Subscribe to Gizbot

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..?

Written By:

ಡಿಜಿಟಲ್ ಕ್ರಾಂತಿ ಎಲ್ಲಡೆ ಕಾಣಿಸಿಕೊಂಡಿದ್ದು, ಈಗ ಸಂಚಾರಿ ಪೊಲೀಸ್ ವಿಭಾಗವು ಡಿಜಿಟಲೀಕರಣದ ಭಾಗವಾಗಿದ್ದು, ಈಗಾಗಲೇ ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ತಮ್ಮ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಲು ಕಿರಿಕಿರಿಯಾಗುತ್ತಿರುವ ಹಿನ್ನಲೆಯಲ್ಲಿ ಅವುಗಳಿಗೆ ಡಿಜಿಟಲ್ ರೂಪವನ್ನು ನೀಡಲು ಮುಂದಾಗಿದೆ. ಕೈನಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಮಾಹಿತಿಯನ್ನು ಅಡಕ ಮಾಡಲು ಮುಂದಾಗಿದೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..?

ಇದಕ್ಕಾಗಿಯೇ ಡಿಜಿ ಲಾಕರ್ ಆಪ್ ಬಳಕೆದಾರರಿಗೆ ಮುಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..? ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 01

ಹಂತ 01

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸದ್ಯ ಈ ಆಪ್ ಲಭ್ಯವಿದ್ದು, ಡಿಜಿ ಲಾಕರ್ ಎಂದು ಟೈಪ್ ಮಾಡಿದ ನಂತರದಲ್ಲಿ ನೀಲಿ ಬಣ್ಣದಲ್ಲಿ ಕಾಣಿಸಿಗುವ ಆಪ್ ಅನ್ನು ಡೌನ್​ಲೋಡ್ ಮಾಡಿ.

ಹಂತ 02

ಹಂತ 02

ಆಪ್ ನನ್ನು ಡೌನ್‌ಲೋಡ್ ಮಾಡಿದ ನಂತರದಲ್ಲಿ ಅದನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿರಿ. ನಂತರ ಆಪ್‌ನಲ್ಲಿ ಕಾಣಿಸಿಕೊಳ್ಳಲುವ ಸೈನ್ ಅಪ್ ಆಯ್ಕೆ ಒತ್ತಿ, ಯೂಸರ್ ನೇಮ್ ಮತ್ತು ಪಾಸ್​ವರ್ಡ್ ಹಾಕಿದ ನಂತರದಲ್ಲಿ ಆಧಾರ್ ಸಂಖ್ಯೆ ನಮೂದಿಸಿ.

ಹಂತ 03

ಹಂತ 03

ನಂತರ ಆಪ್‌ ನಲ್ಲಿರುವ ಸರ್ಚ್​ ಬಾರಿನಲ್ಲಿ ರಾಜ್ಯ ಸರ್ಕಾರದ ಟ್ರಾನ್ಸ್​ಪೋರ್ಟ್ ಡಿಪಾರ್ಟ್​ವೆುಂಟ್ ಆಯ್ಕೆ ಮಾಡಿಕೊಳ್ಳಿ.

ಹಂತ 04:

ಹಂತ 04:

ನಂತರ ನಿಮ್ಮ ಡಿಜಿಟಲ್ ಡಿಎಲ್ ಪಡೆಯುವ ಸಲುವಾಗಿ ಡಿಎಲ್ ಸಂಖ್ಯೆ ನಮೂದಿಸಿ, ಡಿಜಿಟಲ್ ಆರ್​ಸಿ ಪಡೆಯಲು ನಿಮ್ಮ ವಾಹನದ ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಿ. ನಂತರ ಡಿಜಿಟಲ್ ದಾಖಲೆ ದೊರೆಯಲಿದೆ.

ಹಂತ 05

ಹಂತ 05

ವಾಯು ಮಾಲಿನ್ಯ ಪ್ರಮಾಣಪತ್ರ ಪಡೆಯಲು ಕೇವಲ ಗಾಡಿ ಸಂಖ್ಯೆ ನಮೂದಿಸಿ ಸಾಕು, ಅದು ಸಹ ನಿಮ್ಮ ಡಿಜಿ ಲಾಕರ್ ಆಪ್‌ನಲ್ಲಿ ಸೇವ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ರೋಡ್‌ನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದರೆ DL, RC ತೋರಿಸಬೇಕಾಗಿಲ್ಲ..! ನಿಮ್ಮ ಮೊಬೈಲ್ ತೋರಿಸಿ ಸಾಕು..!

English summary
how to use digilocker app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot