ಯುಟ್ಯೂಬ್‌ನ ಆಟೋ ಪ್ಲೇ ಫೀಚರ್‌ ಆಫ್ ಮಾಡುವುದು ಹೇಗೆ?

By GizBot Bureau
|

ಇತ್ತೀಚೆಗೆ ಯುಟ್ಯೂಬ್ ಬಳಕೆ ಮಾಡುವವರ ಸಂಖ್ಯೆ ಅಧಿಕವಾಗುತ್ತಲೇ ಸಾಗುತ್ತಿದೆ. ಯುಟ್ಯೂಬ್ ನ್ನು ಪ್ರತಿದಿನ ಬಳಕೆ ಮಾಡುವವರಿಗೆ ಈ ವೈಶಿಷ್ಟ್ಯದ ಬಗ್ಗೆ ಅರಿವು ಇದ್ದೇ ಇರುತ್ತದೆ. ಅದುವೇ ಆಟೋ ಪ್ಲೇ. ಈಗಾಗಲೇ ಆಟೋ ಪ್ಲೇ ವೈಶಿಷ್ಟ್ಯವನ್ನು ನಾವು ಹಲವಾರು ದಿನಗಳಿಂದ ಯುಟ್ಯೂಬ್ ನಲ್ಲಿ ಬಳಸುತ್ತಿದ್ದೇವೆ.

ಈ ವೈಶಿಷ್ಟ್ಯದ ಅನುಸಾರ ಬಳಕೆದಾರರು ಯುಟ್ಯೂಬ್ ನಲ್ಲಿ ಸರತಿಯಲ್ಲಿರುವ ವೀಡಿಯೋವನ್ನು ಆಟೋಮ್ಯಾಟಿಕ್ ಆಗಿ ಪ್ಲೇ ಮಾಡುವ ಸವಲತ್ತು ಹೊಂದಿರುತ್ತಾರೆ. ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗಾಗಿ ಆಟೋ ಪ್ಲೇ ವೈಶಿಷ್ಟ್ಯವನ್ನು ಗೂಗಲ್ ಸಂಸ್ಥೆ ಪರೀಕ್ಷೆಗೆ ಒಳಪಡಿಸುತ್ತಿದೆ.

ಯುಟ್ಯೂಬ್‌ನ ಆಟೋ ಪ್ಲೇ ಫೀಚರ್‌ ಆಫ್ ಮಾಡುವುದು ಹೇಗೆ?

ಅದೇನು ಪರೀಕ್ಷೆ? ?ಯಾಕೆ ಎಂಬ ಹತ್ತಾರು ಪ್ರಶ್ನೆಗಳು ಈಗ ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು.

ಈ ವೈಶಿಷ್ಟ್ಯವು ವೆಬ್ ವರ್ಷನ್, ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್(ಐಫೋನ್ ಮತ್ತು ಐಪ್ಯಾಡ್) ಗಳಲ್ಲಿ ಲಭ್ಯವಿದೆ. ಆದರೆ ಅದೃಷ್ಟವಶಾತ್ ಈ ವೈಶಿಷ್ಟ್ಯವನ್ನು ಆಫ್ ಮಾಡುವ ಅವಕಾಶವನ್ನು ಯುಟ್ಯೂಬ್ ಕರುಣಿಸಿದೆ. ಇಲ್ಲದೇ ಇದ್ದರೆ ಯುಟ್ಯೂಬ್ ಬಳಕೆ ಅಲ್ಪಮಟ್ಟಿಗೆ ಕಿರಿಕಿರಿಯಾಗುವ ಸಾಧ್ಯತೆಗಳಿತ್ತು.

ಜಾಹಿರಾತುದಾರರು ಇದನ್ನೇ ಸದುಪಯೋಗ ಪಡಿಸಿಕೊಂಡು ಗ್ರಾಹಕರನ್ನು ಸೆಳೆಯುವ ಯತ್ನ ಮಾಡುವ ಸಾಧ್ಯತೆ ಇತ್ತು. ಆದರೆ ಈ ಆಟೋ ಪ್ಲೈ ವೈಶಿಷ್ಟ್ಯವನ್ನು ಆಫ್ ಮಾಡುವ ಅವಕಾಶ ಲಭ್ಯವಿದೆ. ಹಾಗಾದ್ರೆ ಅದನ್ನು ಆಫ್ ಮಾಡುವುದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಅಗತ್ಯತೆಗಳು :

• ಒಂದು ವೇಳೆ ನೀವು ಯುಟ್ಯೂಬ್ ಆಪ್ ಬಳಕೆ ಮಾಡುತ್ತಿದ್ದರೆ, ನಿಮ್ಮ ಆಪ್ ಸ್ಟೋರ್ ನಿಂದ ಲೇಟೆಸ್ಟ್ ವರ್ಷನ್ ನ್ನು(13.25.56) ಇನ್ಸ್ಟಾಲ್ ಮಾಡಿಕೊಳ್ಳಿ.

ಯುಟ್ಯೂಪ್ ಆಪ್ ಅಪ್ ಲೋಡ್ ಮಾಡಿ.

ಒಂದು ವೇಳೆ ನೀವು ಹಳೆಯ ಯುಟ್ಯೂಬ್ ವರ್ಷನ್ ಅಪ್ ಲೋಡ್ ಮಾಡಿಕೊಂಡಿದ್ದರೆ ನೀವು ಅದನ್ನು ಅಪ್ ಡೇಟ್ ಮಾಡಿಕೊಳ್ಳಬೇಕು.

ಯುಟ್ಯೂಬ್‌ನ ಆಟೋ ಪ್ಲೇ ಫೀಚರ್‌ ಆಫ್ ಮಾಡುವುದು ಹೇಗೆ?

1. ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು ಯುಟ್ಯೂಬ್ ಆಪ್ ನ್ನು ಸರ್ಚ್ ಮಾಡಿ. (ಒಂದು ವೇಳೆ ನೀವು ಆಟೋ ಅಪ್ ಡೇಟ್ ಗೆ ಅವಕಾಶ ನೀಡಿಲ್ಲದೇ ಇದ್ದರೆ ಇದನ್ನು ಮಾಡಬೇಕು )

2. ಆಪ್ ನಲ್ಲಿ ಇನ್ಸ್ಟಾಲ್ ಬಟನ್ ಇರುವ ಬದಲಾಗಿ ಅಪ್ ಡೇಟ್ ಬಟನ್ ಇದಿಯೇ ಎಂಬುದನ್ನ ಗಮನಿಸಿ, 3. ಅಪ್ ಡೇಟ್ ಬಟನ್ ನ್ನು ಟ್ಯಾಪ್ ಮಾಡಿ. ಲೇಟೆಸ್ಟ್ ವರ್ಷನ್ ಡೌನ್ ಲೋಡ್ ಮಾಡುವುದನ್ನು ಆರಂಭಿಸಿ.

ಅನುಸರಿಸಬೇಕಾಗಿರುವ ಹಂತಗಳು

1. ಲಾಂಚರ್ ಮೂಲಕ ಇಲ್ಲವೇ ಶಾರ್ಟ್ ಕಟ್ ಇಟ್ಟಿದ್ದರೆ ಅದರ ಮೂಲಕ ಯುಟ್ಯೂಬ್ ಆಪ್ ನ್ನು ತೆರೆಯಿರಿ.

2. ಅವತಾರ್ ಐಕಾನ್ ನ್ನು ಟ್ಯಾಪ್ ಮಾಡಿ. ಅದು ಆಪ್ ನ ಮೇಲ್ಬಾಗದ ಬದಿಯಲ್ಲಿ ಅದು ಇರುತ್ತದೆ.

3. ನಂತರ, ಅಕೌಂಟ್ ವಿಭಾಗದಿಂದ ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ.

4. ಈಗ, ಆಟೋ ಪ್ಲೇ ಆಯ್ಕೆಯನ್ನು ಟ್ಯಾಪ್ ಮಾಡಿ. ಆ ಆಯ್ಕೆಯನ್ನು ಆಫ್ ಮಾಡಿ.

ಈಗ ನೀವು ಯುಟ್ಯೂಬ್ ವೆಬ್ ವರ್ಷನ್ ಬಳಸುತ್ತಿರುವವರಾದರೆ, ಜಸ್ಟ್ ಅಪ್ ನೆಕ್ಸ್ಟ್ ವಿಭಾಗದಲ್ಲಿರುವ ಅಟೋ ಪ್ಲೇ ಟಾಗಲ್ ನ್ನು ಆಫ್ ಮಾಡಿದರೆ ಸಾಕು.

ಒಮ್ಮೆ ನೀವು ಈ ವೈಶಿಷ್ಟ್ಯವನ್ನು ಆಫ್ ಮಾಡಿದರೆ, ಯುಟ್ಯೂಬ್ ನಲ್ಲಿ ಯಾವುದೇ ಕಾರಣಕ್ಕೂ ಮುಂದಿನ ವೀಡಿಯೋಗಳು ಸರಣಿಯಲ್ಲಿ ಅಟ್ಯೋಮ್ಯಾಟಿಕ್ ಆಗಿ ಪ್ಲೇ ಆಗುವುದಿಲ್ಲ.

Best Mobiles in India

English summary
How to turn off autoplay feature in YouTube. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X