ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ ಡೌನ್‌ಲೋಡ್ ಮಾಡಿದ ನಂತರ ಈ ಕೆಲಸ ಮಾಡಿ!

|

ಪ್ರಸ್ತುತ ಸರ್ಕಾರದ ಯಾವುದೇ ಸೌಲಭ್ಯ, ಸಬ್ಸಿಡಿ ಪಡೆಯುವುದು ಸೇರಿದಂತೆ ಹಲವು ಕೆಲಸಗಳಿಗೂ ಆಧಾರ್‌ ಕಾರ್ಡ್‌ ಅಗತ್ಯವಿದೆ. ವೋಟರ್‌ ಐಡಿಯಂತೆ ಆಧಾರ್‌ ಕಾರ್ಡ್‌ ಕೂಡಾ ಅವಶ್ಯ ದಾಖಲಾತಿಗಳಲ್ಲಿ ಒಂದಾಗಿದೆ. ಅಗತ್ಯ ಕೆಲಸಗಳಿಗೆ ತುರ್ತಾಗಿ ಆಧಾರ್ ಕಾರ್ಡ್‌ ಲಭ್ಯವಿಲ್ಲದಿದ್ದರೇ, ಆನ್‌ಲೈನ್‌ ಮೂಲಕ ಡಿಜಿಟಲ್ ಆಧಾರ್ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಅವಕಾಶವನ್ನು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಮಾಡಿ ಕೊಟ್ಟಿದೆ.

ಡಿಜಿಟಲ್‌

ಹೌದು, ಜನರು ಅಗತ್ಯ ಸಂದರ್ಭಗಳಲ್ಲಿ ಡಿಜಿಟಲ್‌ ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಡಿಜಿಟಲ್ ಆಧಾರ್ ಕಾರ್ಡ್‌ ಪಾಸ್‌ವರ್ಡ್‌ ಸುರಕ್ಷತೆಯನ್ನು ಹೊಂದಿರುತ್ತದೆ. ಹಾಗೆಯೇ ಡಿಜಿಟಲ್‌ ಮಾದರಿಯ ಆಧಾರ್ ಕಾರ್ಡ್‌ನಲ್ಲಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಪ್ರಾಧಿಕಾರವು ಡಿಜಿಟಲ್ ರೂಪದಲ್ಲಿ ಸಹಿ ಮಾಡಿದೆ. ಇನ್ನು ಆಧಾರ್ ಕಾಯ್ದೆಯ ಪ್ರಕಾರ, ಆಧಾರ್‌ ಕಾರ್ಡ್‌ನ ಭೌತಿಕ ಪ್ರತಿಯಂತೆ ಎಲ್ಲಾ ಕೆಲಸಗಳಿಗೆ ಡಿಜಿಟಲ್ ಇ-ಆಧಾರ್ ಸಮಾನವಾಗಿ ಮಾನ್ಯವಾಗಿರುತ್ತದೆ. ಹೀಗಾಗಿ ಡಿಜಿಟಲ್‌ ಆಧಾರ್‌ ಕಾರ್ಡ್‌ ಪ್ರತಿಯು ಪ್ರಮುಖ ದಾಖಲೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

ಇ-ಆಧಾರ್ನಲ್ಲಿ ಡಿಜಿಟಲ್ ಸಹಿಯನ್ನು ಹೇಗೆ ಮೌಲ್ಯೀಕರಿಸುವುದು

ಇ-ಆಧಾರ್ನಲ್ಲಿ ಡಿಜಿಟಲ್ ಸಹಿಯನ್ನು ಹೇಗೆ ಮೌಲ್ಯೀಕರಿಸುವುದು

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಆಧಾರ್ ದಾಖಲಾತಿ ಹೊಂದಿರುವವರಿಗೆ ತಮ್ಮ ಗುರುತಿನ ಚೀಟಿಯ ಡಿಜಿಟಲ್ ನಕಲನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಜನರು UIDAI ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ - uidai.gov.in ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ mAadhaar ಮೂಲಕ ಡೌನ್‌ಲೋಡ್ ಮಾಡಬಹುದು. ಹಾಗಾದರೆ ಇ-ಆಧಾರ್‌ ಕಾರ್ಡ್‌ನಲ್ಲಿ ಡಿಜಿಟಲ್ ಸಹಿಯನ್ನು ಮೌಲ್ಯೀಕರಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಹಂತ 1:

ಹಂತ 1:

ಅಧಿಕೃತ ವೆಬ್‌ಸೈಟ್‌ ಮೂಲಕ ಡಿಜಿಟಲ್ ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡಿಕೊಳ್ಳಿ

ಹಂತ 2:

ಹಂತ 2:

ಆ ನಂತರ, ಡೌನ್‌ಲೋಡ್ ಮಾಡಲಾದ ಇ-ಆಧಾರ್ ಕಾರ್ಡ್‌ ಅನ್ನು(pdf) ತೆರೆಯಿರಿ.

ಹಂತ 3:

ಹಂತ 3:

ಇ-ಆಧಾರ್ ಕಾರ್ಡ್‌ (pdf) ಫೈಲ್‌ ತೆರೆಯುವಾಗ ಪಾಸ್‌ವರ್ಡ್‌ ಕೇಳುತ್ತದೆ. (ಪಾಸ್‌ವರ್ಡ್‌-ನಿಮ್ಮ ಹೆಸರಿನ ಮೊದಲ ನಾಲ್ಕು ಇಂಗ್ಲಿಷ ಕ್ಯಾಪಿಟಲ್ ಅಕ್ಷರ ಮತ್ತು ಹುಟ್ಟಿದ ವರ್ಷ)

ಹಂತ 4:

ಹಂತ 4:

ನಂತರದಲ್ಲಿ, ನೀವು ಆಧಾರ್ ಪಿಡಿಎಫ್‌ನಲ್ಲಿ validity unknown ಐಕಾನ್ ಮೇಲೆ ಬಲ ಕ್ಲಿಕ್ ಮಾಡಬೇಕು.

ಹಂತ 5:

ಹಂತ 5:

ಮುಂದಿನ ಹಂತದಲ್ಲಿ ವ್ಯಾಲಿಡೇಟ್ ಸಿಗ್ನೇಚರ್ (Validate Signature) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 6:

ಹಂತ 6:

ಡಿಜಿಟಲ್ ಸಹಿ ಮೌಲ್ಯಮಾಪನ ಸ್ಥಿತಿ ವಿಂಡೋವನ್ನು ಕಾಣಿಸುತ್ತದೆ. ನಂತರ ನೀವು Signature Properties ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಹಂತ 7:

ಹಂತ 7:

ನೀವು Show Signature Certificate ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

ಹಂತ 8:

ಹಂತ 8:

ತದ ನಂತರ, ನೀವು ಟ್ರಸ್ಟ್-Trust ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.

ಹಂತ 9:

ಹಂತ 9:

ಆಗ ಕೆಳಗಡೆ ಕಾಣಿಸುವ Add to Trusted Identities ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 10:

ಹಂತ 10:

ನಂತರದ ಯಾವುದೇ ಭದ್ರತಾ ಪ್ರಶ್ನೆಗೆ ನೀವು ಸರಿ ಎಂದು ಉತ್ತರಿಸಬೇಕು.

ಹಂತ 11:

ಹಂತ 11:

ಈಗ, ಈ ಪ್ರಮಾಣಪತ್ರವನ್ನು ವಿಶ್ವಾಸಾರ್ಹ ಮೂಲವಾಗಿ ಬಳಸುವುದಕ್ಕಾಗಿ ಆಧಾರ್‌ ಕಾರ್ಡ್‌ನಲ್ಲಿ ನೀವು ಗ್ರೀನ್ ಟಿಕ್ ಮಾರ್ಕ್ ಕ್ಷೇತ್ರವನ್ನು ಪರಿಶೀಲಿಸಬೇಕು. ವಿಂಡೋವನ್ನು ಕ್ಲೋಸ್‌ ಮಾಡಲು ಎರಡು ಬಾರಿ ಓಕೆ ಕ್ಲಿಕ್ ಮಾಡಿ.

ಹಂತ 12:

ಹಂತ 12:

ಕೊನೆಯದಾಗಿ, valid ಗೊಳಿಸುವಿಕೆಯನ್ನು ಕಾರ್ಯಗತಗೊಳಿಸಲು ನೀವು ವ್ಯಾಲಿಡೇಟ್ ಸಿಗ್ನೇಚರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಆಧಾರ್ ಕಾರ್ಡ್‌ನ ಡಿಜಿಟಲ್ ಸಿಗ್ನೇಚರ್ ವ್ಯಾಲಿಡೇಟ್ ಅನ್ನು ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ ಬಳಸಿ ಮಾಡಬಹುದಾಗಿದೆ.

Best Mobiles in India

English summary
Here is the process to validate digital signatures in e-Aadhaar.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X