೊಡ್ಡ ಸಂಖ್ಯೆಗಳು ಅನೇಕ ವಿಷಯಗಳ ಅಂಶವಾಗಿವೆ. ಇವುಗಳನ್ನೇ ಸಾಮಾನ್ಯವಾಗಿ 'ವೀವ್ಸ್‌' ಎನ್ನಬಹುದಾಗಿದ್ದು, ಈ ವೀವ್ಸ್‌ಗಳೇ ನೈಜ ಜಗತ್ತಿನ ಹಣವನ್ನು ನಿಮಗೆ ನೀಡುತ್ತವೆ.

ಯೂಟ್ಯೂಬ್‌ ಚಾನಲ್

ನೀವು ಸಹ ಹಣ ಗಳಿಸಲು ಯೋಚಿಸುತ್ತಿದ್ದೀರಾ..? ಅಥವಾ ನಿಮ್ಮಲ್ಲಿರುವ ಸೃಜನಶೀಲತೆಯನ್ನು ಜಗತ್ತಿಗೆ ತೋರಿಸಲು ಯೂಟ್ಯೂಬ್‌ ಚಾನಲ್ ರಚಿಸಲು ಬಯಸಿದ್ದರೆ, ಈ ಕೆಳಗಿನ ಹಂತಗಳು ನಿಮಗೆ ಸೂಕ್ತವಾಗುತ್ತವೆ. ನಿಮ್ಮ ವಿಡಿಯೋ ರಚನೆಯ ಪ್ರಯಾಣವನ್ನು ಯೂಟ್ಯೂಬ್‌ ಚಾನಲ್‌ ಪ್ರಾರಂಭಿಸುವ ಮೂಲಕ ಕಿಕ್‌ಸ್ಟಾರ್ಟ್ ಮಾಡಿ. ಅದಕ್ಕಾಗಿ ಈ ಲೇಖನ ನಿಮಗೆ ಸಲಹೆ ನೀಡುತ್ತದೆ.

ಸುಲಭದ ರಚನೆ

ಸುಲಭದ ರಚನೆ

ನಿಮ್ಮ ಯೂಟ್ಯೂಬ್‌ ಪಯಣ ಆರಂಭಿಸುವುದಕ್ಕೆ ಚಾನಲ್‌ ರಚಿಸಬೇಕು. ಯೂಟ್ಯೂಬ್‌ನಲ್ಲಿ ಚಾನಲ್ ರಚನೆ ಸುಲಭವಾದ ಭಾಗವಾದರೆ, ಕಂಟೆಂಟ್‌ ಮಾನಟೈಜೇಷನ್‌, ಚಂದಾದಾರರ ಮೂಲ ಮತ್ತು ಅದರಿಂದ ಆದಾಯ ಗಳಿಸುವ ಕಥೆಯೇ ಮತ್ತೊಂದು ಭಾಗವಾಗಿದೆ.

ರಚನೆಯ ಕ್ರಮಗಳು

ರಚನೆಯ ಕ್ರಮಗಳು

1. ನಿಮ್ಮ ಚಾನೆಲ್ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಸಾರ್ವಜನಿಕ ಉಪಸ್ಥಿತಿಯನ್ನು ರಚಿಸುತ್ತದೆ. ನೀವು ಈಗಾಗಲೇ ಗೂಗಲ್‌ ಖಾತೆಯನ್ನು ಹೊಂದಿದ್ದರೂ, ಸಬ್‌ಸ್ಕ್ರೈಬರ್‌ ಬೇಸ್‌ ರಚಿಸಲು, ವಿಡಿಯೋ ಅಪ್‌ಲೋಡ್ ಮಾಡಲು ಚಾನಲ್ ರಚಿಸಬೇಕಾಗುತ್ತದೆ. ಮೊದಲು ಯೂಟ್ಯೂಬ್‌ಗೆ ಸೈನ್ ಇನ್ ಮಾಡಿ.

2. ನಂತರ ವಿಡಿಯೋ ಅಪ್‌ಲೋಡ್ ಮಾಡಲು ಅಥವಾ ಪ್ಲೇಲಿಸ್ಟ್ ರಚಿಸಲು ಪ್ರಯತ್ನಿಸಿ.

3. ಆಗ, ನಿಮಗೆ ಯೂಟ್ಯೂಬ್‌ ಚಾನಲ್‌ ರಚಿಸಲು ಪ್ರಾಂಪ್ಟ್ ಒಂದು ಕಾಣುತ್ತದೆ.

4. ಬಳಿಕ. ನಿಮ್ಮ ಗೂಗಲ್‌ ಖಾತೆ ಹೆಸರು ಮತ್ತು ಫೋಟೋದಂತಹ ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ.

5. ನಿಮ್ಮ ಯೂಟ್ಯೂಬ್‌ ಚಾನಲ್ ರಚನೆಯನ್ನು ದೃಢಪಡಿಸಿ.

ಚಾನೆಲ್ ರಚನೆಯಲ್ಲಿ ಈ ವಿಷಯಗಳನ್ನು ಪರಿಗಣಿಸಿ

ಚಾನೆಲ್ ರಚನೆಯಲ್ಲಿ ಈ ವಿಷಯಗಳನ್ನು ಪರಿಗಣಿಸಿ

1. ನಿಮ್ಮ ಚಾನಲ್‌ ಯೂಟ್ಯೂಬ್‌ನಲ್ಲಿ ಪ್ರಸಿದ್ಧಿಯಾಗಲು ಹಲವು ಅಂಶಗಳು ಕಾರಣವಾಗುತ್ತವೆ. ಆಕರ್ಷಕ, ಚಿಕ್ಕ ಹೆಸರಿದ್ದು, ಯೂಟ್ಯೂಬ್‌ ಬಳಕೆದಾರರು ಸುಲಭವಾಗಿ ನೆನಪಿಟ್ಟುಕೊಳ್ಳುವಂತೆ ಇರಬೇಕು.

2. ನಿಮ್ಮ ಚಾನಲ್‌ಗೆ ಯುನಿಕ್‌ ಥಂಬ್‌ನೇಲ್ ರಚಿಸಬೇಕು. ನೀವು ರಚಿಸುವ ಥಂಬ್‌ನೇಲ್ ನಿಮ್ಮ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡುವ ವಿಡಿಯೋಗೆ ಹೊಂದಿಕೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

3. ಉತ್ತಮ ವೀಡಿಯೊ ಎಡಿಟಿಂಗ್‌ ಸಾಫ್ಟ್‌ವೇರ್‌ನಲ್ಲಿ ವಿಡಿಯೋ ಎಡಿಟಿಂಗ್‌ ಗೊತ್ತಿದ್ದರೆ ಒಳಿತು. ಇದರಿಂದ ಉತ್ತಮ ವಿಡಿಯೋಗಳನ್ನು ರಚಿಸಬಹುದು.

ವಿಡಿಯೋ ರಚನೆ ಹಾಗೂ ಅಪ್‌ಲೋಡ್‌ ಕ್ರಮಗಳು

ವಿಡಿಯೋ ರಚನೆ ಹಾಗೂ ಅಪ್‌ಲೋಡ್‌ ಕ್ರಮಗಳು

1. ನೀವು ಯೂಟ್ಯೂಬ್‌ನ್ನು ದೊಡ್ಡದಾಗಿಸಲು ಬಯಸಿದರೆ, ಮೊದಲು ನಿಯಮಿತವಾಗಿ ವಿಡಿಯೋ ಅಪ್‌ಲೋಡ್‌ ಮಾಡಬೇಕು. ಉತ್ತಮ ಚಂದಾದಾರರ ನೆಲೆಯನ್ನು ಕಾಪಾಡಿಕೊಳ್ಳಲು ಉತ್ತಮ ಗುಣಮಟ್ಟದ ವಿಡಿಯೋವನ್ನು ಅಪ್‌ಲೋಡ್‌ ಮಾಡಬೇಕು.

2. ವಿಡಿಯೋ ಅನನ್ಯ ಮತ್ತು ಉತ್ತಮ ಗುಣಮಟ್ಟದ್ದಾಗಿರಬೇಕು.

3. ಉತ್ತಮ ಗುಣಮಟ್ಟದ ಕ್ಯಾಮೆರಾದಿಂದ ವಿಡಿಯೋಗಳನ್ನು ಶೂಟ್ ಮಾಡಿ ಮತ್ತು ವಿಷಯವನ್ನು ಅಪ್‌ಲೋಡ್ ಮಾಡುವ ಮೊದಲು ಅವುಗಳನ್ನು ಸಂಪಾದಿಸಲು ಸ್ವಲ್ಪ ಸಮಯ ನೀಡಿ. ನೀವು ಯೂಟ್ಯೂಬ್‌ನಲ್ಲಿ ಲೈವ್ ವೀಡಿಯೊಗಳನ್ನು ಸಹ ಶೂಟ್ ಮಾಡಬಹುದು, ಇದು ನಿಮ್ಮ ಚಂದಾದಾರರೊಂದಿಗೆ ದ್ವಿಮುಖ ಸಂವಹನವನ್ನು ಸ್ಥಾಪಿಸುವ ಅತ್ಯುತ್ತಮ ಸಾಧನವಾಗಿದೆ. ಆದಾಗ್ಯೂ, ಲೈವ್ ವಿಡಿಯೋ ಮಾಡುವಾಗ ನೀವು ವಿಡಿಯೋ ಗುಣಮಟ್ಟ ಮತ್ತು ಪ್ರಕಾರದ ಬಗ್ಗೆ ಹೆಚ್ಚು ಜಾಗರೂಕತೆವಹಿಸಿ.

4. ನಿಮ್ಮ ಹೆಡ್‌ಲೈನ್‌ ಆಕರ್ಷಕವಾಗಿರಲಿ, ಆದರೆ ದಾರಿತಪ್ಪಿಸುವಂತಿರದಿರಲಿ. ವಿಡಿಯೋಗಳು ನಿಮ್ಮ ವಿಷಯದ ಪ್ರಾಥಮಿಕ ಕೀವರ್ಡ್‌ಗಳೊಂದಿಗೆ ವಿವರಣೆ ಹೊಂದಿರಬೇಕು. ಏಕೆಂದರೆ, ಅದು ಯೂಟ್ಯೂಬ್‌ ಸರ್ಚ್‌ನಲ್ಲಿ ವಿಡಿಯೋಗಳ ವಿಸಿಬಿಲಿಟಿ ಹೆಚ್ಚಿಸುತ್ತದೆ.

5. ಯೂಟ್ಯೂಬ್ ಚಾನೆಲ್‌ನ್ನು ನಡೆಸುವಲ್ಲಿ ಕೀವರ್ಡ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ನೀವು ಅಪ್‌ಲೋಡ್‌ ಮಾಡುವ ವಿಷಯಕ್ಕೆ ಸಂಬಂಧಿಸಿದ ಉತ್ತಮ ಕೀವರ್ಡ್‌ಗಳು ಇಂಟರ್‌ನೆಟ್‌ನಲ್ಲಿ ವಿಸಿಬಿಲಿಟಿಯನ್ನು ಸುಧಾರಿಸುತ್ತವೆ. ಯೂಟ್ಯೂಬ್ ಚಾನೆಲ್ ಸೆಟ್ಟಿಂಗ್‌ಗಳ ‘ಸುಧಾರಿತ' ವಿಭಾಗದಲ್ಲಿ ನೀವು ಕೀವರ್ಡ್‌ಗಳನ್ನು ಸೇರಿಸಬಹುದು.

6. ಜಾಹೀರಾತುದಾರರ ಸ್ನೇಹಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿಮ್ಮ ಥಂಬ್‌ನೇಲ್‌ಗಳು, ವಿವರಣೆಗಳು, ಶೀರ್ಷಿಕೆಗಳು, ಕೀವರ್ಡ್‌ಗಳು ಮತ್ತು ಮೆಟಾಡೇಟಾ ಇರಲಿ.

ಕಂಟೆಂಟ್‌ ಮಾನಟೈಸಿಂಗ್‌

ಕಂಟೆಂಟ್‌ ಮಾನಟೈಸಿಂಗ್‌

ಕಳೆದ 12 ತಿಂಗಳುಗಳಲ್ಲಿ 4,000 ಗಂಟೆಯ ಸಾರ್ವಜನಿಕ ವೀಕ್ಷಣೆಯ ಸಮಯ ಹಾಗೂ 1,000 ಚಂದಾದಾರರನ್ನು ಹೊಂದಿದ್ದರೆ, ನೀವು ಯೂಟ್ಯೂಬ್‌ ಪಾಲುದಾರರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು, ಇದು ಯೂಟ್ಯೂಬ್‌ನ ಸಂಪನ್ಮೂಲಗಳು ಮತ್ತು ವೈಶಿಷ್ಟ್ಯಗಳಿಗೆ ಪ್ರವೇಶ ನೀಡುತ್ತದೆ. ನೀವು ಯೂಟ್ಯೂಬ್‌ ಪಾಲುದಾರರ ಯೋಜನೆಗೆ ಈ ಕೆಳಗಿನ ಹಂತಗಳಲ್ಲಿ ಅರ್ಜಿ ಸಲ್ಲಿಸಿ.

- ನಿಮ್ಮ ಖಾತೆ ಐಕಾನ್ ಮೇಲೆ ಕ್ಲಿಕ್‌ ಮಾಡಿ, ಕ್ರಿಯೇಟರ್ ಸ್ಟುಡಿಯೋ ಆಯ್ಕೆಮಾಡಿ.

- ನಂತರ, ಚಾನಲ್‌ ಆಯ್ಕೆ ಮಾಡಿ, ಸ್ಟೇಟಸ್‌ ಮತ್ತೂ ಫೀಚರ್‌ಗಳನ್ನು ಆಯ್ದುಕೊಳ್ಳಿ.

-"ಮಾನಟೈಜೆಷನ್‌" ಅಡಿಯಲ್ಲಿ, ಸಕ್ರಿಯಗೊಳಿಸಿ ಕ್ಲಿಕ್ ಮಾಡಿ.

- ನಂತರ, ತೆರೆಯ ಮೇಲಿನ ಹಂತಗಳನ್ನು ಅನುಸರಿಸಿ.

ಆಡ್‌ಸೆನ್ಸ್‌ ಖಾತೆ

ಆಡ್‌ಸೆನ್ಸ್‌ ಖಾತೆ

ಕಂಪನಿಯ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುವ ಚಾನಲ್‌ಗಳನ್ನು ಪ್ರೋಗ್ರಾಂನಲ್ಲಿ ಸ್ವೀಕರಿಸಲಾಗುವುದು ಎಂದು ಗೂಗಲ್ ಉಲ್ಲೇಖಿಸುತ್ತದೆ. ಗೂಗಲ್‌ ನಿಮ್ಮ YPP ಅರ್ಜಿ ಸ್ವೀಕರಿಸಿದ ನಂತರ, ವಿಡಿಯೋದಿಂದ ಹಣ ಗಳಿಸಲು ನಿಮಗೆ AdSense ಖಾತೆಯ ಅಗತ್ಯವಿದೆ. ಗೂಗಲ್‌ನ ಮಾರ್ಗಸೂಚಿಗಳ ಪ್ರಕಾರ, ನೀವು ಒಂದೇ ಆಡ್‌ಸೆನ್ಸ್ ಖಾತೆಗೆ ಎಷ್ಟು ಚಾನಲ್‌ಗಳನ್ನು ಬೇಕಾದರೂ ಲಿಂಕ್ ಮಾಡಬಹುದು.

Most Read Articles
Best Mobiles in India

English summary
Find out how you can start a YouTube Channel to earn some really good money as a secondary income.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more