ಜಿಯೋ ಸಂಖ್ಯೆಯನ್ನು ಪ್ರೀಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಿಸುವುದು ಹೇಗೆ?

|

ರಿಲಯನ್ಸ್ ಜಿಯೋ ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯು ಆಕರ್ಷಕ ಯೋಜನೆಗಳ ಮೂಲಕ ಕಡಿಮೆ ಸಮಯದಲ್ಲಿಯೇ ದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದಿದೆ. ಜಿಯೋ ಟೆಲಿಕಾಂ ಪ್ರೀಪೇಯ್ಡ್‌ ಜೊತೆಗೆ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಯನ್ನು ಹೊಂದಿದ್ದು, ಅವುಗಳ ಆಕರ್ಷಕ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿವೆ. ಕೆಲವು ಬಳಕೆದಾರರು ಪ್ರೀಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಗಬಯಸುತ್ತಾರೆ.

ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಪ್ರೀಪೇಯ್ಡ್‌ನಂತೆ ಆಕರ್ಷಕ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡಿದ್ದು, ಅವುಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಹಾಗೂ ಇತರೆ ಆಪ್ಸ್‌ ಸೇವೆ ಸೌಲಭ್ಯ ಪಡೆದಿವೆ. ಹಾಗೆಯೇ ಕಂಪನಿಯ ಪೋಸ್ಟ್‌ಪೇಯ್ಡ್ ಯೋಜನೆಗಳು ಭಿನ್ನ ಪ್ರೈಸ್‌ ಟ್ಯಾಗ್‌ನ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ಯೋಜನೆಗಳು ಡೇಟಾ ರೋಲ್‌ಓವರ್ ಸೌಲಭ್ಯವನ್ನು ಹೊಂದಿವೆ. ಇನ್ನು ಕೆಲವು ಯೋಜನೆಗಳು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನ ಪೂರಕ ಚಂದಾದಾರಿಕೆ ಸೌಲಭ್ಯ ಸಹ ಪಡೆದಿವೆ. ಹಾಗಾದರೇ ಪ್ರೀಪೇಯ್ಡ್‌ ಜೊತೆಗೆ ಪೋಸ್ಟ್‌ಪೇಯ್ಡ್ ಬದಲಾಗುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸುವುದು ಹೇಗೆ

ಜಿಯೋ ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸುವುದು ಹೇಗೆ

ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ರಿಲಯನ್ಸ್ ಜಿಯೋದಿಂದ ಲಭ್ಯವಿರುವ ಎಲ್ಲಾ ಯೋಜನೆಗಳ ಕುರಿತು ನಿಮ್ಮ ಪೋಸ್ಟ್‌ಪೇಯ್ಡ್ ಪೋರ್ಟ್ಫೋಲಿಯೊದಲ್ಲಿ ನಿಮ್ಮ ಸಂಶೋಧನೆ ಮಾಡುವುದು ಮುಖ್ಯ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು ತಿಂಗಳಿಗೆ 199ರೂ ನಿಂದ 1,499ರೂ. ಆಗಿವೆ. ಪ್ರಿಪೇಯ್ಡ್ ಬಳಕೆದಾರರು ಮೊದಲೇ ರೀಚಾರ್ಜ್ ಮಾಡಬೇಕಾದರೆ, ಪೋಸ್ಟ್‌ಪೇಯ್ಡ್ ಬಳಕೆದಾರರು ಪ್ರತಿ ತಿಂಗಳ ಅಂತ್ಯದ ನಂತರ ಬಿಲ್ ಪಡೆಯುತ್ತಾರೆ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ಗೆ ಬದಲಾಯಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಜಿಯೋ ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಲು ಈ ಕ್ರಮ ಅನುಸರಿಸಿ:

ಜಿಯೋ ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಲು ಈ ಕ್ರಮ ಅನುಸರಿಸಿ:

* ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ವೆಬ್‌ಸೈಟ್‌ಗೆ ಹೋಗಿ. ನಿಮ್ಮ ಹೆಸರು ಮತ್ತು ನೋಂದಾಯಿತ ಜಿಯೋ ಪ್ರಿಪೇಯ್ಡ್ ಸಂಖ್ಯೆಯನ್ನು ನಮೂದಿಸಿ.
* ಜನರೇಟ್ ಒಟಿಪಿ ಕ್ಲಿಕ್ ಮಾಡಿ. ನಿಮ್ಮ ಫೋನ್‌ನಲ್ಲಿ ನಿಮಗೆ ಕಳುಹಿಸಲಾದ ಒಟಿಪಿ ನಮೂದಿಸಿ.
* ನಿಮ್ಮ ಹೊಸ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಸಿಮ್ ವಿತರಣಾ ವಿಳಾಸವನ್ನು ನಮೂದಿಸಿ. Submit New Jio SIM Request ಕ್ಲಿಕ್ ಮಾಡಿ.

ದಾಖಲೆಗಳಲ್ಲಿ

* ಜಿಯೋ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ 3-4 ದಿನಗಳಲ್ಲಿ ವಿತರಿಸುತ್ತಾನೆ. ಪ್ರೂಫ್ ಆಫ್ ಐಡೆಂಟಿಟಿ (POI) ಮತ್ತು ಪ್ರೂಫ್ ಆಫ್ ಅಡ್ರೆಸ್ (POA) ನಂತಹ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅವರು ಮನೆಯಲ್ಲಿಯೇ ಕೆವೈಸಿಯಲ್ಲಿ ನಡೆಸಲಿದ್ದಾರೆ. ಸ್ವೀಕಾರಾರ್ಹ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ಸೇರಿವೆ.
* ಜಿಯೋ ಎಕ್ಸಿಕ್ಯೂಟಿವ್ ನಿಮ್ಮ ಹೊಸ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಸಿಮ್ ಅನ್ನು ತಲುಪಿಸುತ್ತಾನೆ. ಅದನ್ನು ಸುಮಾರು 24 ಗಂಟೆಗಳಲ್ಲಿ ಸಕ್ರಿಯಗೊಳಿಸಬೇಕು. ಜಿಯೋ ಭದ್ರತಾ ಠೇವಣಿ 250ರೂ. ಮತ್ತು ಜಿಯೋಪ್ರೈಮ್‌ಗೆ 99ರೂ. ಆಗಿದೆ.
* ಬಳಕೆದಾರರು ಪರ್ಯಾಯವಾಗಿ ಹತ್ತಿರದ ಜಿಯೋ ಅಂಗಡಿಗೆ ಭೇಟಿ ನೀಡಬಹುದು, migration ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಹೊಸ ಪೋಸ್ಟ್‌ಪೇಯ್ಡ್ ಸಿಮ್ ಪಡೆಯಲು ಕೆವೈಸಿ ದಾಖಲೆಗಳನ್ನು ಸಲ್ಲಿಸಬಹುದು.

Best Mobiles in India

English summary
How to Switch From Jio Prepaid to Postpaid.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X