ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡ್‌ ಲಿಮಿಟ್‌ ವಾರ್ನಿಂಗ್‌ ಆಯ್ಕೆಯನ್ನು ಬಳಸುವುದು ಹೇಗೆ?

|

ಇಂದಿನ ಕಾಲಘಟ್ಟದಲ್ಲಿ ನೀವು ಯಾವುದೇ ಸ್ಥಳಕ್ಕೆ ಪ್ರಯಾಣಿಸಬೇಕಾದರೂ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಉಪಯುಕ್ತವಾಗಿದೆ. ಗೂಗಲ್‌ ಮ್ಯಾಪ್‌ ಬಳಸಿ ನೀವು ತಲುಪಬೇಕಾದ ಸ್ಥಳದ ಮಾರ್ಗವನ್ನು ಕಂಡುಕೊಳ್ಳುವುದು ಸುಲಭವಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ನೀವು ಯಾವುದೇ ಏರಿಯಾ, ಸ್ಥಳ, ಕಚೇರಿಗೆ ತಲುಪಬೇಕಾದರೂ ಗೂಗಲ್‌ ಮ್ಯಾಪ್‌ ಅತ್ಯಂತ ಉಪಯುಕ್ತವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಅನ್ನು ಬಳಸುತ್ತಿದ್ದಾರೆ. ಗೂಗಲ್‌ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಅಪ್ಡೇಟ್‌ಗಳನ್ನು ಮಾಡುತ್ತಾ ಬಂದಿದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಸಾಕಷ್ಟು ಅನುಕೂಲಕರವಾಗಿದೆ. ಗೂಗಲ್‌ ತನ್ನ ಬಳಕೆದಾರರಿಗೆ ಇನ್ನಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಫೀಚರ್ಸ್‌ಗಳನ್ನು ಕೂಡ ಸೇರ್ಪಡೆ ಮಾಡಿದೆ. ಇದರಿಂದ ಗೂಗಲ್‌ ಮ್ಯಾಪ್‌ನಲ್ಲಿ ನೀವು ಕೇವಲ ಪ್ರಯಾಣದ ಮಾರ್ಗ ಮಾತ್ರವಲ್ಲ, ಪ್ರಯಾಣದ ಹಾದಿಯಲ್ಲಿ ಯಾವೆಲ್ಲಾ ಹೋಟೆಲ್‌ಗಳಿವೆ, ಟೋಲ್‌ ಪ್ಲಾಜ್‌ಗಳು, ವೇಗದ ಮೀತಿ ಎಲ್ಲಾ ಮಾದರಿಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಟ್ರಾಫಿಕ್‌ ಹೇಗಿದೆ ಅನ್ನೊದರ ವಿವರ ಕೂಡ ಮ್ಯಾಪ್‌ನಲ್ಲಿ ದೊರೆಯಲಿದೆ.

ಗೂಗಲ್‌

ಇನ್ನು ಗೂಗಲ್‌ ಮ್ಯಾಪ್‌ ತನ್ನ ಬಳಕೆದಾರರಿಗೆ ತೊಂದರೆ-ಮುಕ್ತ ಪ್ರಯಾಣವನ್ನು ಹೊಂದಲು ಅನುಮತಿಸುವ ಹಲವಾರು ಕಾರ್ಯಗಳನ್ನು ಹೊಂದಿದೆ. ಈ ಫೀಚರ್ಸ್‌ಗಳು ರೂಡ್‌ ವ್ಯೂ, ಟೋಲ್ ಅಂದಾಜುಗಳು, ಆಗಮನದ ಅಂದಾಜು ಸಮಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾಹಿತಿಯನ್ನು ಚೆಲ್ಲಲಿದೆ. ಅಲ್ಲದೆ ಬಳಕೆದಾರರು ನಿರ್ದಿಷ್ಟ ಮಾರ್ಗದಲ್ಲಿ ವೇಗದ ಮಿತಿಯನ್ನು ಮೀರಿದರೆ ಗೂಗಲ್‌ ಮ್ಯಾಪ್‌ ಸ್ಪೀಡ್‌ ಲಿಮಿಟ್‌ ವಾರ್ನಿಂಗ್‌ ಅನ್ನು ಕೂಡ ನೀಡಲಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡ್‌ ಲಿಮಿಟ್‌ ಆಲರ್ಟ್‌ ಅನ್ನು ಆನ್‌ ಮಾಡುವುದಕ್ಕೆ ಅನುಸರಿಸಬೇಕಾದ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಸ್ತೆಯ

ನೀವು ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆಯ ವೇಗದ ಮಿತಿಯ ಬಗ್ಗೆ ಅರಿವಿರಬೇಕು. ಯಾಕಂದ್ರೆ ನೀವು ಸಾಗುವ ರಸ್ತೆಯ ಮಿತಿಯನ್ನು ದಾಟಿದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಪ್ರಯಾಣದ ಗಡಿಬಿಡಿಯಲ್ಲಿ ರಸ್ತೆಯ ವೇಗದ ಮಿತಿಯ ಅರಿವು ನಿಮಗೆ ಬರದೆ ಇರುವ ಸಾದ್ಯತೆ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ನಿಮ್ಮನ್ನು ಆಲರ್ಟ್‌ ಮಾಡುವ ಕೆಲಸವನ್ನು ಗೂಗಲ್‌ ಮ್ಯಾಪ್‌ ಮಾಡಲಿದೆ. ನಿಜ ಗೂಗಲ್‌ ಮ್ಯಾಪ್‌ ನೀವು ಸ್ಪೀಡ್‌ ಲಿಮಿಟ್‌ ಅನ್ನು ಮೀರಿದಾಗ ವಾರ್ನಿಂಗ್‌ ನೀಡುವ ಕೆಲಸವನ್ನು ಕೂಡ ಮಾಡುತ್ತದೆ. ಆದರಿಂದ ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡ್‌ ಲಿಮಿಟ್‌ ವಾರ್ನಿಂಗ್‌ ಅನ್ನು ಆನ್‌ ಮಾಡಿಕೊಳ್ಳುವುದು ಸೂಕ್ತ ಆಯ್ಕೆಯಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡ್‌ ಲಿಮಿಟ್‌ ವಾರ್ನಿಂಗ್‌ ಅನ್ನು ಆನ್‌ ಮಾಡಲು ಹೀಗೆ ಮಾಡಿರಿ!

ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡ್‌ ಲಿಮಿಟ್‌ ವಾರ್ನಿಂಗ್‌ ಅನ್ನು ಆನ್‌ ಮಾಡಲು ಹೀಗೆ ಮಾಡಿರಿ!

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ
ಹಂತ:3 ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನ್ಯಾವಿಗೇಷನ್ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ
ಹಂತ:4 ಇದಾದ ನಂತರ ಸ್ಪೀಡ್‌ ಲಿಮಿಟ್‌ಗಾಗಿ ಟಾಗಲ್ ಅನ್ನು ಆನ್ ಮಾಡಿ
ಹಂತ:5 ಇದರಲ್ಲಿ ನೀವು ಸ್ಪೀಡೋಮೀಟರ್‌ಗಾಗಿ ಟಾಗಲ್ ಆನ್ ಮಾಡಿ

ಇದೀಗ ನೀವು ನೀವು ನಿರ್ದಿಷ್ಟ ವೇಗದ ಮಿತಿಯನ್ನು ಮೀರಿದರೆ, ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ತಕ್ಷಣವೇ ನಿಮಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ. ಈ ಫೀಚರ್ಸ್‌ ಪ್ರಸ್ತುತ ಭಾರತದಲ್ಲಿ ಎಲ್ಲಾ ಬಳಕೆದಾರರಿಗೂ ಲಭ್ಯವಿದೆ.

ಗೂಗಲ್‌

ಇನ್ನು ಗೂಗಲ್‌ ಮ್ಯಾಪ್‌ ಒಳಗೊಂಡಿರುವ ಹಲವು ಉಪಯುಕ್ತ ಫೀಚರ್ಸ್‌ಗಳಲ್ಲಿ ವಿಳಾಸವನ್ನು ಸರಿಪಡಿಸುವ ಆಯ್ಕೆಯು ಕೂಡ ಒಂದಾಗಿದೆ. ಇದರಿಂದ ನೀವು ಗೂಗಲ್‌ ಮ್ಯಾಪ್‌ ನಲ್ಲಿ ತಪ್ಪು ವಿಳಾಸವನ್ನು ಸರಿಪಡಿಸಲು ಅವಕಾಶ ಇದೆ. ಗೂಗಲ್ ತನ್ನ ಬಳಕೆದಾರರಿಗೆ ಮ್ಯಾಪ್‌ ಗಳ ವಿಳಾಸಗಳನ್ನು ಸಾರ್ವಜನಿಕವಾಗಿ ಸೇರಿಸಲು ಅಥವಾ ಸಂಪಾದಿಸಲು ಅನುಮತಿಸುತ್ತದೆ. ನೀವು ಮಾಡಿದ ಎಡಿಟ ಸಹಾಯಕವಾಗಿದೆಯೆಂದು ಕಂಡುಬಂದರೆ ಮತ್ತು ಅನುಮೋದಿಸಿದರೆ, ಅದು ಗೂಗಲ್‌ ಮ್ಯಾಪ್‌ (Google Maps) ನಲ್ಲಿನ ವಿಳಾಸದಲ್ಲಿ ಪ್ರತಿಫಲಿಸುತ್ತದೆ.

ಗೂಗಲ್ ಮ್ಯಾಪ್‌ನಲ್ಲಿನ ತಪ್ಪು ವಿಳಾಸ ಸರಿಪಡಿಸಲು ವೆಬ್ ಬ್ರೌಸರ್‌ನಲ್ಲಿ ಹೀಗೆ ಮಾಡಿರಿ!

ಗೂಗಲ್ ಮ್ಯಾಪ್‌ನಲ್ಲಿನ ತಪ್ಪು ವಿಳಾಸ ಸರಿಪಡಿಸಲು ವೆಬ್ ಬ್ರೌಸರ್‌ನಲ್ಲಿ ಹೀಗೆ ಮಾಡಿರಿ!

ಹಂತ:1 ವೆಬ್ ಬ್ರೌಸರ್‌ನಲ್ಲಿ ಗೂಗಲ್ ನಕ್ಷೆಗಳನ್ನು ತೆರೆಯಿರಿ.
ಹಂತ:2 ವೆಬ್‌ಸೈಟ್‌ನ ಮೇಲಿನ ಎಡ ಭಾಗದ ಮೂಲೆಯಲ್ಲಿರುವ ಹುಡುಕಾಟ ಪಟ್ಟಿಯಿಂದ ವಿಳಾಸವನ್ನು ಹುಡುಕಿ.
ಹಂತ:3 ಪುಟದ ಎಡಭಾಗದಲ್ಲಿರುವ ಸ್ಥಳ ವಿಭಾಗದಲ್ಲಿ, ಎಡಿಟ್ ಅನ್ನು ಸೂಚಿಸಿ ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:4 ನೀವು ಎರಡು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ವಿಳಾಸದಲ್ಲಿ ಬಯಸಿದ ವಿವರಗಳನ್ನು ಎಡಿಟ್ ಮಾಡಿ.

ಐಫೋನ್ ಅಥವಾ ಆಂಡ್ರಾಯ್ಡ್‌ ಫೋನ್‌ ನಲ್ಲಿ ಈ ಕ್ರಮ ಫಾಲೋ ಮಾಡಿ!

ಐಫೋನ್ ಅಥವಾ ಆಂಡ್ರಾಯ್ಡ್‌ ಫೋನ್‌ ನಲ್ಲಿ ಈ ಕ್ರಮ ಫಾಲೋ ಮಾಡಿ!

ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ನಕ್ಷೆಗಳ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಸ್ಥಳದ ಹೆಸರಿನ ಮೇಲೆ ಟ್ಯಾಪ್ ಮಾಡಿ ಮತ್ತು ಮೇಲಕ್ಕೆ ಸ್ವೈಪ್ ಮಾಡಿ.
ಹಂತ:3 ಎಡಿಟ್ ಅನ್ನು ಸೂಚಿಸು ಆಯ್ಕೆ ಟ್ಯಾಪ್ ಮಾಡಿ.
ಹಂತ:4 ಆಯ್ಕೆಗಳಿಂದ, ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ.
ಹಂತ:5 ಸ್ಥಳದ ವಿಳಾಸದಲ್ಲಿ ಬಯಸಿದ ಬದಲಾವಣೆಗಳನ್ನು ಮಾಡಿ.

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡಲು ಹೀಗೆ ಮಾಡಿ!

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡಲು ಹೀಗೆ ಮಾಡಿ!

ಹಂತ:1 ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್ ಮ್ಯಾಪ್‌ಅನ್ನು ಪ್ರಾರಂಭಿಸಿ.
ಹಂತ:2 ಕೆಳಭಾಗದಲ್ಲಿ ಲಭ್ಯವಿರುವ ಸೇವ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳನ್ನು ತೋರಿಸುವ ಲೇಬಲ್‌ಗೆ ಸ್ವೈಪ್ ಮಾಡಿ.
ಹಂತ:4 ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್‌ ಎಡಿಟ್‌ ಅನ್ನು ಆಯ್ಕೆಮಾಡಿ.
ಹಂತ:5 ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್‌ ವರ್ಕ್‌ ಅನ್ನು ಆಯ್ಕೆಮಾಡಿ.
ಹಂತ:6 ಪ್ರಸ್ತುತ ವಿಳಾಸವನ್ನು ತೆರವುಗೊಳಿಸಿ, ನಂತರ ಹೊಸದನ್ನು ಸೇರಿಸಿ. ನೀವು ಮ್ಯಾಪ್‌ನಲ್ಲಿ ಹುಡುಕಬಹುದು ಅಥವಾ ಸರಳವಾಗಿ ಆಯ್ಕೆ ಮಾಡಬಹುದು.
ಹಂತ:7 ಇದಾದ ನಂತರ ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಸಹ ನೀವು ಡಿಲೀಟ್‌ ಮಾಡಬಹುದು. ನಿಮಗೆ ಬೇಕಾಗಿರುವುದು ಮನೆಗಾಗಿ ತೆಗೆದುಹಾಕಿ ಆಯ್ಕೆಯನ್ನು ಆರಿಸಿ ಅಥವಾ ಉಳಿಸಿದ > ಲೇಬಲ್ ಅಡಿಯಲ್ಲಿ ಕೆಲಸ ಮಾಡಬಹುದಾಗಿದೆ.

Best Mobiles in India

Read more about:
English summary
Here's a step-by-step guide on how you can turn on the speed limit alerts on Google Maps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X