Subscribe to Gizbot

ಹೊಸ ಫೋನ್ ಅನ್ನು ಮಗುವಿನಂತೆ ಜೋಪಾನ ಮಾಡಿ

Written By:

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಿ ಹಾಗಿದ್ದಾಗ ಅದನ್ನು ಜಾಗರೂಕರಾಗಿ ಕಾಪಾಡಿಕೊಳ್ಳುವುದೂ ನಿಮ್ಮ ಕರ್ತವ್ಯವಾಗಿದೆ. ಫೋನ್ ಖರೀದಿಸಿ ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ನಂತರ ಉಂಟಾಗುವ ಹಾನಿಯನ್ನು ನೆನೆದು ತಲೆಬಿಸಿ ಮಾಡದಿರಿ. ಹಾಗಿದ್ದರೆ ನಿಮ್ಮ ಹೊಸ ಫೋನ್‌ನ ಸಂರಕ್ಷಣೆಯನ್ನು ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಇಂದಿಲ್ಲಿ ನಾವು ತಿಳಿಸುತ್ತಿದ್ದೇವೆ.

ಓದಿರಿ: ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ

ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಫೋನ್ ಅನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗೆಗಿನ ಸಲಹೆಗಳನ್ನು ನೀಡುತ್ತಿದ್ದು ಇಲ್ಲಿದೆ ಆ ಮಾಹಿತಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಹಕಾರಿ

#1

ನೀವು ಖರೀದಿ ಮಾಡುತ್ತಿರುವ ಫೋನ್ ನಿಮಗೆ ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಮೊದಲು ಕಂಡುಕೊಳ್ಳಿ. ನೀವು ಖರೀದಿ ಮಾಡುತ್ತಿರುವ ಡಿವೈಸ್ ಅದರ ಬ್ರ್ಯಾಂಡ್ ನಿಮಗೆ ಇಷ್ಟವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ನು ಇದರ ವಿನ್ಯಾಸ ಮತ್ತು ಫೀಚರ್‌ಗೆ ಕೂಡ ಪ್ರಾಮುಖ್ಯ ನೀಡಿ.

ಕೇಸ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ಖರೀದಿ

#2

ಖರೀದಿ ಫೋನ್‌ಗೆ ಯಾವುದೇ ಕಲೆ ಅಥವಾ ಗೀರು ಆಗದಂತೆ ಸೂಕ್ತ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸ್ಕ್ರೀನ್ ಪ್ರೊಟೆಕ್ಟರ್ ಮತ್ತು ಕೇಸ್ ಖರೀದಿಸಿ.

ಸುರಕ್ಷಿತ ಸ್ಥಳ

#3

ನೀವು ಫೋನ್ ಅನ್ನು ಇರಿಸುವಂತಹ ಸ್ಥಳ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಡೆಸ್ಕ್, ಬುಕ್‌ ಶೆಲ್ಫ್, ಕ್ಯಾಬಿನೆಟ್ ಉತ್ತಮ ಸ್ಥಳಗಳಾಗಿವೆ.

ನೀರಿನ ಬಳಿ ಫೋನ್ ತೆಗೆದುಕೊಂಡು ಹೋಗದಿರಿ

#4

ಹೊರಗಡೆ ಮಳೆ ಬರುತ್ತಿದೆ ಎಂದಾದಲ್ಲಿ ಅದನ್ನು ಹೊರಕ್ಕೆ ತೆಗೆದುಕೊಂಡು ಹೋಗಬೇಡಿ. ಫೋನ್ ಸಮೀಪ ಕುಡಿಯುವುದು ತಿನ್ನುವುದನ್ನು ಮಾಡಬೇಡಿ. ಅಂತೆಯೇ ನೀರಿನ ಬಳಿ ಅದನ್ನು ತೆಗೆದುಕೊಂಡು ಹೋಗದಿರಿ.

ಸ್ವಚ್ಛ ಮಾಡಿ

#5

ಡ್ರೈ ಟಿಶ್ಯೂ ಪೇಪರ್ ಅಥವಾ ಆಲ್ಕೊಹಾಲ್ ವೈಪ್ಸ್ ಬಳಸಿ ನಿಯಮಿತವಾಗಿ ಫೋನ್ ಸ್ಕ್ರೀನ್ ಅನ್ನು ಸ್ವಚ್ಛ ಮಾಡಿ. ನೀರು, ಬೇಬಿ ವೈಪ್ಸ್, ಅಥವಾ ಇತರ ಕ್ಲೀನರ್‌ಗಳನ್ನು ಫೋನ್ ಸ್ವಚ್ಛಮಾಡಲು ಬಳಸಬೇಡಿ.

40 ರಿಂದ 80 ಶೇಕಡಾ ಚಾರ್ಜ್

#6

ಕೆಲವೊಂದು ಫೋನ್‌ಗಳು ವಾರಗಟ್ಟಲೆ ಚಾರ್ಜ್ ಅನ್ನು ಉಳಿಸಿಕೊಂಡರೆ ಇನ್ನು ಕೆಲವು ದಿನವೊಂದಕ್ಕೆ ತನ್ನ ಚಾರ್ಜ್ ಅನ್ನು ಕಳೆದುಕೊಳ್ಳುತ್ತದೆ. ಬ್ಯಾಟರಿ ದೀರ್ಘತೆಗಾಗಿ ಯಾವಾಗಲೂ ಫೋನ್ ಚಾರ್ಜ್ 40 ರಿಂದ 80 ಶೇಕಡಾದವರೆಗೆ ಇರುವಂತೆ ನೋಡಿಕೊಳ್ಳಿ.

ವೈಬ್ರೇಟ್ ಆಫ್

#7

ನೀವು ಕ್ಲಾಸ್ ರೂಮ್‌ನಲ್ಲಿದ್ದರೆ ಅಥವಾ ಯಾವುದೇ ಸಮಾರಂಭಗಳಲ್ಲಿ ಇದ್ದಲ್ಲಿ ಫೋನ್ ರಿಂಗರ್ ಅನ್ನು ಆಫ್ ಮಾಡಿಟ್ಟುಕೊಳ್ಳಿ. ರಿಂಗರ್ ಅನ್ನು ವೈಬ್ರೇಟ್ ಆಫ್ ಆಗಿರುವಂತೆ ನೋಡಿಕೊಳ್ಳಿ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್ ಬಗೆಗಿನ ಜನಪ್ರಿಯ ವದಂತಿಗಳು
ಹ್ಯಾಕಿಂಗ್‌ನಿಂದ ಸ್ಮಾರ್ಟ್‌ಫೋನ್ ಸಂರಕ್ಷಣೆ ಹೇಗೆ?
ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you some tips on how to take proper care of your new smartphone. These tips are considered as more important to take care of your device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot