ಗೂಗಲ್ ಮ್ಯಾಪ್ ನಲ್ಲಿ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡಿ: ಹೇಗೆ...?

By: Precilla Dias

ಗೂಗಲ್ ತನ್ನ ಮ್ಯಾಪ್ ಆಪ್ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಲ್ಲಿ ನೀವಿರುವ ಲೋಕೆಷನ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಬಹುದಾಗಿದೆ. ಇದು ನಿಮ್ಮ ಮತ್ತು ಸ್ನೇಹಿತರ ನಡುವಿನ ಸಂಪರ್ಕಕ್ಕೆ ಸಹಾಯಕವಾಗಲಿದೆ.

ಗೂಗಲ್ ಮ್ಯಾಪ್ ನಲ್ಲಿ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡಿ: ಹೇಗೆ...?

ನಿಮ್ಮ ಸ್ನೇಹಿತರು ನೀವು ಇರುವಂತಹ ಜಾಗಕ್ಕೆ ಬರಲು ಮ್ಯಾಪ್ ಸಹಾಯ ಪಡೆಯುವ ಸಲುವಾಗಿಯೇ ಲೋಕೆಷನ್ ಶೇರ್ ಮಾಡಬಹುದಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಮುಕ್ತವಾಗಿದೆ ಎನ್ನಲಾಗಿದೆ.

ಗೂಗಲ್ ಮ್ಯಾಪ್ ನಲ್ಲಿ ನಿಮ್ಮ ಲೋಕೆಷನ್ ಅನ್ನು ಮೇಸೆಜಿಂಗ್ ಸೇರಿದಂತೆ ಸೋಶಿಯಲ್ ಮೆಸೆಜಿಂಗ್ ಆಪ್ ಗಳ ಮೂಲಕವೂ ಶೇರ್ ಮಾಡಬಹುದಾಗಿದೆ. ಅದು ಹೇಗೆ ಎಂಬುದು ಈ ಕೆಳಗಿನಂತಿದೆ.

ಗೂಗಲ್ ಮ್ಯಾಪ್ ನಲ್ಲಿ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡಿ: ಹೇಗೆ...?

ಹಂತ 1: ಗೂಗಲ್ ಮ್ಯಾಪ್ ಆಪ್ ನಲ್ಲಿ ಮೆನು ಬಟನ್ ಕ್ಲಿಕ್ ಮಾಡಿ ಸೈಡ್ ಸೈಡಿಂಗ್ ಮಾಡಿದರೆ ಶೇರ್ ಲೋಕೆಷನ್ ಆಯ್ಕೆ ಕಾಣಿಸಿಕೊಳ್ಳಲಿದೆ.

ಹಂತ 2: ಅಲ್ಲಿ ಆಡ್ ಫ್ರೆಂಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಿ, ನೀವು ಈ ಆಯ್ಕೆಯನ್ನು ಆಫ್ ಸಹ ಮಾಡಿಕೊಳ್ಳಬಹುದಾಗಿದೆ.

ಹಂತ 3: ಇದಲ್ಲದೇ ನಿಮ್ಮ ಗೂಗಲ್ ಕಾನ್ಟೆಂಟ್ ನಿಂದ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಲೋಕೆಷನ್ ಶೇರ್ ಮಾಡಬಹುದು.

ಹಂತ 4:ನೀವು ಕಳುಹಿಸಿರುವ ಲಿಂಕ್ ಸ್ನೇಹಿತರಿಗೆ ನೋಟಿಫಿಕೇಷನ್ ನಲ್ಲಿ ದೊರೆಯಲಿದ್ದು, ಅವರು ಅದರ ಮೇಲೆ ಕ್ಲಿಕ್ ಮಾಡಿ ನೀವಿರುವ ಜಾಗವನ್ನು ಟ್ರಾಕ್ ಮಾಡಬಹುದಾಗಿದೆ.

English summary
A few weeks, Google announced a new feature to allow you to share your location with others.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot