ವೈ-ಫೈ ಇದ್ದಾಗ ಆಪ್‌ಗಳು 'ಆಟೊ ಅಪ್‌ಡೇಟ್' ಆಗುವಂತೆ ಮಾಡುವುದು ಹೇಗೆ?

Written By:

ಆಂಡ್ರಾಯ್ಡ್ ಫೋನ್‌ಗಳನ್ನು ಬಳಕೆ ಮಾಡುತ್ತಿರುವವರು ಆಂಡ್ರಾಯ್ಡ್ ಆಪ್‌ಗಳನ್ನು ಯಾವಾಗಲೂ ಅಪ್‌ಡೇಟ್ ಮಾಡುತ್ತಿರಬೇಕು.! ಸಾಕಷ್ಟು ಆಪ್‌ಗಳು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಹೊಂದುವುದರಿಂದ ಹೆಚ್ಚು ಫೀಚರ್ಸ್ ಮತ್ತು ಸುರಕ್ಷತೆಗಾಗಿ ಆಪ್‌ಗಳನ್ನು ಅಪ್‌ಡೇಟ್ ಮಾಡುವುದು ಕೂಡ ಅನಿವಾರ್ಯ.!!

ಹಾಗಾಗಿಯೇ, ಗೂಗಲ್ ನಿಮಗೆ ಸಹ ಆಪ್‌ಗಳನ್ನು ಅಪ್‌ಡೆಟ್ ಮಾಡಿಕೊಳ್ಳಲು ಕೇಳಿಕೊಳ್ಳುತ್ತದೆ.! ಒಮ್ಮೆ ನೀವು ಇಂಟರ್‌ನೆಟ್ ಸಂಪರ್ಕಕ್ಕೆ ಬಂದರೆ ಸಾಕು "ಅಪ್‌ಡೇಟ್ ಯುವರ್ ಆಪ್ಸ್' ಎಂಬ ನೋಟಿಫಿಕೇಶನ್ ಬರುತ್ತದೆ. ಆದರೆ, ನೀವು ಅಪ್‌ಡೇಟ್ ಮಾಡುವ ಮುನ್ನ ನಿಮ್ಮ ಡೇಟಾದ ಸ್ಥಿತಿಯನ್ನು ಒಮ್ಮೆ ಪರಿಶೀಲಿಸಬೇಕಿರುತ್ತದೆ.!!

ವೈ-ಫೈ ಇದ್ದಾಗ ಆಪ್‌ಗಳು 'ಆಟೊ ಅಪ್‌ಡೇಟ್' ಆಗುವಂತೆ ಮಾಡುವುದು ಹೇಗೆ?

ಹೌದು, ಆಪ್‌ಗಳು ಅಪ್‌ಡೇಟ್ ಕೇಳಿದಾಗ ಅದಕ್ಕೆ ಒಪ್ಪಿಗೆ ನೀಡುವ ಮುನ್ನ ನೀವು ವೈ-ಫೈ ಅಥವಾ ಅನ್ಲಿಮಿಟೆಡ್ ಡೇಟಾ ಪ್ಯಾಕ್ ಹೊಂದಿದ್ದರೆ ತೊಂದರೆಯಿಲ್ಲ. ಆದರೆ, ಕಡಿಮೆ ಡೇಟಾ ನಿಮ್ಮ ಮೊಬೈಲ್‌ನಲ್ಲಿದ್ದರೆ ಅವುಗಳನ್ನು ಅಪ್‌ಡೇಟ್ ಮಾಡಿದರೆ ನಿಮ್ಮೆಲ್ಲಾ ಡೇಟಾ ಖಾಲಿಯಾಗುತ್ತದೆ. ಮತ್ತು ಅಪ್‌ಡೇಟ್ ನೋಟಿಫಿಕೇಶನ್‌ಗಳನ್ನು ನೆನಪಿಡಲು ಸಾಧ್ಯವಿಲ್ಲ.!!

ವೈ-ಫೈ ಇದ್ದಾಗ ಆಪ್‌ಗಳು 'ಆಟೊ ಅಪ್‌ಡೇಟ್' ಆಗುವಂತೆ ಮಾಡುವುದು ಹೇಗೆ?

ಹಾಗಾಗಿ, ವೈ-ಫೈ ಇದ್ದಾಗ ಆಪ್‌ಗಳು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುವಂತೆ ನಾವು ಮಾಡಬಹುದು.! ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮೇಲ್ಭಾಗದಲ್ಲಿ ಮೂರು ಗೆರೆಗಳ ಮೆನು ಐಕಾನ್ ತೆರೆದು ಸೆಟ್ಟಿಂಗ್ಸ್ ಆಯ್ಕೆ ಮಾಡಿ. ನಂತರ "ಆಟೊ ಅಪ್‌ಡೇಟ್"ನಲ್ಲಿ ವೈ-ಫೈ ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ನೀವು ವೈ-ಫೈಗೆ ಕನೆಕ್ಟ್ ಆದ ತಕ್ಷಣ ಆಪ್‌ಗಳು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತವೆ.

ಓದಿರಿ: ಇದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು ಈ ಟೆಲಿಕಾಂ!!

English summary
Many Android smartphone users download far too many apps for them to keep updating each one manually. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot