ಆಂಡ್ರಾಯ್ಡ್‌ ಸಾಧನವನ್ನು ವೆಬ್‌ಕ್ಯಾಮ್‌ ರೀತಿ ಬಳಸುವುದು ಹೇಗೆ?

Posted By: Staff

ಆಂಡ್ರಾಯ್ಡ್‌ ಸಾಧನಗಳಿಂದ ಹಲವಾರು ಅನುಕೂಲಗಳಿದ್ದು ಅದರಲ್ಲಿನ ಪ್ರಮುಖ ವಾದದ್ದು ಯಾವುದೆಂದರೆ ಅವುಗಳನ್ನು ವೆಬ್‌ ಕಾಮೆರಾ ರೀತಿಯೂ ಬಳಸ ಬಹುದಾಗಿದೆ. ನೀವು ಕೂಡ ವೆಬ್‌ಕ್ಯಾಮೆರಾ ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ನಿಮಗಿದು ಸೂಕ್ತವಾದದ್ದು. ಅಂದಹಾಗೇ ಗಮನದಲ್ಲಿರಿಸ ಬೇಕಾದ ಆಂಶವೇನೆಂದರೆ ಸಾಧವನ್ನು ವೆಬ್‌ ಕ್ಯಾಮೆರಾದಂತೆ ಬಳಸಿದಾಗ ಹೆಚ್ಚು ಬ್ಯಾಟರೀ ಹರಿದು ಹೋಗುವುದಂತೂ ಖಚಿತ.

ಅದಕ್ಕಾಗಿಯೇ ಸಾಧನವನ್ನು ವೆಬ್‌ಕ್ಯಾಮೆರಾದಂತೆ ಬಳಸುವ ಮೊದಲು ವಿದ್ಯತ್‌ ಸಂಪರ್ಕಕ್ಕೆ ಕನೆಕ್ಟ್‌ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಹಾಗೂ ಕೇವಲ ಹಿಂಬದಿಯ ಕ್ಯಾಮೆರಾವನ್ನು ಮಾತ್ರವಷ್ಟೇ ವೆಬ್‌ ಕ್ಯಾಮೆರಾ ಆಗಿ ಉಪಯೋಗವಾಗುತ್ತದೆ, ಬಳಕೆದಾರರು ಅಯ್ಯೋ ಮುಂಬದಿಯ ಕ್ಯಾಮೆರ ಇಲ್ಲಾ ಎಂದು ತಲೆ ಕೆಡಿಸಿಕೊಳ್ಳುವ ಹಾಗೀಲ್ಲ.

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಆಂಡ್ರಾಯ್ಡ್‌ ಸಾಧನವನ್ನು ವೆಬ್‌ಕ್ಯಾಮ್‌ ರೀತಿ ಬಳಸಬಹುದಾಗಿದೆ.

ಈ ಕ್ರಿಯೆ ಪ್ರಾರಂಭೀಸಲು ಮೊದಲಿಗೆ ನೀವು ಎರಡು ಸಾಪ್ಟ್‌ವೇರ್‌ಗಳ್ನ್ನು ಡೌನ್ಲೋಡ್‌ ಮಾಡಿಕೊಳ್ಳ ಬೇಕಾಗುತ್ತದೆ. ನಿಮ್ಮ ಆಂಡ್ರಾಯ್ಡ್‌ ಸಾಧನದಲ್ಲಿ ಐಪಿ ವೆಬ್‌ಕ್ಯಾಮ್‌ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ ಹಾಗೂ ಐಪಿ ಕ್ಯಾಮೆರಾ ಅಡಾಪ್ಟರ್‌ ಫಾರ್‌ ವಿಂಡೋಸ್‌ ಸಾಪ್ಟ್‌ವೇರ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್ಲೋಡ್‌ ಮಾಡಿಕೊಳ್ಳಿ. ಅಂದಹಾಗೆ ವೆಬ್‌ಕ್ಯಾಮ್‌ ಬಳಸಲು ಗೂಗಲ್‌ ಕ್ರೋಮ್‌ ಹಾಗೂ ಮೊಜಿಲಾ ಪೈರ್‌ಫಾಕ್ಸ್‌ ಬಳಸುವುದು ಉತ್ತಮ. ಎರಡೂ ಸಾಪ್ಟ್‌ವೇರ್‌ ಡೌನ್ಲೋಡ್‌ ಮಾಡಿಕೊಂಡ ಬಳಿಕ ಈ ಕೆಳಗಿನಂತೆ ಅನುಸರಿಸದಲ್ಲಿ ವೆಬ್‌ಕ್ಯಾಮ್‌ ಬಳಸಬಹುದಾಗಿದೆ.

ಸ್ಟೆಪ್‌ 1: ನಿಮ್ಮ ಆಂಡ್ಆಯ್ಡ್‌ ಸಾಧನದಲ್ಲಿ ಐಪಿ ವೆಬ್‌ಕ್ಯಾಮ್‌ ಆಪ್‌ ತೆರೆಯಿರಿ.

ಸ್ಟೆಪ್‌ 2: ಸೆಟ್ಟಿಂಗ್ಸ್‌ಗೆ ತೆರಳಿ ರೆಸೆಲ್ಯೂಷನ್‌, ಓರಿಯೆಂಟೇಷನ್‌ ಹಾಗೂ FPS ಲಿಮಿಟ್‌ಗಳನ್ನು ಹೊಂದಿಸಿ.

ಸ್ಟೆಪ್‌ 3: ಸೆಟ್ಟಿಂಗ್ಸ್‌ ಹೊಂದಿಸಿದ ಬಳಿಕ ಸ್ಕ್ರೀನ್‌ನ ಕೆಳ ಭಾಗಕ್ಕೆ ತೆರಳಿ ‘ಸ್ಟಾರ್ಟ್‌ ಸರ್ವರ್‌’ ಮೇಲೆ ಒತ್ತಿ.

ಸ್ಟೆಪ್‌ 4: ಯೂಸರ್‌ ನೇಮ್‌ ಹಾಗೂ ಪಾಸ್‌ವರ್ಡ್‌ ಬಳಸುವುದು ಉತ್ತಮ, ಹಾಗೂ ಇದರಿಂದಾಗಿ ನೀವು ಸರಿಯಾದ ಪಾಸ್‌ವರ್ಡ್‌ ನೀಡದೇ ಹೋದಲ್ಲಿ ಕೆಲವೊಮ್ಮೆ ಅಡಾಪ್ಟರ್‌ ಕೆಲಸ ಮಾಡದೇ ಇರಬಹುದು.

ಸ್ಟೆಪ್‌ 5: ಪೊರ್ಟ್‌ ಸಂಖ್ಯೆಯಾಗಿ ‘8080’ ಬಳಸಿ.

ಸ್ಟೆಪ್‌ 6: ನಂತರ ಆಂಡ್ರಾಯ್ಡ್‌ ಸಾಧನದಲ್ಲಿ ನಿಮ್ಮ ಆಯ್ಕೆಯ ವೆಬ್‌ ಬ್ರೌಸರ್‌ಗೆ ತೆರಳಿ ಡಿಸ್ಪ್ಲೆ ಕೆಳಭಾಗದಲ್ಲಿನ ಐಪಿ ಅಡ್ರೆಸ್‌ಗೆ ತಲುಪಿ.


ಸ್ಟೆಪ್‌ 7: ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿಧಗಳನ್ನು ಆಯ್ಕೆ ಮಾಡಿಕೊಳ್ಳಿ. ಪ್ರಿಪ್ಲೆಕ್ಸಿಟಿ ತಪ್ಪಿಸ ಬೇಕೆಂದಿದ್ದಲ್ಲಿ ಯೂಸರ್‌ ಬ್ರೌಸರ್‌ ಬಿಲ್ಟ್‌ ಇನ್‌ವ್ಯೂವರ್‌ ಬಳಸಿ.

ಸ್ಟೆಪ್‌ 8: ವೆಬ್‌ ಬ್ರೌಸರ್‌ನಲ್ಲಿ ವಿಡಿಯೋ ಲೋಡ್‌ ಆಗಲು ಪ್ರಾರಂಭಿಸುತ್ತದೆ.

ಸ್ಟೆಪ್‌ 9: ಈಗ ನೀವು ಕಂಪ್ಯೂಟರ್‌ನಲ್ಲಿ ಡೌನ್ಲೋಡ್‌ ಮಾಡಿದ ಐಪಿ ಕ್ಯಾಮೆರಾ ಅಡಾಪ್ಟರ್‌ ಸಾಪ್ಟ್‌ವೇರ್‌ ತೆರೆದುಕೊಳ್ಳಿ.

ಸ್ಟೆಪ್‌ 10: ಐಪಿ ಅಡ್ರೆಸ್‌, ಪೊರ್ಟ್‌ ಸಂಖ್ಯೆ, ರೆಸೆಲ್ಯೂಷನ್‌ ಹಾಗೂ ಕ್ರೆಡೆನ್ಷಿಯಲ್‌ ಗಳಂತಹ ವಿವರಗಳನ್ನು ಭರಿಸಿ. ಹಾಗೂ ಕ್ಯಾಮೆರಾ ದಲ್ಲಿನ URL ವಿಭಾಗದಲ್ಲಿ ಬಳಕೆದಾರರು ‘http://(Type IP-Address here)/videofeed ಈ ವಿಧಾನ ಅನುಸರಿಸ ಬೇಕಾಗುತ್ತದೆ.

ಸ್ಟೆಪ್‌ 11: ಇದಾದ ಬಳಿಕ ರೆಸೆಲ್ಯೂಷನ್‌ ಸೆಟ್ಟಿಂಗ್ಸ್‌ ಪಕ್ಕದಲ್ಲಿರುವ "ಆಟೋ ಡಿಟೆಕ್ಟ್‌" ಮೇಲೆ ಕ್ಲಿಕ್‌ಮಾಡಿ.

ಸ್ಟೆಪ್‌ 12: ವಿಧಾನ ಪೂರ್ಣಗೊಳಿಸಲು ಅಪ್ಲೆ ಮೇಲೆ ಕ್ಲಿಕ್‌ಮಾಡಿ.

ಸ್ಟೆಪ್‌ 13: ಈಗ ನಿಮ್ಮ ಆಂಡ್ರಾಯ್ಡ್‌ ಸಾಧನವು ವೆಬ್‌ ಕ್ಯಾಮೆರಾ ರೀತಿ ಬಳಸಲು ಸಿದ್ಧಗೊಂಡಿದೆ.

ವಿಶೇಷ ಸೂಚನೆ: ಕೆಲವೊಮ್ಮೆ ನೀವು ವೆಬ್‌ಕ್ಯಾಮ್‌ನೊಂದಿಗೆ ಬಳಸಬೇಕೆಂದಿರುವ ಅಪ್ಲಿಕೇಷನ್‌ ಅನ್ನು ರಿಸ್ಟಾರ್ಟ್‌ ಮಾಡಬೇಕಾಗುತ್ತದೆ. ಹಾಗೂ ಧ್ವನಿಗಾಗಿ ಹೆಡ್‌ಸೆಟ್‌ ಬಳಸೋದು ಉತ್ತಮ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot