ಫೋಟೋಗಳಲ್ಲಿನ ಅಕ್ಷರಗಳನ್ನು ಕಾಪಿ ಮಾಡಲು ಇದು ಬೆಸ್ಟ್ ಮೊಬೈಲ್ ಆಪ್!!

|

ಸ್ಮಾರ್ಟ್‌ಫೋನಿನಲ್ಲಿ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಮತ್ತು ಶೇರಿಂಗ್‌ಗೆ ಬಳಸುವ ಒಂದು ಜನಪ್ರಿಯ ಆಪ್ ಎಂದರೆ ಅದು ಕ್ಯಾಮ್ ಸ್ಕ್ಯಾನರ್. ಸುಮಾರು 200 ದೇಶಗಳಲ್ಲಿ 100 ಮಿಲಿಯನ್ ಜನರು ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಗಳಲ್ಲಿ ಸ್ಕ್ಯಾನಿಂಗ್, ಸ್ಟೋರ್, ಸಿನ್ಕ್ರನೈಜ್, ಮತ್ತು ಕೊಲಾಬರೇಟ್ ಮಾಡುವ ಕೆಲಸವನ್ನು ಈ ಕ್ಯಾಮ್ ಸ್ಕ್ಯಾನರ್ ಆಪ್ ಮಾಡುವುದರಿಂದ ಈ ಆಪ್ ಉಪಯೋಗ ಹೆಚ್ಚು ಎನ್ನಬಹುದು

ಇದು ನಿಮ್ಮ ಫೋನ್ ಕ್ಯಾಮರಾವನ್ನು ರಿಸಿಪ್ಟ್ಸ್,ನೋಟ್ಸ್, ಇನ್ ವಾಯ್ಸ್, ವೈಟ್ ಬೋರ್ಡ್ ಡಿಸ್ಕಷನ್, ಸರ್ಟಿಫಿಕೇಟ್ ಇತ್ಯಾದಿಗಳನ್ನು ಸ್ಕ್ಯಾನ್ ಮಾಡಲು ಬಳಸುತ್ತದೆ. ಸ್ಮಾರ್ಟ್ ಕ್ರಾಪಿಂಗ್ ನಿಂದಾಗಿ ನಿಮ್ಮ ಟೆಕ್ಸ್ಟ್ ಗಳು ಮತ್ತು ಗ್ರಾಫಿಕ್ಸ್ ಗಳು ಕ್ಲೀನ್ ಆಗಿ ಮತ್ತು ಶಾರ್ಪ್ ಆಗಿ ಕಾಣಿಸುತ್ತದೆ. OCR (optical character recognition )ಮುಂದಿನ ಎಡಿಟಿಂಗ್ ಗಾಗಿ ಟೆಕ್ಸ್ಟ್ ಗಳನ್ನು ಎಕ್ಸ್ ಟ್ರ್ಯಾಕ್ಟ್ ಮಾಡುತ್ತದೆ ಅಥವಾ ಟೆಕ್ಸ್ಟ್ ಶೇರಿಂಗ್‌ಗೆ (ಲೈಸನ್ಸ್ ಇರಬೇಕು) ಕೂಡ ಸಹಕಾರಿ.

ಫೋಟೋಗಳಲ್ಲಿನ ಅಕ್ಷರಗಳನ್ನು ಕಾಪಿ ಮಾಡಲು ಇದು ಬೆಸ್ಟ್ ಮೊಬೈಲ್ ಆಪ್!!

ಪಿಡಿಎಫ್ ಅಥವಾ ಜೆಪಿಇಜಿ ಫಾರ್ಮೆಟ್ ನಲ್ಲಿ ಸುಲಭದಲ್ಲಿ ಡಾಕ್ಯುಮೆಂಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ, ಇಮೇಲ್ ಗಳಲ್ಲಿ ಅಥವಾ ಡಾಕ್ಯುಮೆಂಟ್ ಲಿಂಕ್ ಆಗಿ ಹಂಚಿಕೊಳ್ಳುವುದಕ್ಕೆ ಈ ಆಪ್ ನೆರವಾಗುತ್ತದೆ. ಇದು ಫೋಟೋಗಳಲ್ಲಿನ ಅಕ್ಷರಗಳನ್ನು ಕಾಪಿ ಮಾಡುವ ತುಂಬಾ ಸರಳ ವಿಧಾನವಾಗಿದ್ದು, ನೀವು ಕೇವಲ ಆಪ್ ಅನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು ಅಷ್ಟೇ. ಹಾಗಾಗಿ, ಈ ಕೆಳಗಿನ ಹಂತಗಳನ್ನು ಅನುಸರಿಸಿ ಫೋಟೋಗಳಲ್ಲಿನ ಅಕ್ಷರಗಳನ್ನು ಕಾಪಿ ಮಾಡಿ .

ಹಂತ 1.

ಹಂತ 1.

ಮೊದಲನೆಯದಾಗಿ ಕ್ಯಾಮ್ ಸ್ಕ್ಯಾನರ್ ಅನ್ನು ನಿಮ್ಮ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

ಹಂತ 2.

ಹಂತ 2.

ಒಮ್ಮೆ ಲಾಂಚ್ ಆದ ನಂತರ, ಸೈನ್ ಇನ್ ಅಥವಾ ರಿಜಿಸ್ಟರ್ ಮಾಡಿಕೊಳ್ಳಲು ಕೇಳಲಾಗುತ್ತದೆ. ಅದಕ್ಕಾಗಿ "Use Now." ಅನ್ನು ಕ್ಲಿಕ್ಕಿಸಿ.

ಹಂತ 3.

ಹಂತ 3.

ಈಗ ನೀವು ಸ್ಟಾರ್ಟ್ ಸ್ಕ್ಯಾನಿಂಗ್ ಅನ್ನು ಟ್ಯಾಪ್ ಮಾಡಿ. ಕ್ಯಾಮರಾ ಐಕಾನ್ ಅನ್ನು ಕ್ಲಿಕ್ಕಿಸಿದರೆ ಡಾಕ್ಯುಮೆಂಟ್ ಕ್ಯಾಮರಾ ಮೂಲಕ ಸ್ಕ್ಯಾನ್ ಆಗುತ್ತದೆ.

ಹಂತ 4.

ಹಂತ 4.

ನೀವು ಪಿಕ್ಚರ್ ಮತ್ತು ವೀಡಿಯೋ ತೆಗೆಯಲು ಪರ್ಮಿಷನ್ ನೀಡಬೇಕು. ಮುಂದುವರಿಯಲು "Allow" ಬಟನ್ ನ್ನು ಕ್ಲಿಕ್ಕಿಸಿ.

ಹಂತ 5.

ಹಂತ 5.

ಯಾವ ಇಮೇಜ್ ನಲ್ಲಿ ಟೆಕ್ಸ್ಟ್ ಕಾಪಿ ಮಾಡಬೇಕು ಆ ಇಮೇಜ್ ಅನ್ನು ನೀವು ಸ್ಕ್ಯಾನ್ ಮಾಡಬೇಕು.

ಹಂತ 7

ಹಂತ 7

"Recognize full page."ಅನ್ನು ಟ್ಯಾಪ್ ಮಾಡಿ. ನೀವು ಫುಲ್ ಟೆಕ್ಸ್ಟ್ ಸ್ಕ್ಯಾನ್ ಆಗಿ ಬಂದಿರುವುದನ್ನು ಗಮನಿಸಬಹುದು.

ಹಂತ 8

ಹಂತ 8

ಹೀಗೆ ಮಾಡಿದ ನಂತರ ನೀವು ಅಕ್ಷರಗಳನ್ನು ಪಿಡಿಎಫ್ ಫಾರ್ಮೇಟ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳಬಹುದು.

Best Mobiles in India

English summary
How to use CamScanner in smartphone?, How to copy text from images on an Android device?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X