ಕ್ಯಾಂಡಿ ಕ್ರಷ್‌ ರಿಕ್ವೆಸ್ಟ್‌ ಬ್ಲಾಕ್‌ ಹೇಗೆ

By Suneel
|

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪರಿಮಿತವಾಗಿ ಕ್ಯಾಂಡಿ ಕ್ರಷ್ ಗೇಮ್‌ನ ರಿಕ್ವೆಸ್ಟ್‌ ಬರುತ್ತಲೇ ಇವೆ. ಫೇಸ್‌ಬುಕ್‌ ಪೇಜ್‌ ಓಪೆನ್‌ ಮಾಡಿದಾಗ ನಿಮಗೆ ಈ ಗೇಮ್‌ ರಿಕ್ವೆಸ್ಟ್‌ನಿಂದ ಕಿರಿ ಕಿರಿ ತಪ್ಪಿದ್ದಲ್ಲ. ಫೇಸ್‌ಬುಕ್‌ ನಲ್ಲಿನ ಈ ಸಮಸ್ಯೆಯಿಂದ ಬಚಾವಾಗಲು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ಕ್ಯಾಂಡಿ ಕ್ರಷ್‌ ರಿಕ್ವೆಸ್ಟ್‌ ಸ್ಟಾಪ್‌ ಮಾಡುವ ಬಗ್ಗೆ ಮಾಹಿತಿ ತಿಳಿಸುತ್ತಿದೆ.

ಓದಿರಿ: ಅಧಿಕ ಸಂಬಳ ನೀಡುವ ಟೆಕ್‌ ಜಾಬ್‌ಗಳು

ಫೇಸ್‌ಬುಕ್‌ನಲ್ಲಿ ಕ್ಯಾಂಡಿ ಕ್ರಷ್ ಮಾತ್ರವಲ್ಲದೇ ಬಹುಸಂಖ್ಯಾತ ಅಪ್ಲಿಕೇಶನ್‌ಗಳ ನೋಟಿಫೀಕೇಶನ್‌ಗಳು ಬರುತ್ತಲೇ ಇರುತ್ತವೆ. ನೀವು ಅವುಗಳನ್ನು ಪ್ಲೇ ಮಾಡುವ ಮುನ್ನ ನಿಮ್ಮ ಒಪ್ಪಿಗೆ ಕೇಳುತ್ತವೆ. ಆ ಸಂದರ್ಭದಲ್ಲಿ ಮೇಸೇಜ್‌ ಓದದೆ, ಅದರ ಪರಿಣಾಮ ಊಹಿಸದೇ ಒಪ್ಪಿಗೆ ನೀಡಿದರೆ ಅವುಗಳು ನಿಮಗೆ ಅರಿವಿಲ್ಲದಂತೇ ನಿಮ್ಮ ಗೆಳೆಯರಿಗೂ ಆಟೋಮೆಟಿಕಲಿ ನೋಟಿಫಿಕೇಶನ್‌ ಹೋಗುತ್ತದೆ. ಇದರಿಂದ ಡಿಸ್ಟರ್ಬ್‌ ಆದ ನಿಮ್ಮ ಸ್ನೇಹಿತರು ನಿಮ್ಮನ್ನು ಅನ್‌ಫ್ರೆಂಡ್‌ ಮಾಡಬಹುದು. ಈ ಎಲ್ಲಾ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಈ ಲೇಖನದಿಂದ ಕ್ಯಾಂಡಿ ಕ್ರಷ್ ರಿಕ್ವೆಸ್ಟ್‌ ಸ್ಟಾಪ್‌ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಕ್ಯಾಂಡಿ ಕ್ರಷ್ ಗೇಮ್‌ ರಿಕ್ವೆಸ್ಟ್‌ ಸ್ಟಾಪ್‌ ಮಾಡುವ ವಿಧಾನಗಳು

ಕ್ಲಿಕ್‌ ಆನ್‌ ನೋಟಿಫಿಕೇಶನ್‌

ಕ್ಲಿಕ್‌ ಆನ್‌ ನೋಟಿಫಿಕೇಶನ್‌

ಹಲವು ವೇಳೆ ನೀವು ನೋಟಿಫಿಕೇಶನ್‌ ಮೇಲೆ ಕ್ಲಿಕ್ ಮಾಡುವುದೇ ಇಲ್ಲ. ಕೊನೆಯ ಬಾರಿ ಒಮ್ಮೆ ಕ್ಲಿಕ್‌ಮಾಡಿ.

 ಅಪ್ಲಿಕೇಶನ್‌ ಪೇಜ್‌ ಪಡೆಯಿರಿ

ಅಪ್ಲಿಕೇಶನ್‌ ಪೇಜ್‌ ಪಡೆಯಿರಿ

ನೋಟಿಫಿಕೇಶನ್‌ ಮೇಲೆ ಕ್ಲಿಕ್ ಮಾಡಿ ಕ್ಯಾಂಡಿ ಕ್ರಷ್ ಪೇಜ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ "ಪ್ಲೇ" ಎಂಬುದರ ಬದಲಾಗಿ "ಕ್ಯಾನ್ಸೆಲ್‌" ಎಂಬಲ್ಲಿ ಕ್ಲಿಕ್‌ ಮಾಡಿ.

ಬ್ಲಾಕ್‌ ಅಪ್ಲಿಕೇಶನ್‌

ಬ್ಲಾಕ್‌ ಅಪ್ಲಿಕೇಶನ್‌

ಹಿಂದಿನ ಹಂತದಲ್ಲಿ ಕ್ಯಾನ್ಸೆಲ್‌ ಕ್ಲಿಕ್‌ ಮಾಡಿದ ನಂತರ ನೀವು ಕ್ಯಾಂಡಿ ಕ್ರಷ್ ಹೋಮ್ ಪೇಜ್‌ ಪಡೆಯುತ್ತೀರಿ. ಅಲ್ಲಿ ನೀವು ಬ್ಲಾಕ್‌ ಎಂಬಲ್ಲಿ ಕ್ಲಿಕ್‌ ಮಾಡಿ.

ರಿ-ಕನ್ಫರ್ಮ್‌ ಬ್ಲಾಕ್‌ ರಿಕ್ವೆಸ್ಟ್‌

ರಿ-ಕನ್ಫರ್ಮ್‌ ಬ್ಲಾಕ್‌ ರಿಕ್ವೆಸ್ಟ್‌

ಬ್ಲಾಕ್‌ ಬಟನ್‌ ಕ್ಲಿಕ್ ಮಾಡಿದ ನಂತರದಲ್ಲಿ ಬ್ಲಾಕ್‌ ರಿಕ್ವೆಸ್ಟ್‌ ರಿ-ಕನ್ಫರ್ಮ್‌ ಕೇಳುತ್ತದೆ. ಅಲ್ಲಿ ಕನ್ಫರ್ಮ್‌ ಬಟನ್‌ ಕ್ಲಿಕ್‌ ಮಾಡಿ.

ಶುಭಾಷಯಗಳು, ನಿಮ್ಮ ಟಾಸ್ಕ್‌ ಮುಗಿದಿದೆ.

ಶುಭಾಷಯಗಳು, ನಿಮ್ಮ ಟಾಸ್ಕ್‌ ಮುಗಿದಿದೆ.

ಬ್ಲಾಕ್‌ ಕನ್ಫರ್ಮ್‌ ಮಾಡಿದ ಮೇಲೆ ನೀವು ಈ ಚಿತ್ರದಲ್ಲಿರುವಂತೆ ಮೇಸೇಜ್‌ ಪಡೆದರೆ ನಿಮ್ಮ ಕ್ಯಾಂಡಿ ಕ್ರಷ್ ಗೇಮ್‌ ರಿಕ್ವೆಸ್ಟ್‌ ಸಂಪೂರ್ಣವಾಗಿ ಸ್ಟಾಪ್‌ ಆಗಿದೆ ಎಂದರ್ಥ.

ಇತರೆ ಕಿರಿಕರಿ ನೋಟಿಫಿಕೇಶನ್‌ ಬ್ಲಾಕ್‌

ಇತರೆ ಕಿರಿಕರಿ ನೋಟಿಫಿಕೇಶನ್‌ ಬ್ಲಾಕ್‌

ಫೇಸ್‌ಬುಕ್‌ನಲ್ಲಿ ಯಾವುದೇ ಕಿರಿಕಿರಿ ರಿಕ್ವೆಸ್ಟ್‌ ನೋಟಿಫಿಕೇಶನ್‌ಗಳು ಬಂದರೂ ಸಹ ಈ ವಿಧಾನ ಅನುಸರಿಸಿ ಸ್ಟಾಪ್‌ ಮಾಡಬಹುದಾಗಿದೆ.
ಸಾಮಾಜಿಕ ಜಾಲತಾಣದ ಈ ಫೀಚರ್‌ ಅನ್ನು ನಿಮ್ಮ ಸ್ನೇಹಿತರಿಗೂ ತಿಳಿಸಲೂ ಶೇರ್‌ ಮಾಡಿ. ಹೆಚ್ಚಿನ ಮಾಹಿತಿಗಾಗಿ.

Best Mobiles in India

English summary
I know, it’s getting more and more annoyed as day by day we are getting plenty of Candy crush requests and notifications in our Facebook account. We definitely can stop candy crush requests by following simple steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X