ಇನ್‌ಸ್ಟಾಗ್ರಾಂನಲ್ಲಿ 'ಲೈವ್‌ ರೂಮ್ಸ್‌' ಫೀಚರ್‌ ಬಳಕೆ ಮಾಡುವುದು ಹೇಗೆ?

|

ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ಸೋಶಿಯಲ್ ಮೀಡಿಯಾಗಳ ಪೈಕಿ ಇನ್‌ಸ್ಟಾಗ್ರಾಮ್ ಸಹ ಒಂದಾಗಿದೆ. ಇನ್‌ಸ್ಟಾಗ್ರಾಂ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಲೈವ್ ರೂಮ್ ಫೀಚರ್‌ ಇತ್ತೀಚಿಗಿನ ನವೀಕರಣಗಳಲ್ಲಿ ಸೇರ್ಪಡೆ ಆಗಿದೆ. ಈ ಲೈವ್ ರೂಮ್ ಫೀಚರ್‌ ರಿಯಲ್‌ ಟೈಮ್‌ನಲ್ಲಿ ನಾಲ್ಕು ಸದಸ್ಯರಿಗೆ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಈ ಆಯ್ಕೆಯ ಬಳಕೆದಾರರಿಗೆ ಆಕರ್ಷಕ ಅನಿಸಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್ ನಲ್ಲಿನ ಇತ್ತೀಚಿಗಿನ ಅಪ್‌ಡೇಟ್‌ನಲ್ಲಿ ಲೈವ್ ರೂಮ್ ಫೀಚರ್ ಸೇರಿದೆ. ಬಳಕೆದಾರರು ಈ ಆಯ್ಕೆಯ ಮೂಲಕ ಒಟ್ಟು ನಾಲ್ಕು ಸದಸ್ಯರು ಲೈವ್ ಸಂವಹನ ನಡೆಸಲು ಉಪಯುಕ್ತವಾಗಿದೆ. ಈ ಮೊದಲು ಬಳಕೆದಾರರಿಗೆ ಒಬ್ಬ ವ್ಯಕ್ತಿಯೊಂದಿಗೆ ಸ್ಟ್ರೀಮ್ ಮಾಡಲು ಅವಕಾಶ ಮಾಡಿಕೊಟ್ಟಿತು. ಆದ್ರೀಗ ಭಾಗವಹಿಸುವ ಸದಸ್ಯ ಸಂಖ್ಯೆ ಹೆಚ್ಚಿಸಿ ಇನ್‌ಸ್ಟಾಗ್ರಾಮ್ ಮತ್ತಷ್ಟು ಅಟ್ರ್ಯಾಕ್ಟ್‌ ಆಗಿದೆ. ಹಾಗಾದರೇ ಇನ್‌ಸ್ಟಾಗ್ರಾಂನಲ್ಲಿ ಲೈವ್ ರೂಮ್ ಫೀಚರ್ ಅನ್ನು ಹೇಗೆ ಬಳಸುವುದು ಎನ್ನುವ ಬಗ್ಗೆ ಮುಂದಿನ ಸ್ಲೈಡ್‌ಗಳಲ್ಲಿ ನೋಡೋಣ ಬನ್ನಿರಿ.

ಇನ್‌ಸ್ಟಾಗ್ರಾಂನಲ್ಲಿ ಲೈವ್ ರೂಮ್ ರಚಿಸಲು ಈ ಕ್ರಮಗಳು ಅನುಸರಿಸಿ:

ಇನ್‌ಸ್ಟಾಗ್ರಾಂನಲ್ಲಿ ಲೈವ್ ರೂಮ್ ರಚಿಸಲು ಈ ಕ್ರಮಗಳು ಅನುಸರಿಸಿ:

ಇನ್‌ಸ್ಟಾಗ್ರಾಂನಲ್ಲಿ ಲೈವ್ ರೂಮ್‌ ಅನ್ನು ರಚಿಸಲು, ನಿಮ್ಮ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್‌ ಮಾಡಿಕೊಳ್ಳಬೇಕು. ಇತ್ತೀಚಿನ ಆವೃತ್ತಿಗೆ ನಿಮ್ಮ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ನವೀಕರಿಸಿದ ನಂತರ, ಇನ್‌ಸ್ಟಾಗ್ರಾಂ ಸ್ಟೋರಿ ಆಯ್ಕೆ ಕ್ಯಾಮೆರಾವನ್ನು ತೆರೆಯಿರಿ. ಆನಂತರ ‘ಲೈವ್-live' ಮೋಡ್ ಐಕಾನ್‌ಗೆ ಟಾಗಲ್ ಮಾಡಿ. ಪ್ರಸಾರವನ್ನು ಪ್ರಾರಂಭಿಸಲು ರೆಕಾರ್ಡಿಂಗ್ ಬಟನ್ ಒತ್ತಿರಿ.

ಕ್ಯಾಮೆರಾ

ನೀವು ಲೈವ್‌ಗೆ ಹೋದಾಗ, + ಚಿಹ್ನೆಯೊಂದಿಗೆ ಕ್ಯಾಮೆರಾ ಐಕಾನ್ ಅನ್ನು ನೀವು ನೋಡುತ್ತೀರಿ. ರೂಮ್‌ನಲ್ಲಿ ನೇರ ಪ್ರಸಾರ ಮಾಡಲು ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ನೀವು ಲೈವ್ ರೂಮ್ ಅನ್ನು ರಚಿಸಿದ ನಂತರ, ನಿಮ್ಮ ಸ್ನೇಹಿತರು ಮತ್ತು ಫಾಲೋವರ್ಸ್‌ ಹುಡುಕಿ ಮತ್ತು ವೀಡಿಯೊಗೆ ಸೇರಲು ಅವರನ್ನು ಆಹ್ವಾನಿಸಿ. ವ್ಯಕ್ತಿಗಳು ಆಹ್ವಾನವನ್ನು ಸ್ವೀಕರಿಸಿದಾಗ, ಇನ್‌ಸ್ಟಾಗ್ರಾಂ ಲೈವ್ ರೂಮ್ ಫೀಚರ್‌ ಪ್ರಾರಂಭವಾಗುತ್ತದೆ.

ಲೈವ್

ಕ್ರಿಯೆಟರ್ಸ್‌ಗಳಿಗೆ ಸಹಾಯ ಮಾಡಲು ಇನ್‌ಸ್ಟಾಗ್ರಾಮ್ ಲೈವ್ ರೂಮ್ ಫೀಚರ್‌ ಅನ್ನು ಹೊರತಂದಿದೆ. ಪಾಲ್ಗೊಳ್ಳುವವರಿಂದ ಬಳಕೆದಾರರನ್ನು ನಿರ್ಬಂಧಿಸಿದ್ದರೆ, ಅವರು ಇನ್‌ಸ್ಟಾಗ್ರಾಂ ಲೈವ್ ರೂಮ್‌ಗೆ ಸೇರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಕಮ್ಯುನಿಟಿ ಮಾರ್ಗಸೂಚಿಗಳ ಕಾರಣದಿಂದಾಗಿ ಇನ್‌ಸ್ಟಾಗ್ರಾಮ್‌ನಿಂದ ಲೈವ್ ಪ್ರವೇಶವನ್ನು ಹಿಂತೆಗೆದುಕೊಳ್ಳಲಾದ ಬಳಕೆದಾರರಿಗೆ ಲೈವ್ ರೂಮ್‌ಗೆ ಸೇರಲು ಸಾಧ್ಯವಾಗುವುದಿಲ್ಲ.

ಕಾಮೆಂಟ್‌ಗಳಲ್ಲಿ

ಲೈವ್ ರೂಮ್ ಹೋಸ್ಟ್ ಅಥವಾ ಕ್ರಿಯೆಟರ್ ಮೂರು ಅನನ್ಯ ಬಳಕೆದಾರರನ್ನು ಲೈವ್ ರೂಮ್‌ಗೆ ಸೇರಿಸಬಹುದು. ಅಲ್ಲದೆ, ಕಾಮೆಂಟ್‌ಗಳಲ್ಲಿ ಫಿಲ್ಟರ್‌ಗಳನ್ನು ನಿರ್ಬಂಧಿಸಲು, ವರದಿ ಮಾಡಲು ಮತ್ತು ಅನ್ವಯಿಸಲು ಅವರಿಗೆ ಸಂಪೂರ್ಣ ನಮ್ಯತೆ ಇದೆ. ಈ ಫೀಚರ್‌ನ ತಡೆ ರಹಿತ ಅನುಭವಕ್ಕೆ ಸ್ಥಿರವಾದ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.

Best Mobiles in India

English summary
Instagram live room feature allows user to add three unique followers in the broadcast.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X