ಗೂಗಲ್‌ ಮ್ಯಾಪ್‌ನಲ್ಲಿ 'ಸ್ಪೀಡೊಮೀಟರ್' ಆನ್ ಮಾಡುವುದು ಹೇಗೆ ಗೊತ್ತಾ?

|

ಟೆಕ್‌ ದೈತ್ಯ ಗೂಗಲ್ ಸಂಸ್ಥೆಯು ಸಾಕಷ್ಟು ಅಗತ್ಯಕರ ಮತ್ತು ಉಪಯುಕ್ತ ಸೌಲಭ್ಯಗಳನ್ನು ಪರಿಚಯಿಸಿದೆ. ಇಂದಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರು ದಿನವೊಂದಕ್ಕೆ ಅದೆಷ್ಟೋ ಕೆಲಸಗಳಲ್ಲಿ ಗೂಗಲ್‌ನ ನೆರವು ಪಡೆಯುತ್ತಾರೆ. ದೈನಂದಿನ ಅಗತ್ಯ ಗೂಗಲ್‌ನ ಫೀಚರ್‌ಗಳಲ್ಲಿ ಗೂಗಲ್‌ ಮ್ಯಾಪ್‌ ಸಹ ಒಂದು. ಕೋರಿಯರ್ ಡೆಲಿವರಿ, ಫುಡ್‌ ಡೆಲಿವರಿ, ಕ್ಯಾಬ್‌ ಡ್ರೈವರ್‌ಗಳ ಮತ್ತು ಜರ್ನಿ ಮಾಡುವವರ ಫೋನಿಗಳಲ್ಲಿ ಗೂಗಲ್‌ ಮ್ಯಾಪ್‌ ನ್ಯಾವಿಗೇಶನ್ ದಾರಿ ತೋರಿಸುತ್ತಾ ಮುನ್ನಡೆಸುತ್ತಿರುತ್ತದೆ.

ಗೂಗಲ್ ಮ್ಯಾಪ್

ಹೌದು, ಸದ್ಯ ಪ್ರತಿಯೊಬ್ಬರ ಫೋನಿನಲ್ಲಿಯೂ ಗೂಗಲ್ ಮ್ಯಾಪ್ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತದೆ. ಇನ್ನು ಗೂಗಲ್ ಮ್ಯಾಪಿನಲ್ಲಿರುವ ಫೀಚರ್ಸ್‌ಗಳಂತೂ ಪ್ರಯಾಣಿಕರಿಗೆ ದಾರಿ ಸುಗಮ ಮಾಡುವಂತಿವೆ. ಅವುಗಳಲ್ಲಿ ಇನ್ನೊಂದು ಪ್ರಮುಖ ಆಕರ್ಷಕ ಫೀಚರ್ ಅಂದರೇ ಅದು 'ಸ್ಪೀಡೊಮೀಟರ್' ಆಗಿದೆ. ನೀವು ಎಷ್ಟು ವೇಗದಲ್ಲಿ ವಾಹನ ಚಲಿಸುತ್ತಿದ್ದಿರಿ ಎಂಬುದನ್ನು ಈ ಫೀಚರ್ ತೋರಿಸುತ್ತದೆ. ಹಾಗಾದರೇ ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡೊಮೀಟರ್ ಆನ್ ಮಾಡಿಕೊಳ್ಳುವುದು ಹೇಗೆ ತಿಳಿಯಲು ಮುಂದೆ ಓದಿರಿ.

ಸ್ಪೀಡೊಮೀಟರ್

ಸ್ಪೀಡೊಮೀಟರ್

ಗೂಗಲ್ ಮ್ಯಾಪ್‌ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಅನೇಕ ಅಗತ್ಯ ಫೀಚರ್ಸ್‌ಗಳನ್ನು ಸೇರಿಸುತ್ತಾ ಸಾಗಿದೆ. ಅವುಗಳಲ್ಲಿ ಚಲಿಸುವ ವಾಹನದ ವೇಗವು ಎಷ್ಟಿದೆ ಎಂದು ತಿಳಿಯಲು ಸ್ಪೀಡೊಮೀಟರ್ ಆಯ್ಕೆಯನ್ನು ನೀಡಿದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ಪ್ರಯಾಣಿಕರ ವಾಹನದ ವೇಗವು ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಸ್ಪೀಡೊಮೀಟರ್ ಆನ್ ಮಾಡುವುದು ಹೇಗೆ

ಸ್ಪೀಡೊಮೀಟರ್ ಆನ್ ಮಾಡುವುದು ಹೇಗೆ

ಸ್ಪೀಡೊಮೀಟರ್ ಆಯ್ಕೆಯನ್ನು ಸಕ್ರಿಯ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

* ಗೂಗಲ್ ಮ್ಯಾಪ್ ತೆರೆಯಿರಿ (ಗೂಗಲ್ ಮ್ಯಾಪ್ ಅಪ್‌ಡೇಟ್ ವರ್ಷನ್ ಇರಬೇಕು)

* ಎಡ ಮೇಲ್ಭಾಗದಲ್ಲಿ ಕಾಣುವ ಮೂರು ಗೆರೆಗಳ ಮೆನು ಬಟನ್ ಒತ್ತಿರಿ.

* ನಂತರ ಸ್ಕ್ರಾಲ್ ಮಾಡಿ. ಸೆಟ್ಟಿಂಗ್ಸ್‌ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಿರಿ.

* ಸೆಟ್ಟಿಂಗ್ಸ್ ಆಯ್ಕೆ ತೆರೆದ ನಂತರ, ಅಲ್ಲಿ ನ್ಯಾವಿಗೇಶನ್ ಆಯ್ಕೆಯನ್ನು ಒತ್ತಿರಿ.

* ಆಗ ಸ್ಪೀಡೊಮೀಟರ್ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಆನ್ ಮಾಡಿರಿ.

ಇತರೆ ಹೊಸ ಗೂಗಲ್‌ ಮ್ಯಾಪ್‌ ಫೀಚರ್ಸ್‌

ಇತರೆ ಹೊಸ ಗೂಗಲ್‌ ಮ್ಯಾಪ್‌ ಫೀಚರ್ಸ್‌

ಪ್ರಸಕ್ತ ವರ್ಷ ಹಲವು ಹೊಸ ಫೀಚರ್ಸ್‌ಗಳು ಗೂಗಲ್ ಮ್ಯಾಪ್ ಸೇರಿಕೊಂಡಿವೆ. ಅವುಗಳಲ್ಲಿ ಪಬ್ಲಿಕ್ ಟಾಯ್ಲೆಟ್ ಮಾಹಿತಿ, ಪ್ರಯಾಣ ಮಾಡುತ್ತಿರುವ ರಸ್ತೆಯಲ್ಲಿ ಅಪಘಾತವಾಗಿದ್ದರೇ ಆ ಬಗ್ಗೆ ಗೂಗಲ್‌ ಮ್ಯಾಪ್‌ನಲ್ಲಿ ನಮೂದಿಸುವ ಆಯ್ಕೆಗಳು ಸಹ ಲಭ್ಯ ಆಗಿವೆ.

Most Read Articles
Best Mobiles in India

English summary
Google map recently gained the ability to display your driving speeds. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X