ರೋಡ್‌ನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದರೆ DL, RC ತೋರಿಸಬೇಕಾಗಿಲ್ಲ..! ನಿಮ್ಮ ಮೊಬೈಲ್ ತೋರಿಸಿ ಸಾಕು..!

|

ಇನ್ನು ಮುಂದೆ ರಸ್ತೆಯಲ್ಲಿ ಟ್ರಾಫಿಕ್ ಫೋಲಿಸರು ನಿಮ್ಮನ್ನು ಅಡ್ಡ ಹಾಕಿ ಚಾಲನಾ ಪರವಾನಗಿ (DL), ವಾಯುಮಾಲಿನ್ಯ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣಪತ್ರ(RC) ತೋರಿಸುವಂತೆ ಕೇಳಿದರೆ ನೀವು ಭಯ ಪಡುವ ಅಗತ್ಯವಿಲ್ಲ. ಅಲ್ಲದೇ ಓರ್ಜಿನಲ್ ತೋರಿಸುವ ಅವಶ್ಯತೆ ಇಲ್ಲ. ಅವುಗಳನ್ನು ಜೆರಾಕ್ಸ್ ಮಾಡಿಸಿಕೊಂಡು ನಿಮ್ಮ ವಾಹನದಲ್ಲಿ ಇಟ್ಟು ಕೊಳ್ಳುವ ಅಗತ್ಯವೂ ಇಲ್ಲ ಎನ್ನಲಾಗಿದೆ.

ರೋಡ್‌ನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದರೆ DL, RC ತೋರಿಸಬೇಕಾಗಿಲ್ಲ

ಸಾರಿಗೆ ಇಲಾಖೆಯೂ ಇದಕ್ಕಾಗಿ ಹೊಸದೊಂದು ವ್ಯವಸ್ಥೆಯೂ ಜಾರಿಗೆ ತಂದಿದೆ ಎನ್ನಲಾಗಿದ್ದು, ನಿಮ್ಮ ಮೊಬೈಲ್‌ನಲ್ಲಿಯೇ ಎಲ್ಲಾ ದಾಖಲೆಗಳ ಮಾಹಿತಿಯನ್ನು ಅವರಿಗೆ ತೋರಿಸಬಹುದಾಗಿದೆ. ಚಾಲನಾ ಪರವಾನಗಿ (DL), ವಾಯುಮಾಲಿನ್ಯ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣಪತ್ರ(RC)ದ ಸಾಫ್ಟ್ ಕಾಪಿಯನ್ನೇ ತೋರಿಸ ಬಹುದಾಗಿದೆ.

ಡಿಜಿ ಲಾಕರ್:

ಡಿಜಿ ಲಾಕರ್:

ಈಗಾಗಲೇ ಕೇಂದ್ರ ಸರಕಾರವೂ ವಾಹನ ಸವಾರರ ಸಹಾಯಕ್ಕೆಂದು ಡಿಜಿ ಲಾಕರ್ ಎಂಬ ಸೇವೆಯನ್ನು ಆರಂಭಿಸಿದ್ದು, ಇದು ಆಪ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ನೀವು ಸಾರಿಗೆ ಇಲಾಖೆಯು ನೀಡಿರುವ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿ ಇಡಬಹುದಾಗಿದ್ದು, ಟ್ರಾಫಿಕ್ ಫೋಲಿಸರು ಅಡ್ಡ ಹಾಕಿದ ಸಂದರ್ಭದಲ್ಲಿ ಇವುಗಳನ್ನು ತೋರಿಸಿ ದೃಢೀಕರಿಸಬಹುದಾಗಿದೆ.

ಪೊಲೀಸರು ಒಪ್ಪಬೇಕು:

ಪೊಲೀಸರು ಒಪ್ಪಬೇಕು:

ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಡಿಜಿ ಲಾಕರ್‌ನಲ್ಲಿನ ಇರುವ ದಾಖಲೆಗಳನ್ನು ತೋರಿಸಬಹುದಾಗಿದೆ. ಇವುಗಳು ಪೋಟೋ ಮಾದರಿಯಲ್ಲಿದೆ ಎನ್ನುವ ಕಾರಣಕ್ಕೆ ಪೊಲೀಸರು ತಿರಸ್ಕರಿಸುವಂತಿಲ್ಲ, ಅಲ್ಲದೇ ಅವುಗಳ ಓರ್ಜಿನಲ್ ಇಲ್ಲವೇ ಜೆರಾಕ್ಸ್ ಪ್ರತಿಯನ್ನು ಕೇಳುವ ಹಾಗೆ ಇಲ್ಲ ಎನ್ನಲಾಗಿದೆ.

ಈಗಾಗಲೇ ಜಾರಿ:

ಈಗಾಗಲೇ ಜಾರಿ:

ಪೊಲೀಸರು ಹಾಗೂ ಸಾರಿಗೆ ಇಲಾಖೆ ತನಿಖಾಧಿಕಾರಿಗಳು ವಾಹನ ತಡೆದು ಡಿಎಲ್, ಆರ್‌'ಸಿ, ವಾಯುಮಾಲಿನ್ಯ ಪ್ರಮಾಣ ಪತ್ರ ಕೇಳಿದ ಸಂದರ್ಭದಲ್ಲಿ ಡಿಜಿಟಲ್ ರೂಪವನ್ನು ತೋರಿಸಬಹುದಾಗಿದೆ. ಫೆಬ್ರವರಿ 1 ರಿಂದಲೇ ಡಿಜಿ ಲಾಕರ್ ಆಪ್‌ಗೆ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ದೊರೆತಿದೆ.

ಆದರೂ ಎಚ್ಚರ ಅಗತ್ಯ:

ಆದರೂ ಎಚ್ಚರ ಅಗತ್ಯ:

ಈ ಡಿಜಿ ಲಾಕರ್ ಕೇವಲ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಮಾತ್ರವೇ ಬಳಕೆಗೆ ಸೂಕ್ತವಾಗಿರುತ್ತದೆ. ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಡಿಜಿ ಲಾಕರ್‌ ಮಾನ್ಯತೆ ಪಡೆಯುವುದಿಲ್ಲ. ಕಾರಣ ಇಂತಹ ಸಂದರ್ಭದಲ್ಲಿ ಸವಾರರ ಡಿಎಲ್‌ ಅನ್ನು ಪೊಲೀಸರಯ ವಶಕ್ಕೆ ಪಡೆಯತ್ತಾರೆ.

How to find out where you can get your Aadhaar card done (KANNADA)
ಶೀಘ್ರವೇ ಇನ್‌ಶ್ಯೂರೆನ್ಸ್ ಸಹ ಬರಲಿದೆ:

ಶೀಘ್ರವೇ ಇನ್‌ಶ್ಯೂರೆನ್ಸ್ ಸಹ ಬರಲಿದೆ:

ಇದಲ್ಲದೇ ವಾಹನ ಸವಾರರು ತಮ್ಮ ವಾಹನದ ಇನ್‌ಶ್ಯೂರೆನ್ಸ್ (ವಿಮಾ ಪ್ರಮಾಣಪತ್ರ) ಅನ್ನೂ ಡಿಜಿ ಲಾಕರ್‌ನಲ್ಲಿ ಇಟ್ಟುಕೊಳ್ಳುವ ಕುರಿತು ಚಿಂತನೆ ನಡೆದಿದೆ. ಈ ಸಂಬಂಧ ವಿಮಾ ಕಂಪೆನಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಪ್‌ ಇದೆ:

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಪ್‌ ಇದೆ:

ಗೂಗಲ್ ಪ್ಲೇ ಸ್ಟೋರ್‌'ನಲ್ಲಿ ಡಿಜಿ ಲಾಕರ್ ಆಪ್ ಲಭ್ಯವಿದ್ದು, ಡೌನ್‌ಲೋಡ್ ಮಾಡಿಕೊಂಡು ಸೈನ್ ಅಪ್ ಆಗಿ ಅದರಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕು ಎನ್ನಲಾಗಿದೆ. ಅಲ್ಲದೇ ಇದಕ್ಕೆ ಆಧಾರ್ ಸಂಖ್ಯೆಯನ್ನು ನೀಡಬೇಕು. ಡಿಎಲ್ ಸಂಖ್ಯೆ, ಆರ್‌'ಸಿ ನೋಂದಣಿ ಸಂಖ್ಯೆ, ಚಾಸಿ ಸಂಖ್ಯೆ ದಾಖಲಿಸಿದರೆ ಆಪ್ ಬಳಕೆಗೆ ಸಿದ್ಧವಾಗಲಿದೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..?

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..?

ಡಿಜಿಟಲ್ ಕ್ರಾಂತಿ ಎಲ್ಲಡೆ ಕಾಣಿಸಿಕೊಂಡಿದ್ದು, ಈಗ ಸಂಚಾರಿ ಪೊಲೀಸ್ ವಿಭಾಗವು ಡಿಜಿಟಲೀಕರಣದ ಭಾಗವಾಗಿದ್ದು, ಈಗಾಗಲೇ ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ತಮ್ಮ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಲು ಕಿರಿಕಿರಿಯಾಗುತ್ತಿರುವ ಹಿನ್ನಲೆಯಲ್ಲಿ ಅವುಗಳಿಗೆ ಡಿಜಿಟಲ್ ರೂಪವನ್ನು ನೀಡಲು ಮುಂದಾಗಿದೆ. ಕೈನಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಮಾಹಿತಿಯನ್ನು ಅಡಕ ಮಾಡಲು ಮುಂದಾಗಿದೆ.

ಡಿಜಿ ಲಾಕರ್ ಆಪ್

ಡಿಜಿ ಲಾಕರ್ ಆಪ್

ಇದಕ್ಕಾಗಿಯೇ ಡಿಜಿ ಲಾಕರ್ ಆಪ್ ಬಳಕೆದಾರರಿಗೆ ಮುಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..? ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ಹಂತ 01

ಹಂತ 01

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸದ್ಯ ಈ ಆಪ್ ಲಭ್ಯವಿದ್ದು, ಡಿಜಿ ಲಾಕರ್ ಎಂದು ಟೈಪ್ ಮಾಡಿದ ನಂತರದಲ್ಲಿ ನೀಲಿ ಬಣ್ಣದಲ್ಲಿ ಕಾಣಿಸಿಗುವ ಆಪ್ ಅನ್ನು ಡೌನ್​ಲೋಡ್ ಮಾಡಿ.

ಹಂತ 02

ಹಂತ 02

ಆಪ್ ನನ್ನು ಡೌನ್‌ಲೋಡ್ ಮಾಡಿದ ನಂತರದಲ್ಲಿ ಅದನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿರಿ. ನಂತರ ಆಪ್‌ನಲ್ಲಿ ಕಾಣಿಸಿಕೊಳ್ಳಲುವ ಸೈನ್ ಅಪ್ ಆಯ್ಕೆ ಒತ್ತಿ, ಯೂಸರ್ ನೇಮ್ ಮತ್ತು ಪಾಸ್​ವರ್ಡ್ ಹಾಕಿದ ನಂತರದಲ್ಲಿ ಆಧಾರ್ ಸಂಖ್ಯೆ ನಮೂದಿಸಿ.

ಹಂತ 03

ಹಂತ 03

ನಂತರ ಆಪ್‌ ನಲ್ಲಿರುವ ಸರ್ಚ್​ ಬಾರಿನಲ್ಲಿ ರಾಜ್ಯ ಸರ್ಕಾರದ ಟ್ರಾನ್ಸ್​ಪೋರ್ಟ್ ಡಿಪಾರ್ಟ್​ವೆುಂಟ್ ಆಯ್ಕೆ ಮಾಡಿಕೊಳ್ಳಿ.

ಹಂತ 04:

ಹಂತ 04:

ನಂತರ ನಿಮ್ಮ ಡಿಜಿಟಲ್ ಡಿಎಲ್ ಪಡೆಯುವ ಸಲುವಾಗಿ ಡಿಎಲ್ ಸಂಖ್ಯೆ ನಮೂದಿಸಿ, ಡಿಜಿಟಲ್ ಆರ್​ಸಿ ಪಡೆಯಲು ನಿಮ್ಮ ವಾಹನದ ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಿ. ನಂತರ ಡಿಜಿಟಲ್ ದಾಖಲೆ ದೊರೆಯಲಿದೆ.

ಹಂತ 05

ಹಂತ 05

ವಾಯು ಮಾಲಿನ್ಯ ಪ್ರಮಾಣಪತ್ರ ಪಡೆಯಲು ಕೇವಲ ಗಾಡಿ ಸಂಖ್ಯೆ ನಮೂದಿಸಿ ಸಾಕು, ಅದು ಸಹ ನಿಮ್ಮ ಡಿಜಿ ಲಾಕರ್ ಆಪ್‌ನಲ್ಲಿ ಸೇವ್ ಆಗಲಿದೆ.

ಓದಿರಿ: ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕಾಲ್ ಜಾಸ್ತಿ ಮಾಡ್ತೀರಾ..? ಹಾಗಿದ್ರೆ ಈ ಸ್ಟೋರಿ ನೋಡಿ

Best Mobiles in India

English summary
Traffic police told to accept vehicle documents on DigiLocker. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X