ಒಂದೇ ಕ್ಲಿಕ್‌ನಿಂದ ಪೂರ್ಣ ವೆಬ್‌ಪೇಜ್‌ ಸ್ಕ್ರೀನ್‌ಶಾಟ್ ಪಡೆಯುವುದು ಹೇಗೆ?

By Suneel
|

ಟೆಕ್‌ ಪ್ರಿಯರು ಯಾವಾಗಲು ಹೊಸ ಹೊಸ ಟೆಕ್‌ ಸಲಹೆಗಳನ್ನು ಸರ್ಚ್ ಮಾಡುತ್ತಿರುತ್ತಾರೆ. ಅಗತ್ಯ ಯಾವಾಗಲೇ ಇದ್ದರೂ ಸಹ ಟೆಕ್‌ ಶಾರ್ಟ್‌ಕಟ್‌ ಮಾಹಿತಿಗಳನ್ನು ಅರಿತಿರಬೇಕು.

ಕೆಲವೊಮ್ಮೆ ಸಂಪೂರ್ಣ ವೆಬ್‌ಪೇಜ್‌ ಅನ್ನು ಸ್ಕ್ರೀನ್‌ಶಾಟ್‌ ಪಡೆಯಬೇಕಿರುತ್ತದೆ. ವೆಬ್‌ಪೇಜ್‌ ಸ್ಕ್ರೀನ್‌ಶಾಟ್‌ ಪಡೆಯುವುದು ಸುಲಭವಾಗಿರಬಹುದು. ಆದರೆ ಸಂಪೂರ್ಣ ವೆಬ್‌ಪೇಜ್‌ ಸ್ಕ್ರೀನ್‌ಶಾಟ್‌ ಪಡೆಯುವುದು ಬಹುಸಂಖ್ಯಾತರಿಗೆ ತಿಳಿಯದ ವಿಷಯ. ಸಂಪೂರ್ಣ ವೆಬ್‌ಪೇಜ್‌ ಸ್ಕ್ರೀನ್‌ಶಾಟ್‌ ಪಡೆಯುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿನ ಮಾಹಿತಿ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ಹಂತ 1

ಹಂತ 1

ಮೊದಲಿಗೆ ನಿಮ್ಮ ಬ್ರೌಸರ್‌ಗೆ 'Full Web Page Screenshot' ವಿಸ್ತರಣೆಯನ್ನು ಆಡ್‌ ಮಾಡಬೇಕು. 'Full Web Page Screenshot' ವಿಸ್ತರಣೆ ಮೊಜಿಲ್ಲಾ ಫೈಯರ್‌ಫಾಕ್ಸ್‌ ಮತ್ತು ಗೂಗಲ್‌ ಕ್ರೋಮ್‌ ಎರಡಕ್ಕೂ ಲಭ್ಯವಿದೆ.

ಹಂತ 2

ಹಂತ 2

ಪೇಜ್‌ಗೆ ಭೇಟಿ ನೀಡಿ ನಿಮ್ಮ ಬ್ರೌಸರ್‌ಗೆ ಕೆಲವೇ ಸೆಕೆಂಡ್‌ಗಳಲ್ಲಿ 'Full Web Page Screenshot' ವಿಸ್ತರಣೆ ಆಡ್‌ ಮಾಡಿ

ಹಂತ 3

ಹಂತ 3

ಈ ಹಂತದಲ್ಲಿ ನೀವು ಕ್ಯಾಮೆರಾ ಐಕಾನ್ ನೋಡುತ್ತೀರಿ. ಕ್ಯಾಮೆರಾ ಐಕಾನ್‌ ಕಂಡರೆ ಯಶಸ್ವಿಯಾಗಿ ವಿಸ್ತರಣೆ ಆಡ್‌ ಆಗಿದೆ ಎಂದರ್ಥ.

ಹಂತ 4

ಹಂತ 4

ಪ್ರಸ್ತುತ ನಿಮಗೆ ಸಂಪೂರ್ಣ ವೆಬ್‌ಪೇಜ್‌ ಸ್ಕ್ರೀನ್‌ಶಾಟ್‌ ಬೇಕಾದ ವೆಬ್‌ಪೇಜ್‌ಗೆ ಭೇಟಿ ನೀಡಿ.

ಹಂತ 5

ಹಂತ 5

ಈ ಹಂತದಲ್ಲಿ ಕ್ಯಾಮೆರಾ ಐಕಾನ್‌ ಮೇಲೆ ಕ್ಲಿಕ್‌ ಮಾಡಿ. 2-3 ಸೆಕೆಂಡ್‌ನಲ್ಲಿ ಸಂಪೂರ್ಣ ಸ್ಕ್ರೀನ್‌ಶಾಟ್ ಕ್ಯಾಪ್ಚರ್‌ ಆಗಿ ಹೊಸ ಟ್ಯಾಪ್‌ನಲ್ಲಿ ಓಪನ್‌ ಆಗುತ್ತದೆ. ಅದನ್ನು ಇಮೇಜ್‌ ಆಗಿ ನೀವು ಕಂಪ್ಯೂಟರ್‌ನಲ್ಲಿ ಸೇವ್‌ ಮಾಡಬಹುದು.

Best Mobiles in India

Read more about:
English summary
How to Take Screenshot of Full Webpage. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X