ಆಫ್ ಫೇಸ್ ಬುಕ್ ಆಕ್ಟಿವಿಟಿ: ಈ ಹೊಸ ಫೀಚರ್ ನ್ನು ಬಳಸುವುದು ಹೇಗೆ?

By Gizbot Bureau
|

ವಿಶ್ವ ಪ್ರೈವೆಸಿ ದಿನದ ವಿಶೇಷವಾಗಿ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ಪ್ರೇವೆಸಿ ಟೂಲ್ ನ್ನು ಬಿಡುಗಡೆಗೊಳಿಸಿದೆ. ಅದುವೇ Off-Facebook Activity ಟ್ರ್ಯಾಕರ್ ಟೂಲ್. ಇದು ನೀವು ಭೇಟಿ ನೀಡಿದ ವೆಬ್ ಸೈಟ್ ಗಳು, ಆಪ್ಸ್ ಗಳು ಮತ್ತು ರಿಯಲ್ ಲೈಫ್ ಸ್ಟೋರಿಗಳನ್ನು ಫೇಸ್ ಬುಕ್ ಟ್ರ್ಯಾಕ್ ಮಾಡಿ ಅದರ ಲಿಸ್ಟ್ ನ್ನು ಹೊಂದಿರುತ್ತದೆ.

ಟ್ರ್ಯಾಕಿಂಗ್

ಬಳಕೆದಾರರಿಗೆ ಈ ಟ್ರ್ಯಾಕಿಂಗ್ ನ್ನು ಆಫ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ. ಈ ಟೂಲ್ ನ್ನು ಬಿಡುಗಡೆಗೊಳಿಸುವ ಮೂಲಕ ಮಾರ್ಕ್ ಜ್ಯೂಕ್ ಬರ್ಗ್ ಕ್ಲಿಯರ್ ಹಿಸ್ಟರಿ ಟೂಲ್ ನ್ನು ಫೇಸ್ ಬುಕ್ ನಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. 2018 ರಲ್ಲಿ ಫೇಸ್ ಬುಕ್ ಸಿಇಓ ಕ್ಲಿಯರ್ ಹಿಸ್ಟರಿ ಟೂಲ್ ನ್ನು ಬಿಡುಗಡೆಗೊಳಿಸುವ ಬಗ್ಗೆ ಹೇಳಿದ್ದರು. ಅದು ಮುಖ್ಯವಾಗಿ ಕ್ಯಾಂಬ್ರಿಡ್ಜ್ ಅನಲಿಟಿಕಾ ಸ್ಕ್ಯಾಂಡಲ್ ನಡೆದ ನಂತರ ನೀಡಿದ್ದ ಹೇಳಿಕೆಯಾಗಿತ್ತು.

ಪೋಸ್ಟ್

ಅಧಿಕೃತ ಪೋಸ್ಟ್ ನಲ್ಲಿ ಕಂಪೆನಿ ಹೀಗೆ ಹೇಳಿದೆ. "Off-Facebook activity ಅನ್ನುವುದು ನಿಮ್ಮ ಆಕ್ಟಿವಿಟಿಯ ಸಮ್ಮರಿಯಾಗಿದ್ದು ಬ್ಯುಸಿನೆಸ್ ದಾರರು ಮತ್ತು ಸಂಸ್ಥೆಗಳು ತಮ್ಮ ಆಪ್ಸ್ ಗಳಿಗೆ ಅಥವಾ ವೆಬ್ ಸೈಟ್ ಗಳಿಗೆ ನೀವು ಭೇಟಿ ನೀಡಿರುವ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ನಮ್ಮ ಬ್ಯೂಸಿನೆಸ್ ಟೂಲ್ ಉದಾರಣೆಗೆ ಫೇಸ್ ಬುಕ್ ಲಾಗಿನ್ ಅಥವಾ ಫೇಸ್ ಬುಕ್ ಪಿಕ್ಸಲ್ ನ್ನು ಬಳಸುತ್ತಾರೆ ಮತ್ತು ಈ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. "

ಫೇಸ್ ಬುಕ್

ಫೇಸ್ ಬುಕ್ ಬಳಕೆದಾರರ ಆಕ್ಟಿವಿಟಿಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬ ಬಗ್ಗೆಯೂ ಕೂಡ ಮಾಹಿತಿಯನ್ನು ನೀಡಿದೆ. ಕಂಪೆನಿ ಹೇಳಿರುವ ಪ್ರಕಾರ, "ನೀವು ಯಾವಾಗ ವೆಬ್ ಸೈಟ್ ಅಥವಾ ಆಪ್ಸ್ ಗಳಿಗೆ ಭೇಟಿ ನೀಡುತ್ತೀರೋ ಆಗ ಬ್ಯುಸಿನೆಸ್ ದಾರರು ಮತ್ತು ಸಂಸ್ಥೆಗಳು ನಿಮ್ಮ ಆಕ್ಟಿವಿಟಿಯ ಬಗ್ಗೆ ಬ್ಯುಸಿನೆಸ್ ಟೂಲ್ ಮೂಲಕ ನಮಗೆ ಮಾಹಿತಿ ನೀಡುತ್ತಾರೆ.

ನಿಮ್ಮ ಮಾಹಿತಿಯನ್ನು ವಯಕ್ತಿಕವಾಗಿಡುವುದಕ್ಕೆ ಇದು ಸಹಾಯ ಮಾಡುತ್ತದೆ. ಆ ಮೂಲಕ ಅಗತ್ಯವಾಗಿರುವ ಜಾಹೀರಾತನ್ನು ನಿಮಗೆ ನೀಡಲಾಗುತ್ತದೆ. ಇದಕ್ಕಾಗಿ ಬ್ಯುಸಿನೆಸ್ ದಾರರು ಮತ್ತು ಸಂಸ್ಥೆಗಳು ಈ ಮಾಹಿತಿಯನ್ನು ಬ್ಯುಸಿನೆಸ್ ಟೂಲ್ ಮೂಲಕ ಫೇಸ್ ಬುಕ್ಕಿಗೆ ಮಾಹಿತಿ ನೀಡುವ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಬೇಕಾಗುತ್ತದೆ.

ಒಂದು ವೇಳೆ ನೀವೂ ಕೂಡ ಈ ಟೂಲ್ ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಆಲೋಚಿಸುತ್ತಿದ್ದಲ್ಲಿ, ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಫೇಸ್ ಬುಕ್

1.ಮೊದಲಿಗೆ ಫೇಸ್ ಬುಕ್ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು 'Your Facebook Information'ನ್ನು ಸೆಲೆಕ್ಟ್ ಮಾಡಿ.

2.ನಂತರ ಮೆನುವಿನಿಂದ ಆಫ್ ಫೇಸ್ ಬುಕ್ ಆಕ್ಟಿವಿಟಿ ಆಯ್ಕೆಯನ್ನು ಕ್ಲಿಕ್ಕಿಸಿ

3.ಇದೀಗ ನೀವು ಕೆಲವು ಮಾಹಿತಿಯನ್ನು ನಿಮ್ಮ ಸ್ಕ್ರೀನ್ ನಲ್ಲಿ ಗಮನಿಸುತ್ತೀರಿ. ಅದರಲ್ಲಿ ನೆಟ್ ವರ್ಕ್ ನ ಹೊರಗಡೆ ನಡೆದ ನಿಮ್ಮ ಫೇಸ್ ಬುಕ್ಕಿನ ಆಕ್ಟಿವಿಟಿಯ ಬಗೆಗಿನ ಮಾಹಿತಿ ಇರಲಿದ್ದು ನೀವದನ್ನು ಟ್ರ್ಯಾಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಬ್ಯಾನರ್

4.ನೀವು ಒಂದು ಬ್ಯಾನರ್ ನ್ನು ಗಮನಿಸುತ್ತೀರಿ ಮತ್ತು ಅದರಲ್ಲಿ ಕೆಲವು ವೆಬ್ ಸೈಟ್ ಮತ್ತು ಆಪ್ಸ್ ಗಳ ಪ್ರಿವ್ಯೂ ಇರುತ್ತದೆ ಮತ್ತು ನೀವು ಅದನ್ನು ಬಳಸಿರುವ ಬಗ್ಗೆ ಫೇಸ್ ಬುಕ್ಕಿಗೆ ಮಾಹಿತಿ ಇರುತ್ತದೆ. ಸಂಪೂರ್ಣ ಲಿಸ್ಟ್ ನ್ನು ನೋಡುವುದಕ್ಕಾಗಿ ನೀವು ಇದೀಗ ಆಪ್ ಐಕಾನ್ ನ್ ಕ್ಲಿಕ್ಕಿಸಬಹುದು.

5.ಇದೀಗ ಆಪ್ಸ್ ನ ಸಂಪೂರ್ಣ ಲಿಸ್ಟ್ ನಿಮ್ಮ ಸ್ಕ್ರೀನಿನಲ್ಲಿ ಕಾಣುತ್ತದೆ ಅದರಲ್ಲಿ ಥರ್ಡ್ ಪಾರ್ಟಿ ಆಪ್ ಗಳು ಕೂಡ ಸೇರಿದ್ದು ಕಳೆದ 180 ದಿನಗಳಲ್ಲಿ ಯಾವೆಲ್ಲಾ ಆಪ್ ಗಳು ಫೇಸ್ ಬುಕ್ಕಿಗೆ ನಿಮ್ಮ ಮಾಹಿತಿಯನ್ನು ಹಂಚಿಕೊಂಡಿವೆ ಎಂಬ ವಿವರ ಇರುತ್ತದೆ. ಇದೀಗ ನೀವು ಕ್ಲಿಯರ್ ಹಿಸ್ಟರಿ ಆಯ್ಕೆಯನ್ನು ಕ್ಲಿಕ್ಕಿಸಬಹುದು. ಇದು ಫೇಸ್ ಬುಕ್ಕಿನಲ್ಲಿ ಸೇವ್ ಆಗಿರುವ ಈ ಎಲ್ಲಾ ಮಾಹಿತಿಯನ್ನು ಡಿಲೀಟ್ ಮಾಡುತ್ತದೆ.

6.ನೀವು ಈ ರೀತಿ ಮಾಹಿತಿ ಟ್ರ್ಯಾಕ್ ಮಾಡುವುದನ್ನು ಆಫ್ ಮಾಡುವುದಕ್ಕೂ ಕೂಡ ಅವಕಾಶವಿದೆ. ಮೆನುವಿನ ಬಲಭಾಗದಲ್ಲಿರುವ "Manage Your Off-Facebook Activity" ಯನ್ನು ಕ್ಲಿಕ್ಕಿಸಿ.

Best Mobiles in India

Read more about:
English summary
How To Use This New Facebook Feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X