ಮೊಬೈಲ್‌ನಲ್ಲಿ ಯೂಟ್ಯೂಬ್ ಡೆಸ್ಕ್‌ಟಾಪ್ ಮೋಡ್‌ ವೀಕ್ಷಿಸುವುದು ಹೇಗೆ?

|

ಮೊಬೈಲ್‌ನಲ್ಲಿ ಡೆಸ್ಕ್‌ಟಾಪ್ ಮೋಡ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಇಚ್ಛಿಸುವಿರಾ? ಆಂಡ್ರಾಯ್ಡ್‌ ಮತ್ತು ಐಓಎಸ್ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಫೋನ್‌ಗಳಿಗಾಗಿ ಗೂಗಲ್‌ ಮೀಸಲಾದ ಯೂಟ್ಯೂಬ್ ಅಪ್ಲಿಕೇಶನ್ ಅನ್ನು ಹೊಂದಿದ್ದರೂ, ಕೆಲವೊಮ್ಮೆ ಅನೇಕ ಕಾರಣಗಳಿಂದಾಗಿ, ಕೆಲವರು ಫೋನ್‌ನ ಬ್ರೌಸರ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಬಯಸುತ್ತಾರೆ. ಕ್ರೋಮ್, ಫೈರ್‌ಫಾಕ್ಸ್‌, ಸಫಾರಿ ಸೇರಿದಂತೆ ಇತರೆ ಡೀಫಾಲ್ಟ್ ಬ್ರೌಸರ್‌ಗಳಂತಹ ವಿಭಿನ್ನ ಬ್ರೌಸರ್‌ಗಳಲ್ಲಿ ಯೂಟ್ಯೂಬ್ ಡೆಸ್ಕ್‌ಟಾಪ್ ಮೋಡ್ ಅನ್ನು ಸಕ್ರಿಯಗೊಳಿಸಲು ಸಾಧ್ಯವಿದೆ.

ಮೊಬೈಲ್‌ನಲ್ಲಿ ಯೂಟ್ಯೂಬ್ ಡೆಸ್ಕ್‌ಟಾಪ್ ಮೋಡ್‌ ವೀಕ್ಷಿಸುವುದು ಹೇಗೆ?

ಯೂಟ್ಯೂಬ್ ಗಾಗಿ ಫೋನ್ ವೆಬ್‌ಸೈಟ್ ಉತ್ತಮವಾಗಿದ್ದರೂ, ಯೂಟ್ಯೂಬ್ ಅನ್ನು ಚಿಕ್ಕ ಪರದೆಯಲ್ಲಿ ತೆರೆಯುವುದರಿಂದ ಡೆಸ್ಕ್‌ಟಾಪ್ ಸೈಟ್ ನೀಡುವಷ್ಟು ಆಯ್ಕೆಗಳೊಂದಿಗೆ ಇದು ಬರುವುದಿಲ್ಲ. ಆದಾಗ್ಯೂ, ಯೂಟ್ಯೂಬ್ ನ ಡೆಸ್ಕ್‌ಟಾಪ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಲ್ಲಾ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳನ್ನು ನೀವು ಬಯಸಿದರೆ, ನಿಮ್ಮ ಫೋನ್‌ನಲ್ಲಿ ಕೆಲವು ಸರಳ ಹಂತಗಳಲ್ಲಿ ನೀವು ಅದನ್ನು ಮಾಡಬಹುದು. ಹಾಗಾದರೇ, ವಿಭಿನ್ನ ಬ್ರೌಸರ್‌ಗಳನ್ನು ಬಳಸಿಕೊಂಡು ಆಂಡ್ರಾಯ್ಡ್‌ ಮತ್ತು ಐಫೋನ್‌ ನಲ್ಲಿ ಯೂಟ್ಯೂಬ್ ಡೆಸ್ಕ್‌ಟಾಪ್ ಅನ್ನು ವೀಕ್ಷಿಸುವುದು ಹೇಗೆ ಎಂಬುದನ್ನು ಮುಂದೆ ನೋಡೋಣ.

ಆಂಡ್ರಾಯ್ಡ್‌ ನಲ್ಲಿ ಯೂಟ್ಯೂಬ್ ಡೆಸ್ಕ್‌ಟಾಪ್ ಸೈಟ್ ಅನ್ನು ವೀಕ್ಷಿಸುವುದು ಹೇಗೆ?
* ಆಂಡ್ರಾಯ್ಡ್‌ ನಲ್ಲಿ ಗೂಗಲ್‌ ಕ್ರೋಮ್ ಬ್ರೌಸರ್ ತೆರೆಯಿರಿ
* ಕ್ರೋಮ್ ಬ್ರೌಸರ್‌ನಲ್ಲಿ ಯೂಟ್ಯೂಬ್.ಕಾಮ್ (Youtube.com) ಗೆ ಭೇಟಿ ನೀಡಿ ಅಥವಾ ಯೂಟ್ಯೂಬ್ ಗಾಗಿ ಹುಡುಕಿ ಮತ್ತು ಮೊದಲ ಲಿಂಕ್ ಅನ್ನು ಕ್ಲಿಕ್ ಮಾಡಿ
* ಮೇಲಿನ ಬಲಭಾಗದಲ್ಲಿರುವ ಮೂರು ಲಂಬ ಬಟನ್‌ಗಳ ಮೇಲೆ ಟ್ಯಾಪ್ ಮಾಡಿ.
* 'ಡೆಸ್ಕ್ಟಾಪ್ ಸೈಟ್' ಚೆಕ್ಬಾಕ್ಸ್ ಅನ್ನು ಆಯ್ಕೆ ಮಾಡಿ
* ನಿಮ್ಮ ಬ್ರೌಸರ್ ಈಗ ಯುಟ್ಯೂಬ್ ವೆಬ್‌ಸೈಟ್ ಅನ್ನು ಡೆಸ್ಕ್‌ಟಾಪ್ ಮೋಡ್‌ನಲ್ಲಿ ಲೋಡ್ ಮಾಡುತ್ತದೆ.

ಮೊಬೈಲ್‌ನಲ್ಲಿ ಯೂಟ್ಯೂಬ್ ಡೆಸ್ಕ್‌ಟಾಪ್ ಮೋಡ್‌ ವೀಕ್ಷಿಸುವುದು ಹೇಗೆ?

ಫೈರ್‌ಫಾಕ್ಸ್‌ ಮೂಲಕ ಯೂಟ್ಯೂಬ್ ಡೆಸ್ಕ್‌ಟಾಪ್ ಸೈಟ್ ಅನ್ನು ವೀಕ್ಷಿಸುವುದು ಹೇಗೆ?
* ಆಂಡ್ರಾಯ್ಡ್‌ ನಲ್ಲಿ ಫೈರ್‌ಫಾಕ್ಸ್‌ ಬ್ರೌಸರ್ ತೆರೆಯಿರಿ
* ಕ್ರೋಮ್ ಬ್ರೌಸರ್‌ನಲ್ಲಿ Youtube.com ಗೆ ಭೇಟಿ ನೀಡಿ ಅಥವಾ ಯೂಟ್ಯೂಬ್ ಗಾಗಿ ಹುಡುಕಿ ಮತ್ತು ಮೊದಲ ಲಿಂಕ್ ಅನ್ನು ಕ್ಲಿಕ್ ಮಾಡಿ
* ಕೆಳಗಿನ ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
* 'ಡೆಸ್ಕ್‌ಟಾಪ್ ಸೈಟ್' ಎಂದು ಹೇಳುವ ಟಾಗಲ್ ಅನ್ನು ಸಕ್ರಿಯಗೊಳಿಸಿ
* ನಿಮ್ಮ ಬ್ರೌಸರ್ ಈಗ ಯುಟ್ಯೂಬ್ ವೆಬ್‌ಸೈಟ್ ಅನ್ನು ಡೆಸ್ಕ್‌ಟಾಪ್ ಮೋಡ್‌ನಲ್ಲಿ ಲೋಡ್ ಮಾಡುತ್ತದೆ

Best Mobiles in India

English summary
How to View YouTube Desktop site on Android? Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X