KGF Chapter 2 ಸಿನಿಮಾವನ್ನು ಉಚಿತವಾಗಿ ವೀಕ್ಷಿಸಬೇಕೆ?..ಇಲ್ಲಿ ಗಮನಿಸಿ!
ಕನ್ನಡದ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಚಾಪ್ಟರ್ 2 (KGF Chapter 2) ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಎಲ್ಲ ಭಾಷೆಗಳಲ್ಲಿ ಅಬ್ಬರಿಸಿರುವ ಈ ಸಿನಿಮಾ ಕಲೆಕ್ಷನ್ ವಿಷಯದಲ್ಲಿ ಹೊಸ ದಾಖಲೆ ಬರೆದಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ನೀವೇನಾದರೂ ಉಚಿತವಾಗಿ ವೀಕ್ಷಿಸಬೇಕು ಎಂದಿದ್ದರೇ, ಅದಕ್ಕೆ ಅಮೆಜಾನ್ OTT ಪ್ಲಾಟ್‌ಫಾರ್ಮ್ ನಲ್ಲಿ ಅವಕಾಶ ಇದೆ.

ಹೌದು, ಹೊಂಬಾಳೆ ಫೀಲ್ಮ್ಸ್ ನಿರ್ಮಾಣದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಭಾರೀ ಸದ್ದು ಮಾಡಿದೆ. ಈ ಸಿನಿಮಾ ಈಗಾಗಲೇ ಥೇಟರ್‌ಗಳಲ್ಲಿ ಧೂಳೆಬ್ಬಿಸಿದ್ದು, ಇದೀಗ ಓಟಿಟಿ OTT ಪ್ಲಾಟ್‌ಫಾರ್ಮ್ ಪ್ರವೇಶಕ್ಕೆ ಸಿದ್ಧವಾಗಿದೆ. OTT ದೈತ್ಯ ಅಮೆಜಾನ್ ಪ್ರೈಮ್ ವಿಡಿಯೋ ಕೆಜಿಎಫ್ ಚಾಪ್ಟರ್ 2 ಚಿತ್ರದ ಹೊಸ ಟೀಸರ್ ಅನ್ನು ಪ್ರಕಟಿಸಿದೆ.
ಇದೇ ಜೂನ್ 3 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಪ್ರೈಮ್ ವಿಡಿಯೋ ಗ್ರಾಹಕರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೇವೆಯಲ್ಲಿ ಸ್ಟ್ರೀಮ್ ಮಾಡಬಹುದು. ಅಮೆಜಾನ್ ಈ ಬಗ್ಗೆ ಟ್ವಿಟ್ ಮೂಲಕ ತಿಳಿಸಿದೆ.

ಮೇ ತಿಂಗಳಲ್ಲಿ (Amazon Prime) ಅಮೆಜಾನ್ ಪ್ರೈಮ್ ವೀಡಿಯೊ OTT ತನ್ನ ಚಲನಚಿತ್ರ ಬಾಡಿಗೆಗಳ ಪ್ಲಾಟ್‌ಫಾರ್ಮ್ ನಲ್ಲಿ 199 ರೂ.ಗಳಿಗೆ ಸಿನಿಮಾವನ್ನು ಸ್ಟ್ರೀಮಿಂಗ್ ಮಾಡಲು ಲಭ್ಯವಾಗುವಂತೆ ಮಾಡಿದೆ. ಈ ಕೆಜಿಎಫ್ ಚಾಪ್ಟರ್ 1 (KGF Chapter 1) ರ ಮುಂದುವರಿದ ಭಾಗವಾಗಿದೆ ಮತ್ತು ಇದು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆಯುವ ಮೂಲಕ 1000 ರೂ. ಕೋಟಿಗಿಂತ ಹೆಚ್ಚು ಗಳಿಸಿತು. ಈ ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರವು ರಾಕಿಯ ಕಥೆಯನ್ನು ಅನುಸರಿಸುತ್ತದೆ.
ಇನ್ನು ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್, ಈಶ್ವರಿ ರಾವ್, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications








