ವಿಂಡೋಸ್ 10 ಗೆ ಅಪ್ಗ್ರೇಡ್ ಮತ್ತು ವಿಂಡೋಸ್ 7/8.1 ಗೆ ಡೌನ್ಗ್ರೇಡ್ ಮಾಡುವುದು ಹೇಗೆ?

By Tejaswini P G
|

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಪ್ರತಿಯೊಬ್ಬರೂ ಮತ್ತು ಪ್ರತಿಯೊಂದೂ ಕಾಲಕಾಲಕ್ಕೆ ಅಪ್ಡೇಟ್ ಅಗುತ್ತಿರಲೇ ಬೇಕು. ಈ ಲೇಖನದಲ್ಲಿ ನಿಮ್ಮ ಕಂಪ್ಯೂಟರ್ನಲ್ಲಿ ವಿಂಡೋಸ್ 7 ಅಥವಾ 8.1 ನಿಂದ ವಿಂಡೋಸ್ 10 ಗೆ ಅಪ್ಗ್ರೇಡ್ ಮಾಡುವುದು ಹೇಗೆಂದು ತಿಳಿಸಲಿದ್ದೇವೆ. ಹಾಗೆಯೇ ವಿಂಡೋಸ್ 7 / 8.1 ಗೆ ಮತ್ತೆ ಡೌನ್ಗ್ರೇಡ್ ಮಾಡುವುದನ್ನೂ ಇಲ್ಲಿ ತಿಳಿಸಲಿದ್ದೇವೆ. ಹೀಗೆ ಅಪ್ಗ್ರೇಡ್ ಅಥವಾ ಡೌನ್ಗ್ರೇಡ್ ಮಾಡುವ ಮೊದಲು ಇದನ್ನು ಸಿದ್ಧಪಡಿಸಿಕೊಳ್ಳಿ

  • ವಿಂಡೋಸ್ 7 ಅಥವ 8.1 ನ ಒರಿಜಿನಲ್ ಆವೃತ್ತಿ
  • ವಿಂಡೋಸ್ 7 ಅಥವ 8.1 ನ ಲೈಸೆನ್ಸ್ ಕೀ
  • ಹಾಗೆಯೇ ನಿಮ್ಮ ಮುಖ್ಯ ಫೈಲ್ ಮತ್ತು ಮಾಹಿತಿಗಳ ಬ್ಯಾಕಪ್ ತೆಗೆದಿರಿಸಲು ಮರೆಯದಿರಿ
ವಿಂಡೋಸ್ 10 ಗೆ ಅಪ್ಗ್ರೇಡ್ ಮತ್ತು ವಿಂಡೋಸ್ 7/8.1 ಗೆ ಡೌನ್ಗ್ರೇಡ್ ಮಾಡುವುದು ಹೇಗ

ವಿಂಡೋಸ್ 10 ಗೆ ಅಪ್ಗ್ರೇಡ್ ಮಾಡುವ ವಿಧಾನ

ಹಂತ 1: ಮೊದಲಿಗೆ ನೀವು ಅಪ್ಗ್ರೇಡ್ ಮಾಡಬಯಸುವ ಕಂಪ್ಯೂಟರ್ ನಲ್ಲಿ ವಿಂಡೋಸ್ 10 ಮೀಡಿಯಾ ಕ್ರಿಯೇಶನ್ ಟೂಲ್ ಪೇಜ್ (https://www.microsoft.com/en-us/software-download/windows10ISO) ಗೆ ಹೋಗಿ. ಈಗ "ಡೌನ್ಲೋಡ್ ಟೂಲ್ ನೌ" ಮೇಲೆ ಕ್ಲಿಕ್ ಮಾಡಿ. ಈಗ "MediaCreationtool.exe" ಡೌನ್ಲೋಡ್ ಆಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಬರುವ ಪ್ರಾಮ್ಪ್ಟ್ ನಲ್ಲಿ "ಎಸ್" ಎಂದು ಕ್ಲಿಕ್ ಮಾಡಿ.

ಹಂತ 2:
ಮತ್ತೆ ಬರುವ ಡೈಲಾಗ್ ಬಾಕ್ಸ್ ನಲ್ಲಿ "ಅಪ್ಗ್ರೇಡ್ ದಿಸ್ ಪಿಸಿ ನೌ" ಅನ್ನು ಆಯ್ಕೆ ಮಾಡಿ "ನೆಕ್ಸ್ಟ್" ಒತ್ತಿ. ಈಗ ಮೀಡಿಯಾ ಕ್ರಿಯೇಶನ್ ಟೂಲ್ ನಿಮ್ಮ ಪಿಸಿಯಲ್ಲಿ ವಿಂಡೋಸ್ 10 ಅನ್ನು ಡೌನ್ಲೋಡ್ ಮಾಡುತ್ತದೆ. ನೀವು ಈಗಾಗಲೇ ನಿಮ್ಮ ವಿಂಡೋಸ್ ಅನ್ನು ಆಕ್ಟಿವೇಟ್ ಮಾಡಿರದಿದ್ದರೆ ಅದನ್ನು ಆಕ್ಟಿವೇಟ್ ಮಾಡುವಂತೆ ತಿಳಿಸುತ್ತದೆ. ನಂತರ ಅದರ ನಿಯಮ ಮತ್ತು ಶರತ್ತುಗಳನ್ನು ಅಂಗೀಕರಿಸಿ.

ಹಂತ 3:
ಮೇಲೆ ಹೇಳಿದ ಕ್ರಮಗಳನ್ನು ಪೂರೈಸಿದ ನಂತರ, "ರೆಡಿ ಟು ಇನ್ಸ್ಟಾಲ್" ಎಂಬ ಡೈಲಾಗ್ ಬಾಕ್ಸ್ ನಿಮ್ಮ ಮುಂದೆ ಬರುತ್ತದೆ. ನಿಮ್ಮ ಈಗಿನ ವಿಂಡೋಸ್ ಆವೃತ್ತಿಗೆ ಅನುಸಾರವಾಗಿ ವಿಂಡೋಸ್ 10 ನ ಆವೃತ್ತಿ ನಿಮ್ಮ ಪಿಸಿಯಲ್ಲಿ ಇನ್ಸ್ಟಾಲ್ ಅಗುತ್ತದೆ. ಉದಾಹರೆಣೆಗೆ, ನೀವು ಈಗ ವಿಂಡೋಸ್ 7 ಹೋಮ್ ಪ್ರೀಮಿಯಂ ಹೊಂದಿದ್ದರೆ ವಿಂಡೋಸ್ 10 ಹೋಮ್ ಇನ್ಸ್ಟಾಲ್ ಆಗುತ್ತದೆ. ಹಾಗೆಯೇ ನೀವು ವಿಂಡೋಸ್ 8.1 ಪ್ರೋ ಹೊಂದಿದ್ದರೆ ನಿಮ್ಮ ಪಿಸಿ ವಿಂಡೋಸ್ 10 ಪ್ರೋ ಗೆ ಅಪ್ಗ್ರೇಡ್ ಆಗುತ್ತದೆ.

ಹಂತ 4: ಇನ್ಸ್ಟಾಲೇಶನ್ ಸಂಪೂರ್ಣವಾದ ನಂತರ ನೀವು ವಿಂಡೋಸ್ 10 ನ ಅನುಭವವನ್ನು ಪಡೆಯಬಹುದಲ್ಲದೆ ಇದರಲ್ಲಿರುವ ನೂತನ ಫೀಚರ್ಗಳನ್ನು ತಿಳಿಯಬಹುದು. ನೀವು ವಿಂಡೋಸ್ 10 ಬಳಕೆಯನ್ನು ಮುಂದುವರೆಸಲು ಬಯಸಿದರೆ ಸೆಟ್ಟಿಂಗ್ಸ್> ಅಪ್ಡೇಟ್ & ಸೆಕ್ಯೂರಿಟಿ > ಆಕ್ಟಿವೇಶನ್ ಗೆ ಹೋಗಿ ವಿಂಡೋಸ್ 10 ಸರಿಯಾಗಿ ಆಕ್ಟಿವೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ವಿಂಡೋಸ್ 7/8.1 ಗೆ ಡೌನ್ಗ್ರೇಡ್ ಮಾಡುವ ವಿಧಾನ

ಹಂತ 1:
ವಿಂಡೋಸ್ 10 ನಿಮಗೆ ಇಷ್ಟವಾಗದಿದ್ದಲ್ಲಿ ನೀವು ಹಿಂದಿನ ಆವೃತ್ತಿಗಳಿಗೆ ಹಿಂದಿರುಗಬಹುದು. ಹಳೆಯ ಆವೃತ್ತಿಗೆ ಹಿಂದಿರಿಗುವ ಮುನ್ನ ಕಂಪ್ಯೂಟರ್ನಲ್ಲಿ ನಿಮ್ಮ ಡೇಟಾ ದ ಬ್ಯಾಕಪ್ ತೆಗೆದಿರಸಲು ಮರೆಯದಿರಿ.

ಹಂತ 2: ಡೌನ್ಗ್ರೇಡ್ ಪ್ರಕ್ರಿಯೆ ಪ್ರಾರಂಭಿಸಲು ಸೆಟ್ಟಿಂಗ್ಸ್> ಅಪ್ಡೇಟ್ & ಸೆಕ್ಯೂರಿಟಿ > ರಿಕವರಿ ಗೆ ಹೋಗಿ. ಅಲ್ಲಿ "ಗೋ ಬ್ಯಾಕ್ ಟು ವಿಂಡೋಸ್ 7/8.1" ಎಂಬ ಆಯ್ಕೆ ಕಂಡುಬರುತ್ತದೆ. "ಗೆಟ್ ಸ್ಟಾರ್ಟೆಡ್" ಬಟನ್ ಅನ್ನು ಒತ್ತಿ.

ಹಂತ 3: ಈಗ ವಿಂಡೋಸ್ ನೀವು ಹಿಂದಿನ ಆವೃತ್ತಿಗೆ ಮರಳುತ್ತಿರುವ ಕಾರಣ ತಿಳಿಸುವಂತೆ ಕೋರುತ್ತದೆ. ಕಾರಣವನ್ನು ತಿಳಿಸಿದ ನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ. ಈ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ವಿಂಡೋಸ್ ಕೆಲವು ಪ್ರೋಗ್ರಾಮ್ಗಳನ್ನು ಮತ್ತೆ ಇನ್ಸ್ಟಾಲ್ ಮಾಡುವ ಕಾರಣ ವಿಂಡೋಸ್ 10 ನಲ್ಲಿ ನೀವು ಮಾಡಿದ ಕೆಲವು ಸೆಟ್ಟಿಂಗ್ ಗಳು ಕಳೆದುಹೋಗುವ ಕುರಿತು ಎಚ್ಚರಿಕೆ ನೀಡುತ್ತದೆ.

ಹಂತ 4:ಹಲವಾರು ಬಾರಿ ರಿಸ್ಟಾರ್ಟ್ ಆದ ನಂತರ , ಹಲವು ಪ್ರಕ್ರಿಯೆಗಳ ನಂತರ ನೀವು ಮತ್ತೆ ವಿಂಡೋಸ್ 7/8.1 ಗೆ ಹಿಂದಿರುಗುತ್ತೀರಿ.

ಇನ್ನೂ ಶೇರ್‌ಇಟ್ ಬಳಸುತ್ತಿದ್ದೀರಾ..? ಸಾಕು ನಿಲ್ಲಿಸಿ, ಬಂದಿದೆ ಗೂಗಲ್ ಫೈಲ್ ಟು ಗೂ ಆಪ್..!!!ಇನ್ನೂ ಶೇರ್‌ಇಟ್ ಬಳಸುತ್ತಿದ್ದೀರಾ..? ಸಾಕು ನಿಲ್ಲಿಸಿ, ಬಂದಿದೆ ಗೂಗಲ್ ಫೈಲ್ ಟು ಗೂ ಆಪ್..!!!

Best Mobiles in India

English summary
Everyone and everything needs to get updated once in a while in order to survive in this competitive environment. Today, we will guide you on how to install Windows 10 in your system from Windows 7.1 or 8.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X