ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ವಿಡಿಯೋ ಎಡಿಟ್ ಮಾಡುವುದು ಹೇಗೆ..?
ನೀವು ನಿಮ್ಮ ಫೋನ್ ನಲ್ಲಿ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಸ್ಮಾರ್ಟ್ ಫೋನ್ ನಲ್ಲೇ ಎಡಿಟ್ ಮಾಡಬಹುದಾಗಿದೆ.
ಇಂದಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿದ್ದು, ಫೋಟೋಗಳನ್ನು ಕ್ಲಿಕ್ ಮಾಡಲು ಮಾತ್ರವಲ್ಲದೇ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಲು ಈ ಫೋನ್ ಗಳು ಶಕ್ತವಾಗಿದೆ. ಈ ಹಿನ್ನಲೆಯಲ್ಲಿ ನೀವು ನಿಮ್ಮ ಫೋನ್ ನಲ್ಲಿ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಸ್ಮಾರ್ಟ್ ಫೋನ್ ನಲ್ಲೇ ಎಡಿಟ್ ಮಾಡಬಹುದಾಗಿದೆ.

ಈ ಹಿಂದೆ ರೆಕಾರ್ಡ್ ಮಾಡಿದ ವಿಡಿಯೋವನ್ನು ಕಂಪ್ಯೂಟರ್ ಗೆ ಕಾಪಿ ಮಾಡಿ ಎಡಿಟ್ ಮಾಡಬೇಕಾಗಿತ್ತು ಆದರೆ ಇಂದು ಆ ಕಾಲ ಬದಲಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲೇ ವಿಡಿಯೋವನ್ನು ಎಡಿಟ್ ಮಾಡಬಹುದಾಗಿದೆ. ಅದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಹಂತ 1:
ನೀವು ಎಡಿಟ್ ಇಲ್ಲವೇ ಟ್ರಿಮ್ ಮಾಡಬೇಕಾದ ವಿಡಿಯೋವನ್ನು ಓಪನ್ ಮಾಡಿಕೊಳ್ಳಿ.

ಹಂತ 2:
ವಿಡಿಯೋ ಕೆಳಗೆ ನೀಡಿರುವ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿರಿ.

ಹಂತ 3:
ನಂತರ ನಿಮ್ಮ ವಿಡಿಯೋ ಟೈಮ್ ಲೈನ್ ಕಾಣಿಸಿಕೊಳ್ಳಲಿದ್ದು, ಆರಂಭ ಮತ್ತು ಕೊನೆಯ ಫ್ಲೇಮ್ ಗಳು ಕಾಣಿಸಿಕೊಳ್ಳಲಿದೆ.

ಹಂತ 4:
ನಿಮಗೆ ಎಲ್ಲಿಂಡ ವಿಡಿಯೋ ಕಟ್ ಆಗಬೇಕು ಎನ್ನಿಸುತ್ತದೆಯೇ ಅಲ್ಲಿಗೆ ಆರಂಭ ಮತ್ತು ಕೊನೆಯ ಎಡ್ಜ್ ಗಳನ್ನು ಎಳೆದು ತನ್ನಿರಿ.
ಹಂತ 5:
ನಂತರ ಅದನ್ನು ಟಾಪ್ ನಲ್ಲಿ ಸೇವ್ ಎಂಬ ಆಯ್ಕೆಯನ್ನು ನೀಡಲಾಗಿರುತ್ತದೆ ಅಲ್ಲಿ ಹೋಗಿ ಸೇವ್ ಮಾಡಿ.
ಹಂತ 6:
ಇಷ್ಟು ಮಾಡಿದರೆ ಅಲ್ಲಿಗೆ ನಿಮ್ಮ ವಿಡಿಯೋ ರೆಡಿ.


Click it and Unblock the Notifications








