ಗೂಗಲ್‌ ಪೇ ಆಪ್‌ನಲ್ಲಿ ಇನ್ಮುಂದೆ FD ಇಡಬಹುದು; ಬಡ್ಡಿ ದರ ಎಷ್ಟು ಗೊತ್ತಾ?

|

ಗೂಗಲ್ ಪೇ ಯುಪಿಐ ಪೇಮೆಂಟ್‌ ಆಪ್ ಸದ್ಯ ಲೀಡಿಂಗ್‌ನಲ್ಲಿರುವ ಯುಪಿಐ ಪೇಮೆಂಟ್‌ ಆಪ್‌ಗಳಲ್ಲಿ ಒಂದಾಗಿದೆ. ಮೊಬೈಲ್‌ ರೀಚಾರ್ಜ್‌, ವಾಟರ್‌ ಬಿಲ್, ವಿದ್ಯುತ್ ಬಿಲ್, ಇನ್ಶುರೆನ್ಸ ಪ್ರೀಮಿಯಂ, ಡಿಟಿಎಚ್‌ ರೀಚಾರ್ಜ್‌ ಸೇರಿದಂತೆ ಹಲವು ಹಣಕಾಸಿನ ವ್ಯವಹಾರಗಳನ್ನು ನಡೆಸುವ ಆಯ್ಕೆಗಳನ್ನು ಗೂಗಲ್‌ ಪೇ ಬಳಕೆದಾರರಿಗೆ ಒದಗಿಸಿದೆ. ಅಲ್ಲದೇ ಗೂಗಲ್‌ ಪೇ ಆಪ್‌ ಬಳಕೆದಾರರಿಗೆ ಡಿಜಿಟಲ್ ಗೋಲ್ಡ್‌ ಖರೀದಿ ಹಾಗೂ ಮಾರಾಟಕ್ಕೂ ಅವಕಾಶ ಮಾಡಿಕೊಟ್ಟಿದೆ. ಇದೀಗ ಮತ್ತೊಂದು ಅನುಕೂಲಕರ ಸೇವೆಯನ್ನು ಪರಿಚಯಿಸಿದೆ.

ನೆರವಾಗುವ

ಹೌದು, ಗೂಗಲ್‌ ಪೇ ಆಪ್‌ ಇದೀಗ ನೈತನವಾಗಿ ಫಿಕ್ಸಡ್ ಡೆಪಾಸಿಟ್ ಮಾಡುವ (Fixed Deposits ಅಥವಾ FDs) ಆಯ್ಕೆಯನ್ನು ಪರಿಚಯಿಸಿದೆ. ಬಳಕೆದಾರರಿಗೆ ಎಫ್‌ಡಿ ಮಾಡಲು ನೆರವಾಗುವ ನಿಟ್ಟಿನಲ್ಲಿ ಗೂಗಲ್‌ ಪೇ ಆಪ್‌ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ. ಬಳಕೆದಾರರು ಕೆಲವೇ ಕೆಲವು ಸರಳ ಪ್ರಕ್ರಿಯೇ ಅನುಸರಿಸುವ ಮೂಲಕ ಎಫ್‌ಡಿ ಮಾಡಬಹುದಾಗಿದೆ. ಆಂಡ್ರಾಯ್ಡ್‌ ಬಳಕೆದಾರರಿಗೆ ಈ ಸೇವೆ ಲಭ್ಯ ಇದೆ. ಹಾಗಾದರೇ ಗೂಗಲ್‌ ಪೇ ಆಪ್‌ನಲ್ಲಿ ಬಳಕೆದಾರು ಎಫ್‌ಡಿ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೀಣ ಬನ್ನಿರಿ.

ಬಳಕೆದಾರರು ಗೂಗಲ್‌ ಪೇನಲ್ಲಿ FD ಮಾಡಲು ಈ ಕ್ರಮ ಅನುಸರಿಸಬೇಕಿದೆ:

ಬಳಕೆದಾರರು ಗೂಗಲ್‌ ಪೇನಲ್ಲಿ FD ಮಾಡಲು ಈ ಕ್ರಮ ಅನುಸರಿಸಬೇಕಿದೆ:

ಹಂತ 1: ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಪೇ ಆಪ್‌ ತೆರೆಯಿರಿ.
ಹಂತ 2: ಬ್ಯುಸಿನೆಸ್‌ ಮತ್ತು ಬಿಲ್‌ಗಳ ವಿಭಾಗದಲ್ಲಿ, ಇಕ್ವಿಟಾಸ್ SFB ಲೋಗೋವನ್ನು ಸರ್ಚ್‌ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3: ಎಫ್‌ಡಿ ಮೊತ್ತವನ್ನು ನಮೂದು ಮಾಡಿ ಮತ್ತು FD ಗಾಗಿ ಕಾಲಮಿತಿಯನ್ನು ಆಯ್ಕೆ ಮಾಡಿ.
ಹಂತ 4: ಅಗತ್ಯವಿರುವ ವೈಯಕ್ತಿಕ ಮತ್ತು ಕೆವೈಸಿ ವಿವರಗಳನ್ನು ನಮೂದಿಸಿ.
ಹಂತ 5: ಗೂಗಲ್‌ ಪೇ UPI ಮೂಲಕ ಎಫ್‌ಡಿ ಹಣ ಪಾವತಿ ಪ್ರಕ್ರಿಯೇಯನ್ನು ಪೂರ್ಣಗೊಳಿಸಿ.

FD ಬಡ್ಡಿ ದರ ಎಷ್ಟು?

FD ಬಡ್ಡಿ ದರ ಎಷ್ಟು?

ಪ್ರಸ್ತುತ, ಬ್ಯಾಂಕ್ ವಾರ್ಷಿಕ ಅವಧಿಯ ಎಫ್‌ಡಿ ಮೇಲೆ 6.35% ಬಡ್ಡಿ ದರಗಳನ್ನು ನೀಡುತ್ತಿದೆ. ಯುಪಿಐ ಐಡಿ ಇರುವ ಬಳಕೆದಾರರ ಮೂಲಕವೇ ವಹಿವಾಟು ನಡೆಯುವುದರಿಂದ ಸ್ಥಿರ ಠೇವಣಿಗಾಗಿ, ಬಳಕೆದಾರರು ಈಕ್ವಿಟಾಸ್ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿಲ್ಲ.

ಟ್ರಾಕ್ ಮಾಡಬಹುದು

ಟ್ರಾಕ್ ಮಾಡಬಹುದು

ಬಳಕೆದಾರರು ಎಫ್‌ಡಿ ಮಾಡಿದ ನಂತರ ಗೂಗಲ್‌ ಪೇ ಆಪ್‌ ಮೂಲಕ ಬಳಕೆದಾರರು ಎಫ್‌ಡಿಯನ್ನು ಗಮನಿಸಬಹುದು. ಅಲ್ಲದೇ ಹೊಸ ಠೇವಣಿಗಳನ್ನು ಮಾಡಬಹುದಾಗಿದೆ. ಹಾಗೆಯೇ ಎಫ್‌ಡಿಯ ಅವಧಿಯ ನಡುವೆ ಬೇಕಿದ್ದರೂ ಅಗತ್ಯ ಇದ್ದಾಗ ಎಫ್‌ಡಿ ಹಣ ಹಿಂಪಡೆಯಬಹುದಾಗಿದೆ.

ಗೂಗಲ್‌ ಪೇ ಆಪ್‌ನಲ್ಲಿ ಗೋಲ್ಡ್‌ ಖರೀದಿಸುವುದು ಹೇಗೆ?

ಗೂಗಲ್‌ ಪೇ ಆಪ್‌ನಲ್ಲಿ ಗೋಲ್ಡ್‌ ಖರೀದಿಸುವುದು ಹೇಗೆ?

* ಮೊದಲು ನಿಮ್ಮ ಫೋನಿನಲ್ಲಿ ಗೂಗಲ್‌ ಪೇ ಆಪ್ ತೆರೆಯಿರಿ
* ನಂತರ NEW ಆಯ್ಕೆ ಮೇಲೆ ಕ್ಲಿಕ್ ಮಾಡಿರಿ.
* ಸರ್ಚ್‌ ಬಾರ್‌ನಲ್ಲಿ, Gold Locker ಅನ್ನು ನಮೂದಿಸಿ. ನಂತರ, ಆ ಗೋಲ್ಡ್ ಲಾಕರ್ ಅನ್ನು ಟ್ಯಾಪ್ ಮಾಡಿ.
* ತದ ನಂತರ Buy ಆಯ್ಕೆ ಮೇಲೆ ಟ್ಯಾಪ್ ಮಾಡಿ. ಆಗ ಪ್ರಸ್ತುತ ಮಾರುಕಟ್ಟೆಯಲ್ಲಿ ಗೋಲ್ಡ್‌ ಖರೀದಿ ಬೆಲೆ (ತೆರಿಗೆ ಸೇರಿದಂತೆ) ಕಾಣಿಸಿಕೊಳ್ಳುತ್ತದೆ. (ಬಳಕೆದಾರರು ಖರೀದಿ ಪ್ರಾರಂಭಿಸಿದ ನಂತರ ಈ ಬೆಲೆಯು 5 ನಿಮಿಷಗಳವರೆಗೆ ಲಾಕ್ ಆಗಿರುತ್ತದೆ)

ಕ್ಲಿಕ್

* ನೀವು ಖರೀದಿಸಲು ಮಾಡಲು ಬಯಸುವ ಗೋಲ್ಡ್‌ ಮೊತ್ತವನ್ನು ರೂಪಾಯಿಗಳಲ್ಲಿ ನಮೂದಿಸಿ.
* ಚೆಕ್‌ಮಾರ್ಕ್ ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ.
* ಕಾಣಿಸುವ ವಿಂಡೋದಲ್ಲಿ ಪೇಮೆಂಟ್‌ ವಿಧಾನವನ್ನು ಆಯ್ಕೆ ಮಾಡಿ.
* ಪೇಮೆಂಟ್ ಮಾಡಲು ಮುಂದುವರಿಯಿರಿ ಆಯ್ಕೆ ಅನ್ನು ಟ್ಯಾಪ್ ಮಾಡಿ.
* ವಹಿವಾಟು ದೃಢಪಟ್ಟ ನಂತರ, ಗೋಲ್ಡ್‌ ನಿಮ್ಮ ಲಾಕರ್‌ನಲ್ಲಿ ಕೆಲವು ನಿಮಿಷಗಳಲ್ಲಿ ಕಾಣಿಸುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು:

ಗಮನಿಸಬೇಕಾದ ಪ್ರಮುಖ ಅಂಶಗಳು:

* ಗೂಗಲ್‌ ಪೇ ಆಪ್‌ನಲ್ಲಿ ಗೋಲ್ಡ್‌ ಖರೀದಿಸಲು ಯಾವುದೇ ಮಿತಿಯಿಲ್ಲ. ಆದಾಗ್ಯೂ, ಒಂದು ದಿನದಲ್ಲಿ ಬಳಕೆದಾರರು ಗೋಲ್ಡ್‌ ಖರೀದಿಸಲು 50,000ರೂ.ಗಳ ಮಿತಿಯಿದೆ ಎಂದು ಎನ್ನಲಾಗಿದೆ.
* ಖರೀದಿಸಿದ ಅಥವಾ ಸ್ವೀಕರಿಸಿದ ಗೋಲ್ಡ್‌ ಆಪ್‌ನ ಗೋಲ್ಡ್ ಲಾಕರ್‌ನಲ್ಲಿ ಕಾಣಿಸುತ್ತದೆ.
* ಬಳಕೆದಾರರು ಗೋಲ್ಡ್‌ ಲಾಕರ್‌ನಿಂದ ಎಲ್ಲಾ ವಹಿವಾಟುಗಳನ್ನು ವೀಕ್ಷಿಸಬಹುದು.
* ಖರೀದಿಸಿದ ಗೋಲ್ಡ್‌ ಅನ್ನು ಬಳಕೆದಾರರು MMTC-PAMP ಗೆ ಮರಳಿ ಮಾರಾಟ ಮಾಡಬಹುದು.

Best Mobiles in India

English summary
How To Take Google Pay Digital FD: Interest Rates And More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X