Subscribe to Gizbot

ವರ್ಷವೆಲ್ಲಾ ಉಚಿತ ಸೇವೆ ನೀಡಿದರೂ ಜಿಯೋಗೆ ಲಾಸ್ ಆಗೊಲ್ಲಾ!! ಹೇಗೆ?

Written By:

ಇದೀಗ ಬಂದಿರುವ ಮಾಹಿತಿಯಂತೆ ಮಾರ್ಚ್ 2017 ರ ನಂತರವೂ ಜಿಯೋ ಉಚಿತ ಸೇವೆ ರೀತಯಲ್ಲಿಯೇ ಅತಿ ಕಡಿಮೆದರದಲ್ಲಿ ಜಿಯೋ ಸೇವೆಯನ್ನು ನಿಡುತ್ತದೆ ಎನ್ನುವ ಮಾಹಿತಿ ಹರಿದಾಡಿದೆ.!! ಹೌದು, ಕೇವಲ 100 ರಿಂದ 150 ರೂಪಾಯಿಗಳಲ್ಲಿಯೇ ತಿಂಗಳು ಪೂರ್ತಿ ತನ್ನ ಸೇವೆಗಳನ್ನು ಜಿಯೋ ಒದಗಿಸುತ್ತದೆ. ಇನ್ನೊಂದು ಮಾಹಿತಿಯ ಪ್ರಕಾರ ಮುಂದೆಯೂ ಉಚಿತವಾಗಯೇ ಸೇವೆಯನ್ನು ನೀಡುತ್ತದೆ ಎನ್ನಲಾಗಿದೆ.!!

ಅಂದರೆ ಅನ್‌ಲಿಮಿಟೆಡ್ ಕಾಲ್ , ಅನ್‌ಲಿಮಿಟೆಡ್ ಇಂಟರ್‌ನೆಟ್, ಅನ್‌ಲಿಮಿಟೆಡ್ ಮೆಸೇಜ್ ಎಲ್ಲವನ್ನು ಉಚಿತವಾಗಿಯೇ ಅಥವಾ ಕೇವಲ 100 ರಿಂದ 150ರೂ.ಗಳಿಗೆ ಜಿಯೋ ಗ್ರಾಹಕರು ಪಡೆಯಲಿದ್ದಾರೆ. ಇಷ್ಟು ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿರುವ ಜಿಯೋ ಮತ್ತೆ ಗ್ರಾಹಕರ ಕುತೋಹಲದ ಕೇಂದ್ರಬಿಂದು ಆಗಿದೆ.

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ಜಿಯೋ ಯಾಕೆ ಈ ರೀತಿ ಉಚಿತ ಸೇವೆಗಳನ್ನು ನೀಡುತ್ತಿದೆ.? ಟೆಲಿಕಾಂಗೆ ಬಂದಾಗ ಗ್ರಾಹಕರನ್ನು ಹೊಂದಲು ಈ ಉಚಿತ ಸೇವೆ ನೀಡಿದ್ದು ಅಲ್ಲವೇ? ಆದರೆ, ಮತ್ತೆ ಯಾಕೆ ಇಷ್ಟು ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿದೆ ಎಂದು ಎಲ್ಲರಲ್ಲಿಯೂ ಪ್ರಶ್ನೆ ಮೂಡಿದೆ. ಇನ್ನು ಈ ರೀತಿಯ ಸೇವೆಯಿಂದ ಜಿಯೋಗೆ ನಷ್ಟವಾಗುವುದಿಲ್ಲವೇ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡಿದೆ.!!

ಇನ್ನು ಜಿಯೋವಿನ ಈ ನಡೆಯನ್ನು ನೋಡಿದರೆ ಎಲ್ಲರಿಗೂ ಈ ರೀತಿಯ ಪ್ರಶ್ನೆಗಳು ಮೂಡುತ್ತವೆ. ಅದಕ್ಕಾಗಿ ನಾವು ಇಂದು ಜಿಯೋ ಉಚಿತ ಸೇವೆಯನ್ನು ಯಾಕೆ ನೀಡುತ್ತದೆ ಮತ್ತು ಇದರಿಂದ ಜಿಯೋಗೆ ಏಕೆ ನಷ್ಟವಾಗುವುದಿಲ್ಲ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಸೇವೆಗಳನ್ನು ಎಲ್ಲರೂ ಬಳಸಲೇಬೇಕು!!

ಜಿಯೋ ಸೇವೆಗಳನ್ನು ಎಲ್ಲರೂ ಬಳಸಲೇಬೇಕು!!

ಜಿಯೋವಿನ ಉಚಿತ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಬೇಕು ಎಂದರೆ ಜಿಯೋ ಸೇವೆಗಳಾದ ಜಿಯೋ ಮೂವಿ, ಜಿಯೋ ಚಾಟ್ ಮತ್ತು ಇತರ ಎಲ್ಲಾ ಸೇವೆಗಳನ್ನಿ ಜಿಯೋ ಗ್ರಾಹಕರು ಬಳಸಲೇಬೇಕು. ಇದು ಜಿಯೋವಿನ ಮೊದಲ ಟ್ರಿಕ್. ಈ ರೀತಿ ಬಳಸಿದರೆ ದೇಶದಲ್ಲಿರುವ ಎಲ್ಲಾ ಆನ್‌ಲೈನ್‌ ಸೇವಾ ಕಂಪೆನಿಗಳನ್ನು ಮೀರಿ ಜಿಯೋ ಬೆಳೆಯುತ್ತದೆ.

ಜನರ ದುಡ್ಡಿಗಿಂತ ಜಾಹಿರಾತು ಬೆಲೆ ಜಾಸ್ತಿ.!!

ಜನರ ದುಡ್ಡಿಗಿಂತ ಜಾಹಿರಾತು ಬೆಲೆ ಜಾಸ್ತಿ.!!

ಆನ್‌ಲೈನ್ ಮಾರುಕಟ್ಟೆಯಲ್ಲಿ ಉಚಿತ ಸೇವೆ ನೀಡುತ್ತಿರುವ ಹಲವು ಸೈಟ್‌ಗಳಿವೆ. ಉದಾಹರಣೆಗೆ ಪೇಟಿಎಂ ತೆಗೆದುಕೊಳ್ಳಿ. ಜನರಿಂದ ಒಂದೇ ಒಂದು ರೂಪಾಯಿಯನ್ನು ತೆಗೆದುಕೊಳ್ಳದೇ ಸಾವಿರಾರು ಕೋಟಿ ಆದಾಯವನ್ನು ಹೇಗೆ ಗಳಿಸುತ್ತದೆ ಎಂಬುದು ನಿಮಗೆ ಗೊತ್ತಿದಿಯಾ? ಇದೇ ತಂತ್ರವನ್ನು ಜಿಯೋ ಹಾಕಿಕೊಂಡಿದೆ. ಹಾಗಾಗಿ, ಜಿಯೋ ಟೆಲಿಕಾಂನಲ್ಲಿ ತನ್ನ ಉಚಿತ ಸೇವೆಯನ್ನು ನಿಡುತ್ತದೆ.

ಜಿಯೋ ನೆಟ್‌ವರ್ಕ್ ಜಿಯೋ ಆಟ!

ಜಿಯೋ ನೆಟ್‌ವರ್ಕ್ ಜಿಯೋ ಆಟ!

ಸಾಮಾಜಿಕ ಶಾಪಿಂಗ್ ಜಾಲತಾಣಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಂತೆಯೇ ಜಿಯೋ ಸಹಸಂಸ್ಥೆ ರಿಲಾಯನ್ಸ್ ಮಾರ್ಟ್ ಕೂಡ ಆನ್‌ಲೈನ್ ಶಾಪಿಂಗ್ ಜಾಲತಾಣವನ್ನು ಹೊಂದಿದೆ. ಇದು ಮುಂದೆ ಜಿಯೋ ಶಾಪಿಂಗ್ ಜಾಲತಾಣವಾಗಿ ಬದಲಾಗಿ, ತನ್ನೆಲ್ಲಾ ವ್ಯವಹಾರಗಳನ್ನು ಜಿಯೋ ತನ್ನ ನೆಟ್‌ವರ್ಕ್‌ನಲ್ಲಿಯೇ ನಡೆಸುತ್ತದೆ ಇದರಿಂದ ಜಿಯೋ ಆದಾಯ ಹೆಚ್ಚುತ್ತದೆ.

ಸಾಮಾಜಿಕ ಜಾಲತಾಣಗಳ ಆರ್ಭಟಕ್ಕೆ ಬ್ರೇಕ್

ಸಾಮಾಜಿಕ ಜಾಲತಾಣಗಳ ಆರ್ಭಟಕ್ಕೆ ಬ್ರೇಕ್

ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಗಳಿಸಿರುವ ಪಾಶ್ಚಾತ್ಯ ರಾಷ್ಟಗಳ ಪ್ರಾಡಕ್ಟ್‌ ಫೇಸ್‌ಬುಕ್ ಮತ್ತು ವಾಟ್ಸ್ಆಪ್‌ಗಳನ್ನು ಮೀರಿ ಜಿಯೋವನ್ನು ಬೆಳೆಸಬೇಕು ಎಂದು ಅಂಬಾನಿ ಪ್ಲಾನ್ ಆಗಿದೆ. ವರ್ಷಕ್ಕೆ ನೂರಾರು ಕೋಟಿ ಆದಾಯ ಗಳಿಸುವ ಫೇಸ್‌ಬುಕ್ ಮತ್ತು ವಾಟ್ಸ್ಆಪ್ ಮಟ್ಟಹಾಕಿ. ಜಿಯೋ ನೆಟ್‌ವರ್ಕ್ ಮೂಲಕ ಜಿಯೋ ಬಕ್ ತೆರೆದು ಉಚಿತ ಸೇವೆ ನೀಡಿದರೆ ಫೇಸ್‌ಬುಕ್ ಬಳಕೆಯನ್ನು ಬಿಡುತ್ತಾರೆ ಎನ್ನುವುದು ಜಿಯೋವಿನ ಲೆಕ್ಕಾಚಾರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
I have been following the news about Reliance Jio since many years, and have written multiple articles about Jio in the past many months. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot