ಗೂಗಲ್ ಮ್ಯಾಪ್‌ ಮೂಲಕ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡುವುದು ಹೇಗೆ?

Written By:

ಗೂಗಲ್ ಹೊಸ ಹೊಸ ಸೇವೆಗಳನ್ನು ನೀಡುತ್ತಲೆ ಇರುತ್ತದೆ. ಇದಕ್ಕೆ ಹೊಸ ಸೇರ್ಪಡೆ 'ಶೇರ್ ಯುವರ್ ಲೊಕೇಶನ್'.!ಹೆಸರೇ ಹೇಳುವಂತೆ ನಿಮ್ಮ ಸ್ಥಳವನ್ನು ಇತರರೊಂದಿಗೆ ಹಂಚಿಕೊಳ್ಳಲು ನಿಮಗೆ ಅವಕಾಶ ಮಾಡಿಕೊಡುವ ಒಂದು ಹೊಸ ವೈಶಿಷ್ಟ್ಯವಿದು. ಹಾಗಾಗಿ, ನಿಮ್ಮ ಸ್ನೇಹಿತರಿಗೆ ನಿಮ್ಮ ಸ್ಥಳವನ್ನು ಶೇರ್ ಮಾಡಬಹುದು.!!

ಗೂಗಲ್ ನೀಡಿರುವ ಉತ್ತಮ ಸೇವೆಗಳಲ್ಲಿ ಇದು ಕೂಡಾ ಒಂದಾಗಿದ್ದು, ಗೂಗಲ್ ಮ್ಯಾಪ್ ಬಳಕೆದಾರರು ಮೆಸೇಜ್ ಮೂಲಕ ಅಥವಾ ಸೊಶಿಯಲ್ ಮೀಡಿಯಾ ಮೂಲಕ ನೇರವಾಗಿ ಲೊಕೆಶನ್ ಲಿಂಕ್ ಅನ್ನು ಹಂಚಿಕೊಳ್ಳಬಹುದು..!! ಹಾಗಾದರೆ, ಲೊಕೇಶನ್ ಲಿಂಕ್ ಶೆರ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಮೆನು ಕ್ಲಿಕ್ ಮಾಡಿ!!

ಗೂಗಲ್ ಮೆನು ಕ್ಲಿಕ್ ಮಾಡಿ!!

ಗೂಗಲ್ ಮ್ಯಾಪ್ ತೆರೆದ ನಂತರ ನಿಮ್ಮ ಬಲಬಾಗದಲ್ಲಿ ಮೂರು ಗೆರೆಗಳ ರೀತಿಯಲ್ಲಿ ಕಾಣುವ ಗೂಗಲ್ ಮೆನು ಬಟನ್ ಕ್ಲಿಕ್ ಮಾಡಿ, ನಂತರ ಕಾಣುವ ಆಯ್ಕೆಗಳಲ್ಲಿ ಶೇರ್ ಲೊಕೇಶನ್ ಕ್ಲಿಕ್ ಮಾಡಿ. ನಂತರ ಮುಂದುವರೆಯಿರಿ.

ಆಡ್ ಪರ್ಸನ್ ಟ್ಯಾಪ್ ಮಾಡಿ.!!

ಆಡ್ ಪರ್ಸನ್ ಟ್ಯಾಪ್ ಮಾಡಿ.!!

ಶೇರ್ ಲೊಕೇಶನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ 'ಆಡ್ ಪರ್ಸನ್' ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಬಯಸುವ ಅವಧಿಯನ್ನು ಆಯ್ಕೆ ಮಾಡಿ.ನಂತರ 'ಶೇರ್ ಮಾಡಿ'.!!

ನಿಮ್ಮ ಸ್ಥಳವನ್ನು ಅವರು ನೋಡಲು ಸಾಧ್ಯ!!

ನಿಮ್ಮ ಸ್ಥಳವನ್ನು ಅವರು ನೋಡಲು ಸಾಧ್ಯ!!

ನೀವು ಶೇರ್ ಮಾಡಿದ ಲಿಂಕ್ ಅನ್ನು ನಿಮ್ಮ ಗೆಳೆಯರು ಸ್ವೀಕರಿಸಿದ ನಂತರ, ನಿಮ್ಮ ಲೊಕೇಶನ್ ಕುರಿತು ಅವರು ನೋಟಿಫಿಕೇಶನ್ ಪಡೆಯುತ್ತಾರೆ. ಗೂಗಲ್ ಮ್ಯಾಪ್ ಬಳಸಿಕೊಂಡು ನಿಮ್ಮ ನೈಜ ಸ್ಥಳವನ್ನು ಅವರು ನೋಡಲು ಸಾಧ್ಯವಾಗುತ್ತದೆ.!!

ಆಂಡ್ರಾಯ್ಡ್ ಮತ್ತು ಐಒಎಸ್

ಆಂಡ್ರಾಯ್ಡ್ ಮತ್ತು ಐಒಎಸ್

ಗೂಗಲ್‌ನ ಈ ಪ್ರಖ್ಯಾತ ಸೇವೆ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮಾದರಿಯಲ್ಲಿಯೂ ಲಭ್ಯವಿದೆ. ಹಾಗಾಗಿ, ನೀವು ಆಂಡ್ರಾಯ್ಡ್ ಬಳಕೆದಾರರಾದರೂ ಅಥವಾ ಆಪಲ್ ಬಳಕೆದಾರರಾದರೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.!!

ಓದಿರಿ:ಭಯೋತ್ಪಾದನೆ ತಡೆಗೆ ಫೇಸ್‌ಬುಕ್ ಕಾರ್ಯಕ್ಕೆ ಮೆಚ್ಚುಗೆ!!..ಏನು ಮಾಡುತ್ತಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A few weeks, Google announced a new feature to allow you to share your location with others.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot