ಬೇಡದ ಕರೆ ಹಾಗೂ ಎಸ್‌ಎಂಎಸ್‌ ಬರದಂತೆ ಮಾಡುವುದು ಹೇಗೆ?

Posted By: Staff
ಬೇಡದ ಕರೆ ಹಾಗೂ ಎಸ್‌ಎಂಎಸ್‌ ಬರದಂತೆ ಮಾಡುವುದು ಹೇಗೆ?

ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ನೆನದು ದಿನಕ್ಕೆ ಒಂದು ಬಾರಿ ಕರೆ ಮಾಡುತ್ತಾರೋ ಇಲ್ಲವೂ? ಆದರೆ ಕಂಪನಿಗಳಿಂದಂತೂ ನಿಮಗೆ ದಿನಕ್ಕೆ ಏನಿಲ್ಲಾ ಅಂದರೂ ಮೂರ್ನಾಲ್ಕು ಬಾರಿ ಜಾಹಿರಾತು ಕರೆ ಬಂದೇ ಬರುತ್ತದೆ. ನಿಮ್ಮ ಆಪ್ತರ ಕರೆಯನ್ನು ನೀವು ನೀರೀಕ್ಷಿಸುತ್ತಿರುವ ವೇಳೆಗೆ ಟಕ್‌ ಅಂತ ನಿಮಗೆ ಕರೆಯೊಂದು ಬರುತ್ತದೆ ನೀವೂ ತೀರಾ ಉತ್ಸಾಹಭರಿತರಾಗಿ ಕರೆ ಯಾವ ನಂಬರ್‌ ನಿಂದ ಬಂದಿದೆ ಎಂದು ನೋಡದೇ ತಕ್ಷಣವೇ ರಿಸೀವ್‌ ಮಾಡಿ ಹಲೋ ಎಂದು ಬಿಡುತ್ತೀರಾ ಆದರೆ ಬಂದಿರುವ ಕರೆ ನಿಮ್ಮ ಆಪ್ತರದ್ದಲ್ಲಾ ಕಂಪನಿಯ ಜಾಹಿರಾತು ಕರೆ ಎಂದಾಕ್ಷಣ ನಿಮಗೆ ನಿರಾಸೆಯೊಂದಿಗೆ ಈ ಕಂಪನೀ ಕರೆಗಳ ಮೇಲೆ ಕೆಟ್ಟ ಕೋಪ ಕೂಡಾ ಬರುತ್ತದೆ ಅಲ್ಲವೆ.

ಕಂಪನಿಗಳಿಂದ ಬರುವ ಈ ರೀತಿಯ ಜಾಹಿರಾತು ಕರೆಗಳೀಂದಗಿ ಪ್ರತಿಯೊಬ್ಬರೂ ಕೂಡ ಹಿಂಸೆ ಅನುಭವಿಸಿಯೇ ಇರುತ್ತಾರೆ. ಕೆಲವರಿಗಂತೂ ಜಾಹಿರಾತು ಕರೆ ಬಂತೆಂದರೆ ಕೆಂಡಾ ಮಂಡಲವಾಗಿ ಬಿಡುತ್ತಾರೆ. ಅಂದಹಾಗೆ ಇಂತಹ ಬೇಡದ ಕರೆಗಳು ಹಾಗೂ ಎಸ್‌ಎಂಎಸ್‌ಗಳಿಂದ ಮುಕ್ತಿ ಇಲ್ಲವೇ ಅಂತಾ ಆಲೋಚಿಸುತ್ತಿದ್ದೀರಾ? ಖಂಡಿತವಾಗಿಯೂ ಇದೆ ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಅನ್‌ವಾಂಟೆಡ್‌ ಅಂದರೆ ಬೇಡದ ಜಾಹಿರಾತು ಕರೆಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತಾಗಿ ತಂದಿದೆ ಓದಿ ನೋಡಿ.

ಇಂತಹ ಬೇಡದ ಕರೆಗಳಿಂದ ಮುಕ್ತಿ ಪಡೆಯಲು ಅತ್ಯಂತ ಸುಲಭದ ಮಾರ್ಗವೆಂದರೆ ಡಿಎನ್‌ಡಿ ಅಂದರೆ ಡು ನಾಟ್‌ ಟಿಸ್ಟರ್ಬ್‌. ಈ ಸೇವೆಗೆ ನೀವು ರಿಜಿಸ್ಟಾರ್‌ ಮಾಡಿಕೊಂಡಲ್ಲಿ ನಿಮಗೆ ಯಾವುದೇ ಬೇಡದ ಕರೆ ಹಾಗೂ ಸಂದೇಶಗಳು ಬರುವುದು ಸಂಪೂರ್ಣವಾಗಿ ನಿಂತು ಹೋಗುತ್ತದೆ. ಅಂದಹಾಗೆ ಈ ಡಿಎನ್‌ಡಿ ಅಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ರಿಜಿಸ್ಟಾರ್‌ ಮಾಡಿಕೊಳ್ಳಲು ಈಕೆಳಗೆ ತಿಳಿಸಿರುವಂರೆ ಅನುಸರಿಸಿ.

ಏರ್ಟೆಲ್‌ ಹಾಗೂ ವೋಡಾಫೋನ್‌ ಗ್ರಾಹಕರು ಕಂಪನೀ ಕರೆ ಹಾಗೂ ಎಸ್‌ಎಂಎಸ್‌ ನಿಲ್ಲಿಸ ಬೇಕೆಂದಿದ್ದಲ್ಲಿ START DND ಎಂದು ಟೈಪ್‌ ಮಾಡಿ 1909 ಸಂಖ್ಯೆಗೆ ಸಂದೇಶ ಕಳುಹಿಸಿಬಿಡಿ. ಅಂದಹಾಗೆ ಈ ಸಂದೇಶಕ್ಕೆ ಯಾವುದೇ ಶುಲ್ಕ ಪಡೆಯಲಾಗುವುದಿಲ್ಲ.

ಏರ್ಟೆಲ್‌ ಹಾಗೂ ವೊಡಾಫೋನ್‌ ಗ್ರಾಹಕರು ವೆಬ್‌ಸೈಟ್‌ ಮೂಲಕ ಬೇಡದಕರೆಗಳನ್ನು ನಿಲ್ಲಿಸ ಬೇಕಾಗಿದ್ದಲ್ಲಿ ಡು ನಾಟ್‌ ಡಿಸ್ಟರ್ಬ್‌ ವೆಬ್‌ ಪೇಜ್‌ಗೆ ತೆರಳಿ ಒಂದು ಫಾರಮ್‌ ಫೀಲ್‌ ಮಾಡಬೇಕಾಗುತ್ತದೆ, ಇದರಲ್ಲಿ ನಿಮ್ಮ ಮೇಲ್‌ ಐಡಿ ಹಾಗೂ ಇ-ಮೇಲ್‌ ವಿಳಾಸ ನೀಡ ಬೇಕಾಗುತ್ತದೆ.

Please Wait while comments are loading...
Opinion Poll

Social Counting