ಫೇಸ್‌ಬುಕ್‌ನಲ್ಲಿ ಆಟೊ ಪ್ಲೇ ವಿಡಿಯೊ ಮೋಡ್ ಆಫ್ ಹೇಗೆ?
ಸಾಮಾಜಿಕ ತಾಣವಾದ ಫೇಸ್‌ಬುಕ್ ನಿತ್ಯವೂ ಒಂದಿಲ್ಲೊಂದು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಈ ಬದಲಾವಣೆಗಳು ಆಸಕ್ತಿಕರ ಮತ್ತು ಉಪಯುಕ್ತ ಎಂದೆನಿಸಲಿವೆ. ಅಂತಹುದೇ ವಿಶೇಷ ಫೀಚರ್ ಆಗಿದೆ ಫೇಸ್‌ಬುಕ್ ಅಟೊಮ್ಯಾಟಿಕ್ ವೀಡಿಯೊ ಪ್ಲೇಬ್ಯಾಕ್. ನಿಮ್ಮ ತಾಣದಲ್ಲಿರುವ ವೀಡಿಯೊಗಳು ಸ್ವಯಂಚಾಲಿತವಾಗಿ ಆನ್ ಆಗುವುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.
ಆದರೆ ಈ ಹೊಸ ಫೀಚರ್ ಕೆಲವೊಮ್ಮೆ ಕಿರಿಕಿರಿಯನ್ನುಂಟು ಮಾಡುವುದು ನಿಜವಲ್ಲವೇ? ಫೇಸ್‌ಬುಕ್ ಪುಟ ತೆರೆದೊಡನೇ ಈ ವೀಡಿಯೊಗಳು ಚಾಲನೆಗೊಳ್ಳಲು ಆರಂಭಗೊಳ್ಳುತ್ತವೆ. ಸ್ಮಾರ್ಟ್‌ಫೋನ್ ಟ್ಯಾಬ್ಲೆಟ್‌ಗಳಲ್ಲಿ ಈ ಫೀಚರ್ ನಿಮ್ಮ ಇಂಟರ್ನೆಟ್‌ಗೆ ಕತ್ತರಿ ಹಾಕುವುದು ಖಂಡಿತ. ತನ್ನಷ್ಟಕ್ಕೆ ವೀಡಿಯೊ ಚಾಲನೆಯಾಗುತ್ತಿದೆ ಎಂದಾದಲ್ಲಿ ಇಂಟರ್ನೆಟ್ ವೇಗವಾಗಿ ಖಾಲಿಯಾಗಿಬಿಡುವ ಸಾಧ್ಯತೆ ಕೂಡ ಇರುತ್ತದೆ.
ಹಾಗಿದ್ದರೆ ಇದನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ.

#1
ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗಿನ್ ಮಾಡಿ, ಬಲ ಮೇಲ್ಭಾಗದಲ್ಲಿರುವ ಕೆಳಮುಖ ಬಾಣದ ಗುರುತಿಗೆ ಹೋಗಿ ಇಲ್ಲಿ ಡ್ರಾಪ್ ಡೌನ್ ಮೆನು ದೊರೆಯುತ್ತದೆ. ಇದೀಗ ಸೆಟ್ಟಿಂಗ್ಸ್ ಆಪ್ಶನ್ ಕ್ಲಿಕ್ ಮಾಡಿ

#2
ಎಡಭಾಗದಲ್ಲಿರುವ ವೀಡಿಯೊಗಳು ಭಾಗಕ್ಕೆ ಹೋಗಿ. ಇದೀಗ ನೀವು ಆಟೊ ಪ್ಲೇ ವೀಡಿಯೊಗಳನ್ನು ಆಫ್ ಮಾಡಬಹುದಾಗಿದೆ.

#3
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಆಟೊ ಪ್ಲೇ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ಈ ಮೂರು ಆಯ್ಕೆಗಳನ್ನು ಆರಿಸಿಕೊಳ್ಳಬಹುದು - ಆನ್, ವೈಫೈ ಮಾತ್ರ ಅಥವಾ ಆಫ್

#4
ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿ
ಫೋನ್‌ನ ಮೆನು ಬಟನ್‌ಗೆ ಹೋಗಿ ಅದನ್ನು ದೀರ್ಘವಾಗಿ ಒತ್ತಿರಿ ಮತ್ತು ಫೇಸ್‌ಬುಕ್‌ಗಾಗಿ ಸೆಟ್ಟಿಂಗ್ಸ್ ಆಯ್ಕೆಯನ್ನು ಪಡೆದುಕೊಳ್ಳಿ

#5
ಸೆಟ್ಟಿಂಗ್ಸ್ ಮೆನುವಿನಲ್ಲಿ, ವೀಡಿಯೊ ಆಟೊ ಪ್ಲೇ ಆಯ್ಕೆಮಾಡಿ ಆಟೊ ವೀಡಿಯೊ ಪ್ಲೇ ಸೆಟ್ಟಿಂಗ್‌ಗಳನ್ನು ನಿಮಗೆ ಬದಲಾಯಿಸಬಹುದಾಗಿದೆ

#6
ಸೆಟ್ಟಿಂಗ್ಸ್‌ಗೆ ಹೋಗಿ

#7
ಸ್ಕ್ರಾಲ್ ಡೌನ್ ಮಾಡಿ ಮತ್ತು ಫೇಸ್‌ಬುಕ್ ಆಯ್ಕೆಮಾಡಿ

#8
ಸೆಟ್ಟಿಂಗ್ಸ್ ಮೆನುವಿಗೆ ಹೋಗಿ, ವೀಡಿಯೊ ಅಡಿಯಲ್ಲಿ ವೀಡಿಯೊ ಆರಿಸಿ, ಆಟೊ ಪ್ಲೇ ಆಯ್ಕೆಮಾಡಿ



Click it and Unblock the Notifications








