ಗೂಗಲ್ ಸ್ನ್ಯಾಪ್ಸೀಡ್.. ಬಳಸುವುದು ಹೇಗೆ?

By Tejaswini P G

  ಸ್ಮಾರ್ಟ್ಫೋನ್ ಮಾರ್ಕೆಟ್ ನಲ್ಲಿ ಅದೆಷ್ಟೋ ಫೋಟೋ ಎಡಿಟಿಂಗ್ ಆಪ್ಗಳಿದ್ದರೂ ಇದುವರೆಗೆ ಜನರ ಮನ್ನಣೆಗಳಿಸಿರುವ ಆಪ್ಗಳು ವಿರಳ. ಲೈಟ್ರೂಮ್,ಫೋಟೋಶಾಪ್, ಗೂಗಲ್ ಸ್ನ್ಯಾಪ್ಸೀಡ್ ಈ ಆಪ್ಗಳಲ್ಲಿ ಕೆಲವು.

  ಗೂಗಲ್ ಸ್ನ್ಯಾಪ್ಸೀಡ್.. ಬಳಸುವುದು ಹೇಗೆ?

  ಈ ಲೇಖನದಲ್ಲಿ ನಾವು ನಿಮಗೆ ಗೂಗಲ್ ಸ್ನ್ಯಾಪ್ಸೀಡ್ ಆಪ್ ನ ಒಂದು ಕಿರು ಪರಿಚಯವನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ನೀವು ಸೆರೆಹಿಡಿದ ಫೋಟೋ ನೀವೆಣಿಸಿದಂತೆ ಬರಲಿಲ್ಲ ಎಂದಾದಲ್ಲಿ, ಗೂಗಲ್ ಸ್ನ್ಯಾಪ್ಸೀಡ್ ಬಳಸಿ ಫೋಟೋಗಳನ್ನು ಪರಿಷ್ಕರಿಸಬಹುದು. ಈ ಆಪ್ ಬಳಸಿ ನೀವು ಫೋಟೋವಿನ ಟೋನ್ ಸರಿಮಾಡಬಹುದು. ಆಂಗಲ್ಗಳನ್ನು ಸರಿಪಡಿಸಬಹುದು, ವೈಟ್ ಬ್ಯಾಲೆನ್ಸ್ ವ್ಯತ್ಯಾಸಮಾಡಬಹುದಲ್ಲದೆ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಏನಿದು ಗೂಗಲ್ ಸ್ನ್ಯಾಪ್ಸೀಡ್?

  ನೀವು ಈಗಾಗಲೇ ಲೈಟ್ರೂಮ್ ಅಥವಾ ಫೋಟೋಶಾಪ್ನಂತಹ ಆಪ್ಗಳನ್ನು ಬಳಸಿಲ್ಲವೆಂದಾದರೆ, ಈ ಆಪ್ ಸ್ವಲ್ಪ ಭಾರೀ ಎಂದೆನಿಸಬಹುದಲ್ಲದೆ, ಇದರ ಎಲ್ಲಾ ಫೀಚರ್ಗಳನ್ನು ತಿಳಿಯಲು ಸ್ವಲ್ಪ ಕಾಲಾವಕಾಶ ಬೇಕಾದೀತು.ನೀವು ಈ ಆಪ್ಗೆ ಹೊಸಬರೆಂದರೆ, ಪರದೆಯ ಕೆಳಗಿರುವ ಇನ್ಸೈಟ್ ಟ್ಯಾಬ್ ನಲ್ಲಿ ಅಗತ್ಯ ಮಾಹಿತಿ ಪಡೆಯಬಹುದು.

  ಇನ್ಸೈಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ,ಸ್ನ್ಯಾಪ್ಸೀಡ್ಗೆ ಸಂಬಂಧಿಸಿದ ಹಲವಾರು ಟ್ಯುಟೋರಿಯಲ್ಗಳನ್ನು ನಿಮಗೆ ನೀಡುತ್ತದಲ್ಲದೆ,ಫೋಟೋ ಅನ್ನು ನಿರ್ದಿಷ್ಟ ರೀತಿಯಲ್ಲಿ ಎಡಿಟ್ ಮಾಡುವ ಅವಕಾಶವನ್ನು ನೀಡುತ್ತದೆ.

  ಪ್ರತಿಯೊಂದು ಟ್ಯುಟೋರಿಯಲ್ ಕೂಡ ಎಡಿಟ್ ಮಾಡಲು ಹಂತ ಹಂತವಾಗಿ ಸೂಚನೆಗಳನ್ನು ನೀಡುತ್ತದಲ್ಲದೆ ಬೇಕಾಗುವ ಅಂದಾಜು ಸಮಯವನ್ನೂ ತಿಳಿಸುತ್ತದೆ. ಇಂತಹ ಟ್ಯುಟೋರಿಯಲ್ಗಳು ಸುಮಾರು ಎರಡು ಡಜನ್ ನಷ್ಟಿದ್ದು,ಸ್ನ್ಯಾಪ್ಸೀಡ್ ನ ಮೂಲಭೂತ ಫೀಚರ್ಗಳ ಪರಿಚಯವನ್ನು ನಿಮಗೆ ನೀಡುತ್ತದೆ.

  ಸ್ನ್ಯಾಪ್ಸೀಡ್ ನ ಸಾಧನಗಳು(ಟೂಲ್ಸ್)

  ಗೂಗಲ್ ಸ್ನ್ಯಾಪ್ಸೀಡ್ ನಲ್ಲಿ ಫೋಟೋವನ್ನು ಪರಿಷ್ಕರಿಸಲು ಮತ್ತು ಬಣ್ಣ, ಭ್ರೈಟ್ನೆಸ್, ಕಾಂಟ್ರಾಸ್ಟ್ ಮೊದಲಾದ ಅಂಶಗಳಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಲು ಬೇಕಾದ ಸಾಧನಗಳು(ಟೂಲ್ಸ್) ಇವೆ.ಸ್ನ್ಯಾಪ್ಸೀಡ್ನಲ್ಲಿ 12 ವಿಭಿನ್ನ ಸಾಧನಗಳಿದ್ದು ಉಪಯೋಗಿಸಲು ಬಹಳ ಸರಳವಾಗಿವೆ.

  ನೀವು ಯಾವ ಸಾಧನವನ್ನು ಬಳಸಲು ಬಯಸುತ್ತೀರೋ, ಆ ಸಾಧನದ ಮೇಲೆ ಕ್ಲಿಕ್ ಮಾಡಿ ನಿಮ್ಮ ಫೋಟೋವನ್ನು ಬೇಕಾದಂತೆ ಪರಿಷ್ಕರಿಸಿ. ಬೇಕಾದ ಬದಲಾವಣೆಗಳನ್ನು ಮಾಡಿದ ನಂತರ ಆ ಬದಲಾವಣೆಗಳನ್ನು ಸೇವ್ ಮಾಡಬಹುದು. ಫೋಟೋಗೆ ಮಾಡಿದ ಬದಲಾವಣೆಗಳು ನಿಮಗೆ ಇಷ್ಟವಾಗಿಲ್ಲವೆಂದಾದರೆ ಆ ಬದಲಾವಣೆಗಳನ್ನು ರದ್ದುಗೊಳಿಸಬಹುದು.

  ನಿಮ್ಮ ಮೊಬೈಲ್‌ನಿಂದ ನಿಮ್ಮ ಮಕ್ಕಳ ಮೊಬೈಲ್‌ ನಿಯಂತ್ರಿಸಬಹುದು!!..ಹೇಗೆ ಗೊತ್ತಾ?

  How to Sharing a Mobile Data Connection with Your PC (KANNADA)
  ಫಿಲ್ಟರ್ಗಳು

  ಫಿಲ್ಟರ್ಗಳು

  ಫಿಲ್ಟರ್ಗಳ ಪರಿಚಯ ನಿಮಗಿದೆಯೇ? ಗೂಗಲ್ ಸ್ನ್ಯಾಪ್ಸೀಡ್ ನಲ್ಲಿದೆ 13 ವಿಭಿನ್ನ ಫಿಲ್ಟರ್ಗಳು. ಲೆನ್ಸ್ ಬ್ಲರ್ಸ್, ಬ್ಲ್ಯಾಕ್ ಆಂಡ್ ವೈಟ್ ಮೊದಲಾದ ಫಿಲ್ಟರ್ಗಳು ಇಲ್ಲಿದೆ. ಫೋಟೋವಿಗೆ ಫಿಲ್ಟರ್ ಹಾಕಿದ ನಂತರ, ಸೆಟ್ಟಿಂಗ್ ಗಳನ್ನು ಬಳಸಿ ಅಥವ ಸ್ಲೈಡರ್ ಬಾರ್ ಬಳಸಿ ಫಿಲ್ಟರ್ಗೆ ಬೇಕಾದ ವ್ಯತ್ಯಾಸಗಳನ್ನು ಮಾಡಬಹುದು.ಪರದೆಯ ಕೆಳಭಾಗದಲ್ಲಿ ನಿಮಗೆ ಲಭ್ಯವಿರುವ ಎಲ್ಲಾ ಫಿಲ್ಟರ್ಗಳು ಕಾಣಿಸಲಿದ್ದು,ನಿಮಗೆ ಬೇಕಾದ ಫಿಲ್ಟರ್ ಅನ್ನು ಆಯ್ಕೆಮಾಡಬಹುದು.

  ಸ್ನ್ಯಾಪ್ಸೀಡ್ ಬಳಸುವುದು ಹೇಗೆ?

  ಹಂತ 1 : ನೀವು ಎಡಿಟ್ ಮಾಡಬಯಸುವ ಫೋಟೋ ಅನ್ನು ಅಯ್ಕೆ ಮಾಡಿ ಮತ್ತು ಆಪ್ ನಲ್ಲಿ ತೆರೆಯಿರಿ

  ಹಂತ 2 : ಫೋಟೋ ಅನ್ನು ಲಂಬವಾಗಿ ಅಥವ ಅಡ್ಡಲಾಗಿ ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಿ

  ಹಂತ 3 : ಫೋಟೋದಲ್ಲಿ ಬೇಡವಾದ ಭಾಗಗಳಿದ್ದಲ್ಲಿ "ಕ್ರಾಪ್" ಆಯ್ಕೆ ಬಳಸಿ ಅದನ್ನು ತೆಗೆಯಿರಿ

  ಹಂತ 4 : ಈಗ ಚಿತ್ರದ ಭ್ರೈಟ್ನೆಸ್, ಕಾಂಟ್ರಾಸ್ಟ್, ಶಾರ್ಪ್ನೆಸ್, ಸ್ಯಾಚುರೇಶನ್ ಮೊದಲಾದವುಗಳನ್ನು ಬೇಕಾದಂತೆ ಹೊಂದಿಸಿಕೊಳ್ಳಿ

  ಹಂತ 5 : ಈಗ ಚಿತ್ರಕ್ಕೆ ಟೋನಲ್ ಕಾಂಟ್ರಾಸ್ಟ್, ವಿಂಟೇಜ್ ಇಫೆಕ್ಟ್, ವಿನ್ನೆಟ್ ಇಫೆಕ್ಟ್ ಮೊದಲಾದ ಇಫೆಕ್ಟ್ಗಳನ್ನು ಹಾಕಬಹುದು

  ಹಂತ 6 : ಈಗ ಫೋಟೋ ಅನ್ನು ಸೇವ್ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  There are lots of photo-editing apps available on the market, but very few have made a mark like Lightroom, Photoshop, Google Snapseed and some more.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more