ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಂ ಖಾತೆಯನ್ನು ಅನ್‌ಲಿಂಕ್ ಮಾಡುವುದು ಹೇಗೆ?

|

ಸಾಮಾಜಿಕ ಮಾಧ್ಯಮದ ದೈತ್ಯ ಎಂದೆನಿಸಿಕೊಂಡಿರುವ ಫೇಸ್‌ಬುಕ್ ಆಪ್‌ ಸದ್ಯ ಪ್ರತಿ ಸ್ಮಾರ್ಟ್‌ಫೋನಿನಲ್ಲಿ ಇದ್ದೆ ಇರುತ್ತದೆ. ಆದರೆ ಫೇಸ್‌ಬುಕ್‌ ಸಂಸ್ಥೆಯ ಇನ್ನೊಂದು ಜನಪ್ರಿಯ ಸಾಮಾಜಿಕ ತಾಣವಾಗ ಇನ್‌ಸ್ಟಾಗ್ರಾಂ ಆಪ್‌ನಲ್ಲಿ ಸಹ ಬಹುತೇಕರು ಖಾತೆ ಹೊಂದಿದ್ದಾರೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಹುತೇಕರು ಈ ಎರಡು ಖಾತೆಗಳನ್ನು ಲಿಂಕ್ ಮಾಡಿರುತ್ತಾರೆ.

ಇನ್‌ಸ್ಟಾಗ್ರಾಂ

ಹೌದು, ಬಹುತೇಕ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಖಾತೆಗಳನ್ನು ಲಿಂಕ್ ಮಾಡಿರುತ್ತಾರೆ. ಲಿಂಕ್ ಮಾಡುವುದರಿಂದ ಫೋಸ್ಟ್‌ಗಳನ್ನು ಬಹುಬೇಗನೆ ಇನ್ನೊಂದು ಖಾತೆಗೆ ಶೇರ್ ಮಾಡಬಹುದಾಗಿದೆ ಹಾಗೂ ಇನ್‌ಸ್ಟಾಗ್ರಾಂನಲ್ಲಿರುವ ಸ್ನೇಹಿತರನ್ನು ಹುಡುಕಲು ನೆರವಾಗಲಿದೆ. ಆದರೆ ಈ ಎರಡು ಸಾಮಾಜಿಕ ತಾಣಗಳ ಲಿಂಕ ಅನ್ನು ತೆಗೆಯಬಹುದಾಗಿದೆ. ಹಾಗಾದರೇ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಖಾತೆಗಳ ಲಿಂಕ್ ತೆಗೆಯುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಲಿಂಕ್ ಮಾಡಿದ್ದರೇ, ಒಂದೇ ವಿಷಯ/ಫೋಟೊವನ್ನು ಪೋಸ್ಟ್ ಮಾಡಲು ಮತ್ತು ಎರಡೂ ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿ ಒಂದೇ ಸ್ನೇಹಿತರ ಜೊತೆ ಸಂಪರ್ಕ ಸಾಧಿಸಲು ನೆರವಾಗಲಿದೆ. ಹಾಗೆಯೇ ನೀವೆನಾದರೂ ಈಗಾಗಾಲೇ ಈ ಎರಡು ಖಾತೆಗಳನ್ನು ಲಿಂಕ್ ಮಾಡಿದ್ದೂ, ಈ ಎರಡೂ ಸಾಮಾಜಿಕ ನೆಟ್‌ವರ್ಕ್‌ಗಳನ್ನು ಸಂಪರ್ಕ ಕಡಿತಗೊಳಿಸಲು ಬಯಸಿದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಖಾತೆಯ ಸಂಪರ್ಕ ಕಡಿತಗೊಳಿಸುವುದು ಹೇಗೆ

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಖಾತೆಯ ಸಂಪರ್ಕ ಕಡಿತಗೊಳಿಸುವುದು ಹೇಗೆ

* ಫೇಸ್‌ಬುಕ್ ಸೆಟ್ಟಿಂಗ್‌ ಆಯ್ಕೆ ತೆರೆಯಿರಿ
* ನಂತರ, ಅಲ್ಲಿ ಆಯ್ಕೆಗಳಿಗೆ ಹೋಗಿ ಮತ್ತು ಲಿಂಕ್ಡ್ ಅಕೌಂಟ್ಸ್ -> ಫೇಸ್‌ಬುಕ್ ಕ್ಲಿಕ್ ಮಾಡಿ.
* ಅನ್ಲಿಂಕ್ ಖಾತೆಯನ್ನು ಟ್ಯಾಪ್ ಮಾಡಿ.
* ಐಒಎಸ್ ಸಾಧನಗಳಲ್ಲಿ, ನೀವು ಫೇಸ್‌ಬುಕ್ ಖಾತೆಯನ್ನು ಸಂಪರ್ಕ ಕಡಿತಗೊಳಿಸಲು ಬಯಸುತ್ತೀರಾ ಎಂದು ಕೇಳುವ ಪ್ರಾಂಪ್ಟ್ ನಿಮಗೆ ಸಿಗುತ್ತದೆ. ಹೌದು, ನಾನು ಖಚಿತವಾಗಿ ಟ್ಯಾಪ್ ಮಾಡಿ. ವಿಶೇಷವೆಂದರೆ, ಇನ್‌ಸ್ಟಾಗ್ರಾಮ್‌ನಲ್ಲಿನ ವ್ಯವಹಾರ ಖಾತೆ ಬಳಕೆದಾರರು ಮೊದಲು ವೈಯಕ್ತಿಕ ಖಾತೆಗೆ ಬದಲಾಯಿಸುವ ಮೂಲಕ ಅದೇ ರೀತಿ ಮಾಡಬಹುದು. ಇದನ್ನು ಮಾಡಲು, ವ್ಯಾಪಾರ ಸೆಟ್ಟಿಂಗ್‌ಗಳು -> ಆಯ್ಕೆಗಳಿಗೆ ಹೋಗಿ ಮತ್ತು ವೈಯಕ್ತಿಕ ಖಾತೆಗೆ ಬದಲಿಸಿ ಟ್ಯಾಪ್ ಮಾಡಿ.

ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ ತೆಗೆಯಲು ಹೀಗೆ ಮಾಡಿ:

ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ ತೆಗೆಯಲು ಹೀಗೆ ಮಾಡಿ:

* ಮೊದಲನೆಯದಾಗಿ, ಸೆಟ್ಟಿಂಗ್ಸ್‍ ಆಯ್ಕೆ ಕ್ಲಿಕ್ ಮಾಡಿ -> ಅಪ್ಲಿಕೇಶನ್‌ಗಳಿಗೆ ಹೋಗಿ. ಪಟ್ಟಿಯಲ್ಲಿ ಇನ್‌ಸ್ಟಾಗ್ರಾಮ್ ಗೋಚರಿಸದಿದ್ದರೆ, See More ಇನ್ನಷ್ಟು ಕ್ಲಿಕ್ ಮಾಡಿ.
* ಆನಂತರ Instagram ಐಕಾನ್ ಕ್ಲಿಕ್ ಮಾಡಿ.
* ಸ್ಕ್ರೀನ್‌ ಕೆಳಭಾಗದಲ್ಲಿ, ನೀವು ಅಪ್ಲಿಕೇಶನ್ ತೆಗೆದುಹಾಕಿ ಆಯ್ಕೆಯನ್ನು ನೋಡುತ್ತೀರಿ.
* ಈ ಆಯ್ಕೆಯನ್ನು ಕ್ಲಿಕ್ ಮಾಡಿ. ಪಾಪ್-ಅಪ್ ವಿಂಡೋದಲ್ಲಿ, ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ನೀವು ಹಂಚಿಕೊಂಡಿರುವ ನಿಮ್ಮ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಲು ಬಾಕ್ಸ್ ಪರಿಶೀಲಿಸಿ. Remove ಕ್ಲಿಕ್ ಮಾಡುವ ಮೂಲಕ ದೃಡೀಕಕರಿಸಿ.

Best Mobiles in India

English summary
To disconnect Instagram from Facebook, you need to first open Instagram on your phone and follow the steps below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X