Subscribe to Gizbot

ಆಂಡ್ರಾಯ್ಡ್ ಫೋನ್‌ ಅನ್ನು ಪೋರ್ಟೆಬಲ್‌ ಸ್ಕ್ಯಾನರ್‌ ಆಗಿ ಬದಲಿಸುವುದು ಹೇಗೆ?

Written By:

ಸ್ಕ್ಯಾನ್‌ ಮಾಡಿದ ಇಮೇಜ್‌ಗಳನ್ನು ಪಿಡಿಎಫ್‌ ಮತ್ತು ಟೆಕ್ಸ್ಟ್‌ ಫೈಲ್‌ಗಳಿಗೆ ಬದಲಿಸಲು ಸ್ಮಾರ್ಟ್‌ಫೋನ್‌ ಸಹಾಯಕವಾಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಆಪ್‌ಗಳಿದ್ದು, ಅವುಗಳನ್ನು ಬಳಸಿ ನೀವು ಸ್ಕ್ಯಾನ್‌ ಮಾಡಿದ ಇಮೇಜ್‌ಗಳನ್ನು ಪಿಡಿಎಫ್‌ ಮತ್ತು ಟೆಕ್ಸ್ಟ್‌ ಫೈಲ್‌ಗಳಿಗೆ ಬದಲಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಹಾಗೂ ಈ ಚಟುವಟಿಕೆಗೆ ಸಹಾಯಕವಾಗುವ ಆಪ್‌ಗಳು ಯಾವುವು ಎಂದು ಸಹ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಂಸ್ಕ್ಯಾನರ್‌

ಕ್ಯಾಂಸ್ಕ್ಯಾನರ್‌

ಕ್ಯಾಂಸ್ಕ್ಯಾನರ್ ಒಂದು ಆಂಡ್ರಾಯ್ಡ್ ಆಪ್‌ ಆಗಿದ್ದು, ಫೋನ್ ಕ್ಯಾಮೆರಾ ಬಳಸಿಕೊಂಡು ಇಮೇಜ್‌ ಸ್ಕ್ಯಾನ್‌ ಮಾಡಿ ಟೆಕ್ಸ್ಟ್‌ ಫೈಲ್‌ ಅನ್ನು ಕ್ರಿಯೇಟ್ ಮಾಡಲು ಸಹಾಯಕವಾಗುತ್ತದೆ. ಆಪ್‌ ಬಳಸುವುದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಹಂತ 1

ಹಂತ 1

ಕ್ಯಾಂಸ್ಕ್ಯಾನರ್‌(Camscanner) ಆಪ್‌ ಇನ್‌ಸ್ಟಾಲ್‌ ಮಾಡುವ ಮೊದಲು, ಫೋನ್‌ ಅನ್ನು ರಿಬೂಟ್‌ ಮಾಡಿ. ನಂತರ ಕ್ಯಾಂಸ್ಕ್ಯಾನರ್‌ ಅನ್ನು ಇನ್‌ಸ್ಟಾಲ್‌ ಮಾಡಿ. ಇನ್‌ಸ್ಟಾಲ್ ಆದ ನಂತರ ಆಪ್‌ ಅನ್ನು ಲಾಂಚ್‌ ಮಾಡಿ.

ಹಂತ 2

ಹಂತ 2

ಆಪ್‌ನಲ್ಲಿ ಲಾಗಿನ್‌ ಮತ್ತು ರಿಜಿಸ್ಟರ್‌ ಸ್ಕ್ರೀನ್ ಪ್ರದರ್ಶಿತವಾಗುತ್ತದೆ. ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ರಿಜಿಸ್ಟರ್‌ ಆಗಿ.

 ಹಂತ 3

ಹಂತ 3

ರಿಜಿಸ್ಟರ್‌ ಆದ ನಂತರ ಕ್ಯಾಂಸ್ಕ್ಯಾನರ್‌ ಬಳಸಲು ಸಿದ್ಧವಾಗುತ್ತದೆ. ನೀವು ಕ್ಯಾಮೆರಾ ಐಕಾನ್ ಅನ್ನು ಆಪ್‌ನಲ್ಲಿ ನೋಡಬಹುದು. ಕ್ಯಾಮೆರಾವನ್ನು ಡಾಕುಮೆಂಟ್‌ ಹತ್ತಿರ ಹಿಡಿದು ಅಕ್ಷರಗಳನ್ನು ಫೋಕಸ್ ಮಾಡಿ.

ಹಂತ 4

ಹಂತ 4

ಕ್ಯಾಮೆರಾ ಅಡ್‌ಜೆಸ್ಟ್‌ ಮಾಡಿದ ನಂತರ ಟಿಕ್ ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ. ನಂತರ ಸ್ಕ್ಯಾನಿಂಗ್‌ ಸ್ವಯಂಕೃತವಾಗಿ ಆರಂಭವಾಗಿ, ಡಾಕುಮೆಂಟ್‌ ಅನ್ನು ಟೆಕ್ಸ್ಟ್‌ ಅಥವಾ ಪಿಡಿಎಫ್‌ಗೆ ಬದಲಿಸುತ್ತದೆ.

ಹಂತ 5

ಹಂತ 5

ಪಿಡಿಎಫ್‌ಗೆ ಬದಲಾದ ಡಾಕುಮೆಂಟ್‌ ಅನ್ನು ಸರಳವಾಗಿ ನಿಮ್ಮ ಕಂಪ್ಯೂಟರ್‌ಗೆ ಶೇರ್‌ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How To Turn your Android Into A Portable Scanner. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot