ಆ್ಯಪಲ್ ಐ ಪ್ಯಾಡ್ ಅನ್ನು ನಿಮ್ಮ ಪಿಸಿ/ಮ್ಯಾಕ್ ಬುಕ್ಕಿನ ಎರಡನೇ ಮಾನಿಟರ್ ಆಗಿ ಪರಿವರ್ತಿಸುವುದೇಗೆ?

Written By:

ಸೆಕೆಂಡರಿ ಮಾನಿಟರ್ ಗಳನ್ನು ಬಳಸುವುದು ಹಲವು ವಿಧದಲ್ಲಿ ಅನುಕೂಲಕರ. ನಿಮ್ಮ ಕೆಲಸದ ಕಾರ್ಯದಕ್ಷತೆಯನ್ನು ಸೆಕಂಡರಿ ಮಾನಿಟರ್ ಗಳು ಹೆಚ್ಚಿಸುತ್ತವೆ. ಆದರೆ ಎರಡು ಮಾನಿಟರ್ ಗಳನ್ನು ಬಳಸುವುದೆಂದರೆ ನಿಮ್ಮ ಟೇಬಲ್ಲಿನ ಮೇಲಿನ ಜಾಗವೂ ದೊಡ್ಡದಿರಬೇಕಾಗುತ್ತದೆ.

ಆ್ಯಪಲ್ ಐ ಪ್ಯಾಡ್ ಅನ್ನುಎರಡನೇ ಮಾನಿಟರ್ ಆಗಿ ಪರಿವರ್ತಿಸುವುದೇಗೆ?

ಟೇಬಲ್ಲಿನ ದೊಡ್ಡ ಜಾಗವನ್ನು ಮಾನಿಟರ್ ಗಳೇ ಆಕ್ರಮಿಸಿಬಿಡುವುದನ್ನು ಸುಲಭವಾಗಿ ಒಪ್ಪುವುದು ಕಷ್ಟವಾಗಿರುವುದರಿಂದಲೇ ಎರಡು ಮಾನಿಟರ್ ಉಪಯೋಗಿಸುವ ಮೊದಲು ಜನರು ಎರಡೆರಡು ಬಾರಿ ಯೋಚಿಸುತ್ತಾರೆ.

ಆ್ಯಪಲ್ ಐಪ್ಯಾಡ್ ಗಳನ್ನು ಸೆಕಂಡರಿ ಮಾನಿಟರ್ ಗಳಾಗಿ ಬಳಸಬಹುದೆಂಬ ವಿಷಯ ನಿಮಗೆ ಗೊತ್ತಿದೆಯೇ? ಅದರ ಬಗ್ಗೆ ಯಾವತ್ತಿಗಾದರೂ ಯೋಚಿಸಿದ್ದೀರಾ?

ಓದಿರಿ: ವರ್ಷವೆಲ್ಲಾ ಉಚಿತ ಸೇವೆ ನೀಡಿದರೂ ಜಿಯೋಗೆ ಲಾಸ್ ಆಗೊಲ್ಲಾ!! ಹೇಗೆ?

ಹೌದು. ಇದು ಸಾಧ್ಯವಿದೆ. ಅದರಲ್ಲೂ ಆ್ಯಪಲ್ ಇತ್ತೀಚೆಗೆ ಬಿಡುಗಡೆಗೊಳಿಸಿದ ಪ್ರೊ ಸರಣಿಯ ಆ್ಯಪಲ್ ಐಪ್ಯಾಡುಗಳನ್ನು ಸೆಕಂಡರಿ ಮಾನಿಟರ್ ಗಳಾಗಿ ಬಳಸಿಕೊಂಡು ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು. ಇದರಲ್ಲಿರುವ ಮತ್ತೊಂದು ಅನುಕೂಲತೆಯೆಂದರೆ ನಿಮ್ಮ ಮೇಜಿನ ಸ್ಥಳವನ್ನಿದು ನುಂಗಿ ಹಾಕುವುದಿಲ್ಲ. ಚೆಂದದ ಯೋಚನೆ ಎನ್ನಿಸುತ್ತಿದೆಯಲ್ಲವೇ? ಐಪ್ಯಾಡ್ ಅನ್ನು ಸೆಕಂಡರಿ ಮಾನಿಟರ್ ಆಗಿ ಬಳಸುವ ಬಗೆ ಹೇಗೆಂದು ತಿಳಿದುಕೊಳ್ಳೋಣ ಬನ್ನಿ.

ಆ್ಯಪಲ್ ಐ ಪ್ಯಾಡ್ ಅನ್ನುಎರಡನೇ ಮಾನಿಟರ್ ಆಗಿ ಪರಿವರ್ತಿಸುವುದೇಗೆ?

ಕೆಳಗಿನ ಸರಳ ಕ್ರಮಗಳನ್ನು ಅನುಸರಿಸಿ ಐಪ್ಯಾಡ್ ಅನ್ನು ಸೆಕಂಡರಿ ಮಾನಿಟರ್ ಆಗಿ ಬಳಸಬಹುದು.

ಇವುಗಳಲ್ಲಿ ಒಂದ್ಯಾವುದಾದರೂ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ.

ನಿಮ್ಮ ಐಪ್ಯಾಡ್ ಅನ್ನು ಸೆಕಂಡರಿ ಮಾನಿಟರ್ ಆಗಿ ಬಳಸಲು ಅನುವು ಮಾಡಿಕೊಡಲು ಅನೇಕ ತಂತ್ರಾಂಶಗಳು ಲಭ್ಯವಿದೆ. ನಿಮಗೆ ಯಾವುದು ಮೆಚ್ಚುಗೆಯಾಗುತ್ತದೋ ಆ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ. ಇರುವುದರಲ್ಲಿ ಉತ್ತಮ ಎಂದು ನಮಗೆ ಅನ್ನಿಸಿದ ಆ್ಯಪ್ ಗಳೆಂದರೆ ಏರ್ ಡಿಸ್ಪ್ಲೇ 2, ಸ್ಪ್ಲ್ಯಾಶ್ ಟಾಪ್ ವೈರ್ ಲೆಸ್ ಡಿಸ್ಪ್ಲೇ 2 ಮತ್ತು ಡುಯಟ್ ಡಿಸ್ಪ್ಲೇ.

ಆ್ಯಪಲ್ ಐ ಪ್ಯಾಡ್ ಅನ್ನುಎರಡನೇ ಮಾನಿಟರ್ ಆಗಿ ಪರಿವರ್ತಿಸುವುದೇಗೆ?

ಈ ಸಂಗತಿಗಳ ಬಗ್ಗೆ ತಿಳಿದಿರಿ.

* ಮೇಲೆ ತಿಳಿಸಿದ ಕೆಲವು ತಂತ್ರಾಂಶಗಳನ್ನು ದುಡ್ಡು ಕೊಟ್ಟು ತೆಗೆದುಕೊಳ್ಳಬೇಕು, ಕೆಲವು ಉಚಿತವಾಗಿ ಲಭ್ಯವಿದೆ. ಬಹಳಷ್ಟು ತಂತ್ರಾಂಶಗಳು ಉಚಿತವಾಗಿ ಮತ್ತು ದುಡ್ಡು ಕೊಟ್ಟು ಖರೀದಿಸುವ ಆವೃತ್ತಿಗಳೆರಡರಲ್ಲೂ ಲಭ್ಯವಿರುತ್ತದೆ. ಉಚಿತ ತಂತ್ರಾಂಶಗಳಲ್ಲಿ ಜಾಹೀರಾತುಗಳಿರುತ್ತವೆ, ಕೆಲಸ ಮಾಡುವಾಗ ಈ ಜಾಹೀರಾತುಗಳು ಒಂದಷ್ಟು ಕಿರಿಕಿರಿ ಉಂಟುಮಾಡಬಹುದು.

* ಈ ತಂತ್ರಾಂಶಗಳು ವೈಫೈ ಮತ್ತು ವೈರ್ಡ್ ಸಂಪರ್ಕಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ. ವೈಫೈ ಮೂಲಕ ಉಪಯೋಗಿಸಿದಾಗ ಒಂದಷ್ಟು ತಡವಾಗಿ ಸ್ಪಂದನೆ ಸಿಗುತ್ತದೆಯನ್ನುವುದನ್ನು ನೆನಪಿಡಿ. ಆದ್ದರಿಂದ ತಡೆರಹಿತ ಕೆಲಸಕ್ಕಾಗಿ ವೈರ್ ಬಳಸುವುದು ಸೂಕ್ತ.

ಉಪಯೋಗಿಸುವ ಬಗೆ.

> ಒಂದು ತಂತ್ರಾಂಶವನ್ನು ನಿಮ್ಮ ಐಪ್ಯಾಡಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

> ನಿಮ್ಮ ಐಪ್ಯಾಡಿಗೆ ಡೌನ್ ಲೋಡ್ ಮಾಡಿಕೊಂಡ ಆ್ಯಪ್ ನ ಅಧಿಕೃತ ವೆಬ್ ಪುಟದಿಂದ ಪಿಸಿ/ಮ್ಯಾಕ್ ಗೆ ಬೇಕಾದ ಸಾಫ್ಟ್ ವೇರ್ ಡೌನ್ ಲೋಡ್ ಮಾಡಿಕೊಳ್ಳಿ.

> ಪಿಸಿ/ ಮ್ಯಾಕ್ ನಲ್ಲಿ ಡ್ರೈವರ್ ಮತ್ತು ಸಾಫ್ಟ್ ವೇರ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ.

> ವೈಫೈ ಮೂಲಕ ಉಪಯೋಗಿಸುವ ಉದ್ದೇಶವಿದ್ದರೆ: ಐಪ್ಯಾಡ್ ಮತ್ತು ಪಿಸಿ/ಮ್ಯಾಕ್ ಅನ್ನು ಒಂದೇ ವೈಫೈ ನೆಟ್ ವರ್ಕಿಗೆ ಸಂಪರ್ಕಿಸಿ. ಐಪ್ಯಾಡಿನಲ್ಲಿ ಆ್ಯಪ್ ಅನ್ನು ತೆರೆಯಿರಿ, ನೆಟ್ ವರ್ಕ್ ಸೆಟ್ಟಿಂಗ್ಸ್ ಅನ್ನು ಕಾನ್ಫಿಗರ್ ಮಾಡಿ, ಅಷ್ಟೇ! ನಿಮ್ಮ ಐಪ್ಯಾಡ್ ಈಗ ಸೆಕಂಡರಿ ಮಾನಿಟರ್ ಆಗಿ ಕಾರ್ಯನಿರ್ವಹಿಸುತ್ತಿದೆ!

> ವೈರ್ ಮೂಲಕ ಉಪಯೋಗಿಸುವ ಉದ್ದೇಶವಿದ್ದರೆ: ಐಪ್ಯಾಡ್ ಮತ್ತು ಪಿಸಿ/ಮ್ಯಾಕ್ ನಲ್ಲಿ ಆ್ಯಪ್ ಅನ್ನು ತೆರೆಯಿರಿ. ಐಪ್ಯಾಡ್ ಅನ್ನು ಪಿಸಿ/ಮ್ಯಾಕ್ ಗೆ ಯು.ಎಸ್.ಬಿ ಕೇಬಲ್ ಮೂಲಕ ಸಂಪರ್ಕಿಸಿದರೆ ಸೆಕಂಡರಿ ಮಾನಿಟರ್ ಸಿದ್ಧ.

> ಈ ಆ್ಯಪ್ ಗಳು ನಿಮ್ಮ ಐಪ್ಯಾಡ್ ನಿಮ್ಮ ಬಲಬದಿಯಲ್ಲಿದೆ ಎಂದು ಭಾವಿಸಿಕೊಂಡಿರುತ್ತವೆ. ಆದರೆ ಎಲ್ಲಾ ಸಮಯದಲ್ಲೂ ಅದು ಬಲಬದಿಯಲ್ಲೇ ಇರಬೇಕೆಂದೇನಿಲ್ಲ. ಈ ಸೆಟ್ಟಿಂಗ್ಸ್ ಅನ್ನು ಬದಲಿಸಲು ಸಿಸ್ಟಮ್ ಪ್ರಿಫರೆನ್ಸಸ್ ಗೆ ಹೋಗಿ ಡಿಸ್ಪ್ಲೇಸ್ ಮೇಲೆ ಕ್ಲಿಕ್ಕಿಸಿ (ವಿಂಡೋಸ್ ನಲ್ಲಾದರೆ ರೈಟ್ ಕ್ಲಿಕ್ ಮಾಡಿ ಡಿಸ್ಪ್ಲೇ ಮೇಲೆ ಕ್ಲಿಕ್ಕಿಸಿ). ಈಗ ನಿಮ್ಮ ಪರದೆಯಲ್ಲಿ ಎರಡು ಚೌಕಾಕಾರದ ಬಾಕ್ಸುಗಳು ಕಾಣುತ್ತವೆ - ಅವುಗಳಲ್ಲೊಂದು ನಿಮ್ಮ ಐಪ್ಯಾಡ್ ಮತ್ತು ಇನ್ನೊಂದು ಮ್ಯಾಕ್/ಪಿಸಿ. ಒಂದು ಚೌಕದ ಮೇಲೆ ಕ್ಲಿಕ್ಕಿಸಿ ನಿಮಗೆ ಅನುಕೂಲಕರವಾದ ಜಾಗಕ್ಕೆ ಡ್ರ್ಯಾಗ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Here"s how you can turn your iPad into a secondary monitor for PC/Mac.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot